For Quick Alerts
ALLOW NOTIFICATIONS  
For Daily Alerts

'ಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ ಖುಷಿಯ ಕ್ಷಣವಾಗಲಿದೆ'

Opening of Tokyo Olympics will be a moment of joy and relief: IOC president

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ ಖುಷಿ ಮತ್ತು ನಿರಾಳತೆಯ ಕ್ಷಣವಾಗಲಿದೆ ಎಂದು ಇಂಟರ್ ನ್ಯಾಷನಲ್ ಒಲಿಂಪಿಕ್ ಕಮಿಟಿ (ಐಒಸಿ)ಯ ಅಧ್ಯಕ್ಷ ಥಾಮಸ್ ಬಾಚ್ ಹೇಳಿದ್ದಾರೆ. ಜುಲೈ 23ರಂದು ಜಪಾನ್‌ ಟೋಕಿಯೋದಲ್ಲಿ ಈ ಬಾರಿಯ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ನಡೆಯಲಿದೆ.

ಟೋಕಿಯೋ ಒಲಿಂಪಿಕ್ಸ್ ಸ್ಪರ್ಧೆಗಳು ಜುಲೈ 21ರಿಂದಲೇ ಆರಂಭಗೊಂಡಿವೆ. ಆದರೆ ಕ್ರೀಡಾಕೂಟದ ಅಧಿಕೃತ ಉದ್ಘಾಟನೆ ಜುಲೈ 23ರಂದು ಜಪಾನ್‌ನ ಟೋಕಿಯೋದ ಶಿಂಜುಕು ವಾರ್ಡ್‌ನಲ್ಲಿರುವ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ. ಅಸಲಿಗೆ ಟೋಕಿಯೋ ಒಲಿಂಪಿಕ್ಸ್ 2020ರಲ್ಲೇ ನಡೆಯಬೇಕಿತ್ತು. ಆದರೆ ಕೋವಿಡ್-19 ಕಾರಣ ಕ್ರೀಡಾಕೂಟ 1 ವರ್ಷ ಮುಂದೂಡಲ್ಪಟ್ಟಿತ್ತು.

ಉದ್ಘಾಟನಾ ಸಮಾರಂಭಕ್ಕಾಗಿ ಸ್ಟೇಡಿಯಂಗೆ ಪ್ರವೇಶಿಸುತ್ತಲೇ ಕ್ರೀಡಾಪಟುಗಳಿಗೆ ಖುಷಿ ಮತ್ತು ನಿರಾಳತೆಯ ಭಾವವಾಗಲಿದೆ. ಯಾಕೆಂದರೆ ನನಗೆ ಗೊತ್ತು ಅವರು ಈ ಅಪರೂಪದ ಕ್ಷಣಕ್ಕಾಗಿ ಎಷ್ಟೋ ಕಾಲದಿಂದ ಕಾಯುತ್ತಿರಬಹುದು ಅಂತ ಎಂದು ಸುದ್ದಿಗಾರರಲ್ಲಿ ಥಾಮಸ್ ಬಾಚ್ ಹೇಳಿದ್ದಾರೆ.

"ಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ ಕೆಲವಾರು ಅಥ್ಲೀಟ್‌ಗಳಿಗೆ ಖುಷಿ ಮತ್ತು ನಿರಾಳತೆಯ ಕ್ಷಣವಾಗಲಿದೆ," ಎಂದು ಬಾಚ್ ನುಡಿಸಿದ್ದಾರೆ. ಒಂದು ವೇಳೆ ಈಗಲೂ ಒಲಿಂಪಿಕ್ಸ್ ನಡೆಯದಿದ್ದರೆ ಕ್ರೀಡಾಪಟುಗಳು ಎಷ್ಟು ನೋವು ಪಡುತ್ತಿದ್ದರು ಎಂಬರ್ಥದಲ್ಲಿ ಬಾಚ್ ಈ ಹೇಳಿಕೆ ನೀಡಿದ್ದಾರೆ.

Story first published: Wednesday, July 21, 2021, 20:59 [IST]
Other articles published on Jul 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+