Olympics Hockey: ಸ್ಪೇನ್ ವಿರುದ್ಧ 2-1ರಿಂದ ಗೆದ್ದ ಭಾರತಕ್ಕೆ ಒಲಿಂಪಿಕ್ಸ್ ಕಂಚು
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತದ ಹಾಕಿ ತಂಡದ ಪದಕದ ಆಸೆ ಫಲಿಸಿದೆ. ಗುರುವಾರ ನಡೆದ ಕಂಚಿನ ಪದಕದ ಹೋರಾಟದಲ್ಲಿ ಭಾರತ, ಸ್ಪೇನ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಕಂಚಿಗೆ ಮುತ್ತಿಟ್ಟಿದೆ. ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಕಂಚಿನ ಸಾಧನೆಯನ್ನು ಮಾಡಿತ್ತು. ಈಗ ಮತ್ತೊಮ್ಮೆ ಅದೇ ಸಾಧನೆ ಮಾಡಿದೆ.
ಕಂಚಿನ ಪದಕದ ಹೋರಾಟದಲ್ಲಿ ಭಾರತ 2-1 ಗೋಲುಗಳಿಂದ ಸ್ಪೇನ್ ತಂಡವನ್ನು ಮಣಿಸಿತು. ಭಾರತದ ಪರ ನಾಯಕ ಹರ್ಮನ್ ಪ್ರೀತ್ ಸಿಂಗ್ ಅಮೋಘ ಪ್ರದರ್ಶನ ನೀಡಿ ಎರಡು ಗೋಲು ಬಾರಿಸಿದರು. ಸ್ಪೇನ್ ಎರಡನೇ ಅವಧಿಯಲ್ಲಿ ಒಂದು ಗೋಲು ದಾಖಲಿಸಿದರೂ, ಮತ್ತೆ ಗೋಲು ಸಂಖ್ಯೆ ಹೆಚ್ಚಿಸುವಲ್ಲಿ ವಿಫಲವಾಯಿತು. ಭಾರತ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತನ್ನ ಪದಕದ ಪಟ್ಟಿಗೆ ಮತ್ತೊಂದು ಕಂಚಿನ ಪದಕವನ್ನು ಸೇರಿಸಿಕೊಂಡಿದೆ.

ಎರಡನೇ ಅವಧಿಯಲ್ಲಿ ಅಬ್ಬರ
ಸ್ಪೇನ್ ತಂಡದ ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿತು. ಈ ವೇಳೆ ಸಿಕ್ಕ ಅವಕಾಶವನ್ನು ಸ್ಪೇನ್ ಸ್ಟಾರ್ ಆಟಗಾರ ಮಾರ್ಕ್ ಮಿರಾಲ್ಲೆಸ್ 18ನೇ ನಿಮಿಷದಲ್ಲಿ ಅಮೋಘ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದು ಕೊಟ್ಟರು. ಸ್ಪೇನ್ ಈ ಅವಧಿಯಲ್ಲಿ 1-0 ಗೋಲುಗಳಿಂದ ಮುನ್ನಡೆ ಸಾಧಿಸಿತು.
ಭಾರತ ಸಹ ಈ ವೇಳೆ ಕೌಂಟರ್ ಅಟ್ಯಾಕ್ ಮಾಡಿ ಅಬ್ಬರಿಸಿತು. ಈ ವೇಳೆ ಭಾರತದ ಆಟಗಾರರು ಎದುರಾಳಿ ಗೋಲು ಪೆಟ್ಟಿಗೆಯ ಬಳಿಕ ಹಲವು ಬಾರಿ ಚೆಂಡನ್ನು ತಂದು ಗೋಲು ಬಾರಿಸುವ ಪ್ರಯತ್ನವನ್ನು ಮಾಡಿದರು. ಆದರೆ ಫಲ ಲಭಿಸಲಿಲ್ಲ. ಆದರೆ ಎರಡನೇ ಅವಧಿಯ ಕೊನೆಯ ನಿಮಿಷದಲ್ಲಿ, ಅಂದರೆ 30ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಭಾರತ ಬಳಿಸಿಕೊಂಡಿತು.
ಭಾರತ ತಂಡದ ಕ್ಯಾಪ್ಟನ್ ಹರ್ಮನ್ ಪ್ರಿತ್ ಸಿಂಗ್ 30ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿ ತಂಡದ ಚಿಂತೆಯನ್ನು ದೂರ ಮಾಡಿದರು. ಅಲ್ಲದೆ ಸಮಬಲ ಸಾಧಿಸುವಲ್ಲಿ ಶ್ರಮಿಸಿದರು.

ಮೂರನೇ ಅವಧಿಯಲ್ಲಿ ಹರ್ಮನ್ ಆರ್ಭಟ
ಭಾರತದ ಮೂರನೇ ಅವಧಿಯಲ್ಲಿ ಅಮೋಘ ಆಟದ ಪ್ರದರ್ಶನ ನೀಡಿತು. ಈ ವೇಳೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಭಾರತದ ನಾಯಕ ಹರ್ಮನ್ ಪ್ರೀತ್ ಸಿಂಗ್ ಅಬ್ಬರಿಸಿದರು. ಮೂರನೇ ಅವಧಿಯ ಮೂರನೇ ನಿಮಿಷದಲ್ಲಿ (ಪಂದ್ಯದ 33ನೇ ನಿಮಿಷ) ಹರ್ಮನ್ ಸಿಕ್ಕ ಪೆನಾಲ್ಟಿ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಭಾರತಕ್ಕೆ ಮುನ್ನಡೆ ದೊರಕಿಸಿ ಕೊಡುವಲ್ಲಿ ಸಫಲರಾದರು. ಈ ಅವಧಿಯಲ್ಲಿ ಭಾರತ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿತು. ಕಂಚಿನ ಪದಕದ ಮೂರನೇ ಅವಧಿಯ ಮುಕ್ತಾಯದ ವೇಳೆಗೆ ಭಾರತ 2-1 ರಿಂದ ಸ್ಪೇನ್ ವಿರುದ್ಧ ಮುನ್ನಡೆ ಸಾಧಿಸಿತು.
ಅಬ್ಬರದ ರಕ್ಷಣಾ ಆಟ
ಕೊನೆಯ ಅವಧಿಯಲ್ಲಿ ಭಾರತ ಅಮೋಘ ರಕ್ಷಣಾ ಆಟದ ಪ್ರದರ್ಶನ ನೀಡಿತು. ಈ ಮೂಲಕ ತನ್ನ ಒಲಿಂಪಿಕ್ಸ್ ಕಂಚಿನ ಪದಕವನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಸಫಲವಾಯಿತು. ಭಾರತದ ಗೋಲಿ ಶ್ರೀಜೇಶ್ ಹಾಗೂ ಡಿಫೆಂಡರ್‌ಗಳು ಕ್ಲಾಸಿಕ್ ಆಟದ ಪ್ರದರ್ಶನ ನೀಡಿದರು. ಅಲ್ಲದೆ ಎದುರಾಳಿ ತಂಡಕ್ಕೆ ಗೋಲುಗಳನ್ನು ನೀಡದಂತೆ ತಡೆಯುವಲ್ಲಿ ಸಫಲರಾದರು. ಈ ಮೂಲಕ ಭಾರತ ನಾಲ್ಕನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕದ ಸಾಧನೆ ಮಾಡಿದೆ.
13 ಒಲಿಂಪಕ್ಸ್ ಪದಕ
ಭಾರತ ತಂಡ ಈ ವರೆಗೆ ಒಲಿಂಪಕ್ಸ್‌ನಲ್ಲಿ ಒಟ್ಟು 13 ಪದಕವನ್ನು ಗೆದ್ದು ಬೀಗಿದೆ. ಎಂಟು ಬಾರಿ ಬಂಗಾರದ ಸಾಧನೆ ಮಾಡಿರುವ ಬ್ಲ್ಯೂ ಬಾಯ್ಸ್, ಒಮ್ಮೆ ರಜತದ ಪದಕವನ್ನು ತಮ್ಮದಾಗಿಸಿಕೊಂಡಿದೆ. ಅಲ್ಲದೆ ನಾಲ್ಕು ಬಾರಿ ಕಂಚಿನ ಪದಕವನ್ನು ಗೆದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications