ಗೆಳತಿ ಹತ್ಯೆ : ಬ್ಲೇಡ್ ರನ್ನರ್ ಈಗ ಅಪರಾಧಿ
ಜೋಹಾನ್ಸ್ ಬರ್ಗ್, ಸೆ.12: ಪ್ರೇಮಿಗಳ ದಿನದಂದೇ ತನ್ನ ಗೆಳತಿಯನ್ನು ಕೊಂದ ಆರೋಪ ಹೊತ್ತಿದ್ದ 'ಬ್ಲೇಡ್ ರನ್ನರ್' ಒಲಿಂಪಿಕ್ ಚಿನ್ನದ ಪದಕ ವಿಜೇತ ಆಸ್ಕರ್ ಪಿಸ್ಟೋರಿಸ್ ಅವರನ್ನು ಅಪರಾಧಿ ಎಂದು ಇಲ್ಲಿನ ನ್ಯಾಯಾಲಯ ಘೋಷಿಸಿದೆ. ಆದರೆ, ಆಸ್ಕರ್ ಅವರು ಉದ್ದೇಶಪೂರ್ವಕವಾಗಿ ಕೊಲೆ ಮಾಡಿಲ್ಲ, ಆಕಸ್ಮಿಕವಾಗಿ ನಡೆದ ಹತ್ಯಾ ಪ್ರಕರಣ ಎಂದು ನ್ಯಾಯಾಲಯ ಪರಿಗಣಿಸಿದೆ.
ಗೆಳತಿ ರೇವಾ ಸ್ಟೀನ್‌ಕ್ಯಾಂಪ್(30) ರನ್ನು ಕೊಂದ ಆರೋಪದ ಮೇಲೆ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಟ್ರಾಕ್ ಸ್ಟಾರ್ ಬ್ಲೇಡ್ ರನ್ನರ್ ಖ್ಯಾತಿ ವಿಕಲಚೇತನ ಆಸ್ಕರ್ ಪಿಸ್ಟೋರಿಯಸ್(28) ಕಳೆದ ವರ್ಷ ಜೈಲು ಸೇರಿದ್ದರು.
ಎರಡು ಕಾಲುಗಳಿಲ್ಲದ ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್ ಪ್ರಿಟೋರಿಯಾದಲ್ಲಿರುವ ತನ್ನ ಮನೆಯಲ್ಲಿ ಗೆಳೆತಿ ಟಿವಿ ಸ್ಟಾರ್ ಹಾಗೂ ಎಫ್‌ಎಚ್‌ಎಂನ ಮಾಜಿ ರೂಪದರ್ಶಿ ರೀವಾ ಸ್ಟೀನ್‌ಕ್ಯಾಂಪ್ (30)ರನ್ನು ಫೆ.14ರಂದು ಗುಂಡಿಕ್ಕಿ ಕೊಲೆ ಮಾಡಿದ ಆರೋಪ ಹೊತ್ತಿದ್ದರು. ಪಿಸ್ಟೋರಿಯಸ್ ಕೊಲೆಗೈಯುವ ಮೊದಲು ರೀವಾಗೆ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.
ಬಾತ್‌ರೂಮ್‌ನಲ್ಲಿ ಯಾರೋ ಆಗಂತುಕರು ಇದ್ದಾರೆ ಎಂದು ಭಾವಿಸಿ ತಾನು ಗುಂಡು ಹಾರಿಸಿದ್ದಾಗಿ ವಿಚಾರಣೆ ವೇಳೆ ಪಿಸ್ಟೋರಿಯಸ್ ಹೇಳಿಕೊಂಡಿದ್ದರು. ಆದರೆ ಪ್ರಿಯತಮೆ ಜೊತೆ ವಾಗ್ವಾದದ ವೇಳೆ ಆತ ಗುಂಡು ಹಾರಿಸಿದ್ದಾಗಿ ಸರಕಾರಿ ವಕೀಲರು ವಾದಿಸಿದ್ದರು. ಈ ಬಗ್ಗೆ ವಾದ ಪ್ರತಿ ವಾದವನ್ನು ಆಲಿಸಿ ನಂತರ ಪ್ರಿಟೋರಿಯಾ ನ್ಯಾಯಾಲಯ ಮಹಿಳಾ ಜಡ್ಜ್ ಥೊಕೊಳಿಲೆ ಮಸಿಪಾ ಅವರು ಸುದೀರ್ಘವಾದ ತೀರ್ಪು ನೀಡಿದ್ದಾರೆ.

ಗೆಳತಿ ಹತ್ಯೆ ಪ್ರಕರಣ: ತೀರ್ಪಿನಲ್ಲಿ ಏನಿದೆ?
2013ರ 'ವ್ಯಾಲಂಟೈನ್ಸ್ ಡೇ'ಯಂದು ಪಿಸ್ಟೋರಿಯಸ್ ತನ್ನ ಪ್ರಿಯತಮೆ ರೇವಾ ಸ್ಟೀನ್‌ಕ್ಯಾಂಪ್ ಅವರರನ್ನು ಗುಂಡಿಟ್ಟು ಕೊಂದ ಆರೋಪ ಸಾಬೀತಾಗಿದೆ. ಗೆಳತಿ ಕೊಂದು ಆಸ್ಕರ್ ಅಪರಾಧಿಯಾಗಿದ್ದಾರೆ.
* ಅದರೆ, ಇದು ನಿರ್ಲಕ್ಷ್ಯದಿಂದ ಆದ ಹತ್ಯೆ, ಉದ್ದೇಶಪೂರ್ವಕವಾದ ಕೊಲೆಯಲ್ಲ.
* ಆಗುಂತಕರ ದಾಳಿ ನಿರೀಕ್ಷೆಯಲ್ಲಿದ್ದ ಆಸ್ಕರ್ ಅವರು ಗೆಳತಿಯನ್ನೇ ಆಗುಂತಕರು ಎಂದು ತಿಳಿದು ಹಲ್ಲೆ ಮಾಡಿ ಗುಂಡಿಕ್ಕಿ ಕೊಂದಿದ್ದಾರೆ. ತಲೆ, ಕೈ, ಸೊಂಟಕ್ಕೆ ಗುಂಡು ತಗುಲಿದೆ.
* ಈ ಪ್ರಕರಣದಲ್ಲಿ ಅಪರಾಧಿಯಾಗಿರುವ ಆಸ್ಕರ್ ಅವರ ಶಿಕ್ಷೆ ಪ್ರಮಾಣ ಕುರಿತಂತೆ ವಿಚಾರಣೆ ಹಾಗೂ ತೀರ್ಪು ಅಕ್ಟೋಬರ್ 13 ರಂದು ನಡೆಯಲಿದೆ.
* ಪ್ರಿಸ್ಟೋರಿಯಸ್ ಅವರಿಗೆ 15 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.

ಪ್ರೇಮದ ಕಾಣಿಕೆಗೆ ರಕ್ತಲೇಪನ
ಸ್ಕರ್ ಗೆ ವ್ಯಾಲೆಂಟೈನ್ಸ್ ಡೇ ಸರ್ಫ್ರೈಜ್ ಗಿಫ್ಟ್ ತರಲು ಶಾಪಿಂಗ್ ಹೋಗಿದ್ದ ರೀವಾ, ಕಳ್ಳ ಹೆಜ್ಜೆ ಇಡುತ್ತಾ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಶಬ್ದವಾಗಿದ್ದನ್ನು ಕೇಳಿಸಿಕೊಂಡ ಆಸ್ಕರ್ ಹಿಂದು ಮುಂದು ನೋಡದೆ, ಕಳ್ಳರು ಮನೆಗೆ ನುಗ್ಗಿರಬಹುದು ಎಂಬ ಶಂಕೆಯಿಂದ ಆಕೆಯನ್ನು ನೋಡದೆ ಗುಂಡು ಹಾರಿಸಿದ್ದಾರೆ ಎಂದು ವರದಿ ಬಂದಿತ್ತ್ತು.
ಆದರೆ, ಪೊಲೀಸ್ ವಕ್ತಾರರು ಯಾವುದೇ ಮಾಹಿತಿ ಹೊರ ಹಾಕಿಲ್ಲ. ಆಸ್ಕರ್ ಬಂಧನವನ್ನು ಮಾತ್ರ ಖಾತ್ರಿಪಡಿಸಿದ್ದರು.

ಸ್ಟೀನ್ ಕ್ಯಾಂಪ್ ಜೊತೆ ಆಸ್ಕರ್ ಡೇಟಿಂಗ್
ಸುಮಾರು ಒಂದೂವರೆ ವರ್ಷದಿಂದ ಮಾಡೆಲ್ ರೀವಾ ಸ್ಟೀನ್ ಕ್ಯಾಂಪ್ ಜೊತೆ ಆಸ್ಕರ್ ಡೇಟಿಂಗ್ ನಲ್ಲಿದ್ದರು. ಸಾಯುವುದಕ್ಕೂ ಒಂದು ವಾರದ ಹಿಂದೆ ಆಸ್ಕರ್ ನೀಡಿದ್ದ ಉಡುಗೊರೆಗಳ ಬಗ್ಗೆ ಮೆಚ್ಚುಗೆ ಸೂಸುತ್ತಾ ರೀವಾ ಟ್ವೀಟ್ ಮಾಡಿದ್ದರು. ರೀವಾ ಹಾಗೂ ಆಸ್ಕರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ ಎಂದು ಎಲ್ಲರೂ ಹೇಳಿದ್ದಾರೆ. ಹೀಗಾಗಿ ಆಕೆಯನ್ನು ಕೊಲ್ಲುವ ಯಾವುದೇ ಉದ್ದೇಶ ಆಸ್ಕರ್ ಗೆ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ.

ಬ್ಲೇಡ್ ರನ್ನರ್ ಎಂದೇ ಖ್ಯಾತಿ ಗಳಿಸಿರುವ ಆಸ್ಕರ್
ಬ್ಲೇಡ್ ರನ್ನರ್ ಎಂದೇ ಖ್ಯಾತಿ ಗಳಿಸಿರುವ ಆಸ್ಕರ್ ಲಿಯನಾರ್ಡೊ ಕಾರ್ಲ್ ಪಿಸ್ಟೋರಿಸ್ ಒಬ್ಬ ಮಾದರಿ ಕ್ರೀಡಾಪಟುವಾಗಿದ್ದಾರೆ. ಆಸ್ಕರ್ ಅವರು ಕೃತಕ ಬಲಗಾಲು ಹೊಂದಿದ್ದು, ಬ್ಲೇಡ್(double below-knee amputations) ಹಾಕಿಕೊಂಡೇ ಲಂಡನ್ ಒಲಿಂಪಿಕ್ಸ್ ನ ಭಾಗವಹಿಸಿದ್ದರು.
ಅಂಗವೈಕಲ್ಯವಿದ್ದವರು ಪ್ಯಾರಾಂಲಪಿಕ್ಸ್ ನಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಮಾಮೂಲಿ. ಆದರೆ, ಆಸ್ಕರ್ ಅವರು ಎಲ್ಲರಂತೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ ವಿಶ್ವದ ಮೊಟ್ಟ ಮೊದಲ ಅಂಗವಿಕಲ ಕ್ರೀಡಾಪಟು ಎನಿಸಿದರು.
4X 400 ರಿಲೇ ತಂಡದಲ್ಲಿ ಭಾಗವಹಿಸಿ ಸೆಮಿಫೈನಲ್, ಫೈನಲ್ ತನಕ ತಲುಪಿದ್ದರು. ಆದರೆ, ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು. ನಂತರ ತಮ್ಮ ಪದಕ ದಾಹವನ್ನು ಪ್ಯಾರಾಲಿಂಪಿಕ್ಸ್ ನಲ್ಲಿ ತೀರಿಸಿಕೊಂಡರು. 400 ಮೀ ದೂರವನ್ನು 46.88 ಸೆಂಕಡುಗಳಲ್ಲಿ ಮುಟ್ಟಿ ಚಿನ್ನದ ಪದಕ ಗೆದ್ದು ಅದ್ಭುತ ಸಾಧನೆ ಮಾಡಿದ್ದರು

15 ವರ್ಷ ಶಿಕ್ಷೆ ಭೀತಿಯಲ್ಲಿ ಆಸ್ಕರ್
ತನ್ನ ಗೆಳತಿಯನ್ನು ಕೊಂದ ಆರೋಪದ ಮೇಲೆ ದಕ್ಷಿಣ ಆಫ್ರಿಕಾದ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಟ್ರಾಕ್ ಸ್ಟಾರ್ ಬ್ಲೇಡ್ ರನ್ನರ್ ಖ್ಯಾತಿ ವಿಕಲಚೇತನ ಆಸ್ಕರ್ ಪಿಸ್ಟೋರಿಯಸ್ ಅವರು ಈಗ 15 ವರ್ಷಗಳ ಕಾಲದ ಶಿಕ್ಷೆ ಎದುರಿಸುತ್ತಿದ್ದಾರೆ. ಆದರೆ, ಶಿಕ್ಷೆ ಪ್ರಮಾಣ ನಿರ್ಧರಿಸುವುದು ಜಡ್ಜ್ ಗೆ ಬಿಟ್ಟ ವಿಷಯವಾಗಿದ್ದು, ಜೀವಾವಧಿ ಶಿಕ್ಷೆ ನೀಡಿದರೆ ಆಸ್ಕರ್ ಮತ್ತೆ ಓಟದ ಸ್ಪರ್ಧೆಗಿಳಿಯುವುದು ಅನುಮಾನ. ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಿಂದ ಆಸ್ಕರ್ ಮುಕ್ತರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications