Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಇತಿಹಾಸ ನಿರ್ಮಿಸಿದ ಮನು ಭಾಕರ್‌ಗೆ ಗುಡ್‌ ನ್ಯೂಸ್!

ಆಗಸ್ಟ್‌ 5 ಸೋಮವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್ ಮನು ಭಾಕರ್ ಅವರು ಎರಡು ಕಂಚಿನ ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇದೀಗ ಮನು ಭಾಕರ್ ಅವರಿಗೆ ಶುಭ ಸುದ್ದಿವೊಂದು ಸಿಕ್ಕಿದೆ. ಮತ್ತೊಮ್ಮೆ 140 ಕೋಟಿ ಭಾರತೀಯರ ಹೃದಯ ಗೆಲ್ಲಲು ರೆಡಿಯಾಗಿದ್ದಾರೆ.

ಆಗಸ್ಟ್ 11ರ ಭಾನುವಾರದಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮನು ಭಾಕರ್ ಭಾರತದ ಧ್ವಜಧಾರಿಯಾಗಲಿದ್ದಾರೆ. ಮನು ಭಾಕರ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಖಾತೆ ತೆರೆದು ಕೀರ್ತಿ ತಂದಿದ್ದಾರೆ.

Paris Olympic 2024 Good news for Manu Bhakar

ಜೊತೆಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಾದ ನಂತರ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮನು ಭಾಕರ್ ಮಿಶ್ರ ತಂಡ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಐಒಎ ಅಧಿಕಾರಿ ಹೇಳಿದ್ದೇನು?

ಈ ಬಗ್ಗೆ ಮಾತನಾಡಿರುವ ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧಿಕಾರಿಯೊಬ್ಬರು, 'ಧ್ವಜಧಾರಿಯಾಗಿ ಮನು ಭಾಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಧ್ವಜಧಾರಿಯಾಗಲು ಅರ್ಹರಾಗಿದ್ದಾರ ಎಂದು ಹೇಳಿದ್ದಾರೆ.

ಭಾರತ ಅಥ್ಲೀಟ್ಸ್‌ ತಂಡದಲ್ಲಿ ಹೆಚ್ಚಿನ ಅರ್ಹತೆ ಹೊಂದಿರುವ ಅನೇಕ ಕ್ರೀಡಾಪಟುಗಳಿದ್ದಾರೆ. ಆದರೆ ನನ್ನನ್ನು ಧ್ವಜಧಾರಿಯಾಗಿರುವ ಬಗ್ಗೆ ಕೇಳಿದರೆ, ಅದು ನಿಜವಾದ ಗೌರವ ಎಂದು ಹರಿಯಾಣದ 22 ವರ್ಷದ ಶೂಟರ್ ಮನು ತಿಳಿಸಿದ್ದಾರೆ. ಭಾರತೀಯ ಒಲಿಂಪಿಕ್ ಸಂಸ್ಥೆಯು ಪುರುಷ ಧ್ವಜಧಾರಿಯ ಹೆಸರನ್ನು ಇನ್ನೂ ಪ್ರಕಟಿಸಿಲ್ಲ.

ಸ್ವಾತಂತ್ರದ ನಂತರ, ಮನು ಭಾಕರ್ ಅವರು ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯರಾಗಿದ್ದಾರೆ. ಇದಕ್ಕೂ ಮೊದಲು ಒಂದೇ ಒಲಿಂಪಿಕ್ಸ್‌ನಲ್ಲಿ ಯಾವುದೇ ಪುರುಷ ಅಥವಾ ಮಹಿಳಾ ಅಥ್ಲೀಟ್ ಎರಡು ಪದಕಗಳನ್ನು ಗೆದ್ದಿರಲಿಲ್ಲ.

ಸ್ವಾತಂತ್ರಕ್ಕೂ ಮೊದಲು, ಬ್ರಿಟಿಷ್ ಮೂಲದ ಭಾರತೀಯ ಆಟಗಾರ ನಾರ್ಮನ್ ಪ್ರಿಚರ್ಡ್ ಅವರ 1900ರ ಒಲಿಂಪಿಕ್ಸ್‌ನಲ್ಲಿ 200 ಮೀಟರ್ ಸ್ಪ್ರಿಂಟ್ ಮತ್ತು 200 ಮೀಟರ್ ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದರು.

Story first published: Monday, August 5, 2024, 18:52 [IST]
Other articles published on Aug 5, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+