ಅತ್ಯಾಚಾರ ಪ್ರಕರಣದಲ್ಲಿ ಸಂದೀಪ್ ಲಾಮಿಚ್ಚಾನೆ ಅಪರಾಧಿ; ಕಠ್ಮಂಡು ಕೋರ್ಟ್ ಮಹತ್ವದ ತೀರ್ಪು
ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಾಮಿಚ್ಚಾನೆ ಅವರು 18 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಕಠ್ಮಂಡು ಜಿಲ್ಲಾ ನ್ಯಾಯಾಲಯವು ಶುಕ್ರವಾರ, ಡಿಸೆಂಬರ್ 29ರಂದು ಅಪರಾಧಿ ಎಂದು ತೀರ್ಪು ನೀಡಿದೆ.
ನೇಪಾಳ ಕ್ರಿಕೆಟಿಗನ ವಿರುದ್ಧ ಅತ್ಯಾಚಾರ ಪ್ರಕರಣದ ಅಂತಿಮ ವಿಚಾರಣೆಗಳು ಭಾನುವಾರ, ಡಿಸೆಂಬರ್ 24ರಂದು ಪ್ರಾರಂಭವಾದವು. ಕಠ್ಮಂಡು ಜಿಲ್ಲಾ ನ್ಯಾಯಾಧೀಶ ಶಿಶಿರ್ ರಾಜ್ ಧಕಲ್ ಅವರ ಏಕ ಸದಸ್ಯ ಪೀಠವು ನೇಪಾಳಿ ಕ್ರಿಕೆಟಿಗನ ವಿರುದ್ಧ ತೀರ್ಪು ನೀಡಿತು.

ಇನ್ನು ಮುಂದಿನ ವಿಚಾರಣೆಯಲ್ಲಿ ಸಂದೀಪ್ ಲಾಮಿಚ್ಚಾನೆ ಅವರ ಜೈಲು ಶಿಕ್ಷೆಯನ್ನು ಮತ್ತು ವಿಧಿಸಬಹುದಾದ ಯಾವುದೇ ದಂಡ ಅಥವಾ ಪರಿಹಾರವನ್ನು ನಿರ್ಧರಿಸಲಾಗುತ್ತದೆ.
ಕಳೆದ ಜನವರಿ 12ರಿಂದ ಸಂದೀಪ್ ಲಾಮಿಚ್ಚಾನೆ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ ಮತ್ತು ಇತ್ತೀಚಿನ ದಿನಗಳಲ್ಲಿ ನೇಪಾಳ ತಂಡಕ್ಕಾಗಿ ಹಲವು ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ.
ಸಂದೀಪ್ ಲಾಮಿಚ್ಚಾನೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗೆ ಪ್ರತಿಕ್ರಿಯಿಸಿದ ಪಟಾನ್ ಹೈಕೋರ್ಟ್ ಕ್ರಿಕೆಟಿಗನನ್ನು ಬಿಡುಗಡೆ ಮಾಡಲು ಆದೇಶಿಸಿತು. ನ್ಯಾಯಾಧೀಶರಾದ ಧ್ರುವ ರಾಜ್ ನಂದಾ ಮತ್ತು ರಮೇಶ್ ದಹಲ್ ಅವರ ಜಂಟಿ ಪೀಠವು ಷರತ್ತುಗಳೊಂದಿಗೆ 2 ಮಿಲಿಯನ್ ರೂಪಾಯಿಗಳ ಜಾಮೀನು ಬಾಂಡ್‌ನಲ್ಲಿ ಬಿಡುಗಡೆ ಮಾಡಲು ಆದೇಶಿಸಿತ್ತು.

ಗಮನಾರ್ಹವೆಂದರೆ, 2022ರ ಆಗಸ್ಟ್ 21ರಂದು 18 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ಕಠ್ಮಂಡು ಜಿಲ್ಲಾ ಅಟಾರ್ನಿ ಕಚೇರಿಯು ಸೆಪ್ಟೆಂಬರ್, 2022ರಲ್ಲಿ ಸಂದೀಪ್ ಲಾಮಿಚ್ಚಾನೆ ವಿರುದ್ಧ ಪ್ರಕರಣ ದಾಖಲಿಸಿತ್ತು.
ಕ್ರಿಮಿನಲ್ ಕೋಡ್ 2074ರ ಸೆಕ್ಷನ್ 219ರ ಅಡಿಯಲ್ಲಿ ಕ್ರಿಕೆಟಿಗ ಸಂದೀಪ್ ಲಾಮಿಚ್ಚಾನೆ ಮೇಲೆ ಆರೋಪ ಹೊರಿಸಲಾಗಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್)ನಲ್ಲಿ ಆಡಲು ಸಂದೀಪ್ ಲಾಮಿಚ್ಚಾನೆ ಟ್ರಿನಿಡಾಡ್ ಅಂಡ್ ಟೊಬಾಗೋದಲ್ಲಿದ್ದಾಗ ಸಂತ್ರಸ್ತ ಯುವತಿ ಗೌಶಾಲಾ ಮೆಟ್ರೋಪಾಲಿಟನ್ ಪೊಲೀಸ್ ಸರ್ಕಲ್‌ನಲ್ಲಿ ಸೆಪ್ಟೆಂಬರ್ 6ರಂದು ಆತನ ವಿರುದ್ಧ ದೂರು ದಾಖಲಿಸಿದ್ದಳು.
ನೇಪಾಳ ಕ್ರಿಕೆಟಿಗ ಸಂದೀಪ್ ಲಾಮಿಚ್ಚಾನೆ ಅವರನ್ನು ಅಕ್ಟೋಬರ್ 6, 2022ರಂದು ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಂಧಿಸಲಾಗಿತ್ತು.
ಕಠ್ಮಂಡು ಜಿಲ್ಲಾಧಿಕಾರಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಅತ್ಯಾಚಾರ ಸಂತ್ರಸ್ತೆಯ ದೈಹಿಕ ಮತ್ತು ಮಾನಸಿಕ ಹಿಂಸೆಗಾಗಿ ಸಂದೀಪ್ ಲಾಮಿಚ್ಚಾನೆ ಅವರಿಂದ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ಅವರ ಬ್ಯಾಂಕ್ ಖಾತೆ ಮತ್ತು ಆಸ್ತಿಯನ್ನು ಫ್ರೀಜ್ ಮಾಡಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications