ಆರ್‌ಎಫ್‌ವೈಎಸ್ ಅಥ್ಲೆಟಿಕ್ಸ್: 100ಮೀ.ನಲ್ಲಿ ನಿಯೋಲ್ ರಾಷ್ಟ್ರೀಯ ದಾಖಲೆ

ಬೆಂಗಳೂರು, ಅಕ್ಟೋಬರ್ 5: ಬೆಂಗಳೂರಿನಲ್ಲಿ ನಡೆದ ರಿಲಯಾನ್ಸ್ ಫೌಂಡೇಶನ್ ಯೂತ್ ಸ್ಪೋರ್ಟ್ಸ್ (ಆರ್‌ಎಫ್‌ವೈಎಸ್) ಅಥ್ಲೆಟಿಕ್ಸ್ 2018-19ರ ಸೀಸನ್ ನಲ್ಲಿ ಮಿಂಚಿನ ಓಟಗಾರ್ತಿಯಾಗಿ ಮಿಂಚಿದ್ದ ನಿಯೋಲ್ ಆ್ಯನ್ನಾ ಕಾರ್ನೆಲಿಯಾ ಅವರು ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದಾರೆ (ಚಿತ್ರ ಕೃಪೆ: ಆರ್‌ಎಫ್‌ವೈಎಸ್).
ಬೆಂಗಳೂರಿನ ಫ್ರಾನ್ಸಿಸ್ ಕ್ಸೇವಿಯರ್ ಗರ್ಲ್ಸ್ ಪ್ರೌಢಶಾಲೆಯವರಾದ 13ರ ಹರೆಯದ ನಿಯೋಲ್, ಆರ್‌ಎಫ್‌ವೈಎಸ್ ಚಾಂಪಿಯನ್ ಶಿಪ್ ನಲ್ಲಿ ಬಾಲಕಿಯರ ಸಬ್ ಜೂನಿಯರ್ ವಿಭಾಗದ (ಅಂಡರ್- 14) 100 ಮೀಟರ್ ಓಟವನ್ನು 12.72 ಸೆ. ಕಾಲಾವಧಿಯಲ್ಲಿ ಮುಗಿಸುವುದರೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದ್ದರು. ನಿಯೋಲ್ ದಾಖಲೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದಿಂದ ಅನುಮೋದಿಸಲ್ಪಟ್ಟಿದೆ.
ಇದೇ ವಿಭಾಗದಲ್ಲಿ 2010 ಡಿಸೆಂಬರ್ 2ರಂದು ಕೇರಳದಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ 100 ಮೀ. ಓಟವನ್ನು 12.73 ಸೆ. ಕಾಲಾವಧಿಯಲ್ಲಿ ಮುಗಿಸುವ ಮೂಲಕ ಮಜಿಧ ನವ್ರಿನ್ ಎ ಅವರು ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಆದರೆ ಆ ದಾಖಲೆಯನ್ನು ನಿಯೋಲ್ ಸರಿಗಟ್ಟಿದ್ದಾರೆ. ವಿವಿಧ ಶಾಲಾ ಕಾಲೇಜುಗಳ ಸುಮಾರು 1200 ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications