Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾಗೆ ಸವಾಲೆಸೆಯಲು ಪಾಕ್‌ನ ಅರ್ಷದ್ ನದೀಮ್ ಭರ್ಜರಿ ತಯಾರಿ

ಬರೀ ಕ್ರಿಕೆಟ್‌ ಅಷ್ಟೇ ಅಲ್ಲ ಎಲ್ಲ ಕ್ರೀಡೆಗಳಲ್ಲೂ ಭಾರತ ಪಾಕಿಸ್ತಾನ ಫೈಟ್‌ ಅಂದರೆ ಅದರ ರೋಚಕತೆ ಹೆಚ್ಚಿರುತ್ತದೆ. ಭಾರತ-ಪಾಕ್‌ ನಡುವಣ ಕ್ರೀಡಾ ಫೈಟ್‌ನ್ನು ನಾವು ಒಲಿಂಪಿಕ್ಸ್‌ನಲ್ಲೂ ಕಾಣಬಹುದು. ಉಭಯ ದೇಶದಲ್ಲಿ ಸ್ಟಾರ್ ಅಥ್ಲೀಟ್‌ಗಳು ಇದ್ದಾರೆ. ಎರಡೂ ದೇಶದ ಅಥ್ಲೀಟ್‌ಗಳು ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ಭಾಗವಹಿಸಿ ಒಬ್ಬರಿಗೊಬ್ಬರು ಸೆಡ್ಡು ಹೊಡೆಯುವವರೆ. ಇಂತಹದ್ದೇ ಒಂದು ಪೈಪೋಟಿ, ಜಾವೆಲಿನ್ ಅಂಗಳದಲ್ಲು ಕಾಣಿಸುತ್ತದೆ.

ತಮ್ಮ ತಮ್ಮ ದೇಶದ ಧ್ವಜ ಹಿಡಿದ ಇಬ್ಬರು ಅಥ್ಲೀಟ್‌ಗಳು ತಮ್ಮ ಬೆಸ್ಟ್‌ ಪ್ರದರ್ಶನ ನೀಡಲು ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಹೀಗಾಗಿ ಪ್ಯಾರೀಸ್‌ ಒಲಿಂಪಿಕ್ಸ್‌ನಲ್ಲಿ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ ಸವಾಲು ಎಸೆಯಲು ಪಾಕ್‌ನ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಸಿದ್ಧತೆ ನಡೆಸಿದ್ದಾರೆ.

Pakistans Arshad Nadeem gears up to challenge Neeraj Chopra at Olympics

ಪಾಕಿಸ್ತಾನದ ಅಗ್ರ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಲು ಇಂಗ್ಲೆಂಡ್‌ಗೆ ತೆರಳಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಫಿಟ್‌ ಆಗಿ ಮೈದಾನಕ್ಕೆ ಮರಳುವ ವಿಶ್ವಾಸವನ್ನು ಹೊಂದಿದ್ದಾರೆ.

2022 ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ನದೀಮ್ ಮೊಣಕಾಲಿನ ಸಮಸ್ಯೆಯಿಂದಾಗಿ ಕಳೆದ ವರ್ಷ ಚೀನಾದಲ್ಲಿ ನಡೆದ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಿಂದ ಹಿಂದೆ ಸರಿಯಬೇಕಾಯಿತು. ಈ ವರ್ಷದ ಜುಲೈ ಮತ್ತು ಆಗಸ್ಟ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ನಡೆಯಲಿದೆ.

27 ವರ್ಷದ ಪಾಕಿಸ್ತಾನಿ ಆಟಗಾರ ಅರ್ಷದ್ ನದೀಮ್ ಅವರು ಗಾಯದಿಂದದ ಚೇತರಿಸಿಕೊಳ್ಳದ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವರ್ಷದಿಂದ ಸಾಕಷ್ಟು ತೊಂದರೆ ಎದುರಿಸುತ್ತಿರುವ ಕಾರಣ ಈಗ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದೇನೆ. ನಾನು ರಿಹ್ಯಾಬ್‌ ಸಹಾಯವನ್ನು ತೆಗೆದುಕೊಂಡೆ ಆದರೆ ಅದು ಕೆಲಸ ಮಾಡಲಿಲ್ಲ ಎಂದು ಪಾಕ್‌ ಜಾವೆಲಿನ್ ಪಟು ಹೇಳಿದ್ದಾರೆ.

ಟೋಕಿಯೊದಲ್ಲಿ 5ನೇ ಸ್ಥಾನ

ಈ 27 ವರ್ಷದ ಆಟಗಾರ ಶಸ್ತ್ರಚಿಕಿತ್ಸೆಯ ನಂತರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಸಮಯಕ್ಕೆ ಗಾಯದಿಂದ ಚೇತರಿಸಿಕೊಳ್ಳುವ ಆಶಯವನ್ನು ಅರ್ಷದ್ ನದೀಮ್ ಹೊಂದಿದ್ದಾರೆ. 2022ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ 90.18 ಎಸೆದ ನದೀಮ್ ಹೊಸ ಕಾಮನ್‌ವೆಲ್ತ್ ಗೇಮ್ಸ್ ದಾಖಲೆ ನಿರ್ಮಿಸಿದ್ದರು. 90 ಮೀಟರ್‌ ದೂರ ಎಸೆದ ಏಷ್ಯಾದ ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇದಾದ ನಂತರ ಅವರು ದೇಶದ ಕ್ರಿಕೆಟಿಗರಂತೆ ಜನಪ್ರಿಯತೆಯನ್ನು ಗಳಿಸಿದ್ದಾರೆ. ಕಳೆದ ವರ್ಷ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕದೊಂದಿಗೆ ಪಾಕಿಸ್ತಾನಕ್ಕೆ ಪದಕ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಅರ್ಷದ್ ನದೀಮ್, ನೀರಜ್ ಚೋಪ್ರಾ ಅವರನ್ನು ಹಿಂದಿಕ್ಕಿದ್ದರು. ಅರ್ಷದ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 86.1 ಅತ್ಯುತ್ತಮ ಪ್ರಯತ್ನದೊಂದಿಗೆ ಐದನೇ ಸ್ಥಾನ ಗಳಿಸಿದ್ದರು.

Pakistans Arshad Nadeem gears up to challenge Neeraj Chopra at Olympics

ನೀರಜ್ ಚೋಪ್ರಾ ಸಾಧನೆ

ಭಾರತದ ಸ್ಟಾರ್‌ ನೀರಜ್ ಚೋಪ್ರಾ ಅವರ ಅನೇಕ ರಾಷ್ಟ್ರೀಯ ದಾಖಲೆ-ಮುರಿದಿದ್ದಾರೆ. ಜಕಾರ್ತಾದಲ್ಲಿ ನಡೆದ 2018 ರ ಏಷ್ಯನ್ ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಅವರು, ಅಲ್ಲಿ 88.06 ಮೀಟರ್ ದೂರ ಜಾವೆಲಿನ ಎಸೆದು ಚಿನ್ನದ ಪದಕವನ್ನು ಗೆದ್ದರು.

ಇದರೊಂದಿಗೆ ನೀರಜ್ ಚೋಪ್ರಾ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಜಾವೆಲಿನ್ ಎಸೆತಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅವರಿಗಿಂತ ಮೊದಲು, ಗುರ್ತೇಜ್ ಸಿಂಗ್ ಅವರು 1982 ರ ನವದೆಹಲಿ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದ ದೇಶದ ಏಕೈಕ ಪುರುಷ ಜಾವೆಲಿನ್ ಎಸೆತಗಾರರಾಗಿದ್ದರು.

ಟೋಕಿಯೊ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಕೊನೆಯ ಎಸೆತವನ್ನು ಎಸೆದ ಕ್ಷಣದಿಂದಲೇ, ಅವರು ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿದರು. ಇವರು ಎರಡನೇ ಪ್ರಯತ್ನದಲ್ಲೇ 87.58 ಮೀಟರ್‌ಗಳ ದೂರ ಎಸೆಯುವ ಮೂಲಕ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದರು ಮತ್ತು ಇದರೊಂದಿಗೆ ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆದರು.

ನೀರಜ್ ಚೋಪ್ರಾ ಈ ಸಾಧನೆ ಮಾಡುವ ಮೊದಲು, ಬೇಸಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾರತದ ಸಾಧನೆ ಕಳಪೆ ಆಗಿತ್ತು. ಮಿಲ್ಕಾ ಸಿಂಗ್ ಮತ್ತು ಪಿಟಿ ಉಷಾ ಅವರು ರೋಮ್ 1960 ಮತ್ತು ಲಾಸ್ ಏಂಜಲೀಸ್ 1984 ರಲ್ಲಿ ಪೋಡಿಯಂ ಸನಿಹಕ್ಕೆ ಬಂದರೂ ಸಹ ಪೋಡಿಯಂ ಹತ್ತಲು ಆಗಿರಲಿಲ್ಲ.

Story first published: Tuesday, February 6, 2024, 14:49 [IST]
Other articles published on Feb 6, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+