ಪ್ರತಿಷ್ಠಿತ ನೆಟ್ಟಕಲ್ಲಪ್ಪ ಈಜು ಸ್ಪರ್ಧೆಗೆ ಮುಹೂರ್ತ ಫಿಕ್ಸ್ ಆಗಿದೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಈಜು ಪಟುಗಳು ಹಾಗೂ ಅಂತಾರಾಷ್ಟ್ರೀಯ ಈಜು ಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿಯ ಈಜು ಸ್ಪರ್ಧೆಯನ್ನು ಈ ನವೆಂಬರ್ 8 ಹಾಗೂ 9 ರಂದು ಪದ್ಮನಾಭನಗರದ ನೆಟ್ಟಕಲ್ಲಪ್ಪ ಅಕ್ವಾಟಿಕ್ ಕೇಂದ್ರ (ಎನ್‌ಎಸಿ) ಆಯೋಜಿಸಲಾಗುತ್ತಿದೆ.
ಯುವಕರನ್ನು ಈಜು ಸ್ಪರ್ಧೆಯತ್ತ ಪ್ರೇರಣೆ ದೊರೆಯುತ್ತದೆ. ಪ್ರತಿ ಬಾರಿಯಂತೆ ಈ ಬಾರಿಯೂ ಖ್ಯಾತನಾಮ ಈಜು ಪಟುಗಳು ಈಜು ಕೊಳ ಪ್ರವೇಶಿಸಲಿದ್ದು, ಇವರ ಪ್ರದರ್ಶನವನ್ನು ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ. ಈ ರೇಸ್‌ನ ಪ್ರಮುಖ ಆಕರ್ಷಣೆ ಸ್ಕಿನ್ಸ್ (Skins) ಸ್ಪರ್ಧೆಯಾಗಿದೆ. ನಾಕೌಟ್ ಮಾದರಿಯಲ್ಲಿ ನಡೆಯುವ ಈ ರೇಸ್‌ನಲ್ಲಿ ಈಜು ಪಟುಗಳ ಸಾಮರ್ಥ್ಯದ ಪ್ರದರ್ಶನವಾಗಲಿದೆ. ಅಮೆರಿಕದಲ್ಲಿ ಪ್ರಚಲಿತವಿರುವ ಸ್ಕಿನ್ಸ್ ಸ್ಪರ್ಧೆಯನ್ನು ಭಾರತದಲ್ಲಿ ಈ ಸ್ಪರ್ಧೆಯಲ್ಲಿ ಕಾಣಬಹುದಾಗಿದೆ.

ಭವಿಷ್ಯದ ಈಜು ತಾರೆಗಳನ್ನು ರೂಪಿಸುವ ಉದ್ದೇಶ ಈ ಸ್ಪರ್ಧೆಯದ್ದಾಗಿದೆ. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಈಜು ಪಟುಗಳಿಗೆ "ಅತ್ಯಮೂಲ್ಯ ಈಜುಗಾರ" ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಈಜು ಸ್ಪರ್ಧೆಯಲ್ಲಿ 300ಕ್ಕೂ ಹೆಚ್ಚು ಈಜು ಪಟುಗಳು ಭಾಗವಹಿಸಲಿದ್ದಾರೆ. ಫ್ರಿ ಸ್ಟೈಲ್, ಬ್ಯಾಕ್ ಸ್ಟ್ರೋಕ್, ಬಟರ್‌ಫ್ಲೈ ಸೇರಿದಂತೆ ಹಲವು ಸ್ಪರ್ಧೆಗಳು ನಡೆಯಲಿದ್ದು, 4 ವಿಭಾಗಗಳಲ್ಲಿ ಈಜು ಪಟುಗಳು ಈಜು ಕೊಳಕ್ಕೆ ಇಳಿಯಲಿದ್ದಾರೆ.