For Quick Alerts
ALLOW NOTIFICATIONS  
For Daily Alerts

ಕ್ರೀಡಾಲೋಕದಲ್ಲೊಂದು ಕರಾಳ ಅಧ್ಯಾಯ: ಪ್ರೇಮಿಗಳ ದಿನವೇ ಪ್ರೇಯಸಿಗೆ ಸಾವಿನ ಗಿಫ್ಟ್‌ ನೀಡಿದ್ದ ಬ್ಲೇಡ್ ರನ್ನರ್

Olympian Oscar Pistorius Killed Girl Friend On Valentines Day

ಆತ ಎರಡೂ ಕಾಲುಗಳಿಲ್ಲದ ಅಥ್ಲೀಟ್. ಆತನೆಷ್ಟು ಪ್ರತಿಭಾವಂತನೆಂದರೆ ಅಂಗವಿಕಲರಿಗಾಗಿರುವ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಮಾತ್ರವಲ್ಲ ಸಾಮಾನ್ಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಪಡೆದುಕೊಂಡ ಮೊದಲ ಬ್ಲೇಡ್ ರನ್ನರ್. ಇದರಲ್ಲಿ ಚಿನ್ನವನ್ನು ಗೆದ್ದು ಬೀಗಿ ಕ್ರೀಡಾಲೋಕವನ್ನು ಅಚ್ಚರಿಗೆ ದೂಡಿದ್ದ ವಿಶಿಷ್ಟ ಕ್ರೀಡಾಪಟು. ಆತನ ಹೆಸರೇ ಆಸ್ಕರ್ ಲಿಯನಾರ್ಡೊ ಕಾರ್ಲ್ ಪಿಸ್ಟೋರಿಸ್.

ಕ್ರೀಡಾಲೋಕದಲ್ಲಿ ಮನೆಮಾತಾದ ಪಿಸ್ಟೋರಿಸ್ ತಾನು ಗಳಿಸಿದ್ದ ಹೆಸರನ್ನು ಒಂದೇ ಕ್ಷಣದಲ್ಲಿ ಮಣ್ಣು ಪಾಲು ಮಾಡಿಬಿಟ್ಟಿದ್ದ. ಅದು ಕೂಡ ಸಾಮಾನ್ಯ ವಿಷಯಕ್ಕಲ್ಲ. ತಾನು ಹುಚ್ಚನಂತೆ ಪ್ರೀತಿಸಿದ ಗೆಳತಿಯನ್ನು ಪಿಸ್ಟೋರಿಯಸ್ ಕೊಲೆ ಮಾಡಿಬಿಟ್ಟಿದ್ದ.

ಪಿಸ್ಟೋರಿಯಸ್ ಮಾಡಿದ ಈ ಕೃತ್ಯಕ್ಕೆ ಇಡೀ ಕ್ರೀಡಾಲೋಕವೇ ಬೆಚ್ಚಿಬಿದ್ದಿತ್ತು.

ಒಂದೂವರೆ ವರ್ಷದಿಂದ ಡೇಟಿಂಗ್

ಒಂದೂವರೆ ವರ್ಷದಿಂದ ಡೇಟಿಂಗ್

ಆಕೆ ರೀವಾ ಸ್ಟೀನ್ ಕ್ಯಾಂಪ್. 2013ಕ್ಕೂ ಮುನ್ನ ಸುಮಾರು ಒಂದೂವರೆ ವರ್ಷದಿಂದ ಪಿಸ್ಟೋರಿಯಸ್ ಮತ್ತು ರೀವಾ ಡೇಟಿಂಗ್‌ನಲ್ಲಿ ತೊಡಗಿದ್ದರು. ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಇದು ಗುಟ್ಟಾಗೇನು ಇರಲಿಲ್ಲ. ತಮ್ಮ ಡೇಟಿಂಗ್ ಬಗ್ಗೆ ಅನೇಕ ಪೋಸ್ಟ್‌ಗಳನ್ನು ಸ್ವತಃ ಪಿಸ್ಟೋರಿಯಸ್ ಮತ್ತು ರೀವಾ ಬರೆದುಕೊಂಡಿದ್ದರು.

ಸಾವಿನ ಒಂದು ವಾರ ಮುನ್ನ

ಸಾವಿನ ಒಂದು ವಾರ ಮುನ್ನ

2013ರ ಪ್ರೇಮಿಗಳ ದಿನ ಹತ್ತಿರವಾಗುತ್ತಾ ಬಂದಿತ್ತು. ಪ್ರೇಮಿಗಳ ದಿನಕ್ಕೆ ಇನ್ನೇನು ಒಂದು ವಾರ ಮಾತ್ರವೇ ಇತ್ತು. ಈ ಹಿನ್ನೆಲೆಯಲ್ಲಿ ಪಿಸ್ಟೋರೊಯಸ್ ತನ್ನ ಗೆಳತಿ ರೀವಾಗೆ ಗಿಫ್ಟ್‌ಗಳನ್ನು ನೀಡಿದ್ದ. ಈ ಬಗ್ಗೆ ರೀವಾ ಖುಷಿಯಿಂದ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಳು.

ಪ್ರೇಮಿಗಳ ದಿನ ಗಿಫ್ಟ್‌ಗಾಗಿ ಕಾದಿದ್ದಳು ರೀವಾ

ಪ್ರೇಮಿಗಳ ದಿನ ಗಿಫ್ಟ್‌ಗಾಗಿ ಕಾದಿದ್ದಳು ರೀವಾ

ಅಂದು ಪ್ರೇಮಿಗಳ ದಿನ. ಪಿಸ್ಟೋರಿಯನ್‌ನಿಂದ ರೀವಾ ಅಚ್ಚರಿಯ ಗಿಫ್ಟ್‌ಅನ್ನು ನಿರೀಕ್ಷಿಸಿದ್ದಳು. ಮಾತ್ರವಲ್ಲ ತನ್ನ ಗೆಳೆಯನಿಗೆ ಸರ್ಪ್ರೈಸ್‌ ನೀಡಲು ಆಕೆ ನಿರ್ಧರಿಸಿ ಶಾಪಿಂಗ್‌ಗೆ ಹೋಗಿದ್ದಳು. ಆದರೆ ಮನೆಗೆ ಬಂದ ರೀವಾಗೆ ಸಿಕ್ಕಿದ್ದು ಅಂತಿಂತಾ ಗಿಫ್ಟಲ್ಲ.

ಶೂಟ್‌ಮಾಡಿಯೇ ಬಿಟ್ಟಿದ್ದ ಪಿಸ್ಟೋರಿಯಸ್

ಶೂಟ್‌ಮಾಡಿಯೇ ಬಿಟ್ಟಿದ್ದ ಪಿಸ್ಟೋರಿಯಸ್

ಫ್ರೇಮಿಗಳ ದಿನದಂದ ಗಿಫ್ಟ್‌ನ ಜೊತೆಗೆ ಮನೆಗೆ ಬಂದಳು ರೀವಾ. ಆದರೆ ಮನೆಯಲ್ಲಿದ್ದ ಪಿಸ್ಟೋರಿಯಸ್ ರೀವಾ ಮೇಲೆ ರಿವಾಲ್ವರ್‌ನಿಂದ ಗುರಿಯಿಟ್ಟಿದ್ದ. ತಲೆ ಕೈ ಸೊಂಟಕ್ಕೆ ಪಿಸ್ಟೋರಿಯಸ್ ಗುರಿಯಿಟ್ಟಿದ್ದ ಗುಂಡುಗಳು ಹೊಕ್ಕಿಬಿಟ್ಟಾಗಿತ್ತು. ರೀವಾ ಅಲ್ಲೇ ಕುಸಿದು ಬಿದ್ದು ರಕ್ತದ ಮಡುವಿನಲ್ಲಿ ಪ್ರಾಣ ಬಿಟ್ಟಳು. ಪ್ರೇಮಿಗಳ ದಿನದಂದು ಪ್ರೇಮಿಯ ಕೈಯಲ್ಲೇ ಉಸಿರು ಚೆಲ್ಲಿದ್ದಳು ರೀವಾ.

ಕಳ್ಳರು ನುಗ್ಗಿದ್ದರೆಂದು ಶೂಟ್‌ಮಾಡಿದ್ದ ಎಂದು ವರದಿ

ಕಳ್ಳರು ನುಗ್ಗಿದ್ದರೆಂದು ಶೂಟ್‌ಮಾಡಿದ್ದ ಎಂದು ವರದಿ

ಮನೆಯಲ್ಲಿ ಶಬ್ಧವಾಗಿದ್ದನ್ನು ನೋಡಿ ಪಿಸ್ಟೋರಿಯಸ್ ಕಳ್ಳರು ಆಗಮಿಸಿದ್ದಾರೆಂದು ಭಾವಿಸಿ ಆಸ್ಕರ್ ಪಿಸ್ಟೋರಿಯಸ್ ಹಿಂದುಮುಂದು ನೋಡದೆ ಗುಂಡು ಹಾರಿಸಿದ್ದಾನೆ. ಆದರೆ ಅದು ಗೆಳತಿ ರೀವಾನೆ ಆಗಿದ್ದಳು. ಹೀಗಾಗಿ ಈ ದುರ್ಘಟನೆ ನಡೆದುಹೋಗಿದೆ ಎಂದು ಮೊದಲು ವರದಿಯಾಗಿತ್ತು. ಪಿಸ್ಟೋರಿಯಸ್‌ನ ಬಂಧನವಾಗಿತ್ತು.

ಆಕಸ್ಮಿಕ ಘಟನೆ ಎಂದು ವಾದ

ಆಕಸ್ಮಿಕ ಘಟನೆ ಎಂದು ವಾದ

ಈ ಪ್ರಕರಣದ ಬಗ್ಗೆ ಸುಧೀರ್ಘ ವಿಚಾರಣೆ ನಡೆದಿತ್ತು. ಪಿಸ್ಟೀರಿಯಸ್ ಇದನ್ನು ಆಕಸ್ಮಿಕ ಘಟನೆಯೆಂದು ಸಮರ್ಥಿಸುತ್ತಿದ್ದ. ದಕ್ಷಿಣ ಆಫ್ರಿಕಾದಲ್ಲಿ ಲೂಟಿಕೋರರ ಹಾವಳಿ ಹೆಚ್ಚಿದ್ದು ಮಧ್ಯರಾತ್ರಿ ಉಡುಗೊರೆ ನೀಡಲು ಕದ್ದುಬಂದಿದ್ದ ರೀವಾಳನ್ನು ಆಗಂತುಕರೆಂದು ಭಾವಿಸಿ ಗುಂಡುಹಾರಿಸಿದ್ದಾಗಿ ಸಮರ್ಥಿಸಿಕೊಂಡಿದ್ದ.

ಎಸ್‌ಎಮ್‌ಸ್‌ನಲ್ಲಿತ್ತು ಪಿಸ್ಟೋರಿಯಸ್‌ನ ಮತ್ತೊಂದು ಮುಖ

ಎಸ್‌ಎಮ್‌ಸ್‌ನಲ್ಲಿತ್ತು ಪಿಸ್ಟೋರಿಯಸ್‌ನ ಮತ್ತೊಂದು ಮುಖ

ಆದರೆ ಈ ವಾದಕ್ಕೆ ಪ್ರತಿಯಾಗಿ ಪಿಸ್ಟೋರಿಯಸ್ ವಿರೋಧಿ ವಕೀಲರು ಬೆರಗುಗೊಳಿಸುವ ಸಾಕ್ಷಿಯನ್ನು ಮುಂದಿಟ್ಟಿದ್ದರು. "ಕೆಲವೊಮ್ಮೆ ನಿನ್ನನ್ನು ಕಂಡರೆ ಭಯವಾಗುತ್ತದೆ" ಎಂಬ ಮೊಬೈಲ್ ಸಂದೇಶವದು. ಇದು ಪಿಸ್ಟೋರಿಯಸ್‌ನ ಇನ್ನೊಂದು ಭಯಾನಕ ಮುಖವಾಗಿತ್ತು ಎಂದು ಅವರು ಕೋರ್ಟ್‌ಗೆ ಸಾಕ್ಷಿಸಹಿತ ವಾದ ಮುಂದಿಟ್ಟಿದ್ದರು.

ಕೋರ್ಟ್‌ ಮುಂದೆ ಬಿಕ್ಕಿಬಿಕ್ಕಿ ಅತ್ತಿದ್ದ ಪಿಸ್ಟೋರಿಯಸ್

ಕೋರ್ಟ್‌ ಮುಂದೆ ಬಿಕ್ಕಿಬಿಕ್ಕಿ ಅತ್ತಿದ್ದ ಪಿಸ್ಟೋರಿಯಸ್

ಹೀಗೆ ವಾದ ಮಾಡುತ್ತಿರಬೇಕಾದರೆ ಪಿಸ್ಟೋರಿಯಸ್ ಕೋರ್ಟ್‌ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದ. ತಾನು ಲೂಟಿಕೋರರು ಎಂದುಕೊಂಡು ಗುಂಡು ಹೊಡೆದಾಗ ಆಕೆಯ ತಲೆ ಸಿಡಿದು ಛಿದ್ರವಾದ ದೃಶ್ಯವನ್ನು ಬಣ್ಣಿಸುವಾಗ ಕೋರ್ಟ್‌ನಲ್ಲಿ ಬಟ್ಟೆ ಮೇಲೆಯೇ ವಾಂತಿ ಮಾಡಿಕೊಂಡಿದ್ದ ಪಿಸ್ಟೋರಿಯಸ್.

ಜೀವಾವಧಿ ಶಿಕ್ಷೆಯಿಂದ 6ವರ್ಷ ಶಿಕ್ಷೆಗೊಳಗಾದ ಪಿಸ್ಟೋರಿಯಸ್

ಜೀವಾವಧಿ ಶಿಕ್ಷೆಯಿಂದ 6ವರ್ಷ ಶಿಕ್ಷೆಗೊಳಗಾದ ಪಿಸ್ಟೋರಿಯಸ್

ಪ್ರೇಯಸಿಯನ್ನು ಕೊಂದ ಆರೋಪದಲ್ಲಿ ಪಿಸ್ಟೋರಿಯಸ್ ಆರೋಪಿ ಎನ್ನುವುದು ಸಾಭೀತಾಗಿತ್ತು. ಅದನ್ನು ಸ್ವತಃ ಪಿಸ್ಟೋರಿಯಸ್ ಕೂಡ ಒಪ್ಪಿಕೊಂಡಿದ್ದ. ಹೀಗಾಗಿ ಆತನಿಗೆ ಆರಂಭದಲ್ಲಿ 15ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗಿತ್ತು. ಆದರೆ ಬಳಿಕ ಆಕಸ್ಮಿಕವಾಗಿ ಆದ ಘಟನೆ ಎಂದು ಪ್ರಕರಣ ಸಾಭೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆಯನ್ನು ಆರು ವರ್ಷಕ್ಕೆ ಇಳಿಸಲಾಯಿತು.

Story first published: Wednesday, March 25, 2020, 15:30 [IST]
Other articles published on Mar 25, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+