ವಲ್ಡ್ ಡ್ವಾರ್ಫ್ ಗೇಮ್ಸ್: ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತದ ಮಾರ್ಕ್ ಧರ್ಮಯ್
ಭಾರತದ ಪ್ಯಾರಾಲಿಂಪಿಕ್ಸ್ ಅಥ್ಲೀಟ್ ಮಾರ್ಕ್ ಧರ್ಮಯ್ ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. ಜರ್ಮನಿಯಲ್ಲಿ ನಡೆದ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಮಾರ್ಕ್ ಧರ್ಮಯ್ ಬೊಕ್ಷಾ ಕ್ರೀಡೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಈ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ ಮಾರ್ಕ್ ಧರ್ಮಯ್.
ಮುಂಬೈನ ಬಾಂದ್ರಾ ಮೂಲದವರಾದ ಮಾರ್ಕ್ ಧರ್ಮಯ್ ಇದೇ ಕ್ರೀಡಾಕೂಟದಲ್ಲಿ ಇನ್ನೂ ನಾಳ್ಕು ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ ಎನ್ನುವುದು ಗಮನಾರ್ಹ. ಈ ಕ್ರೀಡಾಕೂಟದಲ್ಲಿ 22 ವಿಭಿನ್ನ ದೇಶಗಳ 505 ಅಥ್ಲೀಟ್‌ಗಳು ಭಾಗವಹಿಸಿದ್ದರು. ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಈ ಕ್ರೀಡಾಕೂಟದಲ್ಲಿ ಭಾರತೀಯ ಆಟಗಾರನಿಂದ ವಿಶೇಷ ಪ್ರದರ್ಶನ ಹೊರಬಂದಿದೆ.

ಇನ್ನು ಧರ್ಮಯ್ ಅವರು ಡಿಸ್ಕಸ್ ಥ್ರೋ ಮತ್ತು ಡಬಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದ ಸಾಧನೆ ಮಾಡಿದ್ದಾರೆ. ಅಲ್ಲದೆ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಮತ್ತು ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.
ಮಾರ್ಜ್ ಧರ್ಮಯ್ ಅವರ ಈ ಸ್ಪೂರ್ತಿದಾಯಕ ಯಶಸ್ಸನ್ನು ಅವರು ಯಾವಾಗಲೂ ಅಭ್ಯಾಸ ಮಾಡುವ ಬಾಂದ್ರಾ ಜಿಮ್ಖಾನಾದಲ್ಲಿ ವಿಶೇಷ ಗೌರವ ಸಲ್ಲಿಸಲಾಗಿದೆ. ಅಲ್ಲದೆ ಅವರಿಗೆ ಗೌರವ ಆಜೀವ ಸದಸ್ಯತ್ವವನ್ನು ನೀಡಲಾಯಿತು.
ಯಾರು ಈ ಮಾರ್ಕ್ ಧರ್ಮಯ್?
ಮಾರ್ಕ್ ಧರ್ಮಯ್‌ಗೆ ಬಾಲ್ಯದಿಂದಲೂ ಕ್ರೀಡೆಯತ್ತ ಹೆಚ್ಚಿನ ಒಲವಿತ್ತು. 2004ರ ಪ್ಯಾರಾಲಿಂಪಿಕ್ ಆಟಗಳಲ್ಲಿ ಭಾಗವಹಿಸುವುದರೊಂದಿಗೆ ಪ್ರಾರಂಭವಾಯಿತು. ಮೊದಲ ಪ್ಯಾರಾಲಿಂಪಿಕ್‌ನಲ್ಲಿ 400 ಮೀಟರ್ ಓಟದಲ್ಲಿ ಕಂಚಿನ ಪದಕವನ್ನು ಪಡೆದುಕಂಡು ಗಮನಸೆಳೆದಿದ್ದರು.
ಅದಾದ ಬಳಿಕ ಅವರು ಹಲವಾರು ದಾಕಳೆಗಳನ್ನು ಬರೆದಿದ್ದಾರೆ. 2010ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 200 ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ಮತ್ತು 2012 ರ ಲಂಡನ್ ಪ್ಯಾರಾಲಿಂಪಿಕ್ಸ್‌ನಲ್ಲಿ 4x400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications