Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯರಾಗಿ ನೀತಾ ಅಂಬಾನಿ ಅವಿರೋಧ ಮರು ಆಯ್ಕೆ

ಪ್ಯಾರಿಸ್, ಜುಲೈ 24: ಇದೇ ಜುಲೈ 26ರಿಂದ ಆಗಸ್ಟ್ 11ವರೆಗೆ 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದ್ದು, ಈಗಾಗಲೇ ಅದ್ಧೂರಿ ಉದ್ಘಾಟನಾ ಸಮಾರಂಭಕ್ಕೆ ಪ್ರಣಯ ನಗರಿ ಸಜ್ಜಾಗಿದೆ.

2024ರ ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆಯೂ ಆದ ನೀತಾ ಅಂಬಾನಿ ಅವರ ಮೇಲೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಮತ್ತೊಮ್ಮೆ ವಿಶ್ವಾಸವನ್ನು ವ್ಯಕ್ತಪಡಿಸಿದೆ.

Nita Ambani Re-elected Unopposed As International Olympic Committee Member

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸದಸ್ಯರಾಗಿ ನೀತಾ ಅಂಬಾನಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. ಒಟ್ಟು 93 ಮತದಾರರು ಮತ ಚಲಾಯಿಸಿದ್ದು, ಎಲ್ಲ 93 ಮತಗಳು ನೀತಾ ಅಂಬಾನಿ ಪರವಾಗಿ ಅಂದರೆ, ಶೇಕಡಾ ನೂರರಷ್ಟು ಮತಗಳು ಅವರಿಗೆ ಬಂದಿವೆ.

ಅಂದಹಾಗೆ, 2016ರಲ್ಲಿ ನಡೆದ ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ನೀತಾ ಅಂಬಾನಿ ಐಒಸಿ ಸದಸ್ಯೆಯಾಗಿ ಆಯ್ಕೆಯಾದರು. ನೀತಾ ಅಂಬಾನಿ ಅವರು ರಿಲಯನ್ಸ್ ಫೌಂಡೇಷನ್‌ನ ಸಂಸ್ಥಾಪಕರು ಸಹ ಆಗಿದ್ದಾರೆ.

ತಮ್ಮ ಮರು ಆಯ್ಕೆ ಬಗ್ಗೆ ಮಾತನಾಡಿದ ನೀತಾ ಅಂಬಾನಿ, ""ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯೆ ಆಗಿ ಮತ್ತೆ ನನ್ನನ್ನು ಚುನಾಯಿಸಿರುವುದಕ್ಕೆ ಅಪಾರವಾದ ಗೌರವವಿದೆ. ನನ್ನ ಮೇಲಿನ ನಂಬಿಕೆ ಮತ್ತು ವಿಶ್ವಾಸಕ್ಕಾಗಿ ಐಒಸಿ ಅಧ್ಯಕ್ಷರಾದ ಬ್ಯಾಚ್ ಮತ್ತು ನನ್ನ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ''.

"ಈ ಮರುಚುನಾವಣೆಯು ನನಗೆ ವೈಯಕ್ತಿಕ ಮೈಲುಗಲ್ಲು ಮಾತ್ರವಲ್ಲ, ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಪ್ರಭಾವವನ್ನು ತೋರಿಸುತ್ತದೆ ಮತ್ತು ನಾನು ಈ ಸಂತೋಷ ಮತ್ತು ಹೆಮ್ಮೆಯ ಕ್ಷಣವನ್ನು ಪ್ರತಿ ಭಾರತೀಯರೊಂದಿಗೆ ಹಂಚಿಕೊಳ್ಳುವುದಕ್ಕೆ ಬಯಸುತ್ತೇನೆ. ಹಾಗೂ ಭಾರತವೂ ಒಳಗೊಂಡಂತೆ ಪ್ರಪಂಚದಾದ್ಯಂತ ಒಲಿಂಪಿಕ್ ಸಂಭ್ರಮವನ್ನು ಬಲಪಡಿಸುವುದರಲ್ಲಿ ನಿರತಳಾಗಿದ್ದೇನೆ," ಎಂದು ನೀತಾ ಅಂಬಾನಿ ತಿಳಿಸಿದ್ದಾರೆ.

40 ವರ್ಷಗಳ ಕಾಯುವಿಕೆಯ ನಂತರ ನೀತಾ ಅಂಬಾನಿಯವರ ನೇತೃತ್ವದಲ್ಲಿ ಭಾರತವು ಐಒಸಿ ವಾರ್ಷಿಕ ಸಭೆಯ ಆತಿಥ್ಯವನ್ನು ಪಡೆದುಕೊಂಡಿತು. ಇದನ್ನು 2023ರಲ್ಲಿ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಇದೇ ಮೊದಲ ಬಾರಿಗೆ ನೀತಾ ಅಂಬಾನಿ ನೇತೃತ್ವದಲ್ಲಿ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಂಡಿಯಾ ಹೌಸ್ ನಿರ್ಮಾಣವಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಆಟಗಾರರು, ಬೆಂಬಲಿಗರು ಮತ್ತು ಪ್ರೇಕ್ಷಕರಿಗೆ ಇದು ಭಾರತದಿಂದ ದೂರವಿರುವಂಥ ಮನೆಯಂತಿದೆ.

Story first published: Wednesday, July 24, 2024, 21:58 [IST]
Other articles published on Jul 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+