ಪಂಕಜ್ ಅಡ್ವಾಣಿ-ಆದಿತ್ಯ ಮೆಹ್ತಾಗೆ ವರ್ಲ್ಡ್ ಟೀಮ್ ಸ್ನೂಕರ್ ಪ್ರಶಸ್ತಿ

ಮಾಂಡಲೆ, ಸೆಪ್ಟೆಂಬರ್ 25: ಮಯನ್ಮಾರ್‌ನ ಮಾಂಡಲೆಯಲ್ಲಿ ಬುಧವಾರ (ಸೆಪ್ಟೆಂಬರ್ 25) ನಡೆದ ಐಬಿಎಸ್‌ಎಫ್ ವಿಶ್ವ ಸ್ನೂಕರ್ ತಂಡ ಸ್ಪರ್ಧೆಯಲ್ಲಿ ಭಾರತ ಪಂಕಜ್ ಅಡ್ವಾಣಿ ಮತ್ತು ಆದಿತ್ಯ ಮೆಹ್ತಾ ಜೋಡಿ ಪ್ರಶಸ್ತಿ ಜಯಿಸಿದೆ. ಥೈಲ್ಯಾಂಡ್ ತಂಡದೆರಿನ ಕಠಿಣ ಸ್ಪರ್ಧೆಯಲ್ಲಿ ಭಾರತ ಜೋಡಿ ಮೇಲುಗೈ ಸಾಧಿಸಿತು.
ಈ ಪ್ರಶಸ್ತಿ ಸೇರಿ ಪಂಕಜ್ ಅಡ್ವಾಣಿಗೆ ಒಟ್ಟು 23 ವಿಶ್ವ ಮಟ್ಟದ ಪ್ರಶಸ್ತಿಗಳು ಲಭಿಸಿದಂತಾಗಿದೆ. ಆದಿತ್ಯ ಮೆಹ್ತಾಗೆ ಇದು ಲಭಿಸುತ್ತಿರುವ ಚೊಚ್ಚಲ ಪ್ರಶಸ್ತಿ. ಆದಿತ್ಯಾಗೆ ಆರೋಗ್ಯ ಸಮಸ್ಯೆಯಿರುವುದರಿಂದ ಅವರು ಮುಂದಿನ ದಿನಗಳಲ್ಲಿ ಸ್ಪರ್ಧಿಸುವುದು ಅನುಮಾನವಾಗಿದೆ.
ಅಡ್ವಾಣಿ ಕಳೆದ ವಾರದಲ್ಲಷ್ಟೇ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ ಜಯಿಸಿದ್ದರು. 'ಮೊದಲ ವಿಶ್ವ ಪ್ರಶಸ್ತಿ ಜಯಿಸುತ್ತಿರುವುದಕ್ಕಾಗಿ ನಾನು ನಿಜಕ್ಕೂ ರೋಮಾಂಚನಗೊಂಡಿದ್ದೇನೆ. ಇಡೀ ವರ್ಷ ಒದ್ದಾಡಿದ್ದಕ್ಕೆ, ಶ್ರಮ ಪಟ್ಟಿದ್ದಕ್ಕೆ ಈಗ ಫಲ ದೊರೆತಿದೆ,' ಎಂದು ಮೆಹ್ತಾ ಹರ್ಷ ವ್ಯಕ್ತಪಡಿಸಿದ್ದಾರೆ.
Story first published: Wednesday, September 25, 2019, 22:03 [IST]
Other articles published on Sep 25, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications