
ನಿಂಗ್ಬೋ, ಏಪ್ರಿಲ್ 27: ಚೀನಾದ ನಿಂಗ್ಬೋದಲ್ಲಿ ಶುಕ್ರವಾರ (ಏಪ್ರಿಲ್ 26) ನಡೆದ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್ನ ಪುರುಷರ 102 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಪರ್ದೀಪ್ ಸಿಂಗ್ ಕಂಚಿಗೆ ತೃಪ್ತಿಪಟ್ಟಿದ್ದಾರೆ. ಮತ್ತೊಬ್ಬ ಭಾರತೀಯೆ ಮೀರಾಬಾಯಿ ಚಾನುಗೂ ಕಂಚು ಒಲಿದಿದೆ.
ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ ಒಟ್ಟು 201 ಕೆಜಿ ಭಾರ ಎತ್ತಿದ ಪರ್ದೀಪ್ ಕಂಚು ತನ್ನದಾಗಿಸಿಕೊಂಡರು. ಆದರೆ ಸ್ನ್ಯಾಚ್‌ನಲ್ಲಿ ಪ್ರದೀಪ್ ಸಾಧನೆ ಮಿನುಗಲಿಲ್ಲ. ಅಂತೂ ಒಟ್ಟು 351 ಕೆಜಿ ಸಾಧನೆಯೊಂದಿಗೆ ಪರ್ದೀಪ್ ಗ್ರೂಪ್ 'ಎ'ಯಲ್ಲಿ 6ನೇ ಸ್ಥಾನ ಪಡೆದುಕೊಂಡರು.
ಮಹಿಳೆಯರ 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮಾಜಿ ವಿಶ್ವ ಚಾಂಪಿಯನ್, ಭಾರತದ ಮೀರಾಬಾಯಿ ಚಾನು ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 113 ಕೆಜಿ ವೈಯಕ್ತಿಕ ಉತ್ತಮ ಸಾಧನೆಯೊಂದಿಗೆ ಕಂಚಿಗೆ ಮುತ್ತಿಕ್ಕಿದರು. ಒಟ್ಟಾರೆ 199 ಕೆಜಿ ಭಾರ ಎತ್ತಿದ ಚಾನು ಸ್ಪರ್ಧೆಯಲ್ಲಿ 4ನೇ ಸ್ಥಾನಿಗರಾಗಿ ಗುರುತಿಸಿಕೊಂಡಿದ್ದಾರೆ.