Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೊಚ್ಚಲ ಫುಟ್ಬಾಲ್ ಪಂದ್ಯಕ್ಕೆ ತಯಾರಾಗುತ್ತಿದ್ದಾರೆ ಉಸೇನ್ ಬೋಲ್ಟ್

Nervous Usain Bolt prepares for football debut

ಕ್ಯಾನ್ಬೆರಾ, ಆಗಸ್ಟ್ 30: ಜಮೈಕಾದ ಮಿಂಚಿನ ಓಟಗಾರ ಉಸೇನ್ ಬೋಲ್ಟ್ ಹೊಸ ವೃತ್ತಿ ಜೀವನಕ್ಕೆ ಕಾಲಿರಿಸುವುದರಲ್ಲಿದ್ದಾರೆ. ಸೆಪ್ಟೆಂಬರ್ 1ಕ್ಕೆ ಮೊದಲ ಬಾರಿಗೆ ಫುಟ್ಬಾಲ್ ಪಂದ್ಯವೊಂದರಲ್ಲಿ ಬೋಲ್ಟ್ ಪಾಲ್ಗೊಳ್ಳಲಿದ್ದಾರೆ. ಆದರೆ ತನ್ನ ಫಿಟ್ನೆಸ್ ಬಗ್ಗೆ ತನಗೇ ಕೊಂಚ ಅಂಜಿಕೆ ಇದೆ ಎಂದು ಬೋಲ್ಟ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಸೆಂಟ್ರಲ್ ಕೋಸ್ಟ್ ಮರೀನರ್ಸ್ ಫುಟ್ಬಾಲ್ ಕ್ಲಬ್ ಗೆ ಆಡುತ್ತಿರುವ ಬೋಲ್ಟ್ ತಂಡದ ಪರ ಸೌಹಾರ್ದ ಪಂದ್ಯವೊಂದರಲ್ಲಿ ತನ್ನ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ. ಉಸೇನ್ ಬೋಲ್ಟ್ ವೃತ್ತಿಪರ ಫುಟ್ಬಾಲ್ ಆಟಗಾರನಾಗುವ ಕನಸನ್ನಿಟ್ಟುಕೊಂಡಿದ್ದಾರೆ.

ಮಾಜಿ ಸ್ಟಾರ್ ಓಟಗಾರ ಫುಟ್ಬಾಲ್ ನಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಸಾಕಷ್ಟು ಅಭಿಮಾನಿಗಳು ಪಂದ್ಯ ವೀಕ್ಷಿಸುವುದನ್ನು ನಿರೀಕ್ಷಿಸಲಾಗಿದೆ. ಪೇ ಟಿವಿ ಚಾನೆಲ್ ನಲ್ಲಿ ಇದರ ನೇರಪ್ರಸಾರವೂ ಆಗಲಿದೆ. ಈ ಪಂದ್ಯವನ್ನು ಸುಮಾರು 10,000 ಅಭಿಮಾನಿಗಳು ಸೆಂಟ್ರಲ್ ಕೋಸ್ಟ್ ಮೈದಾನದಲ್ಲಿ ವೀಕ್ಷಿಸುವುದನ್ನು ನಿರೀಕ್ಷಿಸಲಾಗಿದೆ.

'ಅದೃಷ್ಟ ಪರೀಕ್ಷೆಗಿಳಿಯುತ್ತಿರುವ ಬಗ್ಗೆ ಅಂಚಿಕೆಯಿದೆ. ಆದರೆ ಅದರ ಬಗ್ಗೆ ತೀರಾ ತಲೆ ಕೆಡಿಸಿಕೊಂಡಿಲ್ಲ. ಟ್ರ್ಯಾಕ್ ಆ್ಯಂಡ್ ಫೀಲ್ಡ್ ನಲ್ಲಿ ಸ್ವಲ್ಪ ಮಿಂಚಿದ್ದೆ. ಆದರೆ ಫುಟ್ಬಾಲ್ ಪಂದ್ಯಕ್ಕಿಳಿಯುತ್ತಿರುವುದು ನನಗೆ ಹೊಸತು. ಮೊದಲ ಪಂದ್ಯವನ್ನಾಡುತ್ತಿದ್ದೇನೆ ಏನಾಗುತ್ತೋ ನೋಡೋಣ' ಎಂದಿದ್ದಾರೆ.

ವೇಗದ ಓಟಗಾರನಾಗಿ ವಿಶ್ವ ಮಟ್ಟದಲ್ಲಿ ಮಿಂಚಿದ್ದ ಉಸೇನ್ ಬೋಲ್ಟ್ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಎರಡು ವೈಯಕ್ತಿಕ ಚಿನ್ನದ ಪದಕ ಗೆದ್ದಿದ್ದರು. 100 ಮೀ. ನಲ್ಲಿ ವಿಶ್ವ ದಾಖಲೆ ಈಗಲೂ ಬೋಲ್ಟ್ ಹೆಸರಿನಲ್ಲಿದೆ. 2009ರಲ್ಲಿ ಬೋಲ್ಟ್ 100 ಮೀ. ಓಟವನ್ನು 9.58 ಸೆಕೆಂಡ್ ಗಳಲ್ಲಿ ಮುಗಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

Story first published: Thursday, August 30, 2018, 16:39 [IST]
Other articles published on Aug 30, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+