Paralympics 2024:ಇಂದು ಅಂಗಳ ಪ್ರವೇಶಿಸಲಿದ್ದಾರೆ ಅವನಿ
ಭಾರತದ ಅಥ್ಲೀಟ್‌ಗಳು ಸೋಮವಾರ ಪದಕದ ಬೇಟೆಯನ್ನು ನಡೆಸಿದ್ದಾರೆ. ಮಂಗಳವಾರವೂ ಇದೇ ರೀತಿಯ ಪ್ರದರ್ಶನದ ಭರವಸೆಯನ್ನು ಭಾರತೀಯ ಕ್ರೀಡಾಭಿಮಾನಿಗಳು ಇಟ್ಟುಕೊಂಡಿದ್ದಾರೆ. ಈಗ ಭಾರತೀಯ ಅಥ್ಲೀಟ್‌ಗಳು ಅತಿ ಉತ್ಸಾಹದಿಂದ ಅಂಗಳವನ್ನು ಪ್ರವೇಶಿಸಲಿದ್ದಾರೆ.
ಸೋಮವಾರ ಭಾರತೀಯ ಅಥ್ಲೀಟ್‌ಗಳು ಎರಡು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ನಿತೀಶ್ ಕುಮಾರ್ ಐತಿಹಾಸಿಕ ಸಾಧನೆ ಮಾಡಿದರೆ, ಪುರುಷರ ಎಫ್64 ಜಾವೆಲಿನ್ ವಿಭಾಗದಲ್ಲಿ ಸುಮಿತ್ ಭರ್ಜರಿ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ಗೆದ್ದಿದದ್ದಾರೆ. ಬ್ಯಾಡ್ಮಿಂಟನ್ ಎಸ್‌ಎಲ್ 3 ವಿಭಾಗದಲ್ಲಿ ಕರ್ನಾಟಕದ ಸುಹಾಸ್ ಯತಿರಾಜ್ ಬೆಳ್ಳಿ ಪಡೆದರು. ಈ ಮೂಲಕ ಎರಡು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ ಕೀರ್ತಿಯನ್ನು ತಮ್ಮದಾಗಿಸಿಕೊಂಡರು.

ಈಗಾಗಲೇ ಮಹಿಳೆಯರ 10 ಮೀಟರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 ರಲ್ಲಿ ಬಂಗಾರದ ಸಾದನೆ ಮಾಡಿರುವ ಅವನಿ ಲೆಖರಾ ಅವರು ಮಂಗಳವಾರ ಮತ್ತೆ ಅಖಾಡಕ್ಕೆ ಪ್ರವೇಶಿಸಲಿದ್ದಾರೆ. ಅವನಿ ಇಂದು (ಸೆಪ್ಟಂಬರ್ 3) ಮಹಿಳೆಯರ 50 ಮೀಟರ್ ರೈಫಲ್ 3 ಪೋಜಿಷನ್ ಎಸ್‌ಎಚ್1 ವಿಭಾಗದಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಭಾರತೀಯ ಅಥ್ಲೀಟ್‌ಗಳು ಇಂದು ಯಾವೆಲ್ಲಾ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಮಧ್ಯಾಹ್ನ 12.30ಕ್ಕೆ, ಶೂಟಿಂಗ್, ಮಹಿಳೆಯರ 50 ಮೀಟರ್ ರೈಫಲ್ 3 ಪೋಜಿಷನ್ ಎಸ್‌ಎಚ್1 ಅರ್ಹತಾ ಸುತ್ತು
ಮಧ್ಯಾಹ್ನ, 12.30ಕ್ಕೆ, ಆರ್ಚರಿ, ಮಹಿಳೆಯರ ಸಿಂಗಲ್ಸ್ ರಿಕರ್ವ್ ಓಫನ್
ಮಧ್ಯಾಹ್ನ 1.30ಕ್ಕೆ, ಅಥ್ಲೇಟಿಕ್ಸ್, ಮಹಿಳೆಯರ ಶಾಟ್‌ಪುಟ್ ಎಫ್34
ರಾತ್ರಿ, 10.30 ಅಥ್ಲೇಟಿಕ್ಸ್, ಪುರುಷರ ಹೈ ಜಂಪ್ ಟಿ63
ರಾತ್ರಿ 12.15, ಪುರುಷರ ಜಾವೆಲಿನ್ ಥ್ರೋ ಎಫ್46,
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications