ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್ ಗೆದ್ದ ಬೆಂಗ್ಳೂರಿನ ಪಂಕಜ್!
ಬೆಂಗಳೂರು, ಡಿಸೆಂಬರ್ 13: ಬೆಂಗಳೂರಿನ ನಿವಾಸಿ ಭಾರತದ ಹೆಮ್ಮೆಯ ಕ್ರೀಡಾಪಟು ಪಂಕಜ್ ಅಡ್ವಾಣಿ ಅವರು ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಆಗಿ ಹೊರ ಹೊಮ್ಮಿದ್ದಾರೆ. ಇದು ಅವರ 11ನೇ ವಿಶ್ವ ಬಿಲಿಯರ್ಡ್(150 ಅಪ್ ಮಾದರಿ) ಚಾಂಪಿಯನ್ ಶಿಪ್ ಆಗಿದೆ.
ಮಾಜಿ ವಿಶ್ವ ಚಾಂಪಿಯನ್ ಸಿಂಗಪುರದ ಪೀಟರ್ ಗಿಲ್‌ಕ್ರಿಸ್ಟ್ ಅವರನ್ನು ಪಂಕಜ್ ಅವರು ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆಯಲ್ಲಿ ಮಂಗಳವಾರ ನಡೆದ 150-ಅಪ್ ಪಾಯಿಂಟ್ ಮಾದರಿಯ ಅಂತಿಮ ಹಣಾಹಣಿಯಲ್ಲಿ 151-33, 150-95, 124-150, 101-150, 150-50, 152-37, 86-150, 151-104, 150-15ರಲ್ಲಿ ಸೋಲಿಸಿದರು.

ಮೊದಲ ನಾಲ್ಕು ಫ್ರೇಮ್‌ಗಳಲ್ಲಿ ಉಭಯ ಆಟಗಾರರು ಸಮಬಲದ ಪೈಪೋಟಿ ಕಂಡು ಬಂದಿತ್ತು. ಆದರೆ, ಅಂತಿಮ ನಾಲ್ಕು ಫ್ರೇಮ್ ಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದ ಪಂಕಜ್ ಅವರು ಪ್ರಶಸ್ತಿಯನ್ನು ಗಳಿಸಿದರು. ಪಂಕಜ್ ಅವರಿಗೆ ತವರು ಅಭಿಮಾನಿಗಳ ಬೆಂಬಲ ಬಲ ಕೂಡಾ ಸಿಕ್ಕಿತು.(ಒನ್ಇಂಡಿಯಾ ಸುದ್ದಿ)
Story first published: Wednesday, January 3, 2018, 10:16 [IST]
Other articles published on Jan 3, 2018
Read in English: Pankaj Advani wins World Billiards title
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications