ನೀರಜ್ ಚೋಪ್ರಾ, ಭಜರಂಗ್ ಪೂನಿಯಾಗೆ ಅಂತಾರಾಷ್ಟ್ರೀಯ ಚಿನ್ನ

ನವದೆಹಲಿ, ಜುಲೈ 30: ಭಾರತದ ಭರವಸೆಯ ಅಥ್ಲೀಟ್ ನಿರಜ್ ಚೋಪ್ರಾ ಅವರು ಜಾವೆಲಿನ್ ಥ್ರೋನಲ್ಲಿ ಚಿನ್ನ ಜಯಿಸಿದ್ದಾರೆ. ಟರ್ಕಿಯಲ್ಲಿ ನಡೆದ ಅಂತಾರಾಷ್ಟ್ರೀಯ ಕುಸ್ತಿಯಲ್ಲಿ ಭಜರಂಗ್ ಪೂನಿಯಾ ಅವರೂ ಬಂಗಾರ ಗೆದ್ದಿದ್ದಾರೆ. ಭಾರತದ ಕ್ರೀಡಾಪಟುಗಳ ಈ ಗೆಲುವು ಮುಂದಿನ ಆಗಸ್ಟ್ 18ರಿಂದ ಇಂಡೋನೇಷ್ಯದ ಜಕಾರ್ತಾದಲ್ಲಿ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಆರಂಭಗೊಳ್ಳಲಿರುವುದರಿಂದ ಕುಸ್ತಿ, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್ ನಲ್ಲಿ ಬಂಗಾರದ ಪದಕದ ನಿರೀಕ್ಷೆ ಮೂಡಿದೆ.
ಆದರೆ ಭಾನುವಾರ ನಡೆದ ವನಿತಾ ಹಾಕಿ ವಿಶ್ವಕಪ್ ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಿದೆ. ಈ ವಾರದ ಪ್ರಮುಖ ಕ್ರೀಡಾ ಸ್ಪರ್ಧೆಗಳ ಸಂಕ್ಷಿಪ್ತ ಮಾಹಿತಿ ಕೆಳಗಿವೆ.

ನೀರಜ್ ಗೆ ಚಿನ್ನ
ಫಿನ್ ಲ್ಯಾಂಡ್ ನಲ್ಲಿ ನಡೆದ ಸಾವೋ ಗೇಮ್ಸ್ ನಲ್ಲಿ ಭಾರತದ ಸ್ಟಾರ್ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಚಿನ್ನದ ಪದಕ ಜಯಿಸಿದ್ದಾರೆ. ಈ ಕೂಟದಲ್ಲಿ 85.69ಮೀ. ದೂರ ಈಟಿ ಎಸೆದ ನೀರಜ್, ಚೈನೀಸ್ ತೈಪೆಯ ಚಾವೊ-ಸುನ್ ಚೆಂಗ್ (82.52 ಮೀ.) ಅವರನ್ನು ಸೋಲಿಸಿದರು.

ಬಂಗಾರ ಗೆದ್ದ ಭಜರಂಗ್
ಟರ್ಕಿಯಲ್ಲಿ ನಡೆದ ಯಾಸರ್ ಡೊಗು ಅಂತಾರಾಷ್ಟ್ರೀಯ ಕುಸ್ತಿ ಪಂದ್ಯದ ಪುರುಷರ ವಿಭಾಗದಲ್ಲಿ ಭಾರತದ ಭಜರಂಗ್ ಪೂನಿಯಾ ಚಿನ್ನದ ಪದಕ ಜಯಿಸಿದ್ದಾರೆ. ವನಿತಾ 55 ಕೆಜಿ ವಿಭಾಗದಲ್ಲಿ ಭಾರತದ ರಸ್ಲರ್ ಪಿಂಕಿ, ಉಕ್ರೇನ್ ನ ಓಲ್ಗಾ ಷಾನೈಡರ್ ಅವರನ್ನು ಮಣಿಸಿ ಬಂಗಾರ ಜಯಿಸಿದ್ದಾರೆ.

ಹಾಕಿ ಸಮಬಲ
ಲಂಡನ್ ನ ಲೀ ವ್ಯಾಲಿ ಹಾಕಿ ಮತ್ತು ಟೆನಿಸ್ ಸ್ಟೇಡಿಯಂನಲ್ಲಿ ನಡೆದ 2018ರ ವನಿತಾ ಹಾಕಿ ವಿಶ್ವಕಪ್ ನಲ್ಲಿ ಭಾರತ ತಂಡ ಅಮೆರಿಕಾ ಎದುರು ಡ್ರಾ ಸಾಧಿಸಿದೆ. 11ನೇ ನಿಮಿಷದಲ್ಲಿ ಇಂಗ್ಲೆಂಡ್ ನ ಮಾರ್ಗಾಕ್ಸ್ ಪಾವೊಲಿನೊ ಮತ್ತು 31ನೇ ನಿಮಿಷದಲ್ಲಿ ಭಾರತದ ನಾಯಕಿ ರಾಣಿ ರಾಂಪಾಲ್ ಗೋಲ್ ಬಾರಿಸಿ ಪಂದ್ಯವನ್ನು ಸಮಬಲ ಗೊಳಿಸಿದರು. ಈ ಪಂದ್ಯದೊಂದಿಗೆ ಭಾರತದ ಪ್ರಶಸ್ತಿಯಾಸೆ ಜೀವಂತವಾಗಿದೆ.

ಸಿಂಧು, ಶ್ರೀಕಾಂತ್ ಮೇಲೆ ನಿರೀಕ್ಷೆ
ಚೀನಾದ ನಾನ್ಜಿಂಗ್ ನಲ್ಲಿ ಇಂದಿನಿಂದ ಜುಲೈ 30) ಆರಂಭಗೊಳ್ಳಲಿರುವ ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಮತ್ತು ಶ್ರೀಕಾಂತ್ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಈ ಪಂದ್ಯಾಟ ಆಗಸ್ಟ್ 5ರ ವರೆಗೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications