Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಬಜರಂಗ ಪುನಿಯಾ 4 ವರ್ಷ ಅಮಾನತು

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದ ಸ್ಟಾರ್ ಕುಸ್ತಿ ಪಟು ಬಜರಂಗ್ ಪುನಿಯಾ ಅವರ ಮೇಲೆ ನಾಲ್ಕು ವರ್ಷಗಳ ನಿಷೇಧ ಹೇರಲಾಗಿದೆ. ಡೋಪಿಂಗ್ ವಿರೋಧಿ ಶಿಸ್ತಿನ ಸಮಿತಿಯು ತನ್ನ ನಿಯಮ 2.3 ಅನ್ನು ಉಲ್ಲಂಘಿಸಿದ ನಂತರ ನಾಡಾ (ಉದ್ದೀಪನ ಮದ್ದು ತಡೆ ಸಂಸ್ಥೆ) ಇವರ ಮೇಲೆ ನಿಷೇಧ ಹೇರಿದೆ. ಇವರು ಮೂತ್ರದ ಮಾದರಿ ನೀಡಲು ನಿರಾಕರಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಅಮಾನತಿನಿಂದ ಪುನಿಯಾ ಸ್ಪರ್ಧಾತ್ಮಕ ಕುಸ್ತಿಯಲ್ಲಿ ಭಾಗವಹಿಸಲು ಅನುಮತಿ ಇರುವುದಿಲ್ಲ.

ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ ಮಾರ್ಚ 10 ರಂದು, ಡೋಪಿಂಗ್ ಪರೀಕ್ಷೆಗೆ ಮಾದರಿಯನ್ನು ನೀಡಲು ನಿರಾಕರಿಸಿದ್ದಕ್ಕಾಗಿ ಪುನಿಯಾ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ 23 ರಂದು ಅಮಾನತುಗೊಳಿಸಿದ ಬಳಿಕ ಪುನಿಯಾ ಅವರ ಮೇಲೆ ಈ ನಿರ್ಧಾರ ಪ್ರಕಟವಾಗಿದೆ. ಇದಕ್ಕೂ ಮೊದಲು ವಿಶ್ವ ಆಡಳಿತ ಮಂಡಳಿಯಾದ ಅಮಾನತುಗೊಳಿಸಿತು.

Olympic Medalist Bajrang Punia Suspended for 4 Years by NADA Over Anti-Doping Violation

ಬಜರಂಗ್ ಪುನಿಯಾ ತಮ್ಮ ಮೇಲೆ ಮಂಡಳಿ ಹೇರಿದ್ದ ಅಮಾನತಿನ ವಿರುದ್ಧ ಧ್ವನಿ ಎತ್ತಿದ್ದರು. ಬಳಿಕ ಮೇ 31 ರಂದು ನಾಡಾ ಅಮಾನತುಗೊಳಿಸುವಿಕೆಯನ್ನು ತೆರವು ಗೊಳಿಸಿತ್ತು. ಜೂನ್ 23 ರಂದು ಮತ್ತೊಮ್ಮೆ ನಾಡಾ ಅವರಿಗೆ ಔಪಚಾರಿಕವಾಗಿ ಆರೋಪಗಳ ಬಗ್ಗೆ ಮಾಹಿತಿ ನೀಡಿದ್ದು, ವಿಚಾರಣೆ ನಡೆಸಿದೆ.

ಮಾಜಿ ಅಧ್ಯಕ್ಷರ ವಿರುದ್ಧ ಪ್ರತಿಭಟನೆ

ಭಾರತದ ಕುಸ್ತಿ ಸಂಸ್ಥೆಯ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಶೋಷಣೆ ಮಾಡಿದ್ದಾರೆ ಎಂದು ಕುಸ್ತಿ ಪಟುಗಳು ಆರೋಪ ಎಸಗಿದ್ದರು. ಈ ನಿಟ್ಟಿನಲ್ಲಿ, ಬಜರಂಗ್, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ನೇತೃತ್ವದಲ್ಲಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯ ಬಳಿಕ ಸುಪ್ರೀಂ ಕೋರ್ಟ್ 23 ಏಪ್ರಿಲ್ 2023 ರಂದು ಆದೇಶ ನೀಡಿತ್ತು. ಆಗ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.

Olympic Medalist Bajrang Punia Suspended for 4 Years by NADA Over Anti-Doping Violation

ರಾಜಕೀಯ ಪ್ರವೇಶ

ಬಜರಂಗ್ ಪೂನಿಯಾ ಅವರು ಹರ್ಯಾಣ ವಿಧಾನಸಭಾ ಚುನಾವಣೆಗೆ ಮುನ್ನ ಕುಸ್ತಿಪಟು ವಿನೇಶ್ ಫೋಗಟ್ ಅವರೊಂದಿಗೆ ಕಾಂಗ್ರೆಸ್‌ಗೆ ಸೇರಿದ್ದರು ಮತ್ತು ಅವರಿಗೆ ಅಖಿಲ ಭಾರತ ಕಿಸಾನ್ ಕಾಂಗ್ರೆಸ್‌ನ ಉಸ್ತುವಾರಿ ನೀಡಲಾಯಿತು. ಅದೇ ಸಮಯದಲ್ಲಿ, ವಿನೇಶ್ ಹರಿಯಾಣದ ಜೂಲಾನಾದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಪುನಿಯಾ ಸಾಧನೆ

ಬಜಂರಗ್ ಪುನಿಯಾ ಅವರು ವಿಶ್ವ ಕುಸ್ತಿ ಚಾಂಪಿಯನ್‌ ಶಿಪ್ ಸ್ಪರ್ಧೆಯಲ್ಲಿ 1 ಬೆಳ್ಳಿ, 3 ಕಂಚು ಗೆದ್ದಿದ್ದಾರೆ. ಇನ್ನು ಏಷ್ಯನ್‌ ಗೇಮ್ಸ್‌ನಲ್ಲಿ ಇವರು 1 ಬಂಗಾರ, 1 ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುನಿಯಾ 2 ಬಂಗಾರ, 1 ಬೆಳ್ಳಿ ಗೆದ್ದು ಸಾಧನೆ ಮಾಡಿದ್ದಾರೆ.

Story first published: Wednesday, November 27, 2024, 10:01 [IST]
Other articles published on Nov 27, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+