ಎದೆಹಾಲು ಮಗುವಿಗೆ ಮಾತ್ರವಲ್ಲ ಅಥ್ಲೀಟ್ ಗಳಿಗೂ ಲಭ್ಯ!
ನ್ಯೂಯಾರ್ಕ್, ಜೂ.18: ತಾಯಿಯ ಹಾಲು ಮಗುವಿಗೆ ಒಳ್ಳೆಯದು ಎಂಬುದು ಲೋಕಕ್ಕೆ ತಿಳಿದಿದೆ. ಅದರೆ, ಎದೆಹಾಲು ಈಗ ಅಥ್ಲೀಟ್ ಗಳಿಗೂ ಲಭ್ಯವಾಗುತ್ತಿದೆ. ಎದೆಹಾಲು ಆನ್ ಲೈನ್ ನಲ್ಲಿ ಮಾರಾಟಕ್ಕಿದೆ.
ತಾಯಂದರು ಎದೆ ಹಾಲನ್ನು ಹಂಚಿಕೊಳ್ಳುವ ಪರಿಪಾಠ ಈಗ ಆನ್ ಲೈನ್ ಲೋಕಕ್ಕೆ ಬಂದಿದ್ದು, ಇತರೆ ಉತ್ಪನ್ನಗಳಂತೆ ಎದೆಹಾಲನ್ನು ಮಾರಾಟ ಮಾಡಲಾಗುತ್ತಿದೆ. ನೈಸರ್ಗಿಕವಾಗಿ ತಾಯಿಯ ಹಾಲು ಮಗುವಿಗೆ ಉತ್ತಮ ಪೌಷ್ಟಿಕ ಆಹಾರವಾಗಿರುತ್ತದೆ.[ಪ್ರಸವದ ನಂತರ ತಾಯಂದಿರು ತಿನ್ನಬಾರದ ಆಹಾರಗಳು]
ಅದರೆ, ಇದು ಬಾಡಿ ಬಿಲ್ಡರ್, ಅಥ್ಲೀಟ್ ಗಳಿಗೂ ಉತ್ತಮವಾಗಿದೆ ಎಂದು ಬ್ರೆಸ್ಟ್ ಫೀಡಿಂಗ್ ಮೆಡಿಸನ್ ಬಗ್ಗೆ ಪ್ರಕಟಣೆಯಲ್ಲಿ ಹೇಳಲಾಗಿದೆ.

ಎದೆಹಾಲಿನ ಮಹತ್ವ ತಾಯಂದರಿಗೆ ಅರಿವಾಗಿದೆ. ವಾಣಿಜ್ಯ ಉದ್ದೇಶಕ್ಕಾಗಿ ಬಳಸಲು ಮಾನವ ಹಾಲು ಬ್ಯಾಂಕ್ ಗಳಿಂದ ಸಾಧ್ಯವಾಗದ ಕಾರಣ ಆನ್ ಲೈನ್ ನಲ್ಲಿ ಮಾರಾಟ ಮಾಡುವುದು ಸುಲಭವಾಗುತ್ತಿದೆ ಎಂದು ಬ್ರೆಸ್ಟ್ ಫೀಡಿಂಗ್ ಮೆಡಿಸನ್ ಪ್ರಧಾನ ಸಂಪಾದಕ ಆರ್ಥರ್ ಐಡೆಲ್ ಮನ್ ಹೇಳಿದ್ದಾರೆ.
ಆದರೆ, ಹಾಲಿನ ಗುಣಮಟ್ಟದ ಬಗ್ಗೆ ಖಾತ್ರಿ ನೀಡಲು ಸಾಧ್ಯವಿಲ್ಲ. ಅದರಲ್ಲಿರುವ ಬ್ಯಾಕ್ಟೀರಿಯ ಅಥವಾ ಗಟ್ಟಿತನದ ಬಗ್ಗೆ ಗ್ರಾಹಕರೇ ಪರೀಕ್ಷಿಸಿಕೊಳ್ಳಬೇಕು ಎಂದು ಮಾರಾಟಗಾರರು ಹೇಳಿದ್ದಾರೆ. ಈ ಹಿಂದೆ ಲಂಡನ್ನಿನಲ್ಲಿ ಎದೆಹಾಲಿನ ಐಸ್ ಕ್ರೀಂ ಮಾರುಕಟ್ಟೆಗೆ ಬಂದಿತ್ತು. ಪ್ರತಿ ಪೌಂಡ್ ಎದೆಹಾಲಿಗೆ 15 ಡಾಲರ್ ಕೊಡಲಾಗುತ್ತಿತ್ತು. (ಐಎಎನ್ಎಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications