Paralympics 2024: ಚಿನ್ನಕ್ಕೆ ಗುರಿ ಇಟ್ಟಿರುವ ಸುಮಿತ್, ಕನ್ನಡಿಗ ಸುಹಾಸ್- ಇಂದು ನಡೆಯಲಿದೆ ಪದಕದ ಬೇಟೆ
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತದ ಅಥ್ಲೀಟ್‌ಗಳ ಸ್ಥಿರ ಪ್ರದರ್ಶನ ಮುಂದುವರೆದಿದೆ. ಸೋಮವಾರವೂ ಭಾರತೀಯ ಅಥ್ಲೀಟ್‌ಗಳು ಅಂಗಳ ಪ್ರವೇಶಿಸಲಿದ್ದು, ಪದಕದ ಬೇಟೆ ಪಕ್ಕಾ ಆಗಿದೆ. ಸೆಪ್ಟಂಬರ್ 2ರಂದು ಭಾರತೀಯ ಅಭಿಮಾನಿಗಳ ಕಣ್ಣು ಕನ್ನಡಿಗ ಸುಹಾಸ್ ಯತಿರಾಜ್ ಅವರ ಮೇಲೆ ನೆಟ್ಟಿರುತ್ತದೆ.
ಭಾನುವಾರವೂ ಭಾರತೀಯ ಅಥ್ಲೀಟ್‌ಗಳು ಪದಕದ ಬೇಟೆ ಮುನ್ನಡೆಸಿದ್ದಾರೆ. ಭಾರತದ ಭರವಸೆಯ ಓಟಗಾರ್ತಿ ಪ್ರೀತಿ ಪಾಲ್ ಮಹಿಳೆಯರ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಕಂಚಿನ ಸಾಧನೆ ಮಾಡಿದ್ದಾರೆ. ಇನ್ನು ಪುರುಷರ ಹೈ ಜಂಪ ಸ್ಪರ್ಧೆಯಲ್ಲಿ ಭಾರತದ ನಿಶಾದ್ ಕುಮಾರ್ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪದಕದ ಬಣ್ಣ ಯಾವುದು?
ಸೋಮವಾರವೂ ಭಾರತದ ಪದಕದ ಬೇಟೆ ಪಕ್ಕಾ ಆಗಿದೆ. ಆದರೆ ಪದಕದ ಬಣ್ಣ ಯಾವುದು ಎಂಬ ಪ್ರಶ್ನೆ ಮಾತ್ರ ಬಾಕಿ ಇದೆ. ಕರ್ನಾಟಕದ ಸುಹಾಸ್ ಯತಿರಾಜ್ ಅವರು ಎಸ್‌ಎಲ್ 4 ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. ಇವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದರು.
ಟೋಕಿಯೊ ಚಿನ್ನದ ಪದಕ ವಿಜೇತ ಸುಮಿತ್ ಆಂಟಿಲ್ ಅವರು ಜಾವೆಲಿನ್ ಥ್ರೋ F64 ಸ್ಪರ್ಧೆಯಲ್ಲಿ ಇಂದು ಕಣಕ್ಕೆ ಇಳಿಯಲಿದ್ದಾರೆ. ಜಾವೆಲಿನ್ ವಿಭಾಗದ ಅರ್ಹತೆ ಹಾಗೂ ಫೈನಲ್ ಪಂದ್ಯ ಇಂದೇ ನಡೆಯಲಿದ್ದು, ತಮ್ಮ ಸ್ವರ್ಣ ಪದಕವನ್ನು ಉಳಿಸಿಕೊಳ್ಳುವ ವಿಶ್ವಾಸವನ್ನು ಹೊಂದಿದ್ದಾರೆ.
ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾ ಪಟುಗಳ ಕ್ರೀಡೆಗಳ ವಿವರ
ಮಧ್ಯಾಹ್ನ 12:30: ಶೂಟಿಂಗ್, SH1 ಅರ್ಹತಾ ಸುತ್ತು
ಮಧ್ಯಾಹ್ನ1:35: ಅಥ್ಲೆಟಿಕ್ಸ್, ಪುರುಷರ ಡಿಸ್ಕಸ್ ಥ್ರೋ F56 ಫೈನಲ್
ಮಧ್ಯಾಹ್ನ 1:40: ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ SH6 (ಕಂಚಿನ ಪದಕ ಪಂದ್ಯ)
ಮಧ್ಯಾಹ್ನ 3:30: ಬ್ಯಾಡ್ಮಿಂಟನ್, ಪುರುಷರ ಸಿಂಗಲ್ಸ್ SL3 ಫೈನಲ್
ಸಂಜೆ, 4:30: ಶೂಟಿಂಗ್, ಮಿಶ್ರ ಟೀಮ್ 25m ಪಿಸ್ತೂಲ್ SH1 ಅರ್ಹತೆ
ರಾತ್ರಿ 8 ಗಂಟೆಗೆ: ಮಹಿಳೆಯರ ಸಿಂಗಲ್ಸ್ SU5 ಫೈನಲ್
ರಾತ್ರಿ 8 ಗಂಟೆಗೆ: ಮಹಿಳೆಯರ ಸಿಂಗಲ್ಸ್ SU5 (ಕಂಚಿನ ಪದಕದ ಪಂದ್ಯ)
ರಾತ್ರಿ 8:15: ಶೂಟಿಂಗ್, ಮಿಶ್ರ ಟೀಮ್ 25 ಮೀ ಪಿಸ್ತೂಲ್ SH1 ಫೈನಲ್
ರಾತ್ರಿ 8:40: ಆರ್ಚರಿ, ಮಿಶ್ರ ತಂಡ ಓಪನ್ ಕ್ವಾರ್ಟರ್ ಫೈನಲ್
ರಾತ್ರಿ 9:40: ಬ್ಯಾಡ್ಮಿಂಟನ್, ಪುರುಷರ ಸಿಂಗಲ್ಸ್ SL4 ಫೈನಲ್
ರಾತ್ರಿ 9:40: ಬ್ಯಾಡ್ಮಿಂಟನ್, ಪುರುಷರ ಸಿಂಗಲ್ಸ್ ಎಸ್‌ಎಲ್ 4 (ಕಂಚಿನ ಪದಕ ಪಂದ್ಯ)
ರಾತ್ರಿ10:34: ಅಥ್ಲೀಟಕ್ಸ್, ಮಹಿಳೆಯರ ಡಿಸ್ಕಸ್ ಥ್ರೋ - F53 ಫೈನಲ್
ರಾತ್ರಿ10:34: ಅಥ್ಲೀಟಕ್ಸ್, ಪುರುಷರ ಜಾವೆಲಿನ್ ಥ್ರೋ F64 ಫೈನಲ್
ರಾತ್ರಿ11:50: ಅಥ್ಲೀಟಕ್ಸ್, ಮಹಿಳೆಯರ 400 ಮೀಟರ್ ಅರ್ಹತಾ ಸುತ್ತು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications