ಐಬಿಎಸ್‌ಎಫ್: ಪಂಕಜ್ ಅಡ್ವಾಣಿಗೆ 22ನೇ ವರ್ಲ್ಡ್ ಬಿಲಿಯರ್ಡ್ಸ್ ಕಿರೀಟ
Pankaj Advani : ಪಂಕಜ್ ಅಡ್ವಾಣಿಗೆ 22ನೇ ವರ್ಲ್ಡ್ ಬಿಲಿಯರ್ಡ್ಸ್ ಕಿರೀಟ

ಬೆಂಗಳೂರು, ಸೆಪ್ಟೆಂಬರ್ 15: ಭಾರತದ ಖ್ಯಾತ ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ ದೇಶಕ್ಕೆ ಮತ್ತೊಂದು ಹಿರಿಮೆಯ ಗರಿ ತಂದಿದ್ದಾರೆ. ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪಂಕಜ್, ಭಾರತ ಪರ 22ನೇ ಪ್ರಶಸ್ತಿ ಗೆದ್ದಿದ್ದಾರೆ. ವರ್ಲ್ಡ್ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನ 150 ಅಪ್ ಮಾದರಿಯಲ್ಲಿ ಅಡ್ವಾಣಿ ಪ್ರಶಸ್ತಿ ಲಭಿಸಿದೆ.
ಇದೇ ಸುದ್ದಿ 'ಮೈಖೇಲ್ ಇಂಗ್ಲೀಷ್'ನಲ್ಲಿ ಓದಿ
ಯುನೈಟೆಡ್ ಕಿಂಗ್ಡಮ್‌ನಿಂದ 2014ರಂದು ವಾಪಸ್ಸಾದ ಬಳಿಕ ಪಂಕಜ್ ಅಡ್ವಾಣಿ ಪ್ರತೀ ವರ್ಷವೂ ವಿಶ್ವ ಬಿಲಿಯರ್ಡ್ಸ್ ಅಥವಾ ಸ್ನೂಕರ್‌ನಲ್ಲಿ ದೇಶಕ್ಕೆ ಪ್ರಶಸ್ತಿ ತರುತ್ತಲೇ ಇದ್ದಾರೆ. ಇದು ಪಂಕಜ್‌ಗೆ ಲಭಿಸುತ್ತಿರುವ ಸತತ ನಾಲ್ಕನೇ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ.
ಮಯನ್ಮಾರಿನಲ್ಲಿ ನಡೆದ ಫೈನಲ್ ಸ್ಪರ್ಧೆಯಲ್ಲಿ ಪಂಕಜ್, ಸ್ಥಿಳೀಯ ಸ್ಪರ್ಧಿ ನೇ ತ್ವೇ ಊ ಅವರೆದುರು 6-2ರ ಸುಲಭ ಜಯ ಸಾಧಿಸಿದರು. ಒಟ್ಟಿನಲ್ಲಿ ಕಳೆದ ಆರು ವರ್ಷಗಳಲ್ಲಿ ಅಡ್ವಾಣಿ ಒಟ್ಟಿಗೆ 5 ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿಗಳನ್ನು ಗೆದ್ದ ಹಿರಿಮೆಗೆ ಪಾತ್ರರಾಗಿದ್ದಾರೆ.
Story first published: Sunday, September 15, 2019, 22:20 [IST]
Other articles published on Sep 15, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications