Paralympics 2024: ಪ್ರೀತಿಗೆ ಎರಡನೇ ಕಂಚು, ನಿಶಾದ್ ಕುಮಾರ್‌ಗೆ ಬೆಳ್ಳಿ
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತೀಯ ಅಥ್ಲೀಟ್‌ಗಳ ಪದಕದ ಬೇಟೆ ಮುಂದುವರೆದಿದೆ. ಭಾನುವಾರ ತಡ ರಾತ್ರಿ ನಡೆದ ಸ್ಪರ್ಧೆಗಳಲ್ಲಿ ಭಾರತೀಯ ಅಥ್ಲೀಟ್‌ಗಳು ಅಮೋಘ ಪ್ರದರ್ಶನ ನೀಡಿ ಪದಕವನ್ನು ಗೆದ್ದಿದ್ದಾರೆ. ಭಾರತದ ಓಟಗಾರ್ತಿ ಪ್ರೀತಿ ಪಾಲ್ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕದ ಸಾಧನೆ ಮಾಡಿದ್ದಾರೆ. ಇನ್ನು ಪುರುಷರ ಹೈಜಂಪ್‌ನಲ್ಲಿ ನಿಶಾದ್ ಕುಮಾರ್ ಬೆಳ್ಳಿ ಸಾಧನೆ ಮಾಡಿದ್ದಾರೆ.
ಪುರುಷರ T47 ಹೈ ಜಂಪ್ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿದ ನಿಶಾದ್ ಬೆಳ್ಳಿ ಪದಕ ಪಡೆದರು. ಫೈನಲ್ ಪಂದ್ಯದಲ್ಲಿ ನಿಶಾದ್ 2.04 ಮೀಟರ್ ಜಿಗಿದು ಪದಕ ತಮ್ಮದಾಗಿಸಿಕೊಂಡರು. ಈ ವಿಭಾಗದ ಚಿನ್ನ ಅಮೆರಿಕದ ರಾಡ್ರಿಕ್ ಟೌನ್ಸೆಂಡ್-ರಾಬರ್ಟ್ಸ್ ಪಾಲಾಯಿತು.

ಭಾರತದ ರಾಮ್ ಪಾಲ್ ಸಹ ಪುರುಷರ T47 ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ಅವರು 1.95 ಮೀಟರ್ ಎತ್ತರ ಜಿಗಿಯುವಲ್ಲಿ ಮಾಡುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಅವರು 7 ನೇ ಸ್ಥಾನ ಪಡೆದರು.
ಪ್ರೀತಿ ಕಂಚು, ಪ್ರಧಾನಿ ಅಭಿನಂದನೆ
ಮಹಿಳೆಯರ ಟಿ35 100 ಮೀಟರ್ ಮತ್ತು 200 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಪ್ರೀತಿ ಪಾಲ್ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಪ್ರೀತಿ ಇತಿಹಾಸ ನಿರ್ಮಿಸಿದ್ದಾರೆ. ಒಂದೇ ಒಲಿಂಪಿಕ್ಸ್ ಕ್ರೀಡಾಕೂಟದ ಟ್ರ್ಯಾಕ್ ಹಾಗೂ ಫೀಲ್ಡ್ ವಿಭಾಗದಲ್ಲಿ ಎರಡು ಪದಕ ಗೆದ್ದ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರೀತಿ ಪಾಲ್ ಮಹಿಳೆಯರ 200 ಮೀಟರ್ ಓಟದ ಸ್ಪರ್ಧೆಯಲ್ಲಿ 30.01 ಸೆಕೆಂಡ್‌ಗಳಲ್ಲಿ ನಿಗದಿತ ದೂರವನ್ನು ಕ್ರಮಿಸಿ ಕಂಚಿನ ಸಾಧನೆ ಮಾಡಿದ್ದಾರೆ. ಪ್ರೀತಿ ಐತಿಹಾಸಿಕ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ತಿಳಿಸಿದ್ದಾರೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರ ಪದಕ ಪಟ್ಟಿಯಲ್ಲಿ ಭಾರತ 27ನೇ ಸ್ಥಾನದಲ್ಲಿದೆ. ಈ ವರೆಗೆ ಭಾರತ 1 ಚಿನ್ನ, 2 ಬೆಳ್ಳಿ, 4 ಕಂಚಿನ ಪದಕವನ್ನು ಗೆದ್ದಿದೆ. ಶೂಟಿಂಗ್‌ನಲ್ಲಿ ಇದುವರೆಗೂ ನಾಲ್ಕು ಪದಕಗಳು ಬಂದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications