Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Diamond League: ಸ್ವಲ್ಪದರಲ್ಲೇ ಚಿನ್ನದ ಪದಕ ಕಳೆದುಕೊಂಡ ನೀರಜ್ ಚೋಪ್ರಾ

ಮೇ 11 ಶನಿವಾರ, ದೋಹಾದಲ್ಲಿ ಶುಕ್ರವಾರ ನಡೆದ ವರ್ಷದ ಮೊದಲ ಡೈಮಂಡ್ ಲೀಗ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಕೂದಲಳೆಯಲ್ಲಿ ಕಳೆದುಕೊಂಡಿದ್ದಾರೆ.

2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ 88.38 ಮೀಟರ್‌ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇವರಿಗಿಂತ ಕೇವಲ 0.2 ಮೀಟರ್‌ಗಳಷ್ಟು ಕಡಿಮೆ ದೂರ ಎಸೆದ ನೀರಜ್‌ ಚೋಪ್ರಾ (88.36) ಎರಡನೇ ಸ್ಥಾನ ಪಡೆದಿದ್ದಾರೆ.

Neeraj Chopra won silver medal in Diamond League

ಎರಡು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಗ್ರೆನಾಡದ ಆಂಡರ್ಸನ್ ಪೀಟರ್ಸ್ 86.62 ಮೀಟರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿ ಕಂಚಿನ ಪದಕ ಗೆದ್ದರು. ಮತ್ತೊಂದೆಡೆ ಚೊಚ್ಚಲ ಡೈಮಂಡ್ ಲೀಗ್‌ನಲ್ಲಿ ಭಾಗವಹಿಸಿದ್ದ ಭಾರತದ ಕಿಶೋರ್ ಜೆನಾ ಅವರ 76.31 ಮೀಟರ್‌ ಎಸೆಯುವ ಮೂಲಕ ನಿರಾಶಾದಾಯಕ ಪ್ರದರ್ಶನ ನೀಡಿದರು. ಹೀಗಾಗಿ ಅವರು ಸ್ಪರ್ಧೆಯಿಂದ ಹೊರ ಉಳಿದ 9ನೇ ಸ್ಥಾನ ಪಡೆದುಕೊಂಡರು.

ಕಳೆದ ವರ್ಷ ಇಲ್ಲಿನ ಡೈಮಂಡ್ ಲೀಗ್‌ನಲ್ಲಿ ನೀರಜ್‌ ಚೋಪ್ರಾ ಚಿನ್ನ ಗೆದ್ದಿದ್ದರು. ಇದೀಗ ನಾಲ್ಕು ಸೆಂಟಿ ಮೀಟರ್‌ಗಳಿಂದ ಚಿನ್‌ ಮಿಸ್‌ ಮಾಡಿಕೊಂಡಿದ್ದ ವಡ್ಲೆಜ್ ಈ ಬಾರಿ ಚಾಂಪಿಯನ್‌ ಆಗಿದ್ದಾರೆ. ಈವರೆಗೆ ನೀರಜ್‌ ಚೋಪ್ರಾ 89.94 ಮೀಟರ್‌ ಎಸೆದಿರುವ ದಾಖಲೆ ಹೊಂದಿದ್ದಾರೆ. ಈ ದಾಖಲೆಯನ್ನು 2022ರಲ್ಲಿ ಮಾಡಿರುವ ನೀರಜಗಗ ಚೋಪ್ರಾ 90 ಮೀಟರ್‌ ಸಾಧನೆಯ ಕನಸು ಈ ಟೂರ್ನಿಯಲ್ಲಿ ಈಡೇರಲಿಲ್ಲ.

Story first published: Saturday, May 11, 2024, 13:03 [IST]
Other articles published on May 11, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+