Aman Sehrawat: ಅಮನ್ ಸೆಹ್ರಾವತ್‌ಗೆ ಕಂಚು: ಭಾರತಕ್ಕೆ ಮತ್ತೊಂದು ಪದಕ
ಭಾರತದ ಅಮನ್ ಸೆಹ್ರಾವತ್ ಅವರು ಪ್ಯಾರಿಸ್‌ನಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಕಂಚಿನ ಪದಕದ ಹೋರಾಟದಲ್ಲಿ ಅಮೋಘ ಪ್ರದರ್ಶನ ನೀಡಿದ ಅಮನ್ ಅಂಕಗಳನ್ನು ಕಲೆ ಹಾಕುತ್ತಾ ಸಾಗಿದರು. ಈ ಮೂಲಕ ಭಾರತಕ್ಕೆ ಮತ್ತೊಂದು ಕಂಚಿನ ಪದಕದ ಹಾರವನ್ನು ತೊಡಿಸಿದ್ದಾರೆ.
ಶುಕ್ರವಾರ ನಡೆದ ಪುರುಷರ 57 ಕೆಜಿ ಫ್ರಿ ಸ್ಟೈಲ್ ಕುಸ್ತಿ ಕಂಚಿನ ಪದಕದ ಹೋರಾಟದಲ್ಲಿ ಅಮನ್ ಸೆಹ್ರಾವತ್ 13-5 ಅಂಕಗಳಿಂದ ಡೇರಿಯನ್ ಡೋಯಿ ಕ್ರೂಜ್ ಅವರನ್ನು ಮಣಿಸಿ, ಪದಕ ತಮ್ಮದಾಗಿಸಿಕೊಂಡರು.

ಭಾರತದ ಭರವಸೆಯ ಕುಸ್ತಿ ಪಟು ಅಮನ್ ಸೆಹ್ರಾವತ್ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದರು. ಇವರು ಜಪಾನಿನ ಅನುಭವಿ ರೇ ಹಿಗುಚಿ ವಿರುದ್ಧ ತಾಂತ್ರಿಕ ಶ್ರೇಷ್ಠತೆಯಿಂದ ಪಂದ್ಯವನ್ನು ಸೋತರು. ಆದರೆ ಅಮನ್ ಗುರುವಾರ ನಡೆದ ಎರಡೂ ಪಂದ್ಯಗಳಲ್ಲಿ ತಮ್ಮ ಘನತೆಗೆ ತಕ್ಕ ಆಟವನ್ನು ಆಡಿದ್ದರು. ಅಲ್ಲದೆ ಇವರು ಎರಡೂ ಪಂದ್ಯಗಳನ್ನು ತಾಂತ್ರಿಕ ಶ್ರೇಷ್ಠತೆಯನ್ನು ಪ್ರದರ್ಶಿಸಿ ಗೆಲುವು ಸಾಧಿಸಿದ್ದರು.
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಏಕೈಕ ಪುರುಷ ಕುಸ್ತಿ ಅಮನ್ ಸೆಹ್ರಾವತ್. ಇವರು ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ಕುಸ್ತಿ ಪಟುಗಳು ಲಂಡನ್ ಒಲಿಂಪಿಕ್ಸ್ ನಿಂದ ಈ ವರೆಗೆ, ಭಾಗವಹಿಸಿದ ಎಲ್ಲ ಒಲಿಂಪಿಕ್ಸ್‌ನಲ್ಲಿ ಒಂದಾದರೂ ಪದಕವನ್ನು ಗೆದ್ದಿರುವ ಕಿರ್ತಿ ಹೊಂದಿದ್ದಾರೆ. ಭಾರತ ಒಟ್ಟರೆ ಒಲಿಂಪಿಕ್ಸ್ ಕುಸ್ತಿ ವಿಭಾಗದಲ್ಲಿ ಒಟ್ಟು 8 ಕಂಚಿನ ಪದಕವನ್ನು ಗೆದ್ದಿದೆ.

ಕುಸ್ತಿಯಲ್ಲಿ ಭಾರತಕ್ಕೆ ಎಂಟನೆ ಪದಕ
ಸ್ವಾತಂತ್ರ್ಯ ಭಾರತದ ಪರ ಕುಸ್ತಿ ಕ್ರೀಡೆಯಲ್ಲಿ ಕೆ.ಡಿ ಜಾಧವ್ 1952ರಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಇದಾದ ಬಳಿಕ ಸುಶೀಲ್ ಕುಮಾರ್ 2008ರಲ್ಲಿ ಕಂಚು, 2012ರಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. 2012ರಲ್ಲಿ ಯೋಗೇಶ್ವರ್ ದತ್ ಕಂಚು, 2016ರಲ್ಲಿ ಸಾಕ್ಷಿ ಮಲಿಕ ಕಂಚು, 2020ರಲ್ಲಿ ನಡೆದಿದ್ದ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ರವಿ ಕುಮಾರ್ ದಾಹಿಯ ಬೆಳ್ಳಿ, ಬಜರಂಗ್ ಪುನಿಯಾ ಕಂಚು ಪಡೆದು ಬೀಗಿದ್ದಾರೆ.
ಭಾರತಕ್ಕೆ ಆರನೇ ಪದಕ
ಭಾರತ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಈ ವರೆಗೆ ಆರು ಪದಕಗಳನ್ನು ಗೆದ್ದು ಬೀಗಿದೆ. ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಬೆಳ್ಳಿ, ಮನು ಬಾಕರ್ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚು ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಮನು ಮತ್ತು ಸರಬ್‌ಜೋತ್ ಸಿಂಗ್ ಸಹ ಕಂಚಿನ ನಗೆ ಬೀರಿದ್ದರು. ಪುರುಷರ 50 ಮೀಟರ್ ರೈಫಲ್ ವಿಭಾಗದಲ್ಲಿ ಸ್ವಪ್ನಿಲ್ ಕುಸಾಳೆ ಕಂಚಿಗೆ ಕೊರಳು ಒಡ್ಡಿದ್ದಾರೆ. ಭಾರತದ ಪುರುಷರ ಹಾಕಿ ತಂಡ ಸಹ ಕಂಚು ತಮ್ಮದಾಗಿಸಿಕೊಂಡಿದೆ. ಈ ಪಟ್ಟಿಗೆ ಅಮನ್ ಸೆಹ್ರಾವತ್ ಸಹ ಸೇರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications