olympics Javelin Throw: ಭಾರತ-ಪಾಕ್ ನಡುವೆ ಬಂಗಾರಕ್ಕೆ ಫೈಟ್: ನೀರಜ್ ಚೋಪ್ರಾ ಏಕೆ ಪದಕ ಗೆಲ್ಲುವ ಫೆವರೀಟ್?
ಭಾರತದ ಕ್ರೀಡಾಭಿಮಾನಿಗಳ ಚಿತ್ತ ಗುರುವಾರ ಬಂಗಾರದ ಮೇಲೆ ನೆಟ್ಟಿರಲಿದೆ. ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರದ ಸಾಧನೆಯನ್ನು ಮಾಡಿದ್ದ ಜಾವೆಲಿನ್ ಪಟು ನೀರಜ್ ಚೋಪ್ರಾ ಆಗಸ್ಟ್ 8ಕ್ಕೆ ಅಂಗಳ ಪ್ರವೇಶಿಸಲಿದ್ದಾರೆ. ಫೈನಲ್ ಫೈಟ್‌ನಲ್ಲಿ ನೀರಜ್ ಅಂಗಳವನ್ನು ಪ್ರವೇಶಿಸಲಿದ್ದಾರೆ.
ಗುರುವಾರ ತಡ ರಾತ್ರಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನೀರಜ್ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಅವರಿಗೆ ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಠಿಣ ಸ್ಪರ್ಧೆ ಎದುರಾಗಲಿದೆ. ವಿಶ್ವದ ಸ್ಟಾರ್ ಜಾವೆಲಿನ್ ಅಥ್ಲಿಟ್‌ಗಳು ಅಂಗಳಕ್ಕೆ ಎಂಟ್ರಿ ನೀಡಲಿದ್ದು, ನೀರಜ್‌ಗೆ ಸವಾಲು ಎಸೆಯಲಿದ್ದಾರೆ.

ಇದು ವೈಯಕ್ತಿಕ ಕ್ರೀಡೆ ಆದರೂ ಸಹ ಈ ಸ್ಪರ್ಧೆಯಲ್ಲೂ ಭಾರತ ಹಾಗೂ ಪಾಕ್ ಆಟಗಾರರ ನಡುವೆ ಜಿದ್ದಾಜಿದ್ದಿನ ಫೈಟ್ ನೋಡಬಹುದಾಗಿದೆ. ಈ ಬಾರಿ ಹಲವು ಕ್ರೀಡಾಪಟುಗಳ ಪರ್ಸನಲ್ ಬೆಸ್ಟ್ 90 ಮೀಟರ್‌ಗೂ ಹೆಚ್ಚಿದೆ ಎಂಬುದೇ ವಿಶೇಷ. ಈ ಸ್ಪರ್ಧೆಯಲ್ಲಿ ಪ್ರಸಕ್ತ ಸಾಲಿನ ದಾಖಲೆಯನ್ನು ಗಮನಿಸಿದರೆ, ನೀರಜ್ ಹಾಗೂ ಪಾಕ್‌ನ ನದೀಮ್ ಅರ್ಷದ್ ನಡುವೆ ಜಿದ್ದಾಜಿದ್ದಿನ ಕಾದಾಟ ಕಾಣಬಹುದಾಗಿದೆ.
ಭಾರತ-ಪಾಕ್ ಫೈಟ್
ಭಾರತ ಹಾಗೂ ಪಾಕಿಸ್ತಾನ ಯಾವುದೇ ಕ್ರೀಡೆಯಲ್ಲಿ ಎದರಾದರೂ ರೋಚಕತೆ ಫಿಕ್ಸ್. ಅದ್ರಲ್ಲೂ ಒಲಿಂಪಿಕ್ಸ್‌ನಂತಹ ದೊಡ್ಡ ಈವೆಂಟ್‌ನಲ್ಲಿ ಆದರೆ ಕೇಳಬೇಕೆ, ಫುಲ್ ಥ್ರಿಲಿಂಗ್ ಆಗಿರುತ್ತದೆ. ಈ ಸ್ಪರ್ಧೆಯ ಮೇಲೆ ಎಲ್ಲರ ಒಂದು ಕಣ್ಣು ನೆಟ್ಟಿರುತ್ತಾರೆ. ಅಂದಹಾಗೆ ಈ ಸ್ಪರ್ಧೆಯಲ್ಲಿ ಘಟಾನುಘಟಿ ಅಥ್ಲಿಟ್‌ಗಳು ಜಾವೆಲಿನ ಹಿಡಿದು ತಮ್ಮ ಆರ್ಭಟ ನಡೆಸಲು ಸಜ್ಜಾಗಿದ್ದಾರೆ.

ಅರ್ಹತಾ ಸುತ್ತಿನಲ್ಲಿ ನೀರಜ್ ತಮ್ಮ ಮೊದಲ ಪ್ರಯತ್ನದಲ್ಲೇ 89.34 ಮೀಟರ್ ದೂರ ಜಾವೆಲಿನ್ ಎಸೆದು ಅಬ್ಬರಿಸಿದ್ದರು. ಈ ಮೂಲಕ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಈಗ ಫೈನಲ್‌ನಲ್ಲಿ ಡಬಲ್ ಧಮಾಕಾ ಮಾಡಲು ನೀರಜ್ ಸಿದ್ಧತೆ ನಡೆಸಿದ್ದಾರೆ.
90 ಮೀಟರ್ ದೂರ ಜಾವೆಲಿನ್ ಎಸೆದ ಅಥ್ಲಿಟ್
ಜೆಕ್ ಗಂರಾಜ್ಯದ ವಡ್ಲೆಜ್ ಜಾಕೂಬ್ 90.88 ಮೀ, ಜರ್ಮನಿಯ ಪೀಟರ್ಸ್ ಆಂಡರ್ಸನ್ 93.07 ಮೀ, ಟ್ರಿನಿಡಾಡ್ ಮತ್ತು ಟೊಬಾಗೊದ ವಾಲ್ಕಾಟ್ ಕೆಶೋರ್ನ್ 90.16 ಮೀ, ಪಾಕಿಸ್ತಾನದ ನದೀಮ್ ಅರ್ಷದ್ 90.18 ಮೀ, ಕೀನಾದ ಜೂಲಿಯಸ್ 92.72 ಮೀಟರ್ ದೂರ ಎಸೆದು ದಾಖಲೆ ನಿರ್ಮಿಸಿದ್ದಾರೆ. ಈ ಸಾಲಿನಲ್ಲಿ ಭಾರತದ ನೀರಜ್ ಚೋಪ್ರಾಗೆ ಸ್ಥಾನವಿಲ್ಲ.
ನೀರಜ್ ಏಕೆ ಫೆವರೀಟ್?
ನೀರಜ್ ಚೋಪ್ರಾ ಈ ಮೇಲಿನ ಅಥ್ಲಿಟ್‌ಗಳ ರೀತಿ 90 ಮೀಟರ್ ಮಾರ್ಕ್ ಪಾಸ್ ಮಾಡದೇ ಇರಬಹುದು. ಆದರೆ ಇವರ ಆತ್ಮವಿಶ್ವಾಸ ಚೆನ್ನಾಗಿದೆ. ಅಲ್ಲದೆ ಇವರು ಜಾವೆಲಿನ್ ಎಸೆಯುವ ಟೆಕ್ನಿಕ್ ಸಖತ್ ಆಗಿದೆ. ಇವರ ಸ್ಪೀಡ್ ಬೇರೆ ಅಥ್ಲಿಟ್‌ಗಳಿಗೆ ನಡುಕ ಹುಟ್ಟಿಸುತ್ತದೆ. ಅಲ್ಲದೆ ಈ ಸೀಜನ್‌ನಲ್ಲಿ ನೀರಜ್ ಚೋಪ್ರಾ ಅವರೇ ಇವರೆಲ್ಲರಿಗಿಂತಲೂ ಹೆಚ್ಚಿನ ದೂರ ಜಾವೆಲಿನ್ ಎಸೆಯುವಲ್ಲಿ ಸಫಲರಾಗಿದ್ದಾರೆ. ಹೀಗಾಗಿ ಅವರೆಲ್ಲರ ಚಿತ್ತ ಅವರ ಮೇಲೆ ನೆಟ್ಟಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications