Paralympics 2024: ಶೂಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಮನೀಶ್ ನರ್ವಾಲ್
ಭಾರತ ಶುಕ್ರವಾರ ಪ್ಯಾರಿಸ್‌ನಲ್ಲಿ ಪದಕದ ಬೇಟೆಯನ್ನು ನಡೆಸಿದೆ. ಎಲ್ಲರ ಚಿತ್ತವನ್ನು ಕದ್ದಿದ್ದ ಭಾರತೀಯ ಅಥ್ಲೀಟ್‌ಗಳು ಎರಡನೇ ದಿನ ದೇಶಕ್ಕೆ ನಾಲ್ಕನೇ ಪದಕವನ್ನು ತೊಡಿಸುವಲ್ಲಿ ಸಫಲರಾಗಿದ್ದಾರೆ. ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಈ ಮೂಲಕ ಭಾರತ ಪ್ರಸಕ್ತ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟ ಎರಡನೇ ದಿನ ಅಬ್ಬರಿಸಿದೆ. ಶುಕ್ರವಾರ ನಡೆದ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನೀಶ್ ಅಮೋಘ ಸಾಧನೆ ಮಾಡಿದ್ದಾರೆ. ಫೈನಲ್ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ ಮನೀಶ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಫೈನಲ್ ಸ್ಪರ್ಧೆಯಲ್ಲಿ ಮನೀಶ್ ಅಮೋಘ ಪ್ರದರ್ಶನ ನೀಡಿ ಅಂಕದ ಬೇಟೆ ನಡೆಸಿದರು. ಫೈನಲ್‌ನಲ್ಲಿ ಇವರು 234.9 ಅಂಕಗಳನ್ನು ಕಲೆ ಹಾಕಿ ಬೆಳ್ಳಿ ತಮ್ಮದಾಗಿಸಿಕೊಂಡರು. ಈ ವಿಭಾಗದ ಬಂಗಾರ ದಕ್ಷಿಣ ಕೊರಿಯಾದ ಜಿಯೋಂಗ್ಡು ಜೋ ಪಾಲಾಗಿದೆ. ಇವರು 237.4 ಅಂಕಗಳನ್ನು ಕಲೆ ಹಾಕಿದ್ದರು. ಕಂಚಿನ ಪದಕವನ್ನು ಚೀನಾದ ಯಾಂಗ್ ಚಾವೊ ಪಡೆದರು. ಇವರು 214.3 ಅಂಕ ಕಲೆ ಹಾಕಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications