Paris Olympics: 3000 ಮೀ. ಸ್ಟೀಪಲ್ ಚೇಸ್‌ನಲ್ಲಿ ಅವಿನಾಶ್ ಸಾಬ್ಳೆಗೆ 11ನೇ ಸ್ಥಾನ
ಪುರುಷರ ಸ್ಟೀಪಲ್ ಚೇಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದ ಭಾರತದ ಅಥ್ಲೀಟ್ ಅವಿನಾಶ್ ಸಾಬ್ಳೆ ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಮೂರು ಸಾವಿರ ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ. ಈ ಮೂಲಕ ಬುಧವಾರ ತಡ ರಾತ್ರಿ ಎರಡು ಪದಕಗಳ ಆಸೆಗೆ ಪೆಟ್ಟು ಬಿದ್ದಿದೆ.
ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಮಹಿಳೆಯರ 49 ಕೆ.ಜಿ ವಿಭಾಗದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದು ಪದಕದಿಂದ ವಂಚಿತರಾದರೆ, ಸ್ಪಿಪಲ್ ಚೇಸ್‌ನಲ್ಲಿ ಭಾರತದ ಚಿತ್ತ ಕದ್ದಿದ್ದ ಮಹಾರಾಷ್ಟ್ರದ ಅವಿನಾಶ್ ಸೇಬಲ್ 11ನೇ ಸ್ಥಾನವನ್ನು ಪಡೆದಿದ್ದಾರೆ. ಅರ್ಹತಾ ಸುತ್ತಿನಲ್ಲಿ ಅದ್ಭುತವಾಗಿ ಓಡಿ ಐದನೇ ಸ್ಥಾನ ಪಡೆದಿದ್ದ ಅವಿನಾಶ್ ಫೈನಲ್‌ನಲ್ಲಿ ಆಘಾತ ಅನುಭವಿಸಿದ್ದಾರೆ.

ಮೊರೊಕಾಗೆ ಚಿನ್ನ
ಈ ವಿಭಾಗದ ಚಿನ್ನವನ್ನು ಮೊರೊಕದ ಸೌಫಿಯಾನ್ ಎಲ್ ಬಕ್ಕಲಿ ತಮ್ಮದಾಗಿಸಿಕೊಂಡಿದ್ದಾರೆ. ಇವರು ನಿಗದಿತ ದೂರವನ್ನು 8 ನಿಮಿಷ 06.05 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದ್ದರು. ಈ ವಿಭಾಗದ ಬೆಳ್ಳಿ ಪದಕವನ್ನು ಯುಎಸ್‌ಎನ ಕೆನ್ನೆತ್ ರೂಕ್ಸ್ ತಮ್ಮದಾಗಿಸಿಕೊಂಡಿದ್ದಾರೆ. ಇವರು ನಿಗದಿತ ಗುರಿಯನ್ನು 8 ನಿಮಿಷ 06.41 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದರು. ಕೀನ್ಯಾದ ಅಬ್ರಹಾಂ ಕಿಬಿವೋಟ್ ಈ ವಿಭಾಗದಲ್ಲಿ ಕಂಚು ಪಡೆದಿದ್ದಾರೆ. ಇವರು 8 ನಿಮಿಷ 06.47 ಸೆಕೆಂಡ್‌ಗಳಲ್ಲಿ ನಿಗದಿತ ಗುರಿ ಮುಟ್ಟಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications