For Quick Alerts
ALLOW NOTIFICATIONS  
For Daily Alerts

Wrestling: ಭಾರತೀಯ ಸ್ಟಾರ್ ಕುಸ್ತಿಪಟುಗಳಿಂದ ಹೊಸ ಇನ್ನಿಂಗ್ಸ್ ಆರಂಭ

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಪದಕಕ್ಕಾಗಿ ಹೋರಾಡಿದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಜೊತೆಗೆ ಸಾಕ್ಷಿ ಮಲಿಕ್ ಕೂಡ ಈಗ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕಳೆದ ವರ್ಷ ಭಾರತದ ಮಾಜಿ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಅವರೊಂದಿಗೆ ಪ್ರಮುಖ ಮುಖವಾಗಿದ್ದ ಸಾಕ್ಷಿ, ಅದೇ ವರ್ಷ ಡಿಸೆಂಬರ್‌ನಲ್ಲಿ ಕುಸ್ತಿಯಿಂದ ನಿವೃತ್ತರಾಗಿದ್ದರು.

ಇದೀಗ ಮಾಜಿ ಮಹಿಳಾ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಗೀತಾ ಫೋಗಟ್ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸುವುದಾಗಿ ಘೋಷಿಸಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ 2024ರ ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಸ್ಟಾರ್ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಜೊತೆಯಾಗಲಿದ್ದಾರೆ.

New innings start from Indian star wrestlers

2016ರ ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮತ್ತು 2010ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಗೀತಾ ಫೋಗಟ್ ಅವರು ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಜಂಟಿ ಹೇಳಿಕೆಯ ಮೂಲಕ ಹೇಳಿಕೆಯ ಮೂಲಕ ಹೊಸ 'ವ್ರೆಸ್ಲಿಂಗ್ ಚಾಂಪಿಯನ್ಸ್ ಸೂಪರ್ ಲೀಗ್‌' ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.

ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ, 'ನಮ್ಮ ಹಳ್ಳಿಗಳು ಮತ್ತು ಸಮುದಾಯಗಳು ನಮ್ಮನ್ನು ಬೆಳೆಸಿದವು, ಇಡೀ ದೇಶವು ನಮ್ಮನ್ನು ಚಾಂಪಿಯನ್‌ಗಳನ್ನಾಗಿ ಮಾಡಲು ಒಗ್ಗೂಡಿತು. ತ್ರಿವರ್ಣ ಧ್ವಜಕ್ಕಾಗಿ ಹೋರಾಡುವುದಕ್ಕಿಂತ ದೊಡ್ಡ ಗೌರವ ಇನ್ನೊಂದಿಲ್ಲ. ನಿಮ್ಮ ಪ್ರೀತಿ ಮತ್ತು ಸ್ಫೂರ್ತಿ ಇದನ್ನು ಸಾಧ್ಯವಾಗಿಸಿದ್ದು, ಎಲ್ಲರಿಗೂ ಕೃತಜ್ಞರಾಗಿರುತ್ತೇವೆ. ಸರ್ಕಾರದ ನಿರಂತರ ಬದ್ಧತೆ ಮತ್ತು ಬೆಂಬಲಕ್ಕಾಗಿ ನಾವು ವಿಶೇಷವಾಗಿ ಕೃತಜ್ಞರಾಗಿರುತ್ತೇವೆ.

ನೀವು ಮೇಲೆ ತೋರಿರುವ ವಿಶ್ವಾಸಕ್ಕೆ ಪ್ರತಿಯಾಗಿ ನಮ್ಮ ಕ್ರೀಡಾ ಪ್ರತಿಭೆ, ಅನುಭವ, ತಾಳ್ಮೆ ಹಾಗೂ ಯಶಸ್ಸನ್ನು ಕ್ರೀಡೆಯ ಸೇವೆಗೆ ಮುಡಿಪಾಗಿಡುವುದು ಮುಖ್ಯ. ಆದ್ದರಿಂದ, ಒಟ್ಟಿಗೆ ನಾವು ವ್ರೆಸ್ಲಿಂಗ್ ಚಾಂಪಿಯನ್ಸ್ ಸೂಪರ್ ಲೀಗ್ ಅನ್ನು ಪ್ರಾರಂಭಿಸುತ್ತೇವೆ' ಎಂದು ಗೀತಾ ಫೋಗಟ್ ಬರೆದಿದ್ದಾರೆ.

ಅಮನ್ ಸೆಹ್ರಾವತ್ ಬೆಂಬಲ

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆ ತಂದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಕೂಡ ಈ ಹೊಸ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ. ಅವರು ತಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅಮನ್, 'ಭಾರತದ ಕುಸ್ತಿ ಪ್ರತಿಭೆಯಲ್ಲಿ ಸಾಕಷ್ಟು ಗುಣಮಟ್ಟ ಮತ್ತು ಆಳವಿದೆ. ಅವರಿಗೆ ಬೇಕಾಗಿರುವುದು ವಿಶ್ವ ದರ್ಜೆಯ ವೇದಿಕೆಯಾಗಿದ್ದು, ಅಲ್ಲಿ ಅವರು ತಮ್ಮ ದೈಹಿಕ ಸಾಮರ್ಥ್ಯ, ಕೌಶಲ್ಯ ಮತ್ತು ಮನಸ್ಥಿತಿಯನ್ನು ಇನ್ನಷ್ಟು ಬಲಪಡಿಸಬಹುದು. ವ್ರೆಸ್ಲಿಂಗ್ ಚಾಂಪಿಯನ್ಸ್ ಸೂಪರ್ ಲೀಗ್ ನಿಖರವಾಗಿ ನಮಗೆ ಬೇಕಾಗಿರುವುದು. ಏಕೆಂದರೆ ಇದು ನಾವು ಕುಸ್ತಿಯನ್ನು ನೋಡುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಅದಕ್ಕಾಗಿಯೇ ನಾನು ಅದರ ಭಾಗವಾಗಿದ್ದೇನೆ. ನನ್ನ ಸಂಪೂರ್ಣ ಬೆಂಬಲ ಇದಕ್ಕೆ ಇರುತ್ತದೆ ಎಂದು ಬರೆದುಕೊಂಡಿದ್ದಾರೆ.

Story first published: Tuesday, September 17, 2024, 9:14 [IST]
Other articles published on Sep 17, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+