Paris Olympics 2024: ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಅತ್ಯಂತ ಹಿರಿಯ-ಕಿರಿಯ ಕ್ರೀಡಾಪಟುಗಳು ಯಾರು?; ಮಾಹಿತಿ ತಿಳಿಯಿರಿ
ಜುಲೈ 23 ಮಂಗಳವಾರ, ಪ್ಯಾರಿಸ್ ಒಲಿಂಪಿಕ್ಸ್ ಇದೇ ತಿಂಗಳ 26 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 11 ರಂದು ಮುಕ್ತಾಯಗೊಳ್ಳಲಿದೆ. ಇದು 33ನೇ ಬೇಸಿಗೆ ಒಲಂಪಿಕ್ ಕ್ರೀಡಾಕೂಟವಾಗಿದೆ.
ಮೂರನೇ ಬಾರಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ. ಈ ಕ್ರೀಡಾಕೂಟದಲ್ಲಿ 10,000ಕ್ಕೂ ಹೆಚ್ಚು ಆಥ್ಲೀಟ್ಸ್ ಪದಕಕ್ಕಾಗಿ ಸ್ಪರ್ಧಿಸಲಿದ್ದು, ಈ ಪೈಕಿ ಭಾರತದಿಂದ 117 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಈ ಬಾರಿ ಒಲಿಂಪಿಕ್ಸ್‌ನಲ್ಲಿ ಬ್ರೇಕ್ ಡ್ಯಾನ್ಸ್, ಸ್ಪೋರ್ಟ್ಸ್ ಕ್ಲೈಂಬಿಂಗ್ ಮತ್ತು ಸ್ಕೇಟ್‌ಬೋರ್ಡಿಂಗ್‌ನಂತಹ ಹೊಸ ಆಟಗಳನ್ನು ಸೇರಿಸಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಭಾರತ ಹೆಚ್ಚಿನ ನಿರೀಕ್ಷೆ ಹೊಂದಿದೆ. ಟೋಕಿಯೊ ಒಲಿಂಪಿಕ್ಸ್‌ಗಿಂತ ಉತ್ತಮ ಪ್ರದರ್ಶನದತ್ತ ಭಾರತದ ಅಥ್ಲೀಟ್ಸ್ ಕಣ್ಣಿಟ್ಟಿದ್ದಾರೆ.
ಭಾರತವು 117 ಸದಸ್ಯರ ತಂಡದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿದೆ. ಕಳೆದ ಮೂರು ವರ್ಷಗಳಲ್ಲಿ ಭಾರತ ಪಡೆ ಅದ್ಭುತ ಪ್ರದರ್ಶನ ನೀಡಿರುವುದರಿಂದ ಒಲಿಂಪಿಕ್ಸ್‌ನಲ್ಲಿ 7 ಪದಕಗಳನ್ನು ಗೆದ್ದು, ಭಾರತದ ಭರವಸೆಯನ್ನು ಹೆಚ್ಚಾಸಿದೆ.
ಭಾರತವು ಪ್ರತಿಯೊಂದು ಕ್ರೀಡೆಯಲ್ಲೂ ಉತ್ತಮ ಅನುಭವ ಮತ್ತು ಯುವಕರ ಮಿಶ್ರಣವನ್ನು ಹೊಂದಿದೆ. ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಹಿರಿಯ ಮತ್ತು ಕಿರಿಯ ಅಥ್ಲೀಟ್ ಯಾರು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಭಾರತದ ಅತ್ಯಂತ ಹಿರಿಯ-ಕಿರಿಯ ಅಥ್ಲೀಟ್ಸ್
44ವರ್ಷದ ಭಾರತದ ಟೆನಿಸ್ ತಾರೆ ರೋಹನ್ ಬೋಪಣ್ಣ ಅವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಅತ್ಯಂತ ಹಿರಿಯ ಕ್ರೀಡಾಪಟು. ಒಲಿಂಪಿಕ್ಸ್‌ನಲ್ಲಿ ಬೋಪಣ್ಣ ಮೂರನೇ ಬಾರಿ ಭಾಗವಹಿಸುತ್ತಿದ್ದರೆ, 14 ವರ್ಷದ ಧಿನಿಧಿ ದೇಸಿಂಗು ಭಾರತದ ತುಕಡಿಯಲ್ಲಿ ಅತ್ಯಂತ ಕಿರಿಯ ಅಥ್ಲೀಟ್ ಆಗಿದ್ದಾರೆ.
ಬೆಂಗಳೂರಿನ 14 ವರ್ಷದ ಈಜುಗಾರ್ತಿ ಧಿನಿಧಿ ದೇಸಿಂಗು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಅತ್ಯಂತ ಕಿರಿಯ ಅಥ್ಲೀಟ್ ಎಂಬ ದಾಖಲೆಯನ್ನು ಹೊಂದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಎಲ್ಲಾ ಅಥ್ಲೀಟ್ಸ್ ಬಗ್ಗೆ ನೋಡುವುದಾರೆ, 11 ವರ್ಷದ ಚೀನಾದ ಸ್ಕೇಟ್‌ಬೋರ್ಡರ್ ಝೆಂಗ್ ಹಾವೊಹಾವೊ ಅವರು ಈ ಕ್ರೀಡಾಕೂಟದಲ್ಲಿ ಅತ್ಯಂತ ಕಿರಿಯ ಸ್ಪರ್ಧಿಯಾಗಿದ್ದಾರೆ.
1896ರ ಒಲಿಂಪಿಕ್ಸ್‌ನಲ್ಲಿ 10 ವರ್ಷ ಮತ್ತು 218 ದಿನಗಳ ವಯಸ್ಸಿನಲ್ಲಿ ಸ್ಪರ್ಧಿಸಿದ ಕಿರಿಯ ಒಲಿಂಪಿಯನ್, ಗ್ರೀಕ್ ಜಿಮ್ನಾಸ್ಟ್ ಡಿಮಿಟ್ರಿಯೊಸ್ ಲೌಂಡ್ರಾಸ್‌ಗಿಂತ ಝೆಂಗ್ ಹಾವೊಹಾವೊ ಒಂದು ವರ್ಷ ಹಿರಿಯರು.
ಇರ್ವಿಂಗ್ ಅವರು ಒಲಂಪಿಕ್ ಇತಿಹಾಸದಲ್ಲಿ ಅತ್ಯಂತ ಹಳೆಯ ಆಟಗಾರರಾಗಿದ್ದಾರೆ, ಅವರು ಕೆನಡಾದ ಜಿಲ್ ಇರ್ವಿಂಗ್ ಅವರು ಒಲಂಪಿಕ್ ಇತಿಹಾಸದಲ್ಲಿ ಅತ್ಯಂತ ಹಿರಿಯ ಅಥ್ಲೀಟ್ಸ್ ಆಗಿದ್ದಾರೆ. ಜಿಲ್ ಇರ್ವಿಂಗ್ 61ನೇ ವಯಸ್ಸಿನಲ್ಲಿ ಈಕ್ವೆಸ್ಟ್ರಿಯನ್ ತಂಡದ ಸದಸ್ಯರಾಗಿ ಒಲಿಂಪಿಕ್ಸ್‌ಗೆ ಪಾದಾರ್ಪಣೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications