Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಮೈದಾನದಲ್ಲಿ ಮಾತ್ರವಲ್ಲ, ಹೆಂಡ್ತಿ ಜೊತೆನೂ ಒಳ್ಳೆ ಮ್ಯಾಚ್ ಆಡ್ತೀನಿ'; ಭಾರತೀಯ ಕ್ರಿಕೆಟಿಗನ ವಿಡಿಯೋ ವೈರಲ್

ಭಾರತ ಕ್ರಿಕೆಟ್ ತಂಡದ ಪರ ಎಲ್ಲಾ ಮೂರು ಮಾದರಿಗಳನ್ನು ಆಡುತ್ತಿರುವ ವೇಗದ ಬೌಲರ್ ಮುಖೇಶ್ ಕುಮಾರ್ ಇತ್ತೀಚೆಗೆ ತಮ್ಮ ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಸಮಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮುಖೇಶ್ ಕುಮಾರ್, ನಂತರ ವಾಪಸ್ಸಾಗಿ ಸರಣಿಯ ಕೊನೆಯ ಪಂದ್ಯವನ್ನು ಆಡಿದರು. ಇದೀಗ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮದುವೆಯ ನಂತರ ಎರಡನೇ ಇನ್ನಿಂಗ್ಸ್ ಬಗ್ಗೆ ಮಾತನಾಡಿದ್ದಾರೆ.

Not Only In Ground, I Will Play Good Match With My Wife Also Says Mukhesh Kumar


ಉತ್ತರ ಪ್ರದೇಶದ ಗೋರಖ್‌ಪುರದ ಹೋಟೆಲ್‌‌ನಲ್ಲಿ ಟೀಮ್ ಇಂಡಿಯಾ ವೇಗಿ ಮುಖೇಶ್ ಕುಮಾರ್, ಚಪ್ರಾದ ಬನಿಯಾಪುರ್ ಬೇರುಯಿ ಗ್ರಾಮದ ನಿವಾಸಿ ದಿವ್ಯಾ ಸಿಂಗ್ ಅವರೊಂದಿಗೆ ಅದ್ಧೂರಿಯಾಗಿ ವಿವಾಹ ಮಾಡಿಕೊಂಡರು. ಈ ಮೂಲಕ ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡರು.

ವಿವಾಹದ ನಂತರ, ಡಿಸೆಂಬರ್‌ 4ರಂದು ಆರತಕ್ಷತೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮುಖೇಶ್ ಕುಮಾರ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇನಪ್ಪಾ.. ಎಲ್ಲರ ಮುಂದೆಯೇ ಹೀಗೆ ಹೇಳಿಬಿಟ್ಟಿದ್ದಾರೆ ಅಂತಾ ವಿಡಿಯೋ ನೋಡಿದ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

Not Only In Ground, I Will Play Good Match With My Wife Also Says Mukhesh Kumar

ಹೊಸದಾಗಿ ಮದುವೆಯಾದ ಕ್ರಿಕೆಟಿಗ ಮುಖೇಶ್ ಕುಮಾರ್ ಅವರನ್ನು ಪತ್ರಕರ್ತರು ಮಾತನಾಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೀರಾ ಎಂದು ಮುಖೇಶ್ ಕುಮಾರ್‌ಗೆ ಶುಭ ಕೋರುವ ವೇಳೆ ಎಲ್ಲರೂ ಹೇಳಿದ್ದಾರೆ.

ಇದೇ ಸಮಯದಲ್ಲಿ ವೇಗಿ ಮುಖೇಶ್ ಕುಮಾರ್, "ವಿವಾಹವಾಗಿರುವುದು ಉತಮ್ಮ ಭಾವನೆಯಾಗಿದೆ. ಮೈದಾನದಲ್ಲಷ್ಟೇ ಅಲ್ಲ, ನನ್ನ ಹೆಂಡ್ತಿ ಜೊತೆನೂ ಉತ್ತಮವಾಗಿ ಮ್ಯಾಚ್ ಆಡ್ತೀನಿ," ಅಂತ ಹೇಳಿ ನಕ್ಕಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಐಪಿಎಲ್‌ನಲ್ಲಿ ಮುಖೇಶ್ ಕುಮಾರ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಸದ್ಯ ಅಂತಾರಾಷ್ಟ್ರೀಯ ಪಂದ್ಯಗಳ ಡೆತ್ ಓವರ್‌ಗಳಲ್ಲಿ ರನ್ ನಿಯಂತ್ರಿಸುವುದು ಮತ್ತು ವಿಕೆಟ್ ಕಬಳಿಸುವ ಮೂಲಕ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು.

ಕಾಶಿನಾಥ್ ಸಿಂಗ್ ಮತ್ತು ಮಾಲತಿ ದೇವಿ ಅವರ ಮಗನೇ ಮುಖೇಶ್ ಕುಮಾರ್. ತಂದೆ ಕೋಲ್ಕತ್ತಾದಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಕಠಿಣ ಪರಿಶ್ರಮದಿಂದ ಮುಖೇಶ್ ಕುಮಾರ್ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್‌‌ನಲ್ಲಿ ಹೆಸರು ಮಾಡುತ್ತಿದ್ದಾರೆ.

Story first published: Saturday, December 9, 2023, 14:43 [IST]
Other articles published on Dec 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+