ಒಲಿಂಪಿಕ್ ಪದಕ ವಿಜೇತ ಸೈಕ್ಲಿಸ್ಟ್ ರೈಸ್ಜಾರ್ಡ್ ಸುರ್ಕೊವ್ಸ್ಕಿ ನಿಧನ

ವಾರ್ಸಾ: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಸೈಕ್ಲಿಸ್ಟ್, ಪೋಲ್ಯಾಂಡ್‌ನ ಅಥ್ಲೀಟ್ ರೈಸ್ಜಾರ್ಡ್ ಸುರ್ಕೊವ್ಸ್ಕಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ತನ್ನ ಪತಿ ಪೋಲ್ಯಾಂಡ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾಗಿ ಅವರ ಪತ್ನಿ ಐವೊನಾ ಅರ್ಕುಸ್ಜೆವ್ಸ್ಕಾ ತಿಳಿಸಿದ್ದಾರೆ.
ಫೆಬ್ರವರಿ 1ರ ಶುಕ್ರವಾರ ಕೊನೆಯುಸಿರೆಳೆದಿರುವ ರೈಸ್ಜಾರ್ಡ್ ಸುರ್ಕೊವ್ಸ್ಕಿ ಅವರಿಗೆ ಕ್ಯಾನ್ಸರ್ ಖಾಯಿಲೆಯಿತ್ತು. ಪೋಲ್ಯಾಂಡ್ ರೋಡ್‌ರೇಸ್ ತಂಡದಲ್ಲಿದ್ದ ಸುರ್ಕೊವ್ಸ್ಕಿ ಅವರು 1972 ಮತ್ತು 1976ರಲ್ಲಿ ಒಲಿಂಪಿಕ್ ಪದಕ ಗೆದ್ದಿದ್ದರು. ಸುರ್ಕೊವ್ಸ್ಕಿಗೆ ಮೂರು ವಿಶ್ವಚಾಂಪಿಯನ್‌ಶಿಪ್ ಪ್ರಶಸ್ತಿಗಳೂ ಸಿಕ್ಕಿದ್ದವು.
1973ರಲ್ಲಿ ನಡೆದಿದ್ದ ಅಮೇಚೂರ್ ಕ್ರೀಡಾಕೂಟದಲ್ಲಿ ಸುರ್ಕೊವ್ಸ್ಕಿಗೆ ವೈಯಕ್ತಿಕ ಪ್ರಶಸ್ತಿಯೂ ಸಿಕ್ಕಿತ್ತು. 'ದಂತಕತೆ, ಪೋಲ್ಯಾಂಡ್‌ನ ಸಾರ್ವಕಾಲಿಕ ಬೆಸ್ಟ್ ರೈಡರ್. ರೈಸ್ಜಾರ್ಡ್ ಸುರ್ಕೊವ್ಸ್ಕಿ 1946-2021' ಎಂದು ಪೋಲ್ಯಾಂಡ್ ಸೈಕ್ಲಿಸ್ಟ್ ಮಿಚಲ್ ಕ್ವಾಟ್ಕೊವ್ಸ್ಕಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
2018ರಲ್ಲಿ ಜರ್ಮನಿಯಲ್ಲಿ ಸುರ್ಕೊವ್ಸ್ಕಿ ಅವರು ಸೈಕ್ಲಿಂಗ್ ಅಪಘಾತಕ್ಕೆ ಈಡಾಗಿದ್ದರು. ಆ ಬಳಿಕ ಸುರ್ಕೊವ್ಸ್ಕಿ ವೀಲ್ ಚೇರ್ ಬಳಸಲಾರಂಭಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications