Vinesh Phogat: ವಿನೇಶ್ ಪೋಗಟ್ ಕೈ ತಪ್ಪಿದ ಬೆಳ್ಳಿ, ಮನವಿ ತಿರಸ್ಕರಿಸಿದ ಸಿಎಸಿ ಕೋರ್ಟ್
ಪ್ಯಾರಿಸ್ ಒಲಿಂಪಿಕ್ಸ್ 2024ರ ಫೈನಲ್ ಪಂದ್ಯಕ್ಕೂ ಮುನ್ನ ಅನರ್ಹಗೊಂಡಿದ್ದ ವಿನೇಶ್ ಫೋಗಟ್‌ಗೆ ದೊಡ್ಡ ಆಘಾತ ಎದುರಾಗಿದೆ. ಮಹಿಳೆಯರ 50 ಕೆಜಿ ಫ್ರಿ ಸ್ಟೈಲ್ ವಿಭಾಗದಲ್ಲಿ ಸೆಮಿಫೈನಲ್‌ನಲ್ಲಿ ಗೆಲುವು ದಾಖಲಿಸಿ ಭಾರತದ ವಿನೇಶ್ ಪೋಗಟ್ ಫೈನಲ್ ಪ್ರವೇಶಿಸಿದ್ದರು.
ಫೈನಲ್‌ಗೂ ಮುನ್ನ ನಿಗದಿತ ತೂಕಕ್ಕಿಂತ ಹೆಚ್ಚಿನ ತೂಕ ಹೊಂದಿದ್ದರಿಂದ ಅವರನ್ನು ಅನರ್ಹ ಗೊಳಿಸಲಾಗಿತ್ತು. ಅವರು ಇದನ್ನು ಪ್ರಶ್ನಿಸಿ ವಿನೇಶ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಕೋರ್ಟ್ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯ ಅವರ ಮನವಿಯನ್ನು ತಿರಸ್ಕರಿಸಿದೆ.

ಭಾರತಕ್ಕೆ ಇನ್ನೊಂದು ಪದಕ ಸಿಗಬಹುದು ಎಂದು ಭಾವಿಸಿದ್ದ ಅಭಿಮಾನಿಗಳಿಗೆ ಬೇಸರವಾಗಿದೆ. ಕಳೆದ ಕೆಲವು ದಿನಗಳಿಂದ ವಿನೇಶ್ ಆನರ್ಹ ಪ್ರಕರಣದ ತೀರ್ಪು ಭಾರೀ ಕುತೂಹಲ ಮೂಡಿಸಿತ್ತು.
ಪದಕಕ್ಕಾಗಿ ಮನವಿ ಸಲ್ಲಿಸಿದ್ದ ವಿನೇಶ್
ವಿನೇಶ್ ಪೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನವನ್ನು ನೀಡಿದ್ದರು. ಅಲ್ಲದೆ ಆಗ್ರ ಶ್ರೇಯಾಂಕಿತ ಆಟಗಾರ್ತಿಯರನ್ನು ಮಣಿಸಿ ಬಂಗಾರ ಗೆಲ್ಲುವ ಭರವಸೆ ಮೂಡಿಸಿದ್ದರು. ಅಲ್ಲದೆ ಫೈನಲ್ ಪ್ರವೇಶಿಸಿ ಇತಿಹಾಸ ಸಹ ನಿರ್ಮಿಸಿದ್ದರು. ಆದರೆ, ಫೈನಲ್‌ಗೂ ಮುನ್ನ ನಡೆದ ತೂಕ ಪರೀಕ್ಷೆಯಲ್ಲಿ ವಿನೇಶ್ ಪೋಗಟ್ ನಿಗದಿತ ತೂಕಕ್ಕಿಂತ ಹೆಚ್ಚಿನ ತೂಕವನ್ನು ಹೊಂದಿರುವುದು ತಿಳಿದು ಬಂದಿತು. ಕೇವಲ 100 ಗ್ರಾಮ್ ತೂಕ ಹೆಚ್ಚಾಗಿದ್ದರಿಂದ ಅವರನ್ನು ಫೈನಲ್‌ಗೂ ಮುನ್ನ ಒಲಿಂಪಿಕ್ಸ್‌ನಿಂದ ಅನರ್ಹ ಗೊಳಿಸಲಾಯಿತು.
ಬೆಳ್ಳಿ ಪದಕಕ್ಕೆ ಮೇಲ್ಮನವಿ
ಫೈನಲ್‌ಗೂ ಮುನ್ನ ಅನರ್ಹರಾದ ವಿನೇಶ್ ಪೋಗಟ್ ಹತಾಶರಾದರು. ಕೆಲಕಾಲ ಯೋಚಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ (ಸಿಎಸಿ) ಮೇಲ್ಮನವಿ ಸಲ್ಲಿಸಿದರು. ಮನವಿಯಲ್ಲಿ ತಮಗೆ ಜಂಟಿಯಾಗಿ ಬೆಳ್ಳಿ ಪದಕವನ್ನು ನೀಡಬೇಕೆಂದು ಒತ್ತಾಯಿಸಿದರು.
ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಇವರ ಅರ್ಜಿ ವಿಚಾರಣೆಯನ್ನು ನಡೆಸಿ ವಾದ ಪ್ರತಿವಾದಗಳನ್ನು ಕೇಳಿ ಅಂತಿಮವಾಗಿ ಬುಧವಾರ ತೀರ್ಪು ನೀಡಿದೆ. ಅಲ್ಲದೆ ವಿನೇಶ್ ಅವರ ಮನವಿಯನ್ನು ತಿರಸ್ಕರಿಸಿದೆ. ಇದರೊಂದಿಗೆ ವಿನೇಶ್ ಅವರ ಬೆಳ್ಳಿ ಪದಕದ ಕನಸಿಗೆ ಕೊಡಲಿ ಪೆಟ್ಟು ಬಿದ್ದಿದೆ.
ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ (ಸಿಎಎಸ್) ನಲ್ಲಿ ವಿನೇಶ್ ಫೋಗಟ್ ಅವರ ಅರ್ಜಿಯನ್ನು ತಿರಸ್ಕರಿಸಿದ ಬಗ್ಗೆ ಪಿಟಿ ಉಷಾ ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ. ಕೋರ್ಟ್‌ನಲ್ಲಿ ವಿನೇಶ್ ಪರ ವಕೀಲರು ಸರಿಯಾಗಿ ವಾದ ಮಂಡಿಸಿದ್ದರು. ಆದರೂ ನಮ್ಮ ಕ್ರೀಡಾಪಟುವಿಗೆ ನ್ಯಾಯ ಸಿಗಲಿಲ್ಲ. ಈ ವಿಷಯದಲ್ಲಿ ಐಒಎ ಸಂಪೂರ್ಣವಾಗಿ ವಿನೇಶ್ ಬೆಂಬಲಕ್ಕೆ ನಿಲ್ಲುತ್ತದೆ ಎಂದು ತಿಳಿಸಿದ್ದಾರೆ .
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications