Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Diamond League Final 2024: ನೀರಜ್ ಚೋಪ್ರಾಗೆ ಮತ್ತೊಂದು ನಿರಾಶೆ; ಎರಡನೇ ಬಂಗಾರ ಮಿಸ್

ಭಾರತದ ಡಬಲ್ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಮತ್ತೊಮ್ಮೆ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಡೈಮಂಡ್ ಲೀಗ್ 2024ರ ಜಾವೆಲಿನ್ ಎಸೆತ ಸ್ಫರ್ಧೆಯ ಫೈನಲ್‌ನಲ್ಲಿ ಚಿನ್ನದ ಪದಕ ಗೆಲ್ಲುವುದನ್ನು ತಪ್ಪಿಸಿಕೊಂಡಿದ್ದಾರೆ.

ನೀರಜ್ ಚೋಪ್ರಾ ಬಂಗಾರದ ಪದಕ ಗೆಲ್ಲುತ್ತಾರೆ ಎಂದು ಭಾರತೀಯ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ನಿರೀಕ್ಷೆ ಕೇವಲ ಒಂದು 1 ಸೆಂ.ಮೀ ನಿಂದ ಹುಸಿಯಾಯಿತು. ಅವರು ದೀರ್ಘಕಾಲದಿಂದ ತೊಡೆಸಂದು ಗಾಯದಿಂದ ಬಳಲುತ್ತಿದ್ದಾರೆ. ಈ ಕಾರಣದಿಂದಾಗಿ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಲು ವಿಫಲರಾಗಿದ್ದರು. ಈಗ ಅದರ ಪರಿಣಾಮವು ಡೈಮಂಡ್ ಲೀಗ್ 2024ರ ಫೈನಲ್‌ನಲ್ಲಿ ಬೀರಿದೆ .

Neeraj Chopra who lost the gold medal in the 2024 Diamond League final

ಶನಿವಾರ ರಾತ್ರಿ ಬ್ರಸೆಲ್ಸ್‌ನಲ್ಲಿ ನಡೆದ ಡೈಮಂಡ್ ಲೀಗ್ 2024ರ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಕೇವಲ 1 ಸೆಂ.ಮೀ ಅಂತರದಲ್ಲಿ ಎರಡನೇ ಬಂಗಾರದ ಪದಕ ಗೆಲ್ಲುವುದನ್ನು ಮಿಸ್ ಮಾಡಿಕೊಂಡರು. ಈ ಫೈನಲ್‌ ಪಂದ್ಯದಲ್ಲಿ ಗೋಲ್ಡನ್ ಬಾಯ್ ಖ್ಯಾತಿಯ ನೀರಜ್‌ ಚೋಪ್ರಾ 87.86 ಮೀಟರ್‌ ಎಸೆದು ಎರಡನೇ ಸ್ಥಾನ ಪಡೆದರು. ಇದರೊಂದಿಗೆ ಅವರು ಸತತ ಎರಡನೇ ಬಾರಿಗೆ ಈ ಟೂರ್ನಿಯಲ್ಲಿ ಚಾಂಪಿಯನ್ ಆಗುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಈ ಮೊದಲು ನೀರಜ್‌ 2022 ಡೈಮಂಡ್‌ ಲೀಗ್‌ನಲ್ಲಿ ಬಂಗಾರ, 2023ರಲ್ಲಿ ಬೆಳ್ಳಿ ಸಾಧನೆ ಮಾಡಿದ್ದಾರೆ.

ಗ್ರೆನೇಡಿಯನ್ ಜಾವೆಲಿನ್ ಎಸೆತಗಾರ ಆಂಡರ್ಸನ್ ಪೀಟರ್ಸ್ 87.87 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಡೈಮಂಡ್ ಲೀಗ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ . ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ನಂತರ ಪೀಟರ್ಸ್ ಕಂಚಿನ ಪದಕ ಗೆದ್ದಿದ್ದು, ಈಗ ನೀರಜ್ ಚೋಪ್ರಾ ಡೈಮಂಡ್ ಲೀಗ್‌ನಲ್ಲಿ ಕೇವಲ 1 ಸೆಂ.ಮೀ ನಿಂದ ಹಿಂದೆ ಉಳಿದಿದ್ದಾರೆ. ಜರ್ಮನಿಯ ಜೂಲಿಯನ್ ವೆಬರ್ ಈ ಟೂರ್ನಿಯಲ್ಲಿ 85.97 ಮೀಟರ್ ಎಸೆದು ನೀರಜ್ ಚೋಪ್ರಾ ನಂತರ ಮೂರನೇ ಸ್ಥಾನ ಪಡೆದರು.

ಅವಿನಾಶ್ ಸಾಬಲೆ 9ನೇ ಸ್ಥಾನ

ಡೈಮಂಡ್ ಲೀಗ್ 2024ರಲ್ಲಿ ಭಾರತದ ಮತ್ತೋರ್ವ ಅಥ್ಲೇಟ್ ಅವಿನಾಶ್ ಸಾಬಲೆ ಪುರುಷರ 3000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶುಕ್ರವಾರ ತಡ ರಾತ್ರಿ ನಡೆದ ಪುರುಷರ 3000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯ ಫೈನಲ್ ನಲ್ಲಿ ಅವಿನಾಶ್ ಸೇಬಲ್ 9ನೇ ಸ್ಥಾನ ಪಡೆದಿದ್ದರು. ಸಾಬಲೆ 8:17.09 ಸೆಕೆಂಡುಗಳಲ್ಲಿ ಕ್ರಮಿಸಿದ್ದರು. ಇದರೊಂದಿಗೆ ಅವರು ತಮ್ಮ ಋತುವನ್ನು ಅದ್ಭುತವಾಗಿ ಅಂತ್ಯಗೊಳಿಸಿದ್ದರು.

Story first published: Sunday, September 15, 2024, 7:19 [IST]
Other articles published on Sep 15, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+