ಪ್ಯಾರಾಲಿಂಪಿಕ್ಸ್: ಕಂಚಿನ ಪದಕ ಗೆದ್ದ ಭಾರತದ ವಿನೋದ್ ಕುಮಾರ್, ಭಾರತಕ್ಕೆ 3ನೇ ಪದಕ

ಟೋಕಿಯೋ, ಆಗಸ್ಟ್ 29: ಭಾನುವಾರ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಡಿಸ್ಕಸ್ ಎಸೆತದಲ್ಲಿ ಭಾರತದ ವಿನೋದ್ ಕುಮಾರ್ ಕಂಚಿನ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ಭಾರತ ಭಾನುವಾರ 3ನೇ ಪದಕವನ್ನು ಗೆದ್ದುಕೊಂಡಂತಾಗಿದೆ. ಏಷ್ಯನ್ ದಾಖಲೆಯ ಮೂಲಕ ಈ ಸಾಧನೆ ಮಾಡಿದ್ದಾರೆ ವಿನೋದ್ ಕುಮಾರ್. ಇದಕ್ಕೂ ಮುನ್ನ ಮಹಿಳೆಯ ಟಿಟಿ ಸ್ಪರ್ಧೆಯಲ್ಲಿ ಭಾರತದ ಭವೀನಾಬೆನ್ ಪಟೇಲ್ ಹಾಗೂ ಹೈ ಜಂಪ್‌ನಲ್ಲಿ ನಿಶಾದ್ ಕುಮಾರ್ ಬೆಳ್ಳಿಯ ಪದಕವನ್ನು ಗೆದ್ದುಕೊಂಡಿದ್ದರು.
41ರ ಹರೆಯದ ವಿನೋದ್ ಕುಮಾರ್ ಮಾಜಿ ಬಿಎಸ್‌ಎಫ್ ಯೋಧನೂ ಹೌದು. ಇವರ ತಂದೆಯೂ ಕೂಡ 1971ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಭಾನುವಾರ ನಡೆದ ಸ್ಪರ್ಧೆಯಲ್ಲಿ ವಿನೋದ್ ಕುಮಾರ್ 19.91 ಮೀಟರ್ ದೂರ ಎಸೆದು ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ವಿಭಾಗದಲ್ಲಿ ಮೊದಲ ಸ್ಥಾನವನ್ನು ಪೋಲಾಂಡ್‌ನ ಪಿಯೋಟ್ರ್ ಕೊಸೋವಿಕ್ಸ್ 20.02 ಮೀ ದೂರ ಎಸೆದು ಚಿನ್ನದ ಪದಕವನ್ನು ಪಡೆದಿದ್ದರೆ ಕ್ರೊವೇಷಿಯಾದ ವೆಲಿಮಿರ್ ಸ್ಯಾಂಡರ್ 19.98 ಮೀ ದೂರಕ್ಕೆ ಎಸೆದು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ತಂದೆಯಂತೆ ಯೋಧನಾಗುವ ಕನಸು ಕಂಡಿದ್ದ ವಿನೋದ್ ಕುಮಾರ್: ಭಾರತೀಯ ಸೇನೆಯಲ್ಲಿ ವಿನೋದ್ ಕುಮಾರ್ ಅವರ ತಂದೆ ಯೋಧನಾಗಿ ಸೇವೆಯನ್ನು ಸಲ್ಲಿಸಿದ್ದರು. ತಾನು ಕೂಡ ಅದೇ ರೀತಿಯಲ್ಲಿ ದೇಶ ಸೇವೆ ಮಾಡಬೇಕೆಂದು ವಿನೋದ್ ಕುಮಾರ್ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯನ್ನು ಸೇರಿಕೊಂಡಿದ್ದರು. ಆದರೆ ಲೇಹ್‌ನಲ್ಲಿ ತರಬೇತಿಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ವಿನೋದ್ ಕುಮಾರ್ ಎತ್ತರದಿಂದ ಕೆಳಕ್ಕೆ ಬಿದ್ದಿದ್ದರು. ಈ ಅವಘಡದಿಂದಾಗಿ ದಶಕಗಳ ಕಾಲ ವಿನೋದ್ ಕುಮಾರ್ ಹಾಸಿಗೆ ಹಿಡಿದಿದ್ದರು. ಈ ಸಂದರ್ಭದಲ್ಲಿಯೇ ವಿನೋದ್ ಹೆತ್ತವರನ್ನು ಕೂಡ ಕಳೆದುಕೊಂಡಿದ್ದರು.
ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾನುವಾರ ಭಾರತೀಯ ಕ್ರೀಡಾಪಟುಗಳು ಅದ್ಭುತವಾದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಒಂದೇ ದಿನ ಭಾರತ ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಗೆದ್ದುಕೊಂಡು ಸಾಧನೆ ಮಾಡಿದೆ. ಮಹಿಳೆಯರ ಟಿಟಿ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತದ ಭವೀನಾಬೆನ್ ಪಟೇಲ್ ಹಾಗೂ ಹೈ ಜಂಪ್‌ನಲ್ಲಿ ನಿಶಾದ್ ಕುಮಾರ್ ಬೆಳ್ಳಿಯ ಪದಕವನ್ನು ಗೆದ್ದು ಮಿಂಚಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications