Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್ಚರಿ: ಮಹಿಳೆಯರ ರ‍್ಯಾಂಕಿಂಗ್‌ ಸುತ್ತಿನಲ್ಲಿ ಆನ್ ಸಾನ್ ಹೊಸ ದಾಖಲೆ

Olympics: womens Ranking Round, An San sets a new Olympic record

ಟೋಕಿಯೋ, ಜುಲೈ, 23: ಒಲಿಂಪಿಕ್ಸ್‌ನಲ್ಲಿ ರ‍್ಯಾಂಕಿಂಗ್ ಸುತ್ತಿನಲ್ಲಿ ನಾಲ್ವರು ಮಹಿಳಾ ಆರ್ಚರ್‌ಗಳು ಹಿಂದಿನ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಕೊರೊಯಾದ ಮೂವರು ಆರ್ಚರ್‌ಗಳಾದ ಆನ್ ಸಾನ್, ಕಾಂಗ್- ಚಯ್ ಯಂಗ್ ಮತ್ತು ಜಾಂಗ್ ಮಿನ್ಹೀ ಹಾಗೂ ಮೆಕ್ಸಿಕೋದ ಅಲೆಜೆಂದ್ರ ವಾಲೆನ್ಸಿಯಾ ಒಲಿಂಪಿಕ್ಸ್ ಕ್ರೀಡಾಕೂಟದ ಈ ಹಿಂದಿನ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ದಕ್ಷಿಣ ಕೊರಿಯಾದ ಆನ್ ಸಾನ್ 680 ಅಂಕಗಳನ್ನು ಗಳಿಸುವ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದ ಅತಿ ಹೆಚ್ಚಿನ ಅಂಕಗಳಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಉಕ್ರೇನ್‌ನ ಹೆರಾಸಿಮೆಂಕೋ 673 ಅಂಕಗಳಿಸಿ ದಾಖಲೆ ಬರೆದಿದ್ದರು. ಜಾಂಗ್ ಮಿನ್ಹೀ 677 ಅಂಕಗಳನ್ನು ಸಂಪಾದಿಸಿದರೆ ಕಾಂಗ್- ಚಯ್ ಯಂಗ್ 675 ಅಂಕಗಳನ್ನು ಗಳಿಸಿ ಈ ಹಿಂದಿನ ದಾಖಲೆಯನ್ನು ಮುರಿದರು.

ಆನ್‌ ಸಾನ್ ರ‍್ಯಾಂಕಿಂಗ್ ಸುತ್ತಿನ ಉದ್ದಕ್ಕೂ ಮುನ್ನಡೆಯನ್ನು ಸಾಧಿಸುತ್ತಲೇ ಸಾಗಿದರು. ಮೊದಲ ಸುತ್ತಿನ ಪ್ರಥಮಾರ್ಧದಲಲ್ಲಿಯೇ ಅವರು 58 ಅಂಕಗಳನ್ನು ಗಳಿಸಿದರು. ಇದೇ ಪ್ರದರ್ಶನವನ್ನು ಅಂತ್ಯದವರೆಗೂ ಮುಂದುವರಿಸಿಕೊಂಡು ಹೋಗುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಇನ್ನು ಇದೇ ಸ್ಪರ್ಧೆಯಲ್ಲಿ ಭಾರತದ ಆರ್ಚರ್ ದೀಪಿಕಾ ಕುಮಾರಿ 9ನೇ ಸ್ಥಾನವನ್ನು ಪಡೆದಿದ್ದಾರೆ. ದೀಪಿಕಾ 663 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೀಪಿಕಾ ಈ ಸುತ್ತಿನಲ್ಲಿ ಬಹಳ ಅಸ್ಥಿರ ಪ್ರದರ್ಶನವನ್ನು ನೀಡಿದರು. ಆರಂಭದಲ್ಲಿಯೇ ಹಿನ್ನೆಡೆ ಅನುಭವಿಸಿದ ಅವರು ಮೊದಲ ನಾಲ್ಕು ಸೆಟ್‌ನಲ್ಲಿ 14ನೇ ಸ್ಥಾನವನ್ನು ಪಡೆದಿದ್ದರು.

Story first published: Friday, July 23, 2021, 9:43 [IST]
Other articles published on Jul 23, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+