Paralympics 2024: ಜಾವೆಲಿನ್ ಎಸೆತದಲ್ಲಿ ಬಂಗಾರ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಸುಮಿತ್
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತೀಯ ಅಥ್ಲೀಟ್‌ಗಳು ಬಂಗಾರದ ಸಾಧನೆ ಮುಂದುವರೆಸಿದ್ದಾರೆ. ಪುರುಷರ ಜಾವೆಲಿನ್ ಎಸೆತದಲ್ಲಿ ಭಾರತದ ಸುಮಿತ್ ಅಂಟಿಲ್ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಇದಕ್ಕೂ ಮುನ್ನ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲೂ ಚಿನ್ನ ಗೆದ್ದಿದ್ದರು.

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಇದುವರೆಗೆ 3 ಚಿನ್ನ, 5 ಬೆಳ್ಳಿ ಮತ್ತು 6 ಕಂಚು ಗೆದ್ದಿದೆ. ಕಳೆದ ಒಲಿಂಪಿಕ್ಸ್‌ನಲ್ಲೂ ಚಿನ್ನದ ಸಾಧನೆ ಮಾಡಿದ್ದ ಸುಮಿತ್ ಆಂಟಿಲ್ ಪ್ಯಾರಿಸ್‌ನಲ್ಲೂ ಅದೇ ಸಾಧನೆ ಮುಂದುವರೆಸಿದ್ದಾರೆ. ಈ ಮೂಲಕ ಸುಮಿತ್ ಪ್ಯಾರಾಲಿಂಪಿಕ್ಸ್‌ನಲ್ಲಿ ತಮ್ಮದೇ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಅಮಿತ್ ತಮ್ಮ ಎರಡನೇ ಪ್ರಯತ್ನದಲ್ಲಿ 70.59 ಮೀಟರ್ ದೂರ ಎಸೆದು ದಾಖಲೆಯನ್ನು ನಿರ್ಮಿಸಿದ್ದಾರೆ. ಟೋಕಿಯೊದಲ್ಲಿ ಅವರು 68.55 ಮೀಟರ್ ದೂರ ಜಾವೆಲಿನ್ ಎಸೆದು ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಸುಮಿತ್ ತಮ್ಮ ಮೊದಲ ಪ್ರಯತ್ನದಲ್ಲಿಯೇ 69.11 ಮೀಟರ್ ಎಸೆಯುವ ಮೂಲಕ ದಾಟಿದರು. ಈ ವಿಭಾಗದ ಬೆಳ್ಳಿಯನ್ನು ಶ್ರೀಲಂಕಾದ ದುಲಾನ್ ಕೊಡಿತುವಕು ಪಡೆದರೆ, ಆಸ್ಟ್ರೇಲಿಯಾದ ಮೈಕಲ್ ಬೇರಿಯನ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಸುಮಿತ್ ಅವರ ಎರಡನೇ ಪ್ರಯತ್ನ ಚಿನ್ನದ ಪದಕದ ಹತ್ತಿರಕ್ಕೆ ತಂದು ನಿಲ್ಲಿಸಿತ್ತು. ಇದೇ ವಿಭಾಗದಲ್ಲಿ ಭಾರತದ ಸಂದೀಪ್ 62.80 ಮೀಟರ್ ಎಸೆದು ನಾಲ್ಕನೇ ಸ್ಥಾನ, ಸಂಜಯ್ ಸರ್ಗರ್ 58.03 ಮೀಟರ್ ಎಸೆದು ಏಳನೇ ಸ್ಥಾನ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications