Paralympics 2024 Archery: ಸರಿತಾ, ಶೀತಲ ದೇವಿಗೆ ನಿರಾಸೆ
ಭಾರತದ ಸ್ಟಾರ್ ಅಥ್ಲೀಟ್‌ಗಳಾದ ಸರಿತಾ ಕುಮಾರಿ ಹಾಗೂ ಶೀತಲ ದೇವಿ ಅವರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್ ಆರ್ಚರಿ ಕ್ವಾರ್ಟರ್ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ.
ಶನಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶೀತಲ ದೇವಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇವರು ಎಂಟರ ಗಟ್ಟದ ಪಂದ್ಯದಲ್ಲಿ ಚೀಲಿ ಆಟಗಾರ್ತಿಯ ವಿರುದ್ಧ ಆಘಾತ ಕಂಡರು. ಶೀತಲ 137-138 ಅಂಕಗಳಿಂದ ಮರಿಯಾನಾ ಝುನಿಗಾ ವಿರುದ್ಧ ಸೋಲು ಕಂಡರು. ಈ ಮೂಲಕ ಕ್ವಾರ್ಟರ್ ಫೈನಲ್‌ನಲ್ಲಿ ತಮ್ಮ ಅಭಿಯಾನವನ್ನು ಮುಗಿಸಿದ್ದಾರೆ.

ಜಿದ್ದಾಜಿದ್ದಿನ ಹೋರಾಟ
ಟೋಕಿಯೊ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮರಿಯಾನಾ ವಿರುದ್ಧ ಶೀತಲ ಸಮಬಲದ ಹೋರಾಟ ನೀಡಿದರು. ಈ ಪಂದ್ಯದಲ್ಲಿ ಶೀತಲ್ ಆರಂಭಿಕದಲ್ಲಿ ಮುನ್ನಡೆ ಸಾಧಿಸಿದರೂ, ಕೊನೆಯಲ್ಲಿ ಕೊಂಚ ಧೃತಿ ಗೆಟ್ಟರು. ಈ ಪಂದ್ಯ ಗೆಲ್ಲಲು ಉಭಯ ಆಟಗಾರ್ತಿಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಮೊದಲ ಮೂರು ಸುತ್ತುಗಳ ನಂತರ ಇಬ್ಬರೂ ಆಟಗಾರ್ತಿರು ಸಮಬಲ ಸಾಧಿಸಿದರು. ನಾಲ್ಕನೇ ಸುತ್ತಿನಲ್ಲಿ ಮರಿಯಾನಾ 1 ಅಂಕಗಳಿಂದ ಮುನ್ನಡೆ ಸಾಧಿಸಿದರು. ಐದನೇ ಸುತ್ತಿನಲ್ಲೂ ಇವರು ಮುನ್ನಡೆ ಕಾಯ್ದುಕೊಂಡರು. ಪರಿಣಾಮ ಶೀತಲ ದೇವಿ ಪದಕದ ಆಸೆಗೆ ಪೆಟ್ಟು ಬಿದ್ದಿತು. ಶೀತಲ್ ದೇವಿ 1 ಅಂಕದಿಂದ ಪಂದ್ಯವನ್ನು ಕಳೆದುಕೊಂಡರು.
ಶೀತಲ ದಾಖಲೆ
ಭಾರತದ ಯುವ ಆರ್ಚರಿ ಪಟು ಶೀತಲ್ ದೇವಿ ಪ್ಯಾರಾಲಿಂಪಿಕ್ಸ್ ನಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ್ದರು. ತೋಳಿಲ್ಲದ ಆರ್ಚರಿ ಪಟು ಶೀತಲ ಅರ್ಹತಾ ಸುತ್ತಿನಲ್ಲಿ 703 ಅಂಕಗಳನ್ನು ಗಳಿಸಿ ವಿಶ್ವ ದಾಖಲೆ ನಿರ್ಮಿಸಿದರು. ಇಷ್ಟೇ ಅಲ್ಲದೆ 700 ಅಂಕಗಳ ಗಡಿ ದಾಟಿದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.
ಸರಿತಾಗೆ ನಿರಾಸೆ
ಇನ್ನು ಮಹಿಳೆಯರ ಸಿಂಗಲ್ಸ್ ಎಂಟರ ಘಟ್ಟದ ಪಂದ್ಯದಲ್ಲಿ ಸರಿತಾ ಮಹಿಳೆಯರ ಕಾಂಪೌಂಡ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ 140-145 ರಿಂದ ಅಗ್ರ ಶ್ರೇಯಾಂಕದ ತುರ್ಕಿಯೆಯ ಓಜ್ನೂರ್ ಕ್ಯೂರ್ ವಿರುದ್ಧ ಸೋತರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications