World Athletics Championships: ನೀರಜ್ ಚೋಪ್ರಾಗೆ ನಿರಾಸೆ: ಸಚಿನ್ ಯಾದವ್‌ಗೆ 4ನೇ ಸ್ಥಾನ
ಕಳೆದ ಬಾರಿಯ ವಿಶ್ವ ಅಥ್ಲೀಟ್ ಚಾಂಪಿಯನ್ ನೀರಜ್ ಚೋಪ್ರಾ ಫೈನಲ್ ರೇಸ್ ಕೊನೆಗೆ ಕ್ವಾಲಿಫೈ ಆಗುವಲ್ಲಿ ವಿಫಲರಾಗಿದ್ದು ನಿರಾಸೆ ಅನುಭವಿಸಿದ್ದಾರೆ. ಈ ಟೂರ್ನಿಯಲ್ಲಿ ಭಾಗವಹಿಸಿದ್ದ ಇನ್ನೋರ್ವ ಸ್ಟಾರ್ ಭಾರತದ ಆಟಗಾರ ಸಚಿನ್ ಯಾದವ್ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.
ಗುರುವಾರ 12 ಜನರ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇವರು 84.03 ಮೀಟರ್ ಜಾವೆಲಿನ್ ಎಸೆದು ಫೈನಲ್ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಎಡವಿದರು. 12 ಅಥ್ಲೀಟ್‌ಗಳ ಫೈನಲ್ ರೇಸ್‌ನಲ್ಲಿ 6 ಅಥ್ಲೀಟ್‌ಗಳು ಮಾತ್ರ ಫೈನಲ್‌ಗೆ ಅರ್ಹತೆ ಪಡೆದರು. ಆದರೆ ನೀರಜ್ ಚೋಪ್ರಾ ಈ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದು ನಿರಾಸೆ ಅನುಭವಿಸಿದರು.

ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಅಷ್ಟೇ ಅಲ್ಲ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬಂಗಾರದ ಸಾಧನೆಯನ್ನು ಮಾಡಿದ್ದ ಪಾಕಿಸ್ತಾನದ ಜಾವೆಲಿನ್ ಕ್ರೀಡಾ ಪಟು ಅರ್ಷದ್ ನದೀಮ್ ಸಹ ಫೈನಲ್ ಸತ್ತಿಗೆ ಕ್ವಾಲಿಫೈ ಆಗುವಲ್ಲಿ ಹಿಂದೆ ಬಿದ್ದರು. ಭಾರತದ ಸಚಿನ್ ಯಾದವ 86.27 ಮೀಟರ್ ದೂರ ಜಾವೆಲಿನ್ ಎಸೆದು ಫೈನಲ್ ರೇಸ್‌ಗೆ ಕ್ವಾಲಿಫೈ ಆದರು.
ಚೋಪ್ರಾ ನಿರಾಸೆ
ಭಾರತದ ಸ್ಟಾರ್ ಜಾವಿಲಿನ್ ಅಥ್ಲೀಟ್ ನೀರಜ್ ಚೋಪ್ರಾ ಜಪಾನ್‌ನ ಟೋಕಿಯೊದಲ್ಲಿ ಬುಧವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅರ್ಹತಾ ಗೆರೆಯನ್ನು ಮೊದಲ ಪ್ರಯತ್ನದಲ್ಲಿ ದಾಟಿ ಫೈನಲ್‌ಗೆ ಅರ್ಹತೆ ಪಡೆದಿದ್ದರು. ವಿಶ್ವ ಚಾಂಪಿಯನ್ ಶಿಪ್ ಫೈನಲ್‌ಗೆ ಒಟ್ಟು 12 ಕ್ರೀಡಾ ಪಟುಗಳು ಅರ್ಹತೆ ಪಡೆದಿದ್ದರು. ನೀರಜ್ ಚೋಪ್ರಾ ಅವರೊಂದಿಗೆ ಸಚಿನ್ ಯಾದವ್ ಸಹ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಇನ್ನು ಪಾಕ್‌ನ ಅರ್ಷದ್ ನದೀಮ್ ಬಿ ಗುಂಪಿನಲ್ಲಿ ತಮ್ಮ ಕೊನೆಯ ಪ್ರಯತ್ನದಲ್ಲಿ 85.28 ಮೀಟರ್ ಜಾವೆಲಿನ್ ಎಸೆದು ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದ್ದರು.
ಟ್ರಿನಿಡಾಡ್ ಮತ್ತು ಟೊಬಾಗೋದ ಕೆಶೋರ್ನ್ ವಾಲ್ಕಾಟ್ ಅವರು ದಾಖಲೆ ಬರೆದರು. ಇವರು 13 ವರ್ಷಗಳ ಬಳಿಕ ವಿಶ್ವ ವೇದಿಕೆಯಲ್ಲಿ ಬಂಗಾರದ ಸಾಧನೆಯನ್ನು ಮಾಡಿದರು. ಇವರು 88.19 ಮೀಟರ್ ದೂರ ಜಾವೆಲಿನ್ ಎಸೆದು ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. ಗ್ರೆನಡಾದ ಆಂಡರ್ಸನ್ ಪೀಟರ್ಸ್ 87.38 ಮೀಟರ ದೂರ ಎಸೆದು ಬೆಳ್ಳಿ ಪಡೆದರೆ, ಯುಎಸ್‌ಎ ಕರ್ಟಿಸ್ ಥಾಂಪ್ಸನ್ 86.67 ಎಸೆದು ಕಂಚು ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications