Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Mirabai Chanu: ಮೀರಾಬಾಯಿ ಚಾನುಗೆ ಪ್ಯಾರಿಸ್‌ ಒಲಿಂಪಿಕ್ಸ್ ಪದಕ ಮಿಸ್‌: ನಾಲ್ಕನೇ ಸ್ಥಾನ

ಟೊಕೊಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದ ಭಾರತದ ಖ್ಯಾತ ವೇಟ್‌ ಲೀಫ್ಟರ್‌ ಮೀರಾಬಾಯಿ ಚಾನು ಪದಕದ ನಗೆ ಬೀರುವಲ್ಲಿ ವಿಫಲರಾಗಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ಭಾರತದ ಸ್ಟಾರ್ ವೇಟ್‌ ಲಿಫ್ಟರ್‌ ಮೀರಾ ಬಾಯಿ ಚಾನು ಅವರು ಪ್ಯಾರಿಸ್‌ ಒಲಿಂಪಿಕ್ಸ್‌ನ ಸ್ನಾಷ್ ಸ್ಪರ್ಧೆಯ ಮೊದಲ ಯತ್ನದಲ್ಲಿ ಮೀರಾ ಬಾಯಿ ಅವರು 85 ಕೆಜಿಯನ್ನು ಸುಲಭವಾಗಿ ಎತ್ತಿದರು. ಆದರೆ ಎರಡನೇ ಪ್ರಯತ್ನದಲ್ಲಿ 88 ಕೆಜಿ ಎತ್ತುವಲ್ಲಿ ವಿಫಲರಾದರು. ಆದರೆ ಮೂರನೇ ಪ್ರಯತ್ನದಲ್ಲಿ ತಮ್ಮ ಕ್ಷಮತೆಯನ್ನು ಮೀರಾ ಚಾನು ಮೆರೆದರು. ಪರಿಣಾಮ ಕ್ಲೀನ್‌ ಆಂಡ್‌ ಜರ್ಕ್‌ನಲ್ಲಿ 88 ಕೆಜಿಗಳ ಗರಿಷ್ಠ ತೂಕವನ್ನು ಎತ್ತಿ ಸಾಧನೆ ಮಾಡಿದರು.

Paris 2024 Saikhom Mirabai Chanu Finishes Fourth in Weightlifting

ಮೀರಾಗೆ ನಾಲ್ಕನೇ ಸ್ಥಾನ

ಕ್ಲೀನ್ ಆಂಡ್ ಜರ್ಕ್‌ನಲ್ಲಿ ಮೀರಾ ಬಾಯಿ ಚಾನು ಮೊದಲ ಪ್ರಯತ್ನದಲ್ಲಿ 111 ಕೆಜಿಯನ್ನು ಎತ್ತುವಲ್ಲಿ ವಿಫಲರಾದರು. ಎರಡನೇ ಪ್ರಯತ್ನದಲ್ಲಿ ಮೀರಾ 111 ಕೆಜಿ ಭಾರವನ್ನು ಸುಲಭವಾಗಿ ಎತ್ತಿ ಮಿಂಚಿದರು. ಆದರೆ ಮೂರನೇ ಪ್ರಯತ್ನದಲ್ಲಿ ಮೀರಾ ಬಾಯಿ 114 ಕೆಜಿ ಭಾರವನ್ನು ಎತ್ತುವಲ್ಲಿ ವಿಫಲರಾದರು.

ಚೀನಾ ವೇಟ್ ಲಿಫ್ಟರ್‌ಗೆ ಬಂಗಾರ

ಚೀನಾದ ವೇಟ್‌ ಲಿಫ್ಟರ್‌ ಜಿ ಹಿ ಹೌ ಅವರು ನೂತನ ಒಲಿಂಪಿಕ್ಸ್ ದಾಖಲೆಯನ್ನು ಬರೆದರು. ಇವರು ಸ್ನ್ಯಾಷ್‌ ಒಟ್ಟು 89 ಎತ್ತಿದ್ದರು. ಅಲ್ಲದೆ ಇವರು ಕ್ಲೀನ್‌ ಆಂಡ್‌ ಜರ್ಕ್‌ನಲ್ಲಿ 117 ಕೆ.ಜಿ ಭಾರವನ್ನು ಎತ್ತಿ ನೂತನ ದಾಖಲೆಯನ್ನು ನಿರ್ಮಿಸಿದರು.

ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವವಹಿಸುತ್ತಿರುವ ರೋಮೆನಿಯಾದ ಮಿಹೇಲಾ ವ್ಯಾಲೆಂಟಿನಾ ಬೆಳ್ಳಿಯ ಸಾಧನೆ ಮಾಡಿದರು. ಇವರು ಸ್ನ್ಯಾಷ್‌ ಒಟ್ಟು 93 ಎತ್ತಿದ್ದರು. ಅಲ್ಲದೆ ಇವರು ಕ್ಲೀನ್‌ ಆಂಡ್‌ ಜರ್ಕ್‌ನಲ್ಲಿ 117 ಕೆ.ಜಿ ಭಾರವನ್ನು ಎತ್ತಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಇನ್ನು ಥಾಯ್ಲೆಂಡ್ ಸುರೋದ್ಚನ ಖಂಬವೋ ಒಟ್ಟು 200 ಕೆಜಿ ಭಾರವನ್ನು ಎತ್ತುವ ಮೂಲಕ ಕಂಚಿಗೆ ಕೊರಳು ಒಡ್ಡಿದ್ದಾರೆ.

Story first published: Thursday, August 8, 2024, 1:35 [IST]
Other articles published on Aug 8, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+