Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪರಿಕ್ರಮ ಚಾಂಪಿಯನ್ಸ್ ಲೀಗ್ 2024 ಪ್ರಾರಂಭ: ರೋಚಕ ಪಂದ್ಯಗಳಿಗೆ ಸಾಕ್ಷಿಯಾದ ಮೊದಲ ದಿನ

ಪರಿಕ್ರಮ ಚಾಂಪಿಯನ್ಸ್ ಲೀಗ್ 2024 ರೋಚಕ ಪಂದ್ಯಗಳಿಗೆ ಸಾಕ್ಷಿಯಾಯಿತು. ಅರ್ಜುನ ಪ್ರಶಸ್ತಿ ಪುರಸ್ಕೃತ ಮತ್ತು ಮಾಜಿ ಭಾರತೀಯ ಅಥ್ಲೀಟ್ ರೀತ್ ಅಬ್ರಹಾಂ ರವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಅಂತಾರಾಷ್ಟ್ರೀಯ ಚಾಂಪಿಯನ್ಶಿಪ್‌ಗಳಲ್ಲಿ ಭಾರತವನ್ನು ಪ್ರತಿ ಪ್ರತಿನಿಧಿಸಿರುವ ಮಾಜಿ ಫುಟ್ಬಾಲ್ ಆಟಗಾರ್ತಿ ಅಮೂಲ್ಯ ಕಮಲ್ ಉಪಸ್ಥಿತರಿದ್ದರು. ಈ ಅತಿಥಿಗಳು ಆಗಮಿಸಿ ಎಲ್ಲಾ ಕ್ರೀಡಾಪಟುಗಳಿಗೆ ಮತ್ತು ಮಕ್ಕಳಿಗೆ ಸ್ಪೂರ್ತಿ ತುಂಬಿದರು. ಕ್ರೀಡೆ ಸೇರಿದಂತೆ ಗುಣಮಟ್ಟದ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಪರಿಕ್ರಮ ಮುಂಚೂಣಿಯಲ್ಲಿದೆ.

12ನೇ ವರ್ಷದ ಪರಿಕ್ರಮ ಚಾಂಪಿಯನ್ಸ್ ಲೀಗ ಪ್ರಾರಂಭವಾಗಿದೆ. ಈ ಟೂರ್ನಿಯ ಸ್ಟಾರ್‌ ಕ್ರೀಡಾ ಪಟುಗಳು ಭಾಗವಹಿಸಿದ್ದು ಹೆಮ್ಮೆಯ ವಿಷಯ. ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಿತೇಶ್ ಕುಮಾರ್ ಸಿಂಗ್ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜ್ಯದ ಅನುಭವಿ ಫುಟ್ಬಾಲ್ ಆಟಗಾರ ಥಾಮಸ್ ಜೋಸೆಫ್, ಮೋಟರ್‌ ಸೈಕಲಿಸ್ಟ್‌ ಸಮೀರ ದಹಿಯಾ ರವರು ಉಪಸ್ಥಿತರಿದ್ದರು. ಇದೇ ವೇಳೆ ಕೆ ಎಸ್ ಎಫ್ ಎ ಉಪ ಪ್ರಧಾನ ಕಾರ್ಯದರ್ಶಿ ಅಸ್ಲಾಂ ಖಾನ್ ಅವರನ್ನು ಸನ್ಮಾನಿಸಲಾಯಿತು.

Parikrama Champions League 2024 Inspirational Presence of Reeth Abraham and Amulya Kamal

16 ವರ್ಷದೊಳಗಿನ ಫುಟ್ಬಾಲ್ ಟೂರ್ನಿಯ ನಡೆದವು. ಅಶೋಕ ನಗರದ ಫುಟ್ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಗ್ರೀನ್‌ ವುಡ್‌ ಶಾಲೆ ಜಯ ಸಾಧಿಸಿತು. ಎಂಟರ ಘಟ್ಟದ ಪಂದ್ಯದಲ್ಲಿ ಗ್ರೀನ್‌ ವುಡ್‌ 4-0 ಗೋಲುಗಳಿಂದ ಸೆಟ್‌ ಜೋಸೆಫ್‌ ಇಂಡಿಯನ್ ಹೈಸ್ಕೂಲ್‌ ತಂಡವನ್ನು ಮಣಿಸಿತು. ಇನ್ನು ಅಲೋಷಿಯಸ್‌ 2-0 ಗೋಲುಗಳಿಂದ ವಿದ್ಯಾನಿಕೇತನ ತಂಡವನ್ನು, ಡೆಲ್ಲಿ ಪಬ್ಲಿಕ್‌ ಸ್ಕೂಲ್‌ 2-0 ಗೋಲುಗಳಿಂದ ರಯಾನ್‌ ಇಂಟರ್‌ನ್ಯಾಷನಲ್‌ ಶಾಲೆ ತಂಡವನ್ನು, ಸೆಂಟ್ ಜೋಸೆಫ್‌ ಬಾಲಕರ ಶಾಲೆ 5-0 ಗೋಲುಗಳಿಂದ ಆರ್ಮಿ ಪಬ್ಲಿಕ್ ಶಾಲೆಯನ್ನು, ಪಾಟರಿ ಟೌನ್ ಸರ್ಕಾರಿ ಶಾಲೆ 2-0 ಗೋಲುಗಳಿಂದ ಬಿಷಪ್ ಕಾಟನ್ ತಂಡವನ್ನು ಸೋಲಿಸಿತು.

ರೀತ್ ಅಬ್ರಹಾಂ ಸಾಧನೆ

ಕರ್ನಾಟಕದ ಸ್ಟಾರ್‌ ಅಥ್ಲೀಟ್‌ ರೀತ್ ಅಬ್ರಹಾಂ ಭಾರತದ ಪರ ಹಲವು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸಾಧನೆ ಮಾಡಿದ ಕ್ರೀಡಾ ಪಟು. ಇವರು 1989ರ ಸೌತ್ ಏಷ್ಯನ್ ಗೇಮ್ಸ್‌ 100 ಮೀಟರ್ ಹರ್ಡಲ್ಸ್‌ ನಲ್ಲಿ ಸ್ವರ್ಣ, ಇದೇ ಟೂರ್ನಿಯ ಲಾಂಗ್ ಜಂಪ್‌ನಲ್ಲಿ ಬಂಗಾರದ ಸಾಧನೆ ಮಾಡಿದ ಕ್ರೀಡಾ ಪಟು. ಅಲ್ಲದೆ 1991ರಲ್ಲೂ ಲಾಂಗ್‌ ಜಂಪ್‌ನಲ್ಲೂ ಸ್ವರ್ಣ ಸಾಧನೆ ಮಾಡಿದ ಕ್ರೀಡಾ ಪಟು. ಇನ್ನು ವಿಶ್ವ ಮಾಸ್ಟರ್ಸ್‌ ಅಥ್ಲೇಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಒಂದು ಬಂಗಾರ, ಎರಡ ಬೆಳ್ಳಿ, ಎರಡು ಕಂಚು ಪಡೆದಿದ್ದಾರೆ.

Story first published: Friday, November 29, 2024, 9:21 [IST]
Other articles published on Nov 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+