Paralympics 2024: ನವದೀಪ್‌ಗೆ ಬೆಳ್ಳಿ, ಸಿಮ್ರನ್‌ಗೆ ಕಂಚು: ಭಾರತದ ಬುಟ್ಟಿಗೆ 29 ಪದಕ
ಭಾರತದ ಪ್ಯಾರಾ ಅಥ್ಲೀಟ್‌ಗಳು ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಪದಕದ ಬೇಟೆಯನ್ನು ಮುಂದುವರೆಸಿದ್ದಾರೆ. ಶನಿವಾರ ನಡೆದ ಸ್ಪರ್ಧೆಗಳಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಭಾರತೀಯ ಅಥ್ಲೀಟ್‌ಗಳು ಎರಡು ಪದಕಕ್ಕೆ ಕೊರಳು ಒಡ್ಡಿದ್ದಾರೆ. ಈ ಮೂಲಕ ಭಾರತ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ 29 ಪದಕಗಳನ್ನು ಗೆದ್ದಿದೆ.
ಭಾರತದ ಭರವಸೆಯ ಅಥ್ಲಿಟ್‌ಗಳಾದ ನವದೀಪ್ ಹಾಗೂ ಸಿಮ್ರನ್ ಪದಕ ಪಡೆದು ಬೀಗಿದ್ದಾರೆ. ಪುರುಷರ ಎಫ್ 41 ಕ್ಯಾಟಗಿರಿ ಜಾವಿಲಿನ್ ಥ್ರೋದಲ್ಲಿ ನವದೀಪ್ ಚಿನ್ನ ಪಡೆದರೆ, ಇನ್ನು ಮಹಿಳೆಯರ ಟಿ12 200 ಮೀಟರ್ ಓಟದ ಸ್ಪರ್ಧೆಯಲ್ಲಿ ಸಿಮ್ರನ್ ಕಂಚಿನ ಸಾಧನೆ ಮಾಡಿದ್ದಾರೆ.

ಸಿಮ್ರನ್‌ಗೆ ಕಂಚು
ಶನಿವಾರ ನಡೆದ ಮಹಿಳೆಯರ ಟಿ12 200 ಮೀಟರ್ ಸ್ಪರ್ಧೆಯಲ್ಲಿ ಪದಕದ ಆಸೆಯನ್ನು ಮೂಡಿಸಿದ್ದ ಭಾರತದ ಸಿಮ್ರನ್ ನಿಗದಿತ ದೂರವನ್ನ ವೇಗವಾಗಿ ಮುಟ್ಟಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಈ ವಿಭಾಗದ ಬೆಳ್ಳಿ ಕ್ಯೂಬನ್ ಅಥ್ಲೀಟ್ ಒಮಾರಾ ಡುರಾಂಡ್ ಪಾಲಾಯಿತು. ಈ ವಿಭಾಗದ ಬೆಳ್ಳಿ ವೆನಿಜುವೆಲ್‌ನ ಪೆರೆಜ್ ಲೋಪೆಜ್ ಅಲೆಜಾಂಡ್ರಾ ಪಾವೊಲಾ ಪಡೆದರು.
ನವದೀಪ್‌ಗೆ ಬೆಳ್ಳಿ
ಪುರುಷರ ಎಫ್ 41 ಕ್ಯಾಟಗಿರಿ ಜಾವಿಲಿನ್ ಥ್ರೋದಲ್ಲಿ ನವದೀಪ್ ಅಮೋಘ ಪ್ರದರ್ಶನ ನೀಡಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಫೈನಲ್‌ನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ ವಿಫಲರಾದರು. ಎರಡನೇ ಪ್ರಯತ್ನದಲ್ಲಿ 46.39 ಮೀಟರ್ ದೂರ ಜಾವೆಲಿನ್ ಎಸೆದರು. ಇನ್ನು ಮೂರನೇ ಪ್ರಯತ್ನದಲ್ಲಿ 47.32 ಮೀಟರ್ ದೂರ ಎಸೆದು ಭರವಸೆ ಮುಡಿಸಿದ್ದರು. ಆದರೆ ಇರಾನ್‌ನ ಬೀಟ್ ಸಯಾಹ್ ಸಡೆಗ್ ತಮ್ಮ ಕೊನೆಯಲ್ಲಿ ಅಮೋಘ ಥ್ರೊ ನಡೆಸಿ ಚಿನ್ನದ ಪದಕವನ್ನು ಪಡೆದರು. ಈ ವಿಭಾಗದ ಕಂಚು ಚೀನಾದ ಸನ್ ಪೆಂಗ್ ಜಿಂಗ್ ಪಾಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications