Paris Olympics 2024: ಕ್ವಾರ್ಟರ್-ಫೈನಲ್‌ಗೆ ಎಂಟ್ರಿ ಕೊಟ್ಟ ಭಾರತದ ಸ್ಟಾರ್ ಬಾಕ್ಸರ್; ಪದಕ ಗೆಲ್ಲಲು ಒಂದು ಹೆಜ್ಜೆ ದೂರ!
ಆಗಸ್ಟ್ 1 ಗುರುವಾರ, ಪ್ಯಾರಿಸ್ ಒಲಿಂಪಿಕ್ಸ್‌ನ ಐದನೇ ದಿನವಾದ ಇಂದು ಭಾರತದ ಸ್ಟಾರ್ ಬಾಕ್ಸರ್ ನಿಶಾಂತ್ ದೇವ್ ಅದ್ಭುತ ಪ್ರದರ್ಶನ ನೀಡಿ ಪ್ಯಾರಿಸ್ ಒಲಿಂಪಿಕ್ಸ್ 2024ರ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಪದಕ ಗೆಲ್ಲಲು ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ.
ನಿಶಾಂತ್ ದೇವ್ ಪುರುಷರ 71 ಕೆಜಿ ಸುತ್ತಿನ 16 ಪಂದ್ಯದಲ್ಲಿ 7ನೇ ಶ್ರೇಯಾಂಕದ ಈಕ್ವೆಡಾರ್‌ನ ಜೋಸ್ ಗೇಬ್ರಿಯಲ್ ರೊಡ್ರಿಗಸ್ ಟೆನೊರಿಯೊ ಅವರನ್ನು ಸೋಲಿಸಿದರು. ಈ ಕಠಿಣ ಪಂದ್ಯವನ್ನು ಜೋಸ್ ಗೇಬ್ರಿಯಲ್ ರೊಡ್ರಿಗಸ್ ಟೆನೊರಿಯೊ ವಿರುದ್ಧ ನಿಶಾಂತ್ 3-2 ರಿಂದ ಗೆದ್ದು ಬೀಗಿದ್ದಾರೆ.

ನಿಶಾಂತ್ ಪಂದ್ಯದ ಆರಂಭದಿಂದಲೂ ಎದುರಾಳಿ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಈ ನಡುವೆ ಈಕ್ವೆಡಾರ್ ಬಾಕ್ಸರ್ ಅತ್ಯುತ್ತಮ ಪ್ರದರ್ಶನ ನೀಡಿದರು. ಆದರೂ, ಭಾರತದ ನಿಶಾಂತ್ ಕಂಬ್ಯಾಕ್ ಮಾಡುವ ಮೂಲಕ ತಮ್ಮ ಸ್ಕೋರ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಕೊನೆಯಲ್ಲಿ ನಿಶಾಂತ್ ಕ್ವಾರ್ಟರ್ ಫೈನಲ್ ಆರ್ಹತೆ ಪಡೆದು ಪದಕ ಗೆಲ್ಲುವ ಭರವಸೆ ಹೆಚ್ಚಿಸಿದ್ದಾರೆ.
ಪದಕ ಗೆಲ್ಲಲು ಒಂದು ಹೆಜ್ಜೆ ದೂರ
ಎರಡು ಬಾರಿಯ ರಾಷ್ಟ್ರೀಯ ಚಾಂಪಿಯನ್ ನಿಶಾಂತ್ ದೇವ್ ಅವರು ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಆಡುತ್ತಿದ್ದು, ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತಮ್ಮ ಮೊದಲ ಪದಕವನ್ನು ಖಚಿತಪಡಿಸಿಕೊಳ್ಳಲು ಕೇವಲ ಒಂದು ಗೆಲುವಿನ ಅಂತರದಲ್ಲಿದ್ದಾರೆ.
ಕಳೆದ ವರ್ಷ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಬಾಕ್ಸರ್ ನಿಶಾಂತ್ ದೇವ್ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಬೇಕಾಯಿತು. ಇದೀಗ ಭಾರತಕ್ಕೆ ಮತ್ತೊಂದು ಪದಕವನ್ನು ಬಾಕ್ಸಿಂಗ್‌ನಲ್ಲಿ ತಂದು ಕೊಡಲು ನಿಶಾಂತ್ ರೆಡಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications