Paris Olympics 2024: ಹಳ್ಳಿಯಿಂದ ಪ್ಯಾರಿಸ್ ಒಲಿಂಪಿಕ್ಸ್‌ವರೆಗೆ ಭಾರತದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಜೀವನಚರಿತ್ರೆ
ಜುಲೈ 9 ಮಂಗಳವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26 ರಿಂದ ಪ್ರಾರಂಭವಾಗುತ್ತಿದ್ದು, ದಿನಗಳು ಹತ್ತಿರವಾಗುತ್ತಿದ್ದಂತೆ ತಮ್ಮ ದೇಶಕ್ಕೆ ಅತಿ ಹೆಚ್ಚು ಪದಕಗಳನ್ನು ತರಬೇಕೆಂಬ ಕ್ರೀಡಾಪಟುಗಳ ಕನಸು ಬಲಗೊಳ್ಳುತ್ತಿದೆ.
ಭಾರತದ ಕ್ರೀಡಾಪಟುಗಳು ಕೂಡ ಯಾವುದೇ ಬೆಲೆ ತೆತ್ತಾದರೂ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತೋರಿದ ಪ್ರದರ್ಶನವನ್ನು ಭಾರತ ಸುಧಾರಿಸಲು ಕೆಲವು ಕ್ರಮಗಳನ್ನು ಅಳವಡಿಸಿಕೊಂಡಿದೆ.

ಕಳೆದ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮೀರಾಬಾಯಿ ಚಾನು ಈ ಬಾರಿ ಚಿನ್ನ ಗೆಲ್ಲುವ ಧೃಡ ನಿರ್ಧಾರ
ತೆಗೆದುಕೊಂದ್ದಾರೆ. ಭಾರತದ ಹಳ್ಳಿಯೊಂದರಿಂದ ಪ್ಯಾರಿಸ್ ಒಲಿಂಪಿಕ್ಸ್ ವರೆಗಿನ ಮೀರಾಬಾಯಿ ಚಾನು ಜೀವನಚರಿತ್ರೆ ಬಗ್ಗ ಇಲ್ಲಿದೆ ಮಾಹಿತಿ.
ಆರಂಭಿಕ ಜೀವನ
ಆಗಸ್ಟ್ 8, 1994 ರಂದು ಮಣಿಪುರದ ಇಂಫಾಲ್‌ನ ನಾಂಗ್‌ಪೋಕ್ ಕಕ್ಚಿಂಗ್ ಎಂಬ ಹಳ್ಳಿಯ ಸಾಮಾನ್ಯ ಕುಟುಂಬದಲ್ಲಿ ಮೀರಾಬಾಯಿ ಜನಿಸಿದರು. ಆರು ಜನ ಮಕ್ಕಳಲ್ಲಿ ಮೀರಾಬಾಯಿ ಕಿರಿಯ ಮಗಳು. ಚಾನು ಅವರು ಹೊರಗಿನಿಂದ ಮರವನ್ನು ಸಂಗ್ರಹಿಸುವ ಮೂಲಕ ಜೀವನವನ್ನು ನಡೆಸುತ್ತಿದ್ದರು.
ಇಂತಹ ಪರಿಸ್ಥಿತಿಯಲ್ಲಿ ಚಾನು ವೇಟ್ ಲಿಫ್ಟರ್ ಆದ ಕಥೆಯೇ ತುಂಬಾ ರೋಚಕ. ಚಾನು ತಮ್ಮ 12ನೇ ವಯಸ್ಸಿನಲ್ಲಿ ವೇಟ್ ಲಿಫ್ಟಿಂಗ್‌ನಲ್ಲಿ ತಮ್ಮ ಶಕ್ತಿಯನ್ನು ಮೊದಲು ಅರಿತುಕೊಂಡರು. ತನಗಿಂತ 4 ವರ್ಷ ದೊಡ್ಡವನಾಗಿದ್ದ ಅಣ್ಣನಿಗೆ ಕಟ್ಟಿಗೆಯ ಕಟ್ಟನ್ನು ಸಲೀಸಾಗಿ ಎತ್ತುತ್ತಿದ್ದರು.
ಇದಕ್ಕೂ ಮುನ್ನ ಚಾನು ಇಂಫಾಲ್‌ನ ಬಿಲ್ಲುಗಾರಿಕೆ ಕಲಿಯಲು ಬಯಸಿದ್ದರು. ಬಳಿಕ ತನ್ನ ಕ್ರೀಡೆಯನ್ನು ಸರಿಯಾಗಿ ಗುರುತಿಸಿಕೊಂಡ ಮೀರಾಬಾಯಿ ಚಾನು ಭಾರತೀಯ ಮಹಿಳಾ ವೇಟ್‌ಲಿಫ್ಟರ್ ಕುಂಜರಾಣಿ ದೇವಿಯಿಂದ ಸ್ಫೂರ್ತಿ ಪಡೆದು ಅವರ ಮಾರ್ಗವನ್ನು ಅನುಸರಿಸಲು ನಿರ್ಧರಿಸಿದ್ದರು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 20ನೇ ವಯಸ್ಸಿಗೆ ಬೆಳ್ಳಿ
ಮೊದಲ ಬಾರಿಗೆ 2014ರಲ್ಲಿ ಸ್ಕಾಟ್ಲೆಂಡ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಾನು ವೃತ್ತಿಜೀವನಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ್ದರು. ಈ ಗೇಮ್ಸ್‌ನಲ್ಲಿ ಚಾನು ತಮ್ಮ 20ನೇ ವಯಸ್ಸಿನಲ್ಲೇ 48 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಛಾಪು ಮೂಡಿಸಿದ್ದರು.
ಬಳಿಕ ಚಾನು ಯುಎಸ್‌ಎನಲ್ಲಿ ನಡೆದ 2017ರ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ವೇಟ್‌ಲಿಫ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಚಾನು ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.
ಚಾನು ಒಲಿಂಪಿಕ್ಸ್ ಸಾಧನೆ
ಚಾನು ಇದುವರೆಗೆ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತದ ಪರವಾಗಿ ಭಾಗವಹಿಸಿದ್ದಾರೆ. 2016ರ ಒಲಿಂಪಿಕ್ಸ್‌ನಿಂದ ಯಾವುದೇ ಪದಕ ಪಡೆಯದೇ ಹೊರಗುಳಿದಿದ್ದರು. ಅದರ ನಂತರ ಅವರು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು.
ಇದೀಗ ಮೀರಾಬಾಯಿ ಆಗಸ್ಟ್ 7 ರಂದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತಮ್ಮ ಸ್ಪರ್ಧೆ ಮಾಡಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು 49 ಕೆಜಿ ವಿಭಾಗದಲ್ಲಿ ಪದಕ ಗೆಲ್ಲುವ ಮೂಲಕ ವೇಟ್‌ಲಿಫ್ಟಿಂಗ್‌ನಲ್ಲಿ 21 ವರ್ಷಗಳ ಬರವನ್ನು ಕೊನೆಗೊಳಿಸಿದ್ದರು.
ಪ್ಯಾರಿಸ್‌ನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆ
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವು ಮೀರಾಬಾಯಿ ಚಾನು ಅವರಿಂದ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದೆ. ಚಾನು ಪದಕ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿದ್ದಾರೆ. ಈ ಬಾರಿ ವೇಟ್ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದರೆ, ಈ ಸಾಧನೆ ಮಾಡಿದ ಮೊದಲ ಭಾರತದ ಅಥ್ಲೀಟ್ ಎನಿಸಿಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications