ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತ ಮಹಿಳಾ ಟೇಬಲ್ ಟೆನಿಸ್ ತಂಡದ ಅಭಿಯಾನ ಕೊನೆಗೊಂಡಿದೆ. ಭಾರತ ತಂಡವು ಜರ್ಮನಿ ವಿರುದ್ಧ 1-3 ಅಂತರದಲ್ಲಿ ಸೋಲು ಕಂಡಿದೆ. ಇದರೊಂದಿಗೆ ಭಾರತದ ಮೂವರು ಆಟಗಾರ್ತಿಯರು ಕ್ವಾರ್ಟರ್ ಫೈನಲ್‌ನಿಂದ ಹೊರಬಿದ್ದಿದ್ದಾರೆ.
ಭಾರತ ತಂಡಕ್ಕೆ ಸೆಮಿಫೈನಲ್ ಪ್ರವೇಶಿಸಲು ಸುವರ್ಣಾವಕಾಶವಿತ್ತು. ಆದರೆ ಜರ್ಮನಿ ವಿರುದ್ಧ ಸೋತು ಒಲಿಂಪಿಕ್ಸ್‌ನಿಂದ ಹೊರಗುಳಿಯಬೇಕಾಯಿತು. ಈ ಸೋಲಿನಲ್ಲೂ ಕನ್ನಡತಿ ಮಿಂಚುವ ಮೂಲಕ ಎಲ್ಲರ ಗಮನ ಸೆಳೆದರು.

ಭಾರತ ಮೂರನೇ ಪಂದ್ಯವನ್ನು ಕನ್ನಡತಿ ಅರ್ಚನಾ ಗಿರೀಜ್ ಕಾಮತ್ ಅವರು ಜರ್ಮನಿಯ ಶಾನ್ ಜಿಯೋನಾ ಅವರೊಂದಿಗೆ ಆಡಿದರು. ಈ ಪಂದ್ಯದಲ್ಲಿ ಭಾರತ 1-3 ಅಂತರದಿಂದ ಸೋಲು ಕಂಡಿತ್ತು.
ಆದರೆ, ಈ ಪಂದ್ಯದಲ್ಲಿ ಭಾರತವು ಮೊದಲ ಸೆಟ್ ಅನ್ನು 19-17 ರಿಂದ ಗೆದ್ದುಕೊಂಡಿತು. ಇದಕ್ಕೆ ಅರ್ಚನಾ ಗಿರೀಜ್ ಕಾಮತ್ ತೋರಿದ ಕೆಚ್ಚೆದೆಯ ಆಟ ಕಾರಣವಾಯಿತು. ಬಳಿಕ ಎರಡನೇ ಸೆಟ್ ನಿರಾಶದಾಯಕ ಪ್ರದರ್ಶನ ನೀಡಿದ ಆರ್ಚನಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯಾವಾಗಲಿಲ್ಲ. ಹೀಗಾಗಿ ಅರ್ಚನಾ 1-11 ರಿಂದ ಈ ಸೆಟ್ ಅನ್ನು ಕಳೆದುಕೊಳ್ಳಬೇಕಾಯಿತು.
ನಂತರ ಪುಟಿದೆದ್ದ ಅರ್ಚನಾ ಅವರು ಜರ್ಮನಿ ಆಟಗಾರ್ತಿಗೆ ಪ್ರಬಲ ಪೈಪೋಟಿ ನೀಡಿದರು. ಪರಿಣಾಮ ಮೂರನೇ ಸೆಟ್ ಅನ್ನು 11-5 ರಿಂದ ಅರ್ಚನಾ ಗೆದ್ದರು. ನಾಲ್ಕನೇ ಸೆಟ್‌ನಲ್ಲಿ ಮತ್ತೆ ಅರ್ಚನಾ ಕೆಲ ತಪ್ಪುಗಳನ್ನು ಮಾಡಿದರು.
ಮೊದಲ ಪಂದ್ಯ: ಭಾರತದ ಪರ ಮೊದಲ ಪಂದ್ಯವನ್ನು ಅರ್ಚನಾ ಕಾಮತ್ ಮತ್ತು ಶ್ರೀಜಾ ಅಕುಲಾ ಅವರು ಜರ್ಮನಿಯ ವಾನ್ ಯುವಾನ್ ಮತ್ತು ಶಾನ್ ಕ್ಸಿಯೋನಾ ವಿರುದ್ಧ ಆಡಿದರು. ಈ ಪಂದ್ಯದಲ್ಲಿ ಭಾರತದ ಜೋಡಿ 1-3 ಅಂತರದಲ್ಲಿ ಸೋಲನುಭವಿಸಿತ್ತು.
ಮೊದಲ ಸೆಟ್‌ನಲ್ಲಿ ಭಾರತ 5-11 ರಿಂದ ಸೋತಿತು. ಆದರೆ ಭಾರತದ ಜೋಡಿ ಎರಡನೇ ಸೆಟ್‌ನಲ್ಲಿ ತಿರುಗಿ ಬಿದ್ದು 11-8 ರಿಂದ ಗೆದ್ದಿತು. ಇದಾದ ಬಳಿಕ ಜರ್ಮನಿ 10-11, 6-11 ಅಂತರದಲ್ಲಿ ಜಯ ಸಾಧಿಸಿತು.
ಎರಡನೇ ಪಂದ್ಯ: ಟೀಮ್ ಇಂಡಿಯಾ ಪರ ಮನಿಕಾ ಬಾತ್ರಾ ಮತ್ತು ಜರ್ಮನಿ ಕೌಫ್‌ಮನ್ ಆನೆಟ್ ಎರಡನೇ ಪಂದ್ಯವನ್ನು ಆಡಿದರು. ಈ ಪಂದ್ಯದಲ್ಲಿ ಭಾರತ 1-3 ಅಂತರದಿಂದ ಸೋಲನುಭವಿಸಿತು.
ಭಾರತ ಮೊದಲ ಸೆಟ್ ಅನ್ನು 11-5 ರಿಂದ ಗೆದ್ದಿತ್ತು. ಆದರೆ ಉಳಿದ ಮೂರು ಸೆಟ್‌ಗಳನ್ನು ಕ್ರಮವಾಗಿ 5-11, 7-11, 5-11 ರಿಂದ ಜರ್ಮನಿ ಆಟಗಾರ್ತಿ ಗೆದ್ದರು.
ನಾಲ್ಕನೇ ಪಂದ್ಯ: ಈ ಪಂದ್ಯದಲ್ಲಿ ಶ್ರೀಜಾ ಅಕುಲಾ ಮತ್ತು ಜರ್ಮನಿಯ ಕೌಫ್‌ಮನ್ ಆನೆಟ್ ನಡುವೆ ನಡೆಯಿತು. ಭಾರತ ಕ್ರಮವಾಗಿ 6-11, 7-11, 7-11 ರಿಂದ ಸೋತಿತ್ತು.