Neeraj Chopra: ನಾನು ಆ ಮಾರ್ಕ್ ಕ್ರಾಸ್ ಮಾಡುತ್ತೇನೆ ಎಂದು ಭಾವಿಸಿದ್ದೆ: ನೀರಜ್ ಚೋಪ್ರಾ
ಭಾರತದ ಸ್ಟಾರ್ ಒಲಿಂಪಿಯನ್ ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದಾರೆ. ಜಿದ್ದಾಜಿದ್ದಿನಿಂದ ಕೂಡಿದ್ದ ಫೈಟ್‌ನಲ್ಲಿ ನೀರಜ್ ಅಮೋಘ ಸಾಧನೆ ಮಾಡುವ ಮೂಲಕ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಒಲಿಂಪಿಕ್ಸ್‌ನಲ್ಲಿ ಬಂಗಾರದ ಪದಕವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಸ್ಪರ್ಧೆಯ ಬಳಿಕ ನೀರಜ್ ಮಾತನಾಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಗುರುವಾರ ತಡ ರಾತ್ರಿ ನಡೆದ ಜಾವೆಲಿನ್ ಸ್ಪರ್ಧೆಯಲ್ಲಿ ನೀರಜ್ ತಮ್ಮ ಎರಡನೇ ಎಸೆತವನ್ನು 89 ಮೀಟರ್ ಪಾರು ಮಾಡುವಲ್ಲಿ ಸಫಲರಾದರು. ಆದರೆ ಇದೇ ಪ್ರಯತ್ನದಲ್ಲಿ ಪಾಕ್‌ನ ಅರ್ಷದ್ ನದೀಮ್ 92ರ ಮ್ಯಾಜಿಕ್ ಮಾಡಿದರು. ನೀಜರ್ ಅವರ ಮುಖದಲ್ಲಿ ಎಂದು ಕಾಣದ ನಿರಾಸೆಯ ಛಾಯೆ ಕಾಣುತ್ತಿತ್ತು. ಆದರೆ ಒಲಿಂಪಿಕ್ಸ್‌ನಲ್ಲಿ ಡಬಲ್ ಪದಕ ಗೆದ್ದ ಖುಷಿ ಮಾತ್ರ ಅವರ ಮುಖದಲ್ಲಿ ಇತ್ತು.

ನೀರಜ್ ಹಾಗೂ ಪಾಕ್‌ನ ಅರ್ಷದ್ ನದೀಮ್ ಅವರು ಈ ವರೆಗೂ ಜಾವೆಲಿನ್ ಥ್ರೋ ಅಖಾಡದಲ್ಲಿ ಒಟ್ಟು 7 ಬಾರಿ ಮುಖಾಮುಖಿ ಆಗಿದ್ದಾರೆ. ಆದರೆ ಈ ಪ್ರಯತ್ನದಲ್ಲೂ ನೀರಜ್ ಅವರ ಕೈ ಮೇಲಾಗಿತ್ತು. ಗುರುವಾರ ಮಾತ್ರ ಪಾಕ್ ಜಾವೆಲಿನ್ ಪಟು 92.97 ಮೀಟರ್ ದೂರ ಜಾವೆಲಿನ್ ಎಸೆದು ಒಲಿಂಪಕ್ಸ್ ದಾಖಲೆ ನಿರ್ಮಿಸಿದರು. ಸ್ಪರ್ಧೆ ಮುಗಿದ ಬಳಿಕ ಮಾತನಾಡಿರುವ ನೀರಜ್ ನಿಜಕ್ಕೂ ಬೇಸರ ಇದೆ. ಆದರೆ ದೇಶಕ್ಕಾಗಿ ಪದಕ ಗೆದ್ದ ಖುಷಿ ಇದೆ ಎಂದು ತಿಳಿಸಿದ್ದಾರೆ.
ಕನಸು ನನಸಾಗಲಿಲ್ಲ
ದೊಡ್ಡ ಈವೆಂಟ್‌ಗಳಲ್ಲಿ ನಾನು 90 ಮೀಟರ್ ಮಾರ್ಕ್ ಪಾರು ಮಾಡುವ ಕನಸು ಹೊಂದಿದೆ. ಇಂದು ಅದರ ಸಮೀಪ ಜಾವೆಲಿನ್ ಎಸೆದಿದ್ದೇನೆ. ಆದರೆ 90 ಮೀಟರ್ ದೂರ ಎಸೆಯುವುದು ನನ್ನ ಕೈಯಲ್ಲಿ ಇನ್ನು ಸಾಧ್ಯವೇ ಆಗಿಲ್ಲ. ಈ ಬಗ್ಗೆ ಬೇಸರ ಇದೆ. ಈ ಸಾಧನೆ ಇಂದು ಆಗದೇ ಇರುವುದಕ್ಕೆ ನಿಜಕ್ಕೂ ಬೇಸರವಿದೆ. ಆದರೆ ಬೆಳ್ಳಿ ಪದಕ ಗೆದ್ದ ಖುಷಿಯೂ ಇದೆ ಎಂದಿದ್ದಾರೆ.

ಇಂದು ಅರ್ಷದ್ ದಿನ
ಪಾಕ್‌ನ ಅರ್ಷದ್ ನದೀಮ್ ಅವರಿಗೆ ಗುರುವಾರ ಅವರ ದಿನವಾಗಿತ್ತು. ಜಾವೆಲಿನ್ ಅಂಗಳದಲ್ಲಿ ಅವರು ಮಾಡಿದ ಸಾಧನೆ ಅಮೋಘ. ಅವರು ಚಿನ್ನದ ಪದಕ ಗೆದ್ದಿರುವುದಕ್ಕೆ ಅಭಿನಂದನೆಗಳು. ಕೊನೆಯಲ್ಲಿ ನಾಲ್ಕು ವರ್ಷದ ಪ್ರಯತ್ನ ಕೈ ಹಿಡಿಯುತ್ತದೆ. ನಾನು ಸಹ ಈ ನಿಟ್ಟಿನಲ್ಲಿ ತುಂಬ ಶ್ರಮಿಸುರುವೆ. ನನಗಿಂತ ಹೆಚ್ಚು ಅರ್ಷದ್ ಬೆವರು ಹರಿಸಿದ್ದಾರೆ ಎಂದು ಪಾಕ್ ಆಟಗಾರನ ಬೆನ್ನು ತಟ್ಟಿದರು.
ಮುಂದಿನ ದಿನಗಳಲ್ಲಿ ಟಾರ್ಗೆಟ್ 90 ಎಂಬುದನ್ನು ಅವರ ಪರೋಕ್ಷವಾಗಿ ಹೇಳಿದರು. ಅದು ನಿಜವೇ ಆಗಿದೆ. ನೀರಜ್ ಎಲ್ಲ ಪದಕಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಆದರೆ 90 ಮೀಟರ್ ಮಾರ್ಕ್ ಪಾರು ಮಾಡದೇ ಇರುವುದು ಸಹ ದೊಡ್ಡ ನೋವಿನ ಸಂಗತಿ. ಜಾವೆಲಿನ್ ಥ್ರೋನಲ್ಲಿ ಇದು ಒಂದು ಮ್ಯಾಜಿಕ್ ನಂಬರ್ ರೀತಿ ಕಾಣುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications