ಬಂಧನದ ಭೀತಿಯಲ್ಲಿ ಒಲಿಂಪಿಕ್ ಬಂಗಾರ ವಿಜೇತ ಸ್ವಿಮ್ಮರ್ ಕ್ಲೆಟ್ ಕೆಲ್ಲರ್

ವಾಷಿಂಗ್ಟನ್: ಒಲಿಂಪಿಕ್‌ನಲ್ಲಿ ಎರಡು ಬಾರಿ ಬಂಗಾರದ ಪದಕ ಗೆದ್ದಿದ್ದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಸ್ವಿಮ್ಮರ್ ಕ್ಲೆಟ್ ಕೆಲ್ಲರ್‌ಗೆ ಬಂಧನದ ಭೀತಿ ಎದುರಾಗಿದೆ. ಕಳೆದ ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಗಲಭೆ ನಡೆಸಿದ್ದಾಗ ಆ ಗಲಭೆಯಲ್ಲಿ ಕೆಲ್ಲರ್ ಕೂಡ ಪಾಲ್ಗೊಂಡಿದ್ದಾಗಿ ಆರೋಪ ಕೇಳಿ ಬಂದಿತ್ತು. ಕೆಲ್ಲರ್ ಈ ಆರೋಪವನ್ನು ಒಪ್ಪಿಕೊಂಡಿದ್ದಾರೆ.
ಕಳೆದ ಜನವರಿ 6ರಂದು ದ ಕ್ಯಾಪಿಟಲ್‌ನಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಗಲಭೆ ನಡೆಸಿದ್ದರು. ಈ ಗಲಭೆಯಲ್ಲಿ ಕ್ಲೆಟ್ ಕೆಲ್ಲರ್ ಕೂಡ ಭಾಗವಹಿಸಿದ್ದಾಗಿ ಆರೋಪ ಕೇಳಿ ಬಂದಿತ್ತು. ಈ ಆರೋಪಕ್ಕೆ ಸಂಬಂಧಿಸಿ ಬುಧವಾರ (ಸೆಪ್ಟೆಂಬರ್ 29) ವಿಚಾರಣೆ ನಡೆದಿತ್ತು. ಈ ವೇಳೆ ಕೆಲ್ಲರ್ ತಾನು ತಪ್ಪೆಸಗಿದ್ದಾಗಿ ಒಪ್ಪಿಕೊಂಡಿದ್ದಾರೆ.
ಒಲಿಂಪಿಕ್‌ನಲ್ಲಿ ಎರಡು ಬಾರಿ ಬಂಗಾರದ ಪದಕವೂ ಸೇರಿ ಒಟ್ಟಿಗೆ ಐದು ಬಾರಿ ಪದಕ ಗೆದ್ದಿದ್ದ ಕೆಲ್ಲರ್, ಚುನಾವಣೆಯಲ್ಲಿ ಹಿಂದಿನ ಅಧ್ಯಕ್ಷ ಟ್ರಂಪ್ ಸೋತು ಜೋ ಬಿಡೆನ್ ಆಯ್ಕೆಯಾದಾಗ ಟ್ರಂಪ್ ಬೆಂಬಲಿಗರ ಜೊತೆ ಸೇರಿ ಗಲಭೆಯಲ್ಲಿ ಪಾಲ್ಗೊಂಡಿದ್ದರು. ಮೊದಲ ವಿಚಾರಣೆಯ ವೇಳೆ ಕೆಲ್ಲರ್ ತನ್ನ ತಪ್ಪು ಒಪ್ಪಿಕೊಂಡಿರುವುದರಿಂದ ಅವರನ್ನು ಮತ್ತೊಂದು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಚುನಾವಣೆಯಲ್ಲಿ ಜೋ ಬಿಡೆನ್ ಗೆದ್ದಾಗ ವಿಜಯದ ಮೆರವಣಿಗೆಗೆ ಕೆಲ್ಲರ್ ಜೊತೆಗೆ ಟ್ರಂಪ್ ಬೆಂಬಲಿಗರು ಅಡ್ಡಿ ಪಡಿಸಿದ್ದರು. ಕ್ಯಾಪಿಟಲ್ ರೋಟುಂಡಾದಿಂದ ಕೆಲ್ಲರ್ ಅವರನ್ನು ದೂರ ಸರಿಸಲು ಅಧಿಕಾರಿಗಳು ಯತ್ನಿಸಿದ್ದಾಗ ಅಧಿಕಾರಿಗಳನ್ನು ಕೆಲ್ಲರ್ ತಳ್ಳಿದ್ದರು. ಅಲ್ಲದೆ, ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಸೆನೆಟ್ ಬಹುಮತದ ನಾಯಕ ಚಕ್ ಶುಮರ್ ಅವರ ಬಗ್ಗೆ ಕೆಲ್ಲರ್ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications