For Quick Alerts
ALLOW NOTIFICATIONS  
For Daily Alerts

Paris olympics 2024 LIVE Updates: ಒಲಿಂಪಿಕ್ಸ್ ಕ್ರೀಡಾಕೂಟ ಸಮರೋಪ ಸಮಾರಂಭ; ಮನು-ಶ್ರೀಜೇಶ್ ಭಾರತದ ಧ್ವಜಧಾರಿಗಳು

ಆಗಸ್ಟ್ 12 ಸೋಮವಾರ, ಯಶ್ವಸಿಯಾಗಿ 15 ದಿನಗಳು ನಡೆದ ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟ ಅಂತಿಮ ಘಟ್ಟ ತಲುಪಿದೆ. ಅದ್ದೂರಿಯಾಗಿ ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಸಮಾರಂಭವನ್ನು ನಡೆಸಲು ಸಂಘಟನ ಸಮಿತಿ ಯೋಜನೆ ರೂಪಿಸಿದೆ. ಪ್ಯಾರಿಸ್ ಒಲಿಂಪಿಕ್ಸ್ ಪದಕಗಳ ಪಟ್ಟಿಯಲ್ಲಿ ಅಮೆರಿಕಾ ಅಗ್ರಸ್ಥಾನದಲ್ಲಿದರೆ, ಚೀನಾ ಎರಡನೇ ಸ್ಥಾನವನ್ನು ಗಳಿಸಿದೆ.

Paris Olympics 2024  August 12th Live updates  Latest News  Scores  and Highlights in kannada

Aug 12, 2024, 9:32 am IST

ಪ್ಯಾರಿಸ್ ಒಲಿಂಪಿಕ್ಸ್‌ಗೆ ತೆರೆ ಬಿದ್ದಿದೆ. ಈ ಬಾರಿ ಅಮೆರಿಕ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. 40 ಬಂಗಾರ, 44 ಬೆಳ್ಳಿ, 42 ಕಂಚನ್ನು ಹೊಂದಿರುವ ಯುಎಸ್‌ಎ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಚೀನಾ ಒಟ್ಟು 91 ಪದಕವನ್ನು ಬಾಚಿಕೊಂಡಿದೆ. ಜಪಾನ್‌ ಒಟ್ಟು 45 ಪದಕಗಳಿಂದ ಮೂರನೇ ಸ್ಥಾನದಲ್ಲಿದೆ.

Aug 12, 2024, 7:52 am IST

ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾ ಕೂಟ ಮುಕ್ತಾಯವಾಗಿದೆ. ಭಾರತದ ಅಥ್ಲೀಟ್‌ಗಳ ಪ್ರಯತ್ನವನ್ನು ಮೋದಿ ಪ್ರಶಂಸಿದ್ದಾರೆ. ಎಲ್ಲಾ ಅಥ್ಲೀಟ್‌ಗಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಪ್ರತಿಯೊಬ್ಬ ಭಾರತೀಯರು ಅವರ ಬಗ್ಗೆ ಹೆಮ್ಮೆಪಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

Aug 12, 2024, 6:45 am IST

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾ ಕೂಟದ ವಿಹಂಗಮ ದೃಶ್ಯ

Aug 12, 2024, 3:04 am IST

ಒಲಿಂಪಿಕ್ ಧ್ವಜವನ್ನು ಕೆಳಗಿಳಿಸಲಾಗಿದೆ. ಈ ಮೂಲಕ ಅಧಿಕೃತವಾಗಿ ಪ್ಯಾರಿಸ್ ಒಲಿಂಪಿಕ್ಸ್ 2024ರ ಬೇಸಿಗೆ ಕ್ರೀಡಾಕೂಟದ 33ನೇ ಆವೃತ್ತಿಗೆ ತೆರೆ ಬಿದ್ದಿದೆ.

Aug 12, 2024, 2:55 am IST

ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್ ಬಾಚ್ ಅವರು, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳನ್ನು ಪ್ರಶಂಸಿಸಿದ್ದಾರೆ. ಜೊತೆಗೆ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸಿದ್ದಕ್ಕಾಗಿ ಕ್ರೀಡಾಪಟುಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

Aug 12, 2024, 2:54 am IST

ಪ್ಯಾರಿಸ್ ಒಲಿಂಪಿಕ್ಸ್ 2024 ಸಮಿತಿಯ ಅಧ್ಯಕ್ಷ ಟೋನಿ ಎಸ್ಟಾಂಗ್ಯೂಟ್ ಅವರು, ಕ್ರೀಡಾಕೂಟದಲ್ಲಿ ಆದ ಹೊಸ ದಾಖಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Aug 12, 2024, 2:42 am IST

ಸಮಾರೋಪ ಸಮಾರಂಭ ಕುರಿತು ಪ್ಯಾರಿಸ್ ಒಲಿಂಪಿಕ್ಸ್ ಸಂಘಟನಾ ಸಮಿತಿ ಅಧ್ಯಕ್ಷ ಟೋನಿ ಎಸ್ಟಾಂಗ್ಯೂಟ್ ಮತ್ತು ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಮಾತನಾಡಲಿದ್ದಾರೆ.

Aug 12, 2024, 2:35 am IST

ಫ್ರೆಂಚ್ ಇಂಡೀ ರಾಕ್ ಬ್ಯಾಂಡ್ ಫೀನಿಕ್ಸ್‌ನ ಅದ್ಭುತ ಹಾಡುಗಳ ಮೂಲಕ ತಮ್ಮ ಕಾರ್ಯಕ್ರಮವನ್ನು ಮುಕ್ತಾಯ ಮಾಡಿದ್ದಾರೆ.

Aug 12, 2024, 2:30 am IST

ಪ್ರಸಿದ್ಧ ಫ್ರೆಂಚ್ ಸಂಗೀತ ಸಂಯೋಜಕ ಕವಿನ್ಸ್ಕಿ ಈಗ ತನ್ನ ಜನಪ್ರಿಯ ಗೀತೆ ಕವಿನ್ಸ್ಕಿಯನ್ನು ಹಾಡಲಿದ್ದಾರೆ. ಇವರೊಂದಿಗೆ ಫೀನಿಕ್ಸ್ ಕೂಡ ಸೇರಿಕೊಂಡಿದ್ದಾರೆ.

Aug 12, 2024, 2:26 am IST

ಫೀನಿಕ್ಸ್ ಪ್ರಮುಖ ಗಾಯಕ ಥಾಮಸ್ ಮಾರ್ಸ್ ತನ್ನ ಅದ್ಭುತ ಗಾಯನದಿಂದ ಎಲ್ಲರ ಗಮನ ಸೆಳೆದಿದ್ದಾರೆ.

Aug 12, 2024, 2:18 am IST

ಸಮಾರೋಪ ಸಮಾರಂಭದಲ್ಲಿ ವರ್ಸೈಲ್ಸ್ ಮೂಲದ ಜನಪ್ರಿಯ ಫ್ರೆಂಚ್ ಇಂಡಿ ರಾಕ್ ಬ್ಯಾಂಡ್ ಫೀನಿಕ್ಸ್ ಅವರ ಪ್ರದರ್ಶನ ಶುರುವಾಗಿದೆ.

Aug 12, 2024, 2:12 am IST

ನೃತ್ಯ ಪ್ರದರ್ಶನದ ಮೂಲಕ ಒಲಿಂಪಿಕ್ಸ್‌ನ ಐದು ಉಂಗುರಗಳನ್ನು ನಿರ್ಮಿಸಿರುವುದು ವಿಶೇ‍ಷವಾಗಿದೆ.

Aug 12, 2024, 2:02 am IST

ಕ್ರೀಡಾಪಟುಗಳು ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಪ್ರದರ್ಶನದ ಸಂಗೀತವನ್ನು ಆನಂದಿಸುತ್ತಿದ್ದಾರೆ.

Aug 12, 2024, 1:52 am IST

ಪ್ಯಾರಿಸ್ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದ ಮಿಸ್ಟರಿ ಮ್ಯಾನ್ ಮತ್ತೆ ಸಮಾರೋಪ ಕಾರ್ಯಕ್ರಮಕ್ಕಾಗಿ ಸ್ಟೇಡ್ ಡಿ ಫ್ರಾನ್ಸ್‌ಗೆ ಮರಳಿದ್ದಾರೆ.

Aug 12, 2024, 1:49 am IST

ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ಬೆಳಕಿನ ಪ್ರದರ್ಶನ ಆರಂಭವಾಗಿದೆ. ಪ್ರೇಕ್ಷಕರು ಬೆಳಕಿನ ಪ್ರದರ್ಶನ ಕಂಡು ಬೆರಗಾಗುತ್ತಿದ್ದಾರೆ

Aug 12, 2024, 1:45 am IST

ನಾಲ್ಕು ಹೊಸ ಸದಸ್ಯರು ಐಒಸಿ ಅಥ್ಲೀಟ್ಸ್‌ ಆಯೋಗಕ್ಕೆ ಸೇರ್ಪಡೆಗೊಂಡರು. ಅಲಿಸನ್ ಫೆಲಿಕ್ಸ್ - ಅಥ್ಲೆಟಿಕ್ಸ್ (ಅಮೆರಿಕಾ) ಕಿಮ್ ಬುಯಿ - ಜಿಮ್ಯಾನ್ಸ್ಟಿಕ್ಸ್ (ಜರ್ಮನಿ) ಜೆಸ್ಸಿಕಾ ಫಾಕ್ಸ್ - ಕ್ಯಾನೋ (ಆಸ್ಟ್ರೇಲಿಯಾ) ಮಾರ್ಕಸ್ ಡೇನಿಯಲ್ - ಟೆನಿಸ್ (ನ್ಯೂಜಿಲೆಂಡ್)

Aug 12, 2024, 1:39 am IST

ಪ್ಯಾರಿಸ್ ಒಲಿಂಪಿಕ್ಸ್ ಸ್ವಯಂಸೇವಕರಿಗೆ ಗೌರವ ಸಲ್ಲಿಸಲಾಯಿತು. ಸ್ಟೇಡ್ ಡಿ ಫ್ರಾನ್ಸ್ ನಲ್ಲಿ ಸೇರಿದ ಎಲ್ಲಾರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದರು.

Aug 12, 2024, 1:34 am IST

ಪ್ಯಾರಿಸ್ ಒಲಿಂಪಿಕ್ಸ್‌ 2024ರ ಅಂತಿಮ ದಿನದ ಸ್ಪರ್ಧೆಗಳಲ್ಲಿ ಒಂದಾದ ಮಹಿಳಾ ಮ್ಯಾರಥಾನ್‌ನ ಪದಕ ಸಮಾರಂಭವನ್ನು ನಡೆಯಿತು. ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಅವರು ಪದಕಗಳ ಪ್ರಧಾನ ಮಾಡಿದರು. ಕೀನ್ಯಾದ ಹೆಲೆನ್ ಒಬಿರಿ (ಕಂಚು) ಇಥಿಯೋಪಿಯಾದ ಟಿಗ್ಸ್ಟ್ ಅಸೆಫಾ (ಬೆಳ್ಳಿ) ಮತ್ತು ನೆದರ್ಲೆಂಡ್ಸ್‌ನ ಸಿಫಾನ್ ಹಸನ್ (ಚಿನ್ನ) ಪದಕಗಳನ್ನು ಪಡೆದುಕೊಂಡರು.

Aug 12, 2024, 1:26 am IST

ಎಲ್ಲಾ ಪ್ಯಾರಿಸ್ ಒಲಿಂಪಿಕ್ಸ್ ಅಥ್ಲೀಟ್‌ಗಳು ಗಾಲಾ ರಿಝಾಟೊ ಅವರ ಜನಪ್ರಿಯ ಹಾಡು ಫ್ರೀಡ್ ಫ್ರಮ್ ಡಿಸೈರ್‌ನ ಬೀಟ್‌ಗಳಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ.

Aug 12, 2024, 1:25 am IST

ಸ್ಟೇಡ್ ಡಿ ಫ್ರಾನ್ಸ್ ಸುತ್ತಲೂ ಜಗಮಗಿಸುತ್ತಿರುವ ವಿದ್ಯುದಲಂಕಾರದಿಂದಾಗಿ ಪ್ಯಾರಿಸ್‌ನಲ್ಲಿ ಸುಂದರ ರಾತ್ರಿವೊಂದು ಸೃಷ್ಟಿ ಆಗಿದೆ.

Aug 12, 2024, 1:19 am IST

ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದೆ. 40 ಚಿನ್ನ, 44 ಬೆಳ್ಳಿ ಮತ್ತು 42 ಬೆಳ್ಳಿ ಸೇರಿದಂತೆ ಒಟ್ಟು 126 ಪದಕಗಳನ್ನು ಗೆದ್ದಿದೆ.

Aug 12, 2024, 1:17 am IST

ಅಮೆರಿಕಾ ತಂಡವು ಸ್ಟೇಡ್ ಡಿ ಫ್ರಾನ್ಸ್ ಪ್ರವೇಶಿಸುತ್ತಿದೆ.

Aug 12, 2024, 1:13 am IST

ಎಲ್ಲಾ ರಾಷ್ಟ್ರಗಳ ಅಥ್ಲೀಟ್ಸ್ ಸ್ಟೇಡ್ ಡಿ ಫ್ರಾನ್ಸ್‌ನೊಳಗೆ ಕಾರ್ಯಕ್ರಮವನ್ನು ಆನಂದಿಸುತ್ತಿದ್ದಾರೆ.

Aug 12, 2024, 1:12 am IST

ಚೀನಾದ ಕ್ರೀಡಾಪಟುಗಳು ಸ್ಟೇಡ್ ಡಿ ಫ್ರಾನ್ಸ್ ಪ್ರವೇಶಿಸುತ್ತಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ ಪದಕಗಳ ಪಟ್ಟಿಯಲ್ಲಿ ಮೊದಲ ಗಳಿಸಿದ ಚೀನಾವನ್ನು ಕ್ರೀಡಾಕೂಟದ ಕೊನೆಯ ಸ್ಪರ್ಧೆಯಲ್ಲಿ ಅಮೆರಿಕಾ ಚಿನ್ನದ ಪದಕ ಗೆಲ್ಲುವ ಮೂಲಕ ಹಿಂದಿಕ್ಕಿದೆ.

Aug 12, 2024, 12:57 am IST

ಇದೀಗ ಭಾರತದ ಉಳಿದ ಕ್ರೀಡಾಪಟುಗಳು ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಸಮಾರಂಭಕ್ಕಾಗಿ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ಧ್ವಜಧಾರಿಗಳಾದ ಮನು ಭಾಕರ್ ಮತ್ತು ಪಿಆರ್ ಶ್ರೀಜೇಶ್ ಅವರೊಂದಿಗೆ ಸೇರಿಕೊಂಡಿದ್ದಾರೆ.

Aug 12, 2024, 12:53 am IST

ಮನು ಭಾಕರ್ ಮತ್ತು ಪಿಆರ್ ಶ್ರೀಜೇಶ್ ಅವರು ಪರೇಡ್ ಆಫ್ ನೇಷನ್ಸ್‌ಗೆ ತ್ರಿವರ್ಣ ಧ್ವಜದೊಂದಿಗೆ ಆಗಮಿಸಿದ್ದಾರೆ.

Aug 12, 2024, 12:48 am IST

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಇಂಟರ್ನ್ಯಾಷನಲ್ ಒಲಂಪಿಕ್ ಅಸೋಸಿಯೇಷನ್ ​​(ಐಒಸಿ) ಅಧ್ಯಕ್ಷ ಥಾಮಸ್ ಬಾಚ್ ಸ್ಟೇಡ್ ಡಿ ಫ್ರಾನ್ಸ್ ಅನ್ನು ಅಭಿನಂದಿಸಿದರು. ಕ್ರೀಡಾಂಗಣದಲ್ಲಿ ವಿಶೇಷ ಧ್ವಜಾರೋಹಣದೊಂದಿಗೆ ಫ್ರೆಂಚ್ ರಾಷ್ಟ್ರಗೀತೆ ಹಾಡಲಾಗುತ್ತಿದೆ.

Aug 12, 2024, 12:46 am IST

ಒಲಿಂಪಿಕ್ ಜ್ಯೋತಿ ಬಳಿ ವಿಶೇಷ ಸಂಗೀತ ಪ್ರದರ್ಶನದೊಂದಿಗೆ ಸಮಾರೋಪ ಸಮಾರಂಭ ಪ್ರಾರಂಭವಾಗಿದೆ.

Aug 12, 2024, 12:45 am IST

ಫ್ರೆಂಚ್ ಸ್ಟಾರ್ ಈಜುಗಾರ ಮತ್ತು 5 ಬಾರಿ ಪದಕ ವಿಜೇತ (4 ಚಿನ್ನ ಮತ್ತು 1 ಕಂಚು) ಲಿಯಾನ್ ಮರ್ಚಂಡ್ ಅವರು ಸ್ಟೇಡ್ ಡಿ ಫ್ರಾನ್ಸ್‌ಗೆ ಒಲಿಂಪಿಕ್ ಜ್ಯೋತಿಯನ್ನು ತೆಗೆದುಕೊಂಡು ಹೋಗುವ ಗೌರವವನ್ನು ಪಡೆದರು.

Aug 12, 2024, 12:38 am IST

ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಮನು ಭಾಕರ್ ಮತ್ತು ಪಿಆರ್ ಶ್ರೀಜೇಶ್ ಅವರು ಭಾರತದ ಹೆಮ್ಮೆ ಧ್ವಜಧಾರಿಗಳಾಗಿದ್ದಾರೆ.

Aug 12, 2024, 12:20 am IST

ಪ್ಯಾರಿಸ್‌ನ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ಪ್ರಾರಂಭವಾಗುವ ಒಲಿಂಪಿಕ್ಸ್ ಸಮಾರೋಪ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಪರೇಡ್ ಆಫ್ ನೇಷನ್ಸ್‌ನಲ್ಲಿ ಪಿಆರ್ ಶ್ರೀಜೇಶ್ ಮತ್ತು ಮನು ಭಾಕರ್ ಅವರು ಭಾರತದ ಧ್ವಜಧಾರಿಗಳಾಗಿದ್ದಾರೆ.

Aug 12, 2024, 12:19 am IST

ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುತ್ತಿರುವ ಭಾರತೀಯ ಅಥ್ಲೀಟ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

Aug 11, 2024, 7:15 pm IST

2024ರ ಪ್ಯಾರಿಸ್ ಕ್ರೀಡಾಕೂಟವು ಸ್ಟೇಡ್ ಡಿ ಫ್ರಾನ್ಸ್ ನಲ್ಲಿ ಅದ್ಧೂರಿ ಸಮಾರಂಭದೊಂದಿಗೆ ಮುಕ್ತಾಯಗೊಳ್ಳಲಿದೆ.

Aug 11, 2024, 6:04 pm IST

2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಪದಕ ಪಟ್ಟಿಯಲ್ಲಿ ಭಾರತ 71ನೇ ಸ್ಥಾನದಲ್ಲಿ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ. 1 ಬೆಳ್ಳಿ ಮತ್ತು 5 ಕಂಚು ಸೇರಿದಂತೆ ಒಟ್ಟು 6 ಪದಕಗನ್ನು ಭಾರತ ಗೆದ್ದಿದೆ. 1 ಚಿನ್ನದ ಪದಕದೊಂದಿಗೆ ಪಾಕಿಸ್ತಾನ ಕೂಡ ಭಾರತಕ್ಕಿಂತ ಮುಂದಿದ್ದು 62ನೇ ಸ್ಥಾನದಲ್ಲಿದೆ.

Aug 11, 2024, 5:42 pm IST

ಪ್ಯಾರಿಸ್‌ ಒಲಿಂಪಿಕ್ಸ್‌ನ ಹಾಕಿಯಲ್ಲಿ ಕಂಚಿನ ಪದಕ ಸಾಧನೆ ಮಾಡಿರುವ ಟೀಮ್ ಇಂಡಿಯಾದ ಆಟಗಾರರು ಭಾನುವಾರ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದರು.

Aug 11, 2024, 5:09 pm IST

ಪ್ಯಾರಿಸ್ ಒಲಿಂಪಿಕ್ಸ್‌ನ ಸಮಾರೋಪ ಸಮಾರಂಭ ಭಾರತೀಯ ಕಾಲಮಾನದ ಪ್ರಕಾರ ಆಗಸ್ಟ್ 12 ರಂದು ಬೆಳಗಿನ ಜಾವ 12:30 AM ಗಂಟೆಗೆ ಪ್ರಾರಂಭವಾಗಲಿದೆ.

Aug 11, 2024, 3:25 pm IST

ಒಲಿಂಪಿಕ್ ಚಿನ್ನದ ಪದಕ ವಿಜೇತ ಪಾಕಿಸ್ತಾನದ ಅರ್ಷದ್ ನದೀಮ್ ತವರಿಗೆ ಮರಳಿದ್ದಾರೆ. ಚಿನ್ನದ ಸಾಧನೆ ಮಾಡಿದ ಅರ್ಷದ್‌ಗೆ ವಾಟರ್ ಕ್ಯಾನನ್ ಸೆಲ್ಯೂಟ್ ಮೂಲಕ ಸ್ವಾಗತಿಸಲಾಯಿತು. ಇದೇ ವೇಳೆ ಅರ್ಷದ ತಮ್ಮ ಕುಟುಂಬಸ್ಥರನ್ನು ಭೇಟಿಯಾಗಿ ತುಂಬಾ ಭಾವುಕರಾದರು.

Aug 11, 2024, 1:26 pm IST

2008ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ, ಈ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕ ಗೆದ್ದ ಮನು ಭಾಕರ್ ಮತ್ತು ಜಾವೆಲಿನ್ ವಿಭಾಗದಲ್ಲಿ ಬೆಳ್ಳಿ ಗೆದ್ದ ನೀರಜ್ ಚೋಪ್ರಾ ಅವರ ಗುಣಗಾನ ಮಾಡಿದ್ದಾರೆ.

Aug 11, 2024, 12:05 pm IST

ವಿನೇಶ್‌ಗೆ ಕೋರ್ಟ್‌ ಪ್ರಶ್ನೆ

ವಿನೇಶ್‌ ಪೋಗಾಟ್‌ ಅನರ್ಹತೆ ಪ್ರಶ್ನಿಸಿ ಕೋರ್ಟ್‌ ಮೊರೆ ಹೋಗಿದ್ದಾರೆ. ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಇದರ ತೀರ್ಪನ್ನು ಇಂದು ನೀಡುವ ಸಾಧ್ಯತೆ ಇದೆ. ಈ ಬೆನ್ನಲ್ಲೆ ಕೋರ್ಟ್‌ ವಿನೇಶ್‌ಗೆ ಮೂರು ಪ್ರಶ್ನೆಗಳನ್ನು ಕೇಳಿದ್ದು, ಅವುಗಳಿಗೆ ಕುಸ್ತಿ ಪಟು ಇ-ಮೇಲ್‌ ಮೂಲಕ ಉತ್ತರ ನೀಡುವ ಅವಶ್ಯಕತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Aug 11, 2024, 10:41 am IST

2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಮಿಶ್ರ ಪಿಸ್ತೂಲ್ ತಂಡದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದ ಹರಿಯಾಣ ಶೂಟರ್ ಸರಬ್ಜೋತ್ ಸಿಂಗ್ ಸರ್ಕಾರಿ ಉದ್ಯೋಗದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.

Aug 11, 2024, 8:55 am IST

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಇಲ್ಲಿವರೆಗೆ 5 ಕಂಚು ಮತ್ತು 1 ಬೆಳ್ಳಿ ಪದಕಗಳನ್ನು ಮಾತ್ರ ಗೆದ್ದಿದೆ.

Aug 11, 2024, 7:38 am IST

ಭಾರತವು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವಿಲ್ಲದೆ ತನ್ನ ಅಭಿಯಾನವನ್ನು ಕೊನೆಗೊಳಿಸುವುದು ಬಹುತೇಕ ಖಚಿತವಾಗಿದೆ.

Aug 11, 2024, 6:50 am IST

ಇಂದು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾ ಕೂಟಕ್ಕೆ ತೆರೆ ಬೀಳಲಿದೆ.

Aug 10, 2024, 11:46 pm IST

ಒಲಿಂಪಿಕ್ ಚಿನ್ನದ ಪದಕ ವಿಜೇತ ಶೂಟರ್ ಭಾರತದ ಅಭಿನವ್ ಬಿಂದ್ರಾ ಅವರು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಪ್ರತಿಷ್ಠಿತ ಒಲಿಂಪಿಕ್ ಆರ್ಡರ್ ಅನ್ನು ಪಡೆದರು.

Aug 10, 2024, 10:56 pm IST

ಕಿರ್ಗಿಸ್ತಾನ್‌ನ ಕುಸ್ತಿಪಟು ಮೆಡೆಟ್ ಕೈಜಿ ಫೈನಲ್‌ಗೆ ಪ್ರವೇಶಿಸಿದ್ದರೆ, ರಿತಿಕಾ ಹೂಡಾ ರಿಪಿಚೇಜ್ ಸುತ್ತಿಗೆ ಪ್ರವೇಶಿಸಬಹುದಿತ್ತು. ಆದರೆ ಕಿರ್ಗಿಸ್ತಾನ್‌ನ ಕುಸ್ತಿಪಟು ಸೆಮಿಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು

Aug 10, 2024, 10:53 pm IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಮತ್ತೊಂದು ಪದಕದ ಕನಸು ಭಗ್ನಗೊಂಡಿದೆ. ಭಾರತದ ಕುಸ್ತಿಪಟು ರಿತಿಕಾ ಹೂಡಾ ರಿಪಿಚೇಜ್ ಸುತ್ತಿಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.

Aug 10, 2024, 10:45 pm IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತ ಹಾಕಿ ತಂಡದ ಆಟಗಾರರು ಶನಿವಾರ ನಿವೃತ್ತಿ ಘೋಷಿಸಿರುವ ಮಾಜಿ ನಾಯಕ ಹಾಗು ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಅವರನ್ನು ದಂತಕಥೆ ಎಂದು ಬಣ್ಣಿಸಿದ್ದಾರೆ.

Aug 10, 2024, 10:03 pm IST

ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳಾ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದ ವಿನೇಶ್ ಪೋಗಟ್‌, ನಿಗದಿತ ತೂಕಕ್ಕಿಂತ ಹೆಚ್ಚು ತೂಕ ಹೊಂದಿದ್ದರಿಂದ ಅನರ್ಹ ಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ವಿನೇಶ್‌ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಸ್‌ಎ) ಮನವಿ ಸಲ್ಲಿಸಿದ್ದರು. ಈ ವಿಚಾರಣೆಯ ತೀರ್ಪು ಆಗಸ್ಟ್ 11 ರಂದು ಭಾರತೀಯ ಕಾಲಮಾನ ರಾತ್ರಿ 9:30 ಕ್ಕೆ ಬರಲಿದೆ.

Aug 10, 2024, 9:15 pm IST

ಮುಂಬರುವ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದಾಗಿ ಅಮನ್ ಸೆಹ್ರಾವತ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರವಸೆ ನೀಡಿದ್ದಾರೆ.

Aug 10, 2024, 8:48 pm IST

ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಅಮನ್ ಸೆಹ್ರಾವತ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

Aug 10, 2024, 6:58 pm IST

ಅಮನ್ ಸೆಹ್ರಾವತ್ ಅವರು ಒಲಿಂಪಿಕ್ಸ್‌ನ ವೈಯಕ್ತಿಕ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. (21 ವರ್ಷ ಮತ್ತು 24 ದಿನಗಳು)

Aug 10, 2024, 6:10 pm IST

ಶುಕ್ರವಾರ ಒಲಿಂಪಿಕ್ ಕ್ರೀಡಾಕೂಟದ ಮೊದಲ ಬ್ರೇಕಿಂಗ್ ಸ್ಪರ್ಧೆಯಿಂದ ಅಫ್ಘಾನಿಸ್ತಾನದ ನಿರಾಶ್ರಿತರ ತಂಡದ ಬ್ರೇಕರ್ ಮನಿಜಾ ತಲಾಶ್ ಅವರು ಅನರ್ಹಗೊಂಡಿದ್ದಾರೆ. ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನೆದರ್ಲೆಂಡ್ಸ್‌ನ ಇಂಡಿಯಾ ಸರ್ಜೋ ವಿರುದ್ಧ ಸ್ಪರ್ಧಿಸಲು ತಲಾಶ್ 'ಫ್ರೀ ಆಫ್ಘನ್ ವುಮೆನ್' ಕೇಪ್ ಧರಿಸಿ ಬಂದಾಗ ಈ ಘಟನೆ ನಡೆದಿದೆ.

Aug 10, 2024, 5:48 pm IST

ಕಂಚಿನ ಪದಕದ ಪಂದ್ಯಕ್ಕೂ ಮುನ್ನ ಭಾರತದ ಕುಸ್ತಿಪಟು ಅಮನ್ ಸೆಹ್ರಾವತ್ 10 ಗಂಟೆಗಳಲ್ಲಿ 4.6 ಕೆಜಿ ತೂಕ ಕಳೆದುಕೊಂಡಿದ್ದರು. ಈ ಬಗ್ಗೆ ಮಾಹಿತಿ ಇಂದು ಹೊರಬಿದ್ದಿದೆ.

Aug 10, 2024, 4:41 pm IST

ಪ್ಯಾರಿಸ್‌ ಒಲಿಂಪಿಕ್ಸ್‌ 2024ರ ಮಹಿಳೆಯರ 76 ಕೆಜಿ ಫ್ರಿ ಸ್ಟೈಲ್‌ ಕುಸ್ತಿಯಲ್ಲಿ ಭಾರತದ ದೀಪಿಕಾ ಹೂಡಾ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಇವರು ಐಪೆರಿ ಮೆಡೆಟ್ ಕೈಜಿ ವಿರುದ್ಧ ಸೋಲು ಕಂಡರು.

Aug 10, 2024, 4:18 pm IST

ಪ್ಯಾರಿಸ್‌ ಒಲಿಂಪಿಕ್ಸ್‌ 2024ರ ಮಹಿಳೆಯರ 76 ಕೆಜಿ ಪ್ರಿ-ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಭಾರತದ ರೀತಿಕಾ ಅವರು ಹಂಗೇರಿಯ ಬರ್ನಾಡೆಟ್ ನಾಗಿ ಅವರನ್ನು ಮಣಿಸಿದರು.

Aug 10, 2024, 3:54 pm IST

ಪ್ಯಾರಿಸ್ ಒಲಂಪಿಕ್ಸ್ 2024 ರ ಮಹಿಳಾ ಕುಸ್ತಿಯ 50 ಕೆಜಿ ಕುಸ್ತಿ ವಿಭಾಗದ ಫೈನಲ್‌ಗೂ ಮುನ್ನ, ವಿನೇಶ್ ಪೋಗಟ್‌ ಅವರು ಅನರ್ಹಗೊಂಡಿದ್ದರು. ಈ ಮನವಿಯನ್ನು ಪ್ರಶ್ನಿಸಿ ಅವರು ಕ್ರೀಡಾ ಕೋರ್ಟ್‌ ಮೊರೆ ಹೋಗಿದ್ದರು. ಈಗ ಈ ತೀರ್ಪಿನ ಬಗ್ಗೆ ಕೋರ್ಟ್‌ ಭಾರತೀಯ ಕಾಲಾಮನದ ಪ್ರಕಾರ 9:30ಕ್ಕೆ ಹೊರ ಬೀಳುವ ಸಾಧ್ಯತೆ ಇದೆ.

Aug 10, 2024, 3:02 pm IST

ಭಾರತದ ದಿಗ್ಗಜ ಶೂಟರ್ ಅಭಿನವ್ ಬಿಂದ್ರಾ ಒಲಿಂಪಿಕ್ ಆರ್ಡರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಇಂದು ಪ್ಯಾರಿಸ್‌ನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.

Aug 10, 2024, 1:03 pm IST

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತದ ಪ್ರದರ್ಶನವು ಟೋಕಿಯೊ ಕ್ರೀಡಾಕೂಟಕ್ಕಿಂತ ಹೆಚ್ಚು ನಿರಾಶಾದಾಯಕವಾಗಿದೆ. ಸದ್ಯ ಭಾರತ ಒಲಿಂಪಿಕ್ ಪದಕ ಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತ ಕೆಳಗಿದೆ. ಏಕೆಂದರೆ ಭಾರತ ಒಂದು ಚಿನ್ನದ ಪದಕವನ್ನು ಗೆದ್ದಿಲ್ಲ.

Aug 10, 2024, 1:02 pm IST

ಒಲಿಂಪಿಕ್ಸ್ 2024 ರ ಸಮಾರೋಪ ಸಮಾರಂಭ ನಾಳೆ ಆಗಸ್ಟ್ 11 ರಂದು ನಡೆಯಲಿದೆ.

Aug 09, 2024, 11:19 pm IST

ಅಮನ್ ಸೆಹ್ರಾವತ್ ಕಂಚಿನ ಪದಕವನ್ನು ಗೆದ್ದು ಬೀಗಿದ್ದಾರೆ.

Aug 09, 2024, 11:19 pm IST

ಸತತ ಅಂಕಗಳನ್ನು ಪಡೆಯುವ ಮೂಲಕ ಭಾರತಕ್ಕೆ ಕಂಚಿನ ಪದಕ ಗೆಲ್ಲುವ ಸನಿಹಕ್ಕೆ ಅಮನ್ ಸಾಗುತ್ತಿದ್ದಾರೆ.

Aug 09, 2024, 11:17 pm IST

ಅಮನ್ ಅವರ ಮೂಗಿಗೆ ಸ್ವಲ್ಪ ಗಾಯವಾಗಿದ್ದು, ರಕ್ತಸ್ರಾವವಾಗುತ್ತಿದೆ.

Aug 09, 2024, 11:13 pm IST

ಭಾರತಕ್ಕೆ 6ನೇ ಪದಕ ಗೆಲ್ಲಲು ಅಮನ್ ಸೆಹ್ರಾವತ್ ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ. ಸತತ ಅಂಕಗಳನ್ನು ಗಳಿಸುವ ಮೂಲಕ ಮುನ್ನಡೆ ಸಾಧಿಸಿದ್ದಾರೆ.

Aug 09, 2024, 10:43 pm IST

ಭಾರತದ ಕುಸ್ತಿಪಟು ಅಮನ್ ಸೆಹ್ರಾವತ್ ಪುರುಷರ ಫ್ರೀಸ್ಟೈಲ್ 57 ಕೆಜಿ ಕುಸ್ತಿಯ ಸೆಮಿ-ಫೈನಲ್ ಪಂದ್ಯದಲ್ಲಿ ಸೋತ ನಂತರ ಇಂದು ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲು ರೆಡಿಯಾಗಿದ್ದಾರೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಪಂದ್ಯ ಆರಂಭವಾಗಲಿದೆ.

Aug 09, 2024, 6:15 pm IST

ಪ್ಯಾರಿಸ್ ಒಲಿಂಪಿಕ್ಸ್ 2024ರ ಸಮಾರೋಪ ಸಮಾರಂಭಕ್ಕೆ ಭಾರತ ಧ್ವಜಧಾರಿಗಳಾಗಿ ಮನು ಭಾಕರ್ ಜೊತೆಗೆ ಹಾಕಿ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಅವರನ್ನು ಐಒಎ ಘೋಷಿಸಿದೆ.

Aug 09, 2024, 4:20 pm IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ದೂರವಾಣಿ ಕರೆ ಮೂಲ ಗೋಲ್ಡನ್ ಬಾಯ್ ಜೊತೆ ಪ್ರಧಾನಿ ಮಾತನಾಡಿದ್ದಾರೆ.

Aug 09, 2024, 2:21 pm IST

ಪ್ಯಾರಿಸ್ ಒಲಿಂಪಿಕ್ಸ್‌ 2024ರ ಪದಕ ಪಟ್ಟಿಯಲ್ಲಿ ಪಾಕಿಸ್ತಾನ ಚಿನ್ನ ಗೆಲ್ಲುವ ಮೂಲಕ ಭಾರತವನ್ನು ಹಿಂದಿಕ್ಕಿದೆ.

Aug 09, 2024, 7:49 am IST

ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಪ್ರಕರಣದಲ್ಲಿ ಖ್ಯಾತ ವಕೀಲ ಹರೀಶ್ ಸಾಳ್ವೆ ಅವರು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಪರ ವಾದ ಮಂಡಿಸಲಿದ್ದಾರೆ.

Aug 09, 2024, 1:44 am IST

ಜಾವೆಲಿನ್ ಥ್ರೊ ವಿಭಾಗದ ಬಂಗಾರದ ಪದಕವನ್ನು ಪಾಕಿಸ್ತಾನ ಅರ್ಷದ್‌ ನದೀಮ್‌ ಪಡೆದು ಬೀಗಿದ್ದಾರೆ

Aug 09, 2024, 1:44 am IST

ನೀರಜ್‌ಗೆ ಬೆಳ್ಳಿ

ಭಾರತದ ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

Aug 09, 2024, 12:24 am IST

ನೀರಜ್‌ ಚೋಪ್ರಾ ಅವರು ಎರಡನೇ ಪ್ರಯತ್ನದಲ್ಲಿ 89.45 ಮೀಟರ್‌ ದೂರ ಜಾವೆಲಿನ್‌ ಎಸೆದು ಎಸೆದು ಮಿಂಚಿದ್ದಾರೆ.

Aug 09, 2024, 12:24 am IST

ಪಾಕಿಸ್ತಾನದ ಅರ್ಶದ್ ನದೀಮ್‌ ತಮ್ಮ ಎರಡನೇ ಪ್ರಯತ್ನದಲ್ಲಿ 92.97 ಮೀಟರ್‌ ದೂರ ಜಾವೆಲಿನ್‌ ಎಸೆದು ತಮ್ಮದೇ ದಾಖಲೆಯನ್ನು ಅಳಸಿ ಹಾಕಿದ್ದಾರೆ.

Aug 08, 2024, 11:45 pm IST

ಇನ್ನೇನು ಕೆಲವೇ ಕ್ಷಣಗಳಲ್ಲಿ ಭಾರತದ ಸ್ಟಾರ್ ಜಾವೆಲಿನ್‌ ಪಟು ನೀರಜ್‌ ಚೋಪ್ರಾ ಅಂಗಳ ಪ್ರವೇಶಿಸಲಿದ್ದಾರೆ.

Aug 08, 2024, 10:20 pm IST

ಅಮನ್‌ಗೆ ಸೆಮೀಸ್‌ನಲ್ಲಿ ಸೋಲು

ಅಮನ್‌ಗೆ ಸೆಮೀಸ್‌ನಲ್ಲಿ ಸೋಲು

ಭಾರತದ ಕುಸ್ತಿ ಪಟು ಅಮನ್ ಸೆಹ್ರಾವತ್ ಪ್ಯಾರಿಸ್‌ ಒಲಿಂಪಿಕ್ಸ್‌ ಫ್ರೀಸ್ಟೈಲ್ 57 ಕೆಜಿ ಪುರುಷರ ಸೆಮಿಫೈನಲ್‌ ಪಂದ್ಯದಲ್ಲಿ ಸೋಲು ಕಂಡಿದ್ದಾರೆ.

Aug 08, 2024, 7:25 pm IST

ಭಾರತಕ್ಕೆ ಕಂಚು

ಭಾರತಕ್ಕೆ ಕಂಚು

ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಭಾರತ 2-1 ಗೋಲುಗಳಿಂದ ಸ್ಪೇನ್‌ ತಂಡವನ್ನು ಮಣಿಸಿ, ಸತತ ಎರಡನೇ ಬಾರಿಗೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.

Aug 08, 2024, 7:24 pm IST

ಸ್ಪೇನ್‌ ತಂಡವನ್ನು ಮಣಿಸಿದ ಭಾರತಕ್ಕೆ ಒಲಿಂಪಿಕ್ಸ್‌ ಕಂಚು

Aug 08, 2024, 6:42 pm IST

ಭಾರತ ಹಾಕಿ ತಂಡದ ನಾಯಕ 2 ಗೋಲುಗಳನ್ನು ಹೊಡೆಯುವ ಮೂಲಕ ಅದ್ಭುತ ಆಟ ಪ್ರದರ್ಶಿಸುತ್ತಿದ್ದಾರೆ.

Aug 08, 2024, 6:30 pm IST

ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತೊಂದು ಗೋಲು ಹೊಡೆದು ಸ್ಪೇನ್ ವಿರುದ್ಧ 2-1 ರಲ್ಲಿ ಮುನ್ನಡೆ ಸಾಧಿಸಿದೆ.

Aug 08, 2024, 6:28 pm IST

ಕಂಚಿನ ಪದಕಕ್ಕಾಗಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಮತ್ತು ಸ್ಪೇನ್ ಹಾಕಿ ತಂಡಗಳು ಮೊದಲಾರ್ಧದ ಅಂತ್ಯಕ್ಕೆ 1-1 ರಲ್ಲಿ ಸಮಬಲಗೊಳಿಸಿವೆ.

Aug 08, 2024, 6:11 pm IST

ಭಾರತ ಹಾಕಿ ತಂಡದ ಮಾಜಿ ನಾಯಕ ಮತ್ತು ಅನುಭವಿ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

Aug 08, 2024, 3:39 pm IST

ಅಂಶು ಮಲಿಕ್ ಅವರು ಮಹಿಳೆಯರ 57 ಕೆಜಿ ವಿಭಾಗದ 1/8 ಎಲಿಮಿನೇಷನ್ ಪಂದ್ಯದಲ್ಲಿ ಅಮೆರಿಕಾದ ಹೆಲೆನ್ ಲೂಯಿಸ್ ಮಾರೊಲಿಸ್ ವಿರುದ್ಧ 2-7 ರಲ್ಲಿ ಸೋಲು ಕಂಡಿದ್ದಾರೆ.

Aug 08, 2024, 3:01 pm IST

ಭಾರತದ ಅಮನ್ ಸೆಹ್ರಾವತ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಕುಸ್ತಿಯಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ. ಪುರುಷರ ಫ್ರೀಸ್ಟೈಲ್ 57 ಕೆಜಿ ಕುಸ್ತಿಯಲ್ಲಿ ಅಮನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

Aug 08, 2024, 2:41 pm IST

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿರುವ ಭಾರತದ ನೀರಜ್ ಚೋಪ್ರಾ ಇಂದು ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಈ ಪಂದ್ಯವೂ ಭಾರತೀಯ ಕಾಲಮಾನ ರಾತ್ರಿ 11:55 ಕ್ಕೆ ಪ್ರಾರಂಭವಾಗಲಿದೆ.

Aug 08, 2024, 1:02 pm IST

ವಿನೇಶ್ ಫೋಗಟ್ ನಿವೃತ್ತಿಯ ನಿರ್ಧಾರದ ಬಗ್ಗೆ ಅವರು ಸಹೋದರಿಯರು ಮತ್ತು ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸಾಮಾಜಿಕ ಜಾಲತಾದಲ್ಲಿ ಪೋಸ್ಟ್ ಮಾಡುವ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ.

Aug 08, 2024, 12:02 pm IST

ಬುಧವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್ 2024 ರ ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್ ಓಟದ ಸ್ಪರ್ಧೆಯಲ್ಲಿ ಅವಿನಾಶ್ ಸೇಬಲ್ ಭಾರತಕ್ಕಾಗಿ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ನಲ್ಲಿ ಪದಕ ಗೆಲ್ಲಲು ವಿಫಲರಾದರು.

Aug 08, 2024, 10:47 am IST

ಭಾರತದ ಕುಸ್ತಿಪಟು ಆಂಟಿಮ್ ಪಂಗಲ್ ಅವರನ್ನು ಅಶಿಸ್ತಿನ ಕಾರಣಕ್ಕಾಗಿ ಪ್ಯಾರಿಸ್‌ನಿಂದ ಗಡೀಪಾರು ಮಾಡಲು ನಿರ್ಧರಿಸಲಾಗಿದೆ.

Aug 08, 2024, 1:41 am IST

ಅವಿನಾಶ್‌ಗೆ 11ನೇ ಸ್ಥಾನ

ಅವಿನಾಶ್‌ಗೆ 11ನೇ ಸ್ಥಾನ

3000 ಮೀಟರ್‌ ಪುರುಷರ ಸ್ಟಿಪಲ್ ಚೇಸ್‌ನಲ್ಲಿ ಭಾರತದ ಅವಿನಾಶ್‌ ಸಾಬ್ಳೆಗೆ ನಿರಾಸೆ. ನಿಗದಿತ ದೂರವನ್ನು 8:14.18 ಕ್ರಮಿಸಿ 11ನೇ ಸ್ಥಾನ ಪಡೆದ ಅವಿನಾಶ್‌.

Aug 08, 2024, 1:37 am IST

ಮೀರಾಗೆ ನಾಲ್ಕನೇ ಸ್ಥಾನ

ಮೀರಾಗೆ ನಾಲ್ಕನೇ ಸ್ಥಾನ

ಮೀರಾಬಾಯಿ ಚಾನು ಪದಕದ ಆಸೆಗೆ ಪೆಟ್ಟು: ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ಭಾರತದ ಸ್ಟಾರ್ ವೇಟ್‌ ಲಿಫ್ಟರ್‌

Aug 07, 2024, 11:58 pm IST

ಮೀರಾ ಬಾಯಿ ಚಾನು ಅವರು ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಕ್ಲೀನ್‌ ಆಂಡ್‌ ಜರ್ಕ್‌ನಲ್ಲಿ 88 ಕೆಜಿ ಎತ್ತಿದ್ದಾರೆ.

Aug 07, 2024, 10:52 pm IST

ಕೆಲವೇ ಕ್ಷಣಗಳಲ್ಲಿ ಅಂಗಳ ಪ್ರವೇಶಿಸಲಿರುವ ಭಾರತದ ಸ್ಟಾರ್ ವೇಟ್‌ ಲೀಫ್ಟರ್‌ ಮೀರಾ ಬಾಯಿ ಚಾನು. ಬುಧವಾರ ಮೀರಾ 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

Aug 07, 2024, 6:44 pm IST

ಪ್ಯಾರಿಸ್ ಒಲಿಂಪಿಕ್ಸ್‌ನಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ನಂತರ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಯಾವುದೇ ಆಕ್ಷೇಪಣೆ ಏಕೆ ವ್ಯಕ್ತಪಡಿಸಲಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪ್ರಶ್ನಿಸಿದ್ದಾರೆ.

Aug 07, 2024, 6:40 pm IST

ಅನರ್ಹಗೊಂಡ ವಿನೇಶ್ ಫೋಗಟ್ ಅವರು ನಿಜವಾದ ಚಾಂಪಿಯನ್ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೊಗಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಜೆಪಿ ನಡ್ಡಾ ಪೋಸ್ಟ್ ಮಾಡಿದ್ದಾರೆ.

Aug 07, 2024, 6:38 pm IST

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತ ಮಹಿಳಾ ಟೇಬಲ್ ಟೆನಿಸ್ ತಂಡದ ಅಭಿಯಾನ ಕೊನೆಗೊಂಡಿದೆ. ಭಾರತ ತಂಡವು ಜರ್ಮನಿ ವಿರುದ್ಧ 1-3 ಅಂತರದಲ್ಲಿ ಸೋತಿದೆ.

Aug 07, 2024, 4:46 pm IST

ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಕುಸ್ತಿಯಲ್ಲಿ ಭಾರತದ ಆಂಟಿಮ್ ಪಂಘಲ್ ಅವರು ಟರ್ಕಿಯ ಪ್ರತಿಸ್ಪರ್ಧಿ ಯೆಟ್ಗಿಲ್ ಝೆನೆಪ್ ವಿರುದ್ಧ 0-10 ಅಂತರದಿಂದ ಹೀನಾಯ ಸೋಲು ಕಂಡಿದ್ದಾರೆ.

Aug 07, 2024, 2:02 pm IST

ಮಹಿಳೆಯರ ಟೇಬಲ್ ಟೆನಿಸ್‌ ಕ್ವಾರ್ಟರ್ ಫೈನಲ್‌ನ ಮೊದಲ ಪಂದ್ಯದಲ್ಲಿ ಜರ್ಮನಿ ತಂಡವು ಭಾರತವನ್ನು ಸೋಲಿಸಿದೆ. ಭಾರತದ ಶ್ರೀಜಾ ಅಕುಲಾ ಮತ್ತು ಅರ್ಚನಾ ಗಿರೀಶ್ ಕಾಮತ್ ಮೊದಲ ಪಂದ್ಯದಲ್ಲಿ ಜರ್ಮನಿ ವಿರುದ್ಧ 5-11 ಅಂತರದಿಂದ ಸೋಲು ಕಂಡಿದ್ದಾರೆ.

Aug 07, 2024, 12:41 pm IST

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 50 ಕೆಜಿ ಮಹಿಳೆಯರ ಫ್ರೀ ಸ್ಟೈಲ್ ವಿಭಾಗದಲ್ಲಿ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದ ಭಾರತದ ವಿನೇಶ್‌ ಫೋಗಟ್‌ ಅವರಿಗೆ ಹಿನ್ನಡೆಯಾಗಿದೆ. ನಿಗದಿತ ತೂಕಕ್ಕಿಂತ ಹೆಚ್ಚಿನ ತೂಕ ಹೊಂದರಿಂದ ವಿನೇಶ್‌ ಆನರ್ಹಗೊಂಡಿದ್ದಾರೆ. ಮಹಿಳೆಯರ ಫ್ರಿ- ಸ್ಟೈಲ್‌ 50 ಕೆಜಿ ವಿಭಾಗದ ಫೈನಲ್‌ ಪಂದ್ಯ ಗುರುವಾರ ತಡರಾತ್ರಿ ನಡೆಯಬೇಕಿತ್ತು.

Aug 07, 2024, 8:53 am IST

ಮಹಿಳೆಯರ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಕಾಣಿಸಿಕೊಳ್ಳಲಿದೆ. ಭಾರತ ತಂಡದಲ್ಲಿ ಅರ್ಚನಾ ಕಾಮತ್, ಮನಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ತಯಾರಾಗಿದ್ದಾರೆ.

Aug 07, 2024, 7:13 am IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ತನ್ನ 12 ನೇ ದಿನವನ್ನು ಗಾಲ್ಫ್‌ ಕ್ರೀಡೆಯೊಂದಿಗೆ ಪ್ರಾರಂಭಿಸಲಿದೆ. ಗಾಲ್ಫ್‌ನಲ್ಲಿ ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್-1 ಸ್ಪರ್ಧೆಯಲ್ಲಿ ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಕಾಣಿಸಿಕೊಳ್ಳಲಿದ್ದಾರೆ.

Aug 07, 2024, 6:30 am IST

ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ್ದಾರೆ.

Aug 06, 2024, 10:02 pm IST

ಡಬ್ಲ್ಯುಎಫ್‌ಐ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ಪ್ರಮುಖ ಮುಖಗಳಲ್ಲಿ ಒಬ್ಬರಾದ ಬಜರಂಗ್ ಪುನಿಯಾ, ವಿನೇಶ್ ಫೋಗಟ್ ಖಂಡಿತವಾಗಿಯೂ ಒಲಿಂಪಿಕ್ ಪದಕವನ್ನು ಗೆಲ್ಲುವ ಮೂಲಕ ದೇಶವನ್ನು ಹೆಮ್ಮೆಪಡುವಂತೆ ಮಾಡುತ್ತಾರೆ ಎಂದು ಹೇಳಿದ್ದಾರೆ.

Aug 06, 2024, 6:47 pm IST

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಮಂಗಳವಾರ ಭಾರತ ಭಾರಿ ಹಿನ್ನಡೆ ಅನುಭವಿಸಿದೆ. ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ಕಿಶೋರ್ ಜೆನಾ ಪುರುಷರ ಜಾವೆಲಿನ್ ಎಸೆತದ ಅರ್ಹತಾ ಸುತ್ತಿನಿಂದ ಹೊರಬಿದ್ದಿದ್ದಾರೆ.

Aug 06, 2024, 5:54 pm IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಟೇಬಲ್ ಟೆನಿಸ್ ತಂಡದ ಅಭಿಯಾನ ಕೊನೆಗೊಂಡಿದೆ. ಚೀನಾ ಎದುರು ಭಾರತ 0-3 ಅಂತರದ ಸೋಲನ್ನು ಎದುರಿಸಬೇಕಾಯಿತು. ಭಾರತ ತಂಡವು 16 ರ ಸುತ್ತನ್ನು ಮೀರಿ ಮುನ್ನಡೆಯಲು ಸಾಧ್ಯವಾಗಲಿಲ್ಲ.

Aug 06, 2024, 5:52 pm IST

50 ಕೆಜಿ ವಿಭಾಗದ ಕುಸ್ತಿ ಸೆಮಿಫೈನಲ್ ಪಂದ್ಯದಲ್ಲಿ ವಿನೇಶ್ ಫೋಗಟ್ ಅವರು ಕ್ಯೂಬಾದ ಲೋಪೆಜ್ ಯುಸ್ನೆಲಿಸ್ ಗುಜ್ಮನ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯ ರಾತ್ರಿ 9:45ಕ್ಕೆ ನಡೆಯಲಿದೆ.

Aug 06, 2024, 3:30 pm IST

ಭಾರತದ ಗೋಲ್ಡನ್ ಬಾಯ್ ಖ್ಯಾತಿಯ ನೀರಜ್ ಚೋಪ್ರಾ ಅವರು ತಮ್ಮ ಮೊದಲ ಪ್ರಯತ್ನದಲ್ಲಿ 89.34 ಮೀಟರ್ ದೂರ ಎಸೆಯುವ ಮೂಲಕ ಪುರುಷರ ಜಾವೆಲಿನ್ ಥ್ರೋ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.

Aug 06, 2024, 3:24 pm IST

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ಕುಸ್ತಿಯಲ್ಲಿ ಭಾರತದ ವಿನೇಶ್ ಫೋಗಟ್ ಅವರು ಹಾಲಿ ಚಾಂಪಿಯನ್ ಜಪಾನ್‌ನ ಯುಯಿ ಸುಸಾಕಿ ಅವರನ್ನು ಸೋಲಿಸಿ ಸೆಮಿ-ಫೈನಲ್‌ ಪ್ರವೇಶಿಸಿದ್ದಾರೆ.

Aug 06, 2024, 1:02 pm IST

ಇಂದು ಭಾರತದ ಗೋಲ್ಡನ್ ಬಾಯ್ ಖ್ಯಾತಿಯ ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆತ ಸ್ಪರ್ಧೆಯ ಎ ಗುಂಪಿನ ಅರ್ಹತಾ ಸುತ್ತಿನಲ್ಲಿ ಲ್ಲಿ ಭಾಗವಹಿಸಲಿದ್ದಾರೆ. ಸ್ಪರ್ಧೆ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1:50 ಗಂಟೆಗೆ ಪ್ರಾರಂಭವಾಗಲಿದೆ.

Aug 06, 2024, 10:59 am IST

ಭಾರತದ ಓಟಗಾರ ಅವಿನಾಶ್ ಸೇಬಲ್ 3000 ಮೀಟರ್ ಸ್ಟೀಪಲ್‌ಚೇಸ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಇದರೊಂದಿಗೆ ಈ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Aug 06, 2024, 8:54 am IST

ಪ್ಯಾರಿಸ್ ಒಲಿಂಪಿಕ್ಸ್ 2024 ರ 11 ನೇ ದಿನದಂದು ಭಾರತೀಯ ಪುರುಷರ ಟೇಬಲ್ ಟೆನಿಸ್ ತಂಡವು ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ.

Aug 05, 2024, 11:01 pm IST

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತದ ಮಹಿಳಾ ಕುಸ್ತಿಪಟು ನಿಶಾ ದಹಿಯಾ ಅವರು ಅದ್ಭುತ ಪ್ರದರ್ಶನ ನೀಡಿದರು. ಆದರೆ ಮಹಿಳೆಯರ 68 ಕೆಜಿ ಫ್ರೀ-ಸ್ಟೈಲ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರ ಕೊರಿಯಾದ ಪಾಕ್ ಸೋಲ್ ಗಮ್ ವಿರುದ್ಧ ನಿಶಾ ದಹಿಯಾ ಗಾಯದ ಕಾರಣ ಸೋತರು

Aug 05, 2024, 7:32 pm IST

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತವು ತನ್ನ ನಾಲ್ಕನೇ ಪದಕವನ್ನು ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದೆ. ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನ ಕಂಚಿನ ಪದಕದ ಪಂದ್ಯದಲ್ಲಿ ಸೋತಿದ್ದಾರೆ.

Aug 05, 2024, 7:01 pm IST

ಭಾರತದ ಮಹಿಳಾ ಟೇಬಲ್ ಟೆನಿಸ್ ತಂಡವು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತನ್ನ ಅಭಿಯಾನವನ್ನು ಅಬ್ಬರದಿಂದ ಆರಂಭಿಸಿದೆ. ಸೌತ್ ಪ್ಯಾರಿಸ್ ಅರೆನಾದಲ್ಲಿ ಸೋಮವಾರ ನಡೆದ ರೋಚಕ 16ನೇ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ರೊಮೇನಿಯಾ ತಂಡವನ್ನು 3-2 ಗೋಲುಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

Aug 05, 2024, 7:01 pm IST

ಸ್ಕೀಟ್ ಮಿಶ್ರ ತಂಡ ಕಂಚಿನ ಪದಕದ ಸ್ಫರ್ಧೆಯಲ್ಲಿ ಭಾರತದ ಜೋಡಿ ಅನಂತಜಿತ್ ಸಿಂಗ್ ನರುಕಾ ಮತ್ತು ಮಹೇಶ್ವರಿ ಚೌಹಾಣ್ ಅವರು ಚೀನಾದ ಜಿಯಾಂಗ್ ಯುಟಿಂಗ್ ಮತ್ತು ಲಿಯು ಜಿಯಾಲಿನ್ ವಿರುದ್ಧ ಸೋಲು ಅನುಭವಿಸಿದ್ದಾರೆ.

Aug 05, 2024, 5:20 pm IST

ಅನಂತ್‌ಜಿತ್ ಸಿಂಗ್ ನರುಕಾ ಮತ್ತು ಮಹೇಶ್ವರಿ ಚೌಹಾಣ್ ಅವರು ಸ್ಕೀಟ್ ಮಿಶ್ರ ತಂಡ ಅರ್ಹತಾ ಸ್ಪರ್ಧೆಯ ಕಂಚಿನ ಪದಕಕ್ಕೆ ಪ್ರವೇಶಿಸಿದ್ದಾರೆ. ಈಗ ಭಾರತ ಮತ್ತೊಂದು ಕಂಚಿನ ಪದಕ ಗೆಲ್ಲುವ ಅವಕಾಶ ಹೊಂದಿದೆ.

Aug 05, 2024, 5:18 pm IST

2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಸೆಮಿಫೈನಲ್‌ನಲ್ಲಿ ವಿಶ್ವದ ನಂಬರ್-2 ಷಟ್ಲರ್‌ ವಿಕ್ಟರ್ ಅಕ್ಸೆಲ್ಸನ್ ಎದುರು ಭಾರತದ ಲಕ್ಷ್ಯ ಸೇನ್ ಅವರು ಸೋಲು ಕಂಡಿದ್ದರು. ಆದರೆ ಈ ಪಂದ್ಯದ ನಂತರ ಮಾತನಾಡಿರುವ ವಿಕ್ಟರ್ ಅಕ್ಸೆಲ್ಸನ್, ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಮುಂಬರುವ ಆವೃತ್ತಿ ಒಲಿಂಪಿಕ್ಸ್‌ನಲ್ಲಿ ಲಕ್ಷ್ಯಸೇನ್‌ ಚಿನ್ನದ ಪದಕ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದ್ದಾರೆ.

Aug 05, 2024, 12:11 pm IST

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತ ನಿರಂತರವಾಗಿ ಹಿನ್ನೆಡೆ ಅನುಭವಿಸುತ್ತಿದೆ. ಕಳೆದ ಮೂರು ದಿನಗಳಲ್ಲಿ ಭಾರತ ಯಾವುದೇ ಪದಕ ಗೆದ್ದಿಲ್ಲ.

Aug 05, 2024, 10:31 am IST

ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತ ಹಾಕಿ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೆಡ್ ಕಾರ್ಡ್ ಪಡೆದಿದ್ದ ಅಮಿತ್ ರೋಹಿದಾಸ್ ಒಂದು ಪಂದ್ಯಕ್ಕೆ ನಿಷೇಧಕ್ಕೊಳಗಾಗಿದ್ದಾರೆ.

Aug 05, 2024, 6:54 am IST

ಭಾರತದ ಅರ್ಚನಾ ಕಾಮತ್, ಮನಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ಟೇಬಲ್‌ ಟೆನಿಸ್‌ ಮಹಿಳೆಯರ ಈವೆಂಟ್‌ನ 16ರ ಸುತ್ತಿನಲ್ಲಿ ರೊಮೇನಿಯಾ ತಂಡವನ್ನು ಎದುರಿಸಲಿದ್ದಾರೆ.

Aug 04, 2024, 11:01 pm IST

ಭಾರತೀಯ ಕುಸ್ತಿಪಟುಗಳು ಸೋಮವಾರ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ. ನಿಶಾ ದಹಿಯಾ ಉಕ್ರೇನ್‌ನ ತಮ್ಮ ಎದುರಾಳಿಯ ವಿರುದ್ಧ ಆಡಲಿದ್ದಾರೆ.

Aug 04, 2024, 10:17 pm IST

ಭಾನುವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್ 2024ರ ಪುರುಷರ ಸಿಂಗಲ್ಸ್ ಟೆನಿಸ್ ಫೈನಲ್‌ನಲ್ಲಿ ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ಅವರು ಕಾರ್ಲೊಸ್‌ ಅಲ್ಕರಾಜ್ ಅವರನ್ನು 7-6, 7-6 ರಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಜೊಕೊವಿಕ್ ಒಲಿಂಪಿಕ್ ಇತಿಹಾಸದಲ್ಲಿ ಮೊದಲ ಚಿನ್ನದ ಪದಕ ಗೆದ್ದರು.

Aug 04, 2024, 8:21 pm IST

ಭಾರತದ ಮಹಿಳಾ ಶೂಟರ್‌ಗಳಾದ ಮಹೇಶ್ವರಿ ಚೌಹಾಣ್ ಮತ್ತು ರೈಜಾ ಧಿಲ್ಲೋನ್ ಮಹಿಳಾ ಸ್ಕೀಟ್ ಅರ್ಹತೆಯಲ್ಲಿ ಕ್ರಮವಾಗಿ 14 ಮತ್ತು 23 ನೇ ಸ್ಥಾನ ಪಡೆದರು. ಇದರೊಂದಿಗೆ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹೊರಗುಳಿದಿದ್ದಾರೆ.

Aug 04, 2024, 8:02 pm IST

ಶೂಟಿಂಗ್‌ನಲ್ಲಿ ಮತ್ತೊಮ್ಮೆ ಭಾರತ ಹಿನ್ನಡೆ ಅನುಭವಿಸಿದೆ. ಭಾರತದ ಶೂಟರ್‌ಗಳಾದ ಅನೀಶ್ ಭಾನ್ವಾಲಾ ಮತ್ತು ವಿಜಯವೀರ್ ಸಿಧು 25 ಮೀಟರ್ ರ‍್ಯಾಪಿಡ್‌ ಫೈರ್ ಪಿಸ್ತೂಲ್‌ನ ಪುರುಷರ ಈವೆಂಟ್ ಅರ್ಹತೆಯಲ್ಲಿ ಸೋತು ಹೊರಬಿದ್ದಿದ್ದಾರೆ.

Aug 04, 2024, 7:20 pm IST

ಪ್ಯಾರಿಸ್‌ ಒಲಿಂಪಿಕ್‌ನಲ್ಲಿ ಎರಡು ಕಂಚಿನ ಪದಕ ಗೆದ್ದಿರುವ ಭಾರತದ ಮನು ಭಾಕರ್ ಅವರು ಸಮಾರೋಪ ಸಮಾರಂಭದಲ್ಲಿ ಧ್ವಜಧಾರಿಯಾಗಲಿದ್ದಾರೆ.

Aug 04, 2024, 6:30 pm IST

ಗ್ರೇಟ್ ಬ್ರಿಟನ್ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದ ನಂತರ ಭಾರತ ಹಾಕಿ ತಂಡದ ಗೋಲ್ ಕೀಪರ್ ಶ್ರೀಜೇಶ್ ಭಾವುಕರಾದರು. ಶೂಟೌಟ್‌ನಲ್ಲಿ ಭಾರತ 4-2 ಅಂತರದಲ್ಲಿ ಜಯ ಸಾಧಿಸಿತು.

Aug 04, 2024, 5:47 pm IST

ಚೊಚ್ಚಲ ಒಲಿಂಪಿಕ್ಸ್‌ ಆಡುತ್ತಿರುವ ಭಾರತದ ಯುವ ಷಟ್ಲರ್ ಲಕ್ಷ್ಯ ಸೇನ್ ಅವರು ಸೋಮವಾರ ಕಂಚಿನ ಪದಕಕ್ಕಾಗಿ ಮಲೇಷ್ಯಾದ ಲೀ ಝಿ ಜಿಯಾ ಅವರನ್ನು ಎದುರಿಸಲಿದ್ದಾರೆ.

Aug 04, 2024, 5:25 pm IST

ಪ್ಯಾರಿಸ್ ಒಲಿಂಪಿಕ್ಸ್ 2024 ರ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಅವರು ಹಾಲಿ ಒಲಿಂಪಿಕ್ ಚಾಂಪಿಯನ್ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ 22-20, 21-14 ನೇರ ಸೆಟ್‌ಗಳಿಂದ ಸೋಲು ಕಂಡಿದ್ದಾರೆ.

Aug 04, 2024, 4:24 pm IST

ಭಾರತದ ಉದಯೋನ್ಮುಖ ಟೇಬಲ್ ಟೆನಿಸ್ ತಾರೆಗಳಾದ ಮಾನವ್ ಠಕ್ಕರ್ ಮತ್ತು ಅರ್ಚನಾ ಕಾಮತ್ ಅವರು ತಮ್ಮ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಆಡುವುದಕ್ಕೆ ರೆಡಿಯಾಗಿದ್ದಾರೆ.

Aug 04, 2024, 3:17 pm IST

ಪ್ಯಾರಿಸ್‌ ಒಲಿಂಪಿಕ್ಸ್‌ 2024ರಲ್ಲಿ ಭಾರತ ಪುರಷರ ಹಾಕಿ ತಂಡವು ಇಂಗ್ಲೆಂಡ್‌ ಸೋಲಿಸುವ ಮೂಲಕ ಸೆಮಫೈನಲ್‌ಗೆ ಆರ್ಹತೆ ಪಡೆದಿದೆ.

Aug 04, 2024, 1:44 pm IST

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಟಾರ್ ಜಾವೆಲಿನ್‌ ಎಸೆತಗಾರ ನೀರಜ್ ಚೋಪ್ರಾ ಅವರು ಆಗಸ್ಟ್ 6 ರಂದು ತಮ್ಮ ಅಭಿಯಾನ ಶುರು ಮಾಡಲಿದ್ದಾರೆ.

Aug 04, 2024, 1:38 pm IST

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಟಾರ್ ಜಾವೆಲಿನ್‌ ಎಸೆತಗಾರ ನೀರಜ್ ಚೋಪ್ರಾ ಅವರು ಆಗಸ್ಟ್ 6 ರಂದು ತಮ್ಮ ಅಭಿಯಾನ ಶುರು ಮಾಡಲಿದ್ದಾರೆ.

Aug 04, 2024, 12:17 pm IST

ಶನಿವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿಶ್ವದ ಅತ್ಯಂತ ವೇಗದ ಓಟಗಾರ್ತಿ ಸಿಕ್ಕಿದ್ದಾರೆ. ಸೇಂಟ್ ಲೂಸಿಯಾದ ಓಟಗಾರ್ತಿ ಜೂಲಿಯನ್ ಆಲ್ಫ್ರೆಡ್ ಅವರು 100 ಮೀಟರ್‌ ಓಟದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. 10.72 ಸೆಕೆಂಡುಗಳಲ್ಲಿ ಈ ಸಾಧನೆ ಮಾಡುವ ಮೂಲಕ ಸೇಂಟ್ ಲೂಸಿಯಾಗೆ ಮೊದಲ ಒಲಿಂಪಿಕ್ ಪದಕವನ್ನು ಗೆದ್ದಿದ್ದಾರೆ.

Aug 04, 2024, 10:25 am IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕದ ನಿರೀಕ್ಷೆಯಲ್ಲಿದ್ದ ಭಾರತದ ಬಾಕ್ಸರ್ ನಿಶಾಂತ್ ದೇವ್ ಶನಿವಾರ ರಾತ್ರಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಮೆಕ್ಸಿಕೊದ ಮಾರ್ಕೊ ವರ್ಡೆ ವಿರುದ್ಧ 4-1 ಅಂತರದಲ್ಲಿ ಸೋತರು. ಈ ಸೋಲಿನ ನಂತರ, ಮಾಜಿ ಬಾಕ್ಸರ್ ವಿಜೇಂದರ್ ಸಿಂಗ್ ಮತ್ತು ನಟ ರಣದೀಪ್ ಹೂಡಾ ಪಂದ್ಯದಲ್ಲಿ ಸ್ಕೋರಿಂಗ್ ಸಿಸ್ಟಮ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

Aug 04, 2024, 8:40 am IST

ಭಾರತ ಬಾಕ್ಸಿಂಗ್‌ನಲ್ಲಿ ಬಿಗ್‌ ಮ್ಯಾಚ್‌ ಆಡಲಿದೆ. ಮಹಿಳೆಯರ 57 ಕೆಜಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ಲೊವ್ಲಿನಾ ಬೊರ್ಗೊಹೈನಾ ಚೀನಾದ ಲಿ ಕುಯೆನ್ ಅವರನ್ನು ಎದುರಿಸಲಿದ್ದಾರೆ.

Aug 04, 2024, 7:58 am IST

ಪ್ಯಾರಿಸ್ ಒಲಿಂಪಿಕ್ಸ್ 2024 ರ 9 ನೇ ದಿನದಂದು ಭಾರತೀಯ ಹಾಕಿ ತಂಡವು ಕ್ವಾರ್ಟರ್ ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್ ಅನ್ನು ಎದುರಿಸಲಿದೆ.

Aug 04, 2024, 7:34 am IST

ಪ್ಯಾರಿಸ್‌ ಒಲಿಂಪಿಕ್ಸ್‌ 2024ರ 9ನೇ ದಿನ ನಾಲ್ಕನೇ ಸುತ್ತಿನ ಗಾಲ್ಫ್ ಪಂದ್ಯವು ನಡೆಯಲಿದೆ. ಭಾರತದ ಶುಭಂಕರ್ ಶರ್ಮಾ ಮತ್ತು ಗಗನ್ಜೀತ್ ಭುಲ್ಲರ್ ಅವರು ಪುರುಷರ ವೈಯಕ್ತಿಕ ಸ್ಟೋಕ್ ಪ್ಲೇ ರೌಂಡ್ 4 ರಲ್ಲಿ ಆಡಲಿದ್ದಾರೆ.

Aug 04, 2024, 6:41 am IST

ಪುರುಷರ 71 ಕೆಜಿ ವಿಭಾಗದ ಕ್ವಾರ್ಟರ್-ಫೈನಲ್‌ನಲ್ಲಿ ಸ್ಟಾರ್ ಬಾಕ್ಸರ್ ನಿಶಾಂತ್ ದೇವ್ ಸೋಲನುಭವಿಸಿದ್ದರಿಂದ ಭಾರತವು ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಮತ್ತೊಂದು ಪದಕವನ್ನು ಕಡಿಮೆ ಅಂತರದಿಂದ ಕಳೆದುಕೊಂಡಿದೆ.

Aug 03, 2024, 10:29 pm IST

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ವೇಟ್‌ಲಿಫ್ಟರ್ ಮೀರಾ ಬಾಯಿ ಚಾನು ಅವರಿಂದ ದೇಶವು ಪದಕದ ನಿರೀಕ್ಷೆಯಲ್ಲಿದೆ. ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

Aug 03, 2024, 10:01 pm IST

ಪ್ಯಾರಿಸ್ ಒಲಿಂಪಿಕ್ಸ್ 2024ರ ಪ್ರೀ ಕ್ವಾರ್ಟರ್ ಫೈನಲ್‌ನಿಂದ ಹೊರಬಿದ್ದ ನಂತರ ಭಾರತದ ಮಹಿಳಾ ಬಾಕ್ಸರ್ ನಿಖತ್ ಝರೀನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ.

Aug 03, 2024, 8:59 pm IST

ಸೈಲಿಂಗ್ ಪುರುಷರ ಡಿಂಘಿ ಸ್ಪರ್ಧೆಯಲ್ಲಿ ಭಾರತದ ವಿಷ್ಣು ಸರವಣನ್ ಅವರು ಓಟ 5 ರಲ್ಲಿ 21ನೇ ಮತ್ತು ರೇಸ್ 6 ರಲ್ಲಿ 13ನೇ ಸ್ಥಾನ ಪಡೆದರು. ಸದ್ಯ ವಿಷ್ಣು ಒಟ್ಟು 83 ಅಂಕಗಳೊಂದಿಗೆ 23ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಗಸ್ಟ್ 4 ರಂದು 7/8 ನೇ ರೇಸ್‌ಗಳಲ್ಲಿ ವಿಷ್ಣು ಭಾಗವಹಿಸಲಿದ್ದಾರೆ.

Aug 03, 2024, 7:55 pm IST

ಪುರುಷರ ಸ್ಕೀಟ್ ಅರ್ಹತಾ ಫೈನಲ್‌ ರೇಸ್‌ನಿಂದ ಭಾರತದ ಶೂಟರ್ ಅನಂತಜಿತ್ ಸಿಂಗ್ ಹೊರಗುಳಿದಿದ್ದಾರೆ. 5 ಸರಣಿಗಳಲ್ಲಿ 23, 22, 23, 24, 24 ಅಂಕಗಳೊಂದಿಗೆ 116 ಅಂಕಗಳನ್ನು ಗಳಿಸಿ 30 ಶೂಟರ್‌ಗಳ ಪೈಕಿ ಅವರು 24ನೇ ಸ್ಥಾನದಲ್ಲಿದ್ದಾರೆ.

Aug 03, 2024, 6:32 pm IST

ಭಾರತಕ್ಕೆ ಒಲಿಂಪಿಕ್ಸ್‌ ಶೂಟಿಂಗ್‌ನಲ್ಲಿ ಚಿನ್ನದ ಪದಕ ತಂದು ಕೊಟ್ಟಿರುವ ಅಭಿನವ್ ಬಿಂದ್ರಾ, ಪ್ಯಾರಿಸ್ ಕ್ರೀಡಾಕೂಟದಲ್ಲಿ ಮಿಂಚು ಹರಿಸಿದ ಮನು ಭಾಕರ್ ಅವರ ಅದ್ಭುತ ಪ್ರದರ್ಶನಕ್ಕಾಗಿ ಶ್ಲಾಘಿಸಿದ್ದಾರೆ.

Aug 03, 2024, 6:00 pm IST

ಆರ್ಚರಿ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ದೀಪಿಕಾ ಕುಮಾರಿ ಅವರು ಕೊರಿಯಾದ ನಾಮ್ ಸುಹ್ಯೆನ್ ವಿರುದ್ಧ 4-6 ಅಂತರದಲ್ಲಿ ಸೋತಿದ್ದಾರೆ. ಇದರೊಂದಿಗೆ ದೀಪಿಕಾ ಒಲಿಂಪಿಕ್ ಅಭಿಯಾನ ಅಂತ್ಯಗೊಂಡಿದೆ.

Aug 03, 2024, 5:24 pm IST

ಪ್ಯಾರಿಸ್ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ ಪುರುಷರ ಡಬಲ್ಸ್ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತು ಹೊರಬಿದ್ದ ಭಾರತದ ಸ್ಟಾರ್‌ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರ ಕೋಚ್ ಮಥಿಯಾಸ್ ಬೋ ತಮ್ಮ ಹುದ್ದೆಯಿಂದ ಕೆಳಗಿಲಿದ್ದಾರೆ. ಸದ್ಯಕ್ಕೆ ಬೇರೆಲ್ಲೂ ಕೋಚ್ ಹುದ್ದೆಯನ್ನು ವಹಿಸುವುದಿಲ್ಲ ಎಂದು ಮಥಿಯಾಸ್ ಬೋ ಹೇಳಿದ್ದಾರೆ.

Aug 03, 2024, 5:07 pm IST

ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದಲ್ಲಿ ಭಾರತ ಹಾಕಿ ತಂಡವು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಇದೀಗ ಪಂಜಾಬ್ ಸಿಎಂ ಭಗವಂತ್ ಮಾನೆ ಅವರು ಹರ್ಮನ್‌ಪ್ರೀತ್ ಸಿಂಗ್ ಅವರೊಂದಿಗೆ ಫೋನ್‌ ಕರೆ ಮಾಡಿ ಚಿನ್ನದ ಪದಕಕ್ಕೆ ಬೇಡಿಕೆ ಇಟ್ಟಿದ್ದಾರೆ.

Aug 03, 2024, 5:02 pm IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಭಾರತ ಹಾಕಿ ತಂಡವು ಕ್ವಾರ್ಟರ್‌ಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ . ಈ ಪಂದ್ಯವು ಆಗಸ್ಟ್ 4 (ಭಾನುವಾರ) ಭಾರತೀಯ ಕಾಲಮಾನ ಮಧ್ಯಾಹ್ನ 1:30 ಗಂಟೆಗೆ ಆರಂಭವಾಗಲಿದೆ.

Aug 03, 2024, 3:19 pm IST

ಮಹಿಳೆಯರ ಆರ್ಚರಿ ಪ್ರಿ ಕ್ವಾರ್ಟರ್ ಫೈನಲ್‌ನ 1/8 ಎಲಿಮಿನೇಷನ್ ಸುತ್ತಿನಲ್ಲಿ ಭಾರತದ ಭಜನ್ ಕೌರ್ ಇಂಡೋನೇಷ್ಯಾದ ದಯಂಡ ಚೊಯಿರುನಿಸಾ ವಿರುದ್ಧ 5-6 ಅಂತರದಲ್ಲಿ ಸೋಲು ಕಂಡಿದ್ದಾರೆ.

Aug 03, 2024, 2:50 pm IST

ಮಹಿಳೆಯರ ಆರ್ಚರಿ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ದೀಪಿಕಾ ಕುಮಾರಿ, ಜರ್ಮನಿಯ ಮೈಕೆಲ್ ಕ್ರೊಪೆನ್ ಅವರನ್ನು 6-4 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

Aug 03, 2024, 2:38 pm IST

ಪ್ಯಾರಿಸ್‌ ಕ್ರೀಡಾಕೂಟದಲ್ಲಿ ಕ್ವಾರ್ಟರ್ ಫೈನಲ್‌ಗೆ ಹೋಗುವ ಮೊದಲು ಭಾರತ ಹಾಕಿ ತಂಡವು ಬಿ ಗುಂಪಿನಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ.

Aug 03, 2024, 1:43 pm IST

ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಶನಿವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು 25 ಮೀಟರ್ ಪಿಸ್ತೂಲ್‌ನಲ್ಲಿ 4ನೇ ಸ್ಥಾನ ಗಳಿಸುವ ಮೂಲಕ ಪದಕ ಮಿಸ್‌ ಮಾಡಿಕೊಂಡಿದ್ದಾರೆ.

Aug 03, 2024, 11:52 am IST

ಪ್ಯಾರಿಸ್ ಒಲಿಂಪಿಕ್ಸ್‌ನ ಪದಕ ಪಟ್ಟಿಯಲ್ಲಿ ಭಾರತ 48ನೇ ಸ್ಥಾನದಲ್ಲಿದೆ. ಇಲ್ಲಿಯವರೆಗೆ ಭಾರತ ಒಂದೇ ಒಂದು ಚಿನ್ನದ ಪದಕವನ್ನು ಗೆದ್ದಿಲ್ಲ. ಭಾರತ ಮೂರು ಕಂಚಿನ ಪದಕ ಗೆದ್ದಿದೆ. ಇಂದು ಭಾರತದ ಪದಕದ ಸ್ಪರ್ಧೆಯಾಗಿದ್ದು, ಮನು ಭಾಕರ್ ಅವರಿಂದ ಭಾರತ ಚಿನ್ನದ ಪದಕದ ನಿರೀಕ್ಷೆಯಲ್ಲಿದೆ.

Aug 03, 2024, 11:17 am IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಮತ್ತೊಮ್ಮೆ ನಿರಾಸೆ ಎದುರಿಸಿದೆ. ಶಾಟ್ ಪುಟ್ ನಲ್ಲಿ ತಜಿಂದರ್ಪಾಲ್ ಸಿಂಗ್ ತೂರ್ ಮತ್ತು 5000 ಮೀಟರ್ ಓಟದಲ್ಲಿ ಪಾರುಲ್ ಚೌಧರಿ ಅರ್ಹತಾ ಸುತ್ತಿನಿಂದ ಹೊರಗುಳಿದಿದ್ದಾರೆ.

Aug 03, 2024, 10:21 am IST

ಭಾರತದ ನಿಶಾಂತ್ ದೇವ್ ಬಾಕ್ಸಿಂಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿಶಾಂತ್ ಪುರುಷರ 71 ಕೆಜಿ ಕ್ವಾರ್ಟರ್ ಫೈನಲ್‌ನಲ್ಲಿ ಮೆಕ್ಸಿಕೊದ ಅಲ್ವಾರೆಜ್ ಮಾರ್ಕೊ ಅಲೋನ್ಸೊ ವರ್ಡೆ ಅವರೊಂದಿಗೆ ಸೆಣಸಾಡಲಿದ್ದಾರೆ. ಈ ಪಂದ್ಯದಲ್ಲಿ ನಿಶಾಂತ್ ಗೆದ್ದರೆ ನೇರವಾಗಿ ಸೆಮಿಫೈನಲ್ ಪ್ರವೇಶಿಸಿದರೆ ಭಾರತಕ್ಕೆ ಮತ್ತೊಂದು ಪದಕ ಖಚಿತ.

Aug 03, 2024, 9:40 am IST

ಬ್ಯಾಡ್ಮಿಂಟನ್‌ ಸೆಮಿಫೈನಲ್‌ನಲ್ಲಿ ಒಲಿಂಪಿಕ್ ಚಾಂಪಿಯನ್ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಭಾರತದ ಲಕ್ಷ್ಯಸೇನ್ ಎದುರಿಸಲಿದ್ದಾರೆ.

Aug 03, 2024, 8:04 am IST

ಮಹಿಳೆಯರ ವೈಯಕ್ತಿಕ 1/8 ಎಲಿಮಿನೇಷನ್ ಸುತ್ತಿನಲ್ಲಿ ಭಾರತದ ದೀಪಿಕಾ ಕುಮಾರಿ ಮತ್ತು ಜರ್ಮನಿಯ ಮಿಚೆಲ್ ಕ್ರೊಪ್ಪೆನ್ ಅವರನ್ನು ಮತ್ತು ಭಜನ್ ಕೌರ್ ಇಂಡೋನೇಷ್ಯಾದ ದಯಾನಂದ ಕೊಯಿರುನಿಸಾ ಅವರನ್ನು ಎದುರಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ಇಬ್ಬರೂ ಗೆದ್ದರೆ ಫೈನಲ್‌ಗೆ ಪ್ರವೇಶ ಪಡೆಯಲಿದ್ದಾರೆ.

Aug 03, 2024, 6:25 am IST

ಪ್ಯಾರಿಸ್‌ ಒಲಿಂಪಿಕ್ಸ್‌ 2024ರಲ್ಲಿ ಭಾರತವು ತನ್ನ ಎಂಟನೇ ದಿನವನ್ನು ಶೂಟಿಂಗ್ ಈವೆಂಟ್‌ನೊಂದಿಗೆ ಪ್ರಾರಂಭಿಸಲಿದೆ. ಮನು ಭಾಕರ್ ಅವರು ಮೂರನೇ ಪದಕ ಗೆಲ್ಲುವ ಭರವಸೆಯೊಂದಿಗೆ ಭಾರತದ ಶೂಟಿಂಗ್‌ನಲ್ಲಿ 25 ಮೀಟರ್ ಪಿಸ್ತೂಲ್ ಮಹಿಳೆಯರ ಫೈನಲ್‌ ಆಡಲು ಸಜ್ಜಾಗಿದ್ದಾರೆ.

Aug 02, 2024, 10:49 pm IST

ಭಾರತದ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಭರ್ಜರಿ ಜಯ ದಾಖಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ಅವರನ್ನು ಸೋಲಿಸಿದರು.

Aug 02, 2024, 10:36 pm IST

ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ಆರ್ಚರಿ ಮಿಶ್ರ ತಂಡದ ಧೀರಜ್ ಬೊಮ್ಮದೇವ್ರಾ ಮತ್ತು ಅಂಕಿತಾ ಭಕ್ತ ಅವರು ಅಮೆರಿಕದ ಕೇಸಿ ಕೌಫೊಲ್ಡ್ ಮತ್ತು ಬ್ರಾಡಿ ಎಲಿಸನ್ ವಿರುದ್ಧ 6-2 ಅಂತರದಿಂದ ಸೋತರು.

Aug 02, 2024, 8:00 pm IST

ಆರ್ಚರಿ ಮಿಶ್ರ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಕೊರಿಯಾ ವಿರುದ್ಧ ಭಾರತ ತಂಡ ಸೋತಿದೆ. ಕೊರಿಯಾ 6-2ರಿಂದ ಭಾರತವನ್ನು ಸೋಲಿಸಿದೆ. ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಕಂಚಿನ ಪದಕಕ್ಕೆ ಪೈಪೋಟಿ ನಡೆಸಲಿದ್ದಾರೆ.

Aug 02, 2024, 6:40 pm IST

ಪ್ಯಾರಿಸ್ ಒಲಿಂಪಿಕ್ಸ್ 2024 ರ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ಹಾಕಿ ತಂಡವು ಆಸ್ಟ್ರೇಲಿಯಾವನ್ನು 3-2 ಗೋಲುಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ ಗರಿಷ್ಠ 2 ಗೋಲು ಗಳಿಸಿದರು.

Aug 02, 2024, 5:56 pm IST

ಭಾರತದ ಸ್ಟಾರ್ ಶೂಟರ್ ಮನು ಭಾಕರ್ 25 ಮೀಟರ್ ಪಿಸ್ತೂಲ್‌ನ ಫೈನಲ್‌ಗೆ ಪ್ರವೇಶಿಸಿದ್ದಾರೆ. ಭಾರತಕ್ಕೆ ಮತ್ತೊಂದು ಪದಕ ಗೆಲ್ಲಲು ಮನು ಭಾಕರ್‌ ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ.

Aug 02, 2024, 5:31 pm IST

ಭಾರತ ಹಾಕಿ ತಂಡ ಮತ್ತು ಆಸ್ಟ್ರೇಲಿಯಾ ಹಾಕಿ ತಂಡದ ನಡುವೆ ಪಂದ್ಯ ಆರಂಭವಾಗಿದೆ. ಇದು ಗ್ರೂಪ್ ಹಂತದ ಭಾರತಕ್ಕೆ ಕೊನೆಯ ಪಂದ್ಯವಾಗಿದೆ. ಭಾರತ ಈಗಾಗಲೇ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಅಭಿಷೇಕ್ ಮತ್ತು ಹರ್ಮನ್‌ಪ್ರೀತ್ ಅವರ ಗೋಲುಗಳ ನೆರವಿನಿಂದ ಭಾರತ 2-0 ಮುನ್ನಡೆ ಸಾಧಿಸಿದೆ.

Aug 02, 2024, 4:23 pm IST

ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ, ಮನು ಭಾಕರ್ ನಿಖರವಾದ ಸುತ್ತಿನ ನಂತರ ಮೂರನೇ ಸ್ಥಾನವನ್ನು ಪಡೆದುಕೊಂಡರೆ, ಇಶಾ ಸಿಂಗ್ 25 ಮೀಟರ್ ಪಿಸ್ತೂಲ್ ಅರ್ಹತೆಯಲ್ಲಿ 15 ನೇ ಸ್ಥಾನದಲ್ಲಿದ್ದಾರೆ.

Aug 02, 2024, 3:10 pm IST

ಶೂಟಿಂಗ್‌ನಲ್ಲಿ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಸ್ಪರ್ಧೆ ಮುಂದುವರಿದಿದೆ. ಮೊದಲ ಸರಣಿಯಲ್ಲಿ 100ಕ್ಕೆ 97 ಅಂಕಗಳನ್ನು ಗಳಿಸಿದ್ದಾರೆ.

Aug 02, 2024, 3:06 pm IST

ಭಾರತದ ಬಲರಾಜ್ ಪನ್ವಾರ್ ಪುರುಷರ ಸಿಂಗಲ್ಸ್ ಸ್ಕಲ್ಸ್ ವಿಭಾಗದ ಅಂತಿಮ ಡಿ ಪಂದ್ಯದಲ್ಲಿ 7:02.37 ಸಮಯದೊಂದಿಗೆ 5ನೇ ಸ್ಥಾನ ಪಡೆದರು. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ 2024ರ ರೋಯಿಂಗ್‌ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿತು.

Aug 02, 2024, 3:05 pm IST

ಪ್ಯಾರಿಸ್ ಒಲಿಂಪಿಕ್ಸ್‌ ಜೂಡೋದಲ್ಲಿ ಭಾರತದ ಅಭಿಯಾನ ಕೊನೆಗೊಂಡಿತು. ಮಹಿಳೆಯರ 78+ ಕೆಜಿ ತೂಕ ವಿಭಾಗದ 32ರ ಸುತ್ತಿನಲ್ಲಿ ಭಾರತದ ತುಲಿಕಾ ಮಾನ್ ಅವರು ಕ್ಯೂಬಾದ ಇಡಾಲಿಸ್ ಒರ್ಟಿಜ್ ವಿರುದ್ಧ 10-0 ಅಂತರದಲ್ಲಿ ಸೋಲು ಕಂಡಿದ್ದಾರೆ.

Aug 02, 2024, 2:23 pm IST

ಭಾರತದ ಆರ್ಚರಿ ಮಿಶ್ರ ತಂಡ ಕ್ವಾರ್ಟರ್ ಫೈನಲ್ ತಲುಪಿದೆ. ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರನ್ನೊಳಗೊಂಡ ಭಾರತದ ಆರ್ಚರಿ ಮಿಶ್ರ ತಂಡವು 16ರ ಸುತ್ತಿನ ಪಂದ್ಯದಲ್ಲಿ ಇಂಡೋನೇಷ್ಯಾದ ದೇಯಾನಂದ ಚೊಯಿರುನಿಸಾ ಮತ್ತು ಆರಿಫ್ ಪಂಗೆಸ್ತು ಅವರನ್ನು 5-1 ರಿಂದ ಸೋಲಿಸಿತು.

Aug 02, 2024, 11:15 am IST

ಪ್ಯಾರಿಸ್‌ ಒಲಿಂಪಿಕ್ಸ್‌ ಶೂಟಿಂಗ್‌ನಲ್ಲಿ ಮನು ಭಾಕರ್ ಇದುವರೆಗೆ ಎರಡು ಕಂಚಿನ ಪದಕ ಗೆದ್ದು ಸಂಚಲನ ಮೂಡಿಸಿದ್ದಾರೆ. ಇದೀಗ ತಮ್ಮ ಸ್ಪರ್ಧೆಯಲ್ಲಿ ಮೂರನೇ ಪದಕ ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ಆದರೆ ಉತ್ತಮ ಪ್ರದರ್ಶನವು ಅವರ ಪದಕದ ಬಣ್ಣವನ್ನು ಬದಲಾಯಿಸಬಹುದು.

Aug 01, 2024, 11:28 pm IST

ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಷಟ್ಲರ್ ಪಿವಿ ಸಿಂಧು ಅವರು ಚೀನಾದ ಷಟ್ಲರ್‌ ಹೀ ಬಿಂಗ್‌ಝಾವೊ ವಿರುದ್ಧ 19-21, 14-21 ಅಂತರದಲ್ಲಿ ಸೋಲುವ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ಹೊರ ಬಿದ್ದಿದ್ದಾರೆ.

Aug 01, 2024, 10:43 pm IST

ರೈಫಲ್ ಮತ್ತು ಪಿಸ್ತೂಲ್ ಸ್ಪರ್ಧೆಗಳಲ್ಲಿ ಅತ್ಯಂತ ಕಠಿಣ ಎಂದು ಪರಿಗಣಿಸಲಾದ 3 ಪಿ ಸ್ಪರ್ಧೆಯಲ್ಲಿ ಭಾರತೀಯರೊಬ್ಬರು ಒಲಿಂಪಿಕ್ ಪದಕ ಗೆದ್ದಿರುವುದು ಇದೇ ಮೊದಲು.

Aug 01, 2024, 9:08 pm IST

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟ ಸ್ವಪ್ನಿಲ್ ಸಿಂಗ್ ಅವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಇದರೊಂದಿಗೆ, ಸ್ವಪ್ನಿಲ್ ಸಿಂಗ್ ಯಶಸ್ಸಿಗೆ ಕುಟುಂಬ ಮತ್ತು ಕೋಚ್ ಅನ್ನು ಏಕನಾಥ್ ಶಿಂಧೆ ಅಭಿನಂದಿಸಿದ್ದಾರೆ.

Aug 01, 2024, 9:02 pm IST

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಭಾರತದ ಗಾಲ್ಫ್ ಆಟಗಾರ್ತಿ ದೀಕ್ಷಾ ದಾಗರ್ ಅವರು ಅಪಘಾತದಲ್ಲಿ ಗಾಯಗೊಂಡಿದ್ದು, ವೇಳಾಪಟ್ಟಿಯಂತೆ ತಮ್ಮ ಈವೆಂಟ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಮಂಗಳವಾರ ರಾತ್ರಿ ಇಂಡಿಯಾ ಹೌಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ದೀಕ್ಷಾ ದಾಗರ್ ಅವರಿದ್ದ ಕಾರು ಮತ್ತೊಂದು ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

Aug 01, 2024, 7:55 pm IST

ಇಂದು ರಾತ್ರಿ 8 ಗಂಟೆಗೆ ಆರಂಭವಾಗಲಿರುವ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಷಟ್ಲರ್ ಪಿವಿ ಸಿಂಧು ಅವರು ಚೀನಾದ ಆಟಗಾರ್ತಿಯ ವಿರುದ್ಧ ಆಡಲಿದ್ದಾರೆ. ಪಿವಿ ಸಿಂಧು ಅವರಿಂದ ಭಾರತ ಚಿನ್ನದ ಪದಕದ ನಿರೀಕ್ಷೆಯಲ್ಲಿದೆ.

Aug 01, 2024, 6:43 pm IST

ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್ ಪ್ರಿ- ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಇಬ್ಬರು ಸ್ಟಾರ್ ಷಟ್ಲರ್‌ಗಳಾದ ಎಚ್‌ಎಸ್ ಪ್ರಣೋಯ್ ಮತ್ತು ಲಕ್ಷ್ಯ ಸೇನ್ ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ಎಚ್‌ಎಸ್ ಪ್ರಣೋಯ್ ಅವರನ್ನು ಸೋಲಿಸಿದ ಲಕ್ಷ್ಯ ಸೇನ್ ಕ್ವಾರ್ಟರ್‌ಫೈನಲ್‌ ತಲುಪಿದ್ದಾರೆ. ಎಚ್‌ಎಸ್ ಪ್ರಣೋಯ್ ಪ್ಯಾರಿಸ್‌ ಒಲಿಂಪಿಕ್ಸ್ ಅಭಿಯಾನ ಕೊನೆಗೊಂಡಿದೆ.

Aug 01, 2024, 6:20 pm IST

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತದ ಸ್ಟಾರ್ ಶಟ್ಲರ್‌ಗಳಾದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರ ಅಭಿಯಾನ ಕೊನೆಗೊಂಡಿದೆ. ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಜೋಡಿಯನ್ನು ಮಲೇಷ್ಯಾ ಮಲೇಷ್ಯಾದ ಆರೋನ್ ಚಿಯಾ ಮತ್ತು ಸೊಹ್ ವುಯಿ ಅವರು ಸೋಲಿಸಿದರು.

Aug 01, 2024, 5:08 pm IST

2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಆರನೇ ದಿನ ಭಾರತವೂ ನಿರಾಸೆ ಅನುಭವಿಸಿದೆ. 20 ಕಿಮೀ ಓಟದ ಸ್ಪರ್ಧೆಯಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಹೊರಗುಳಿದಿದ್ದಾರೆ. ಟ್ರೊಕಾಡೆರೊದಲ್ಲಿ ನಡೆದ ಪುರುಷರ 20 ಕಿಮೀ ನಡಿಗೆ ಸ್ಪರ್ಧೆಯಲ್ಲಿ ಭಾರತದ ಓಟಗಾರರಾದ ವಿಕಾಸ್ ಸಿಂಗ್ 30 ನೇ ಮತ್ತು ಪರಮ್‌ಜಿತ್ ಸಿಂಗ್ ಬಿಶ್ತ್ 37 ನೇ ಸ್ಥಾನ ಪಡೆದಿದ್ದಾರೆ.

Aug 01, 2024, 4:32 pm IST

ಗುರುವಾರ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತ ದೊಡ್ಡ ಹಿನ್ನಡೆ ಅನುಭವಿಸಿತು. ಭಾರತದ ಸ್ಟಾರ್ ಬಾಕ್ಸರ್ ನಿಖತ್ ಜರೀನ್ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದಾರೆ.

Aug 01, 2024, 3:34 pm IST

ಭಾರತದ ಪುರುಷರ ಹಾಕಿ ತಂಡವು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಸೋಲ ಕಂಡಿದೆ. ಗುರುವಾರ ನಡೆದ ಪೂಲ್-ಬಿ ಗುಂಪು ಹಂತದ ಪಂದ್ಯದಲ್ಲಿ ಭಾರತವನ್ನು 2-1 ಗೋಲುಗಳಿಂದ ಬೆಲ್ಜಿಯಂ ಸೋಲಿಸಿತು.

Aug 01, 2024, 3:31 pm IST

ಭಾರತವು ಗುರುವಾರ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಮೂರನೇ ಪದಕವನ್ನು ಗೆದ್ದಿದೆ. ಪುರುಷರ 50 ಮೀಟರ್ ರೈಫಲ್ 3ಪಿ ಫೈನಲ್‌ನಲ್ಲಿ ಭಾರತದ ಸ್ಟಾರ್ ಶೂಟರ್ ಸ್ವಪ್ನಿಲ್ ಕುಸಾಲೆ ಕಂಚಿನ ಪದಕವನ್ನು ವಶಪಡಿಸಿಕೊಂಡಿದ್ದಾರೆ.

Aug 01, 2024, 1:30 pm IST

ಇಂದು, ಪ್ಯಾರಿಸ್ ಒಲಿಂಪಿಕ್ಸ್ 2024 ರ ಆರನೇ ದಿನವಾಗಿದ್ದು, ಭಾರತದ ಏಕೈಕ ಪದಕ ಭರವಸೆ ಸ್ವಪ್ನಿಲ್ ಕುಸಾಲೆ ಅವರ ಸ್ಪರ್ಧೆ ಪ್ರಾರಂಭವಾಗಿದೆ. ಪುರುಷರ 50 ಮೀಟರ್ ಏರ್ ರೈಫಲ್‌ನ ಫೈನಲ್‌ನಲ್ಲಿ ಸ್ವಪ್ನಿಲ್‌ ಸ್ಪರ್ಧಿಸುತ್ತಿದ್ದು, ಸರಣಿ 3 ರಲ್ಲಿ 10.5, 10.4, 10.4, 10.2, 10.4 ಅಂಕಗಳನ್ನು ಗಳಿಸಿ 5ನೇ ಸ್ಥಾನದಲ್ಲಿದ್ದಾರೆ.

Aug 01, 2024, 1:01 pm IST

ಇಂದು ನಡೆಯಲಿರುವ 50 ಮೀಟರ್ ರೈಫಲ್‌ನ ಫೈನಲ್‌ನಲ್ಲಿ ಶೂಟರ್ ಸ್ವಪ್ನಿಲ್ ಕುಸಾಲೆ ಅವರಿಂದ 140 ಕೋಟಿ ಭಾರತೀಯರು ಪದಕದ ನಿರೀಕ್ಷೆಯಲ್ಲಿದ್ದಾರೆ.

Aug 01, 2024, 12:36 pm IST

ಭಾರತದ ಸ್ಟಾರ್ ಬಾಕ್ಸರ್ ನಿಶಾಂತ್ ದೇವ್ ಪ್ಯಾರಿಸ್ ಒಲಿಂಪಿಕ್ಸ್ 2024 ರ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇದೀಗ ನಿಶಾಂತ್ ದೇವ್ ಭಾರತಕ್ಕೆ ಪದಕ ಪಡೆಯಲು ಕೇವಲ 1 ಗೆಲುವಿನ ಅಂತರದಲ್ಲಿದ್ದಾರೆ.

Aug 01, 2024, 10:56 am IST

ಇಂದು ಪ್ಯಾರಿಸ್ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಇಬ್ಬರು ಸ್ಟಾರ್ ಷಟ್ಲರ್‌ಗಳಾದ ಎಚ್‌ಎಸ್ ಪ್ರಣೋಯ್ ಮತ್ತು ಲಕ್ಷ್ಯ ಸೇನ್ ಮುಖಾಮುಖಿಯಾಗಲಿದ್ದಾರೆ.

Aug 01, 2024, 10:50 am IST

2024ರ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಬುಧವಾರದಂದು ಭಾರತದ ಅಗ್ರ ಪ್ಯಾಡ್ಲರ್‌ಗಳಾದ ಮನಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ಪ್ರೀ ಕ್ವಾರ್ಟರ್‌ ಫೈನಲ್‌ನಿಂದ ನಿರ್ಗಮಿಸುವ ಮೂಲಕ ಟೇಬಲ್ ಟೆನಿಸ್ ಸಿಂಗಲ್ಸ್ ಈವೆಂಟ್‌ನಲ್ಲಿ ತಮ್ಮ ಅಭಿಯಾನ ಕೊನೆಗೊಳಿಸಿದ್ದಾರೆ. ಶ್ರೀಜಾ ಅಕುಲಾ ಅವರು 16ನೇ ಸುತ್ತಿನಲ್ಲಿ ಚೀನಾದ ಸನ್ ಯಿಂಗ್ಶಾ ವಿರುದ್ಧ 4-0 ಅಂತರದಿಂದ ಸೋತರು.

Aug 01, 2024, 9:22 am IST

ಭಾರತ ಪುರುಷರ ಹಾಕಿ ತಂಡವು ತನ್ನ ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಆಡುಲಿದೆ. ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ವಿರುದ್ಧ ಭಾರತ ಗೆದ್ದಿದ್ದರೆ, ಅರ್ಜೆಂಟೀನಾ ವಿರುದ್ಧ 1-1 ಡ್ರಾ ಸಾಧಿಸಿದೆ. ಇದೀಗ ಬೆಲ್ಜಿಯಂ ತಂಡವನ್ನು ಸೋಲಿಸುವ ನಿರೀಕ್ಷೆಯಲ್ಲಿದೆ.

Aug 01, 2024, 8:21 am IST

ಭಾರತ ಇಂದು ಶೂಟಿಂಗ್‌ನಲ್ಲಿ ಪದಕ ಪಡೆಯುವ ನಿರೀಕ್ಷೆಯಿದೆ. ಪುರುಷರ 50 ಮೀಟರ್ ರೈಫಲ್ 3 ಸ್ಥಾನಗಳ ಫೈನಲ್ ಸ್ವಪ್ನಿಲ್ ಕುಸಾಲೆ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದಲ್ಲದೆ, ಮಹಿಳೆಯರ 50 ಮೀಟರ್ ರೈಫಲ್ 3 ಸ್ಥಾನದ ಅರ್ಹತೆಯಲ್ಲಿ ಸಿಫ್ಟ್ ಕೌರ್ ಸಮ್ರಾ ಮತ್ತು ಅಂಜುಮ್ ಮೌದ್ಗಿಲ್ ಆಡಲಿದ್ದಾರೆ.

Aug 01, 2024, 7:37 am IST

ಪುರುಷರ ಮತ್ತು ಮಹಿಳೆಯರ 20 ಕಿಮೀ ಓಟದ ನಡಿಗೆ ಸ್ಪರ್ಧೆಗಳಲ್ಲಿ ಭಾರತವು ಗುರುವಾರ ಅಥ್ಲೆಟಿಕ್ಸ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಭಾರತದ ಪರ ಪರಮ್‌ಜಿತ್ ಬಿಶ್ತ್, ಅಕ್ಷದೀಪ್ ಸಿಂಗ್ ಮತ್ತು ವಿಕಾಸ್ ಸಿಂಗ್ ಅವರ ಮೂವರು ಪುರುಷರ ಸ್ಪರ್ಧೆಯಲ್ಲಿ ಸ್ಪರ್ಧಿಸಲಿದ್ದು, ಪ್ರಿಯಾಂಕಾ ಕೂಡ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.

Aug 01, 2024, 6:28 am IST

ಬ್ಯಾಡ್ಮಿಂಟನ್‌ನಲ್ಲಿ ಸ್ಟಾರ್‌ ಆಟಗಾರರಾದ ಎರಡು ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿವಿ ಸಿಂಧು ಹಾಗೂ ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌ ಅವರು ಗುರುವಾರ ಅಖಾಡಕ್ಕೆ ಇಳಿಯಲಿದ್ದಾರೆ. ಈ ಇಬ್ಬರು ಆಟಗಾರರು ಪದಕದ ಆಸೆಯನ್ನು ಚಿಗುರಿಸಿದ್ದಾರೆ. ಗುರುವಾರ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತೀಯ ಬ್ಯಾಡ್ಮಿಂಟನ್‌ ಆಟಗಾರರು ಗೆಲ್ಲುವ ಭರವಸೆಯನ್ನು ಹೊಂದಿದ್ದಾರೆ.

Jul 31, 2024, 11:51 pm IST

ಕರ್ನಾಟಕದ ಮಹಿಳಾ ಅಥ್ಲೀಟ್ ಮಾಚೆಟ್ಟಿರ ರಾಜು ಪೂವಮ್ಮ ಕೂಡ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಮಂಗಳೂರಿನಿಂದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಅಥ್ಲೀಟ್ ಪೂವಮ್ಮ 4X400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

Jul 31, 2024, 9:55 pm IST

ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಅವರ ಒಲಿಂಪಿಕ್ ಅಭಿಯಾನ ಕೊನೆಗೊಂಡಿದೆ. ಅದ್ಭುತ ಆಟದ ಹೊರತಾಗಿಯೂ ಮಹಿಳೆಯರ ವೈಯಕ್ತಿಕ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲನ್ನು ಎದುರಿಸಬೇಕಾಯಿತು.

Jul 31, 2024, 9:37 pm IST

ಪ್ಯಾರಿಸ್‌ ಒಲಿಂಪಿಕ್ಸ್‌ 2024ರಲ್ಲಿ ಮಹಿಳಾ ಟ್ರ್ಯಾಪ್ ಅರ್ಹತೆಯಲ್ಲಿ ಭಾರತದ ಶೂಟರ್‌ಗಳಾದ ರಾಜೇಶ್ವರಿ ಕುಮಾರಿ ಮತ್ತು ಶ್ರೇಯಸಿ ಸಿಂಗ್ ಅವರ ಅಭಿಯಾನ ಕೊನೆಗೊಂಡಿದೆ. ರಾಜೇಶ್ವರಿ 22ನೇ ಸ್ಥಾನದಲ್ಲಿದ್ದರೆ, ಬಿಜೆಪಿ ಶಾಸಕಿ ಹಾಗೂ ಶೂಟರ್ ಶ್ರೇಯಸಿ 23ನೇ ಸ್ಥಾನದಲ್ಲಿದ್ದಾರೆ.

Jul 31, 2024, 8:58 pm IST

ಅನುಷ್ ಅಗರ್ವಾಲ್ ತಮ್ಮ ಮೊದಲ ಒಲಿಂಪಿಕ್ಸ್‌ನಲ್ಲಿ ಈಕ್ವೆಸ್ಟ್ರಿಯನ್ ವೈಯಕ್ತಿಕ ಅರ್ಹತಾ ಸುತ್ತಿನ ಇ ಗುಂಪಿನಲ್ಲಿ ಒಂಬತ್ತನೇ ಸ್ಥಾನ ಪಡೆಯುವ ಮೂಲಕ ಸ್ಪರ್ಧೆಯಿಂದ ಹೊರಗುಳಿದ್ದಾರೆ. ಅಗರ್ವಾಲ್ ಅವರು ದೇಶಕ್ಕೆ ಕೋಟಾವನ್ನು ಗಳಿಸಲು ಕನಿಷ್ಠ ಅರ್ಹತೆ ಅಗತ್ಯವನ್ನು (ಎಂಇಆರ್‌) ನಾಲ್ಕು ಬಾರಿ ಸಾಧಿಸಿದ ನಂತರ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟದ ಡ್ರೆಸ್ಸೇಜ್‌ನಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ.

Jul 31, 2024, 8:31 pm IST

ಪ್ಯಾರಿಸ್‌ ಒಲಿಂಪಿಕ್ಸ್‌ 2024ರಲ್ಲಿ ಭಾರತದ ಟೇಬಲ್ ಟೆನಿಸ್ ತಾರೆ ಶ್ರೀಜಾ ಅಕುಲಾ ಅವರು ವಿಶ್ವ ನಂ. 1 ಸನ್ ಯಿಂಗ್ಶಾ ವಿರುದ್ಧ ಪ್ರೀ ಕಾರ್ಟರ್ ಫೈನಲ್‌ನಲ್ಲಿ ಸೆಣಸಾಡಲಿದ್ದಾರೆ.

Jul 31, 2024, 6:28 pm IST

ಭಾರತದ ಟೇಬಲ್ ಟೆನಿಸ್ ತಾರೆ ಶ್ರೀಜಾ ಅಕುಲಾ ಅವರು ಸಿಂಗಾಪುರದ ಝೆಂಗ್ ಜಿಯಾನ್ ವಿರುದ್ಧ 4-2 ಅಂತರದ ಭರ್ಜರಿ ಜಯ ದಾಖಲಿಸುವ ಮೂಲಕ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

Jul 31, 2024, 6:25 pm IST

ಪ್ಯಾರಿಸ್ ಒಲಿಂಪಿಕ್ಸ್ 2024 ರ ಮಹಿಳೆಯರ 75 ಕೆಜಿ ಬಾಕ್ಸಿಂಗ್ ಪಂದ್ಯಾವಳಿಯ 16 ರ ಸುತ್ತಿನ ಪಂದ್ಯದಲ್ಲಿ ಸುನ್ನಿವಾ ಹಾಫ್‌ಸ್ಟೆಡ್ ವಿರುದ್ಧ ಭಾರತದ ಅಗ್ರ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಅಮೋಘ ಗೆಲುವು ದಾಖಲಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.

Jul 31, 2024, 5:45 pm IST

ಪ್ಯಾರಿಸ್‌ ಕ್ರೀಡಾಕೂಟದಲ್ಲಿ 2024ರಲ್ಲಿ ನಿರಾಶಾದಾಯಕ ಫಲಿತಾಂಶಗಳ ನಂತರ ಐದು ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕ ವಿಜೇತೆ ಹಾಗು ಭಾರತದ ಬ್ಯಾಡ್ಮಿಂಟನ್‌ ತಾರೆ ಅಶ್ವಿನಿ ಪೊನ್ನಪ್ಪ ಅವರು ತಮ್ಮ ಒಲಿಂಪಿಕ್‌ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.

Jul 31, 2024, 5:36 pm IST

ಭಾರತದ ಆರ್ಚರಿ ಮಹಿಳಾ ಕ್ರೀಡಾಪಟು ದೀಪಿಕಾ ಕುಮಾರಿ ಬುಧವಾರ ಎಸ್ಟೋನಿಯಾದ ಪ್ರತಿಸ್ಪರ್ಧಿ ಪರ್ನಾತ್ ರೀನಾ ಅವರನ್ನು ಸೋಲಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ 2024 ರ 1/8 ಎಲಿಮಿನೇಷನ್ ಸುತ್ತನ್ನು ತಲುಪಿದ್ದಾರೆ.

Jul 31, 2024, 4:06 pm IST

ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಈವೆಂಟ್‌ನ ಪ್ರಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ನೇರ ಸೆಟ್‌ಗಳಲ್ಲಿ ವಿಶ್ವದ ನಾಲ್ಕನೇ ಕ್ರಮಾಂಕದ ಆಟಗಾರ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ವಿರುದ್ಧ ಪ್ರಬಲ ಜಯ ಸಾಧಿಸಿದರು.

Jul 31, 2024, 3:15 pm IST

ಭಾರತದ ಸ್ಟಾರ್ ಶೂಟರ್ ಸ್ವಪ್ನಿಲ್ ಕುಸಾಲೆ ಬುಧವಾರ ನಡೆದ 50 ಮೀಟರ್ ಏರ್ ರೈಫಲ್ 3 ಪೊಸಿಷನ್‌ಗಳ ಅರ್ಹತಾ ಸ್ಪರ್ಧೆಯಲ್ಲಿ ಏಳನೇ ಸ್ಥಾನ ಪಡೆದು ಫೈನಲ್‌ನಲ್ಲಿ ಸ್ಥಾನ ಪಡೆದಿದ್ದಾರೆ.

Jul 31, 2024, 2:49 pm IST

ಲಕ್ಷ್ಯ ಸೇನ್ 8 ವರ್ಷಗಳ ನಂತರ ಒಲಿಂಪಿಕ್ಸ್ ನಾಕೌಟ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Jul 31, 2024, 2:48 pm IST

ಮೊದಲ ಗೇಮ್‌ನಲ್ಲಿ 2-8 ಅಂತರದಿಂದ ಹಿನ್ನಡೆಯಲ್ಲಿದ್ದ ಭಾರತ ಷಟ್ಲರ್ ಲಕ್ಷ್ಯ ಸೇನ್, ನಂತರದ ಎರಡೂ ಗೇಮ್‌ಗಳನ್ನು 21-18 ಮತ್ತು 21-12 ಅಂತರದಿಂದ ಗೆದ್ದುಕೊಂಡಿದ್ದಾರೆ.

Jul 31, 2024, 1:50 pm IST

ಕುಬಾದ ಎಸ್ಟೋನಿಯಾದ ಕ್ರಿಸ್ಟಿನ್ ಅವರನ್ನು ಸೋಲಿಸಿ ಪಿವಿ ಸಿಂಧು ಮಹಿಳೆಯರ ಸಿಂಗಲ್ಸ್ ರೌಂಡ್ 16ಕ್ಕೆ ಮುನ್ನಡೆದರು. ಪಿವಿ ಸಿಂಧು ಮೊದಲ ಗೇಮ್ ಅನ್ನು 21-5 ಮತ್ತು ನಂತರ 2 ಗೇಮ್ ಅನ್ನು 21-10 ಅಂತರದಿಂದ ಗೆದ್ದರು.

Jul 31, 2024, 1:44 pm IST

1928ರಲ್ಲಿ ಭಾರತ ಹಾಕಿ ತಂಡವು ತನ್ನ ಒಲಿಂಪಿಕ್ಸ್ ಪ್ರಯಾಣ ಪ್ರಾರಂಭಿಸಿತು ಮತ್ತು ಅಂದಿನಿಂದ ಹಿಂತಿರುಗಿ ನೋಡಲಿಲ್ಲ. ಇದುವರೆಗೆ ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನದ ಪದಕ ಸೇರಿದಂತೆ 12 ಪದಕಗಳನ್ನು ಗೆದ್ದಿದ್ದಾರೆ.

Jul 31, 2024, 1:27 pm IST

ಪ್ಯಾರಿಸ್ ಒಲಿಂಪಿಕ್ಸ್ 2024: ಪಿವಿ ಸಿಂಧು ಉತ್ತಮ ಆರಂಭವನ್ನು ಖಚಿತಪಡಿಸಿದ್ದಾರೆ ಮತ್ತು ಪ್ರಸ್ತುತ 1ನೇ ಗೇಮ್‌ನಲ್ಲಿ ಕುಬಾ ವಿರುದ್ಧ 8-0 ಅಂತರದ ಮುನ್ನಡೆ ಸಾಧಿಸಿದ್ದಾರೆ.

Jul 31, 2024, 12:52 pm IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಕಂಚಿನ ಪದಕ ಗೆದ್ದ ನಂತರ, ಭಾರತೀಯ ತಂಡವು ಸಾಕಷ್ಟು ಶಕ್ತಿಯನ್ನು ಪಡೆದುಕೊಂಡಿದೆ ಎಂದು ಭಾರತದ ಬ್ಯಾಡ್ಮಿಂಟನ್ ಆಟಗಾರ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹೇಳಿದ್ದಾರೆ.

Jul 31, 2024, 10:30 am IST

ಅಮಿತ್ ಪಂಗಲ್ ಅವರು ಸ್ಪರ್ಧೆಯಿಂದ ಹೊರಬಿದ್ದ ನಂತರ, ಪುರುಷರ ಬಾಕ್ಸಿಂಗ್ ತಂಡಕ್ಕೆ ಈಗ ನಿಶಾಂತ್ ದೇವ್ ಮೇಲೆ ಭರವಸೆ ಇಡಲಾಗಿದೆ. ನಿಶಾಂತ್ ದೇವ್ ತಮ್ಮ ಪುರುಷರ 71 ಕೆಜಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಬುಧವಾರದ ತಡರಾತ್ರಿಯಲ್ಲಿ ಆಡಲಿದ್ದಾರೆ.

Jul 31, 2024, 9:36 am IST

ಬುಧವಾರವು ಭಾರತೀಯ ಬಾಕ್ಸಿಂಗ್‌ಗೆ ಪ್ರಮುಖ ದಿನವಾಗಿದೆ. ಲೊವ್ಲಿನಾ ಬೊರ್ಗೊಹೈನ್ ಅವರು ಸಂಜೆ ತನ್ನ 16ನೇ ಸುತ್ತಿನ ಪಂದ್ಯವನ್ನು ಆಡಲಿದ್ದಾರೆ.

Jul 31, 2024, 9:15 am IST

ಒಲಿಂಪಿಕ್ಸ್‌ನಲ್ಲಿ ತಮ್ಮ ಮೂರನೇ ಬ್ಯಾಡ್ಮಿಂಟನ್ ಪದಕವನ್ನು ಗುರಿಯಾಗಿಟ್ಟುಕೊಂಡಿರುವ ಪಿವಿ ಸಿಂಧು ದಿನದ ಆರಂಭದಲ್ಲಿಯೇ ಮಹಿಳಾ ಸಿಂಗಲ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

Jul 31, 2024, 8:48 am IST

ಭಾರತದ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ಗುಂಪು ಹಂತದ ಪಂದ್ಯದಲ್ಲಿ ಜೊನಾಟನ್ ಕ್ರಿಸ್ಟಿ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯವನ್ನು ಎದುರಿಸಲಿದ್ದಾರೆ.

Jul 30, 2024, 9:57 pm IST

ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ದೇಶದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮನು ಭಾಕರ್ ಯಶಸ್ಸಿನ ನಂತರ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ. ಹರಿಯಾಣದ ಫರಿದಾಬಾದ್‌ನಲ್ಲಿ ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್ ಮತ್ತು ತಂದೆ ರಾಮಕಿಶನ್ ಭಾಕರ್ ಅವರನ್ನು ಡ್ರಮ್ ಬಾರಿಸುವ ಮೂಲಕ ಗೌರವಿಸಲಾಗಿದೆ.

Jul 30, 2024, 8:08 pm IST

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್‌ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಇಂಡೋನೇಷ್ಯಾ ಜೋಡಿಯನ್ನು ಎರಡು ನೇರ ಸೆಟ್ ಗಳಲ್ಲಿ ಸೋಲಿಸಿ ಗೆಲುವಿನ ಓಟ ಮುಂದುವರಿಸಿದ್ದಾರೆ. ಇಂಡೋನೇಷ್ಯಾ ಜೋಡಿಯನ್ನು 21-13, 21-13 ಅಂಕಗಳಿಂದ ಸೋಲಿಸಿದ ಅವರು ಕೇವಲ 40 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದರು.

Jul 30, 2024, 7:34 pm IST

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡ ಮತ್ತೊಮ್ಮೆ ಜಯಭೇರಿ ಬಾರಿಸಿದೆ. ಗ್ರೂಪ್ ಹಂತದ ಮೂರನೇ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿದ ಭಾರತ ಹಾಕಿ ತಂಡ ಕ್ವಾರ್ಟರ್ ಫೈನಲ್‌ಗೆ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.

Jul 30, 2024, 6:23 pm IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕರ್ನಾಲ್ ಬಾಕ್ಸರ್ ನಿಶಾಂತ್ ದೇವ್ ಅವರ ಮೊದಲ ಪಂದ್ಯ ಆಗಸ್ಟ್ 1 ರಂದು ನಡೆಯಲಿದೆ. ಭಾರತವು ನಿಶಾಂತ್ ದೇವ್ ಅವರಿಂದ ಚಿನ್ನದ ಭರವಸೆ ಹೊಂದಿದೆ ಎಂದು ಅವರ ಕೋಚ್ ರವಿ ಹೇಳಿದ್ದಾರೆ.

Jul 30, 2024, 5:24 pm IST

ಭಾರತ vs ಐರ್ಲೆಂಡ್: ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅಂತಿಮವಾಗಿ ಮೂರನೇ ನೇರ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದರು ಮತ್ತು ಅದು ಅವರ ಅಗಾಧ ಗುಣಮಟ್ಟವನ್ನು ಮತ್ತೊಮ್ಮೆ ತೋರಿಸುತ್ತದೆ.

Jul 30, 2024, 5:04 pm IST

7 ತಿಂಗಳು ಗರ್ಭಿಣಿಯಾಗಿದ್ದರೂ ಈಜಿಪ್ಟ್‌ನ ಫೆನ್ಸರ್ ಸ್ಪರ್ಧಿ ನಾಡಾ ಹಫೀಜ್ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ ಭಾಗವಹಿಸಿದ್ದರು. ತನ್ನ ಮೊದಲ ಪಂದ್ಯವನ್ನು ಯುಎಸ್‌ಎಯ ಎಲಿಜಬೆತ್ ಟಾರ್ಟಕೋವ್ಸ್ಕಿ ವಿರುದ್ಧ ನಾಡಾ ಹಫೀಜ್ ಗೆದ್ದಿದ್ದು, ಎರಡನೇ ಪಂದ್ಯದಲ್ಲಿ ಕೊರಿಯಾದ ಫೆನ್ಸರ್ ಜಿಯೋನ್ ಹೇಯಂಗ್‌ ವಿರುದ್ಧ 7-15 ಅಂಕಗಳ ಅಂತರದಿಂದ ಸೋಲು ಕಂಡಿದ್ದಾರೆ.

Jul 30, 2024, 4:53 pm IST

ಪ್ಯಾರಿಸ್ ಒಲಿಂಪಿಕ್ಸ್ ಸಂಘಟಕರು ಸೋಮವಾರ ಕ್ರೀಡಾಕೂಟದಲ್ಲಿ ಆಹಾರ ಮತ್ತು ಸಾರಿಗೆಯ ಬಗ್ಗೆ ಹಲವಾರು ನಿಯೋಗಗಳು ದೂರು ನೀಡಿದ ನಂತರ, ಆರಂಭಿಕ ಸಮಸ್ಯೆಗಳನ್ನು ಪರಿಹರಿಸಿದ್ದಾರೆ ಎಂದು ಹೇಳಿದರು.

Jul 30, 2024, 4:29 pm IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೋವಿಡ್-19 ಧನಾತ್ಮಕ ಪರೀಕ್ಷೆ ನಡೆಸಿದ ನಂತರ, ಮಹಿಳೆಯರ 1,500 ಮೀಟರ್ ಫ್ರೀಸ್ಟೈಲ್‌ನಲ್ಲಿ ಸ್ಪರ್ಧಿಯಾಗಿರುವ ಆಸ್ಟ್ರೇಲಿಯಾದ ಲಾನಿ ಪ್ಯಾಲಿಸ್ಟರ್ ಈವೆಂಟ್‌ನಿಂದ ಹಿಂದೆ ಸರಿದಿದ್ದಾರೆ.

Jul 30, 2024, 3:23 pm IST

ಒಲಿಂಪಿಕ್ ಕಂಚಿನ ಪದಕ ವಿಜೇತ ಸರಬ್ಜೋತ್ ಸಿಂಗ್ ಅವರ ತಂದೆ ಜತೀಂದರ್ ಸಿಂಗ್ ಸಹನ್ಸ್ವೆರಾಲ್ ಅವರು ತಮ್ಮ ಮನೆಗೆ ಹೋಗುವ ಮೊದಲು, ತಮ್ಮ ಮಗನ ಒಲಿಂಪಿಕ್ ಪದಕ ಯಶಸ್ಸನ್ನು ಆಚರಿಸಲು ಗುರುದ್ವಾರಕ್ಕೆ ಭೇಟಿ ನೀಡಿದರು ಮತ್ತು ಲಂಗರ್ (ಸಮುದಾಯ ಊಟ)ನಲ್ಲಿ ಪಾಲ್ಗೊಳ್ಳುವುದಾಗಿ ಬಹಿರಂಗಪಡಿಸಿದರು.

Jul 30, 2024, 3:22 pm IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

Jul 30, 2024, 1:57 pm IST

ನಾರ್ಮನ್ ಪ್ರಿಚರ್ಡ್ (ಅಥ್ಲೆಟಿಕ್ಸ್), ಸುಶೀಲ್ ಕುಮಾರ್ (ಕುಸ್ತಿ) ಮತ್ತು ಪಿವಿ ಸಿಂಧು (ಬ್ಯಾಡ್ಮಿಂಟನ್) ನಂತರ, ಮನು ಭಾಕರ್ ಅವರು ಬೇಸಿಗೆ ಕ್ರೀಡಾಕೂಟದಲ್ಲಿ ಭಾರತಕ್ಕಾಗಿ ಬಹು ಪದಕಗಳನ್ನು ಗೆದ್ದ ನಾಲ್ಕನೇ ಭಾರತೀಯರಾದರು.

Jul 30, 2024, 1:26 pm IST

ಮನು ಭಾಕರ್ ಅವರು ಒಲಿಂಪಿಕ್ ಗೇಮ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಅಥ್ಲೀಟ್ ಎಂಬ ಇತಿಹಾಸವನ್ನು ಬರೆದಿದ್ದಾರೆ.

Jul 30, 2024, 1:25 pm IST

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 2ನೇ ಪದಕ ಬಂದಿದೆ ಮತ್ತು ಒಲಿಂಪಿಕ್ ಕ್ರೀಡಾಕೂಟದಲ್ಲಿ ಮನು ಭಾಕರ್ ಅವರಿಗೆ ಇದು 2ನೇ ಪದಕವಾಗಿದೆ.

Jul 30, 2024, 1:09 pm IST

10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ ಪದಕ ಪಂದ್ಯ: ಎರಡನೇ ಸುತ್ತಿನಲ್ಲಿ ಕೊರಿಯಾದ 19.9 ಕ್ಕೆ ಹೋಲಿಸಿದರೆ, ಸರಬ್ಜೋತ್ ಸಿಂಗ್ ಮತ್ತು ಮನು ಭಾಕರ್ 21.2ರ ಸಂಯೋಜಿತ ಅಂಕಗಳೊಂದಿಗೆ ತಮ್ಮನ್ನು ತಾವು ಮುನ್ನಡೆಯಲ್ಲಿಟ್ಟುಕೊಂಡಿದ್ದಾರೆ.

Jul 30, 2024, 12:51 pm IST

ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ತನ್ನ ಸಹೋದರನಿಗೆ ವೀಸಾ ನೀಡುವಂತೆ ಫ್ರಾನ್ಸ್ ಸರ್ಕಾರವನ್ನು ವಿನಂತಿಸಿದ್ದಾರೆ.

Jul 30, 2024, 11:58 am IST

ಫ್ರಾನ್ಸ್ ಟೆನ್ನಿಸ್ ಡಬಲ್ಸ್ ಜೋಡಿ ರಾಫೆಲ್ ನಡಾಲ್ ಮತ್ತು ಕಾರ್ಲೋಸ್ ಅಲ್ಕರಾಝ್ ಮಂಗಳವಾರ, ಜುಲೈ 30ರಂದು ಟ್ಯಾಲನ್ ಗ್ರೀಕ್ಸ್‌ಪೂರ್ ಮತ್ತು ವೆಸ್ಲಿ ಕೂಲ್‌ಹೋಫ್ ವಿರುದ್ಧ ಆಡಲಿದ್ದಾರೆ.

Jul 30, 2024, 10:03 am IST

ಅಂಕಿತಾ ಭಕತ್, ಭಜನ್ ಕೌರ್ ಮತ್ತು ಧೀರಜ್ ಬೊಮ್ಮದೇವರ ಆರ್ಚರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Jul 30, 2024, 9:55 am IST

ಮಂಗಳವಾರದಂದು, ಬಾಕ್ಸಿಂಗ್‌ನಲ್ಲಿ ಅಮಿತ್ ಪಂಗಲ್ ಅವರು ಪುರುಷರ 51 ಕೆಜಿ ಮತ್ತು ಪ್ರೀತಿ ಪವಾರ್, ಜೈಸ್ಮಿನ್ ಲಂಬೋರಿಯಾ ಅವರು ಮಹಿಳೆಯರ 57 ಕೆಜಿ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

Jul 30, 2024, 9:55 am IST

ಭಾರತೀಯ ಪುರುಷರ ಹಾಕಿ ತಂಡವು ಮಂಗಳವಾರ ಐರ್ಲೆಂಡ್‌ ತಂಡವನ್ನು ಎದುರಿಸುವಾಗ ತಮ್ಮ ಕೆಲಸವನ್ನು ಕಡಿತಗೊಳಿಸಿದೆ. ಎರಡು ಗೆಲುವನ್ನು ಗಳಿಸಿದ ಆಸ್ಟ್ರೇಲಿಯಾ ಮತ್ತು ಬೆಲ್ಜಿಯಂ ತಂಡಗಳನ್ನು ಹೊಂದಿರುವ ಬಿ ಗುಂಪಿನಲ್ಲಿ ಅರ್ಜೆಂಟೀನಾ ವಿರುದ್ಧದ ಡ್ರಾ ತಪ್ಪಾದ ಫಲಿತಾಂಶ ಬಂದಿದೆ.

Jul 30, 2024, 9:20 am IST

ಮಂಗಳವಾರ, ಜುಲೈ 30ರ ಹೊಸ ದಿನದಂದು, ಭಾರತೀಯ ಬಾಕ್ಸರ್‌ಗಳು ಭವ್ಯ ವೇದಿಕೆಯಲ್ಲಿ ಪ್ರಭಾವ ಬೀರಲು ನೋಡುತ್ತಾರೆ. ಇನ್ನು ಆರ್ಚರಿ ಸ್ಪರ್ಧಿಗಳು ಹಿಂದಿನ ಫಲಿತಾಂಶಗಳನ್ನು ಸರಿದೂಗಿಸಲು ಎದುರು ನೋಡುತ್ತಾರೆ.

Jul 30, 2024, 7:54 am IST

ಮನು ಭಾಕರ್ ಅವರು ಭಾರತೀಯ ಕ್ರೀಡಾ ಇತಿಹಾಸದಲ್ಲಿ ತಮ್ಮ ಹೆಸರನ್ನು ಕೆತ್ತಿಸುವ ಸುವರ್ಣ ಅವಕಾಶವನ್ನು ಹೊಂದಿದ್ದಾರೆ. ಭಾರತದ ಯಾವುದೇ ಮಹಿಳಾ ಅಥ್ಲೀಟ್ ಒಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದಿಲ್ಲ.

Jul 30, 2024, 7:52 am IST

ಮಣಿಕಾ ಬಾತ್ರಾ ಅವರು ಸೋಮವಾರ, ಜುಲೈ 29ರಂದು ಫ್ರಾನ್ಸ್‌ನ ಪ್ರಿತಿಕಾ ಪವಾಡೆ ಅವರನ್ನು 4-0 (11-9, 11-6, 11-9, 11-7) ಅಂತರದಿಂದ 37 ನಿಮಿಷಗಳಲ್ಲಿ ಸೋಲಿಸಿದರು. ಮಣಿಕಾ ಮುಂದಿನ ಪಂದ್ಯದಲ್ಲಿ ಹಾಂಕಾಂಗ್‌ನ ಝು ಚೆಂಗ್ಜು ಮತ್ತು ಜಪಾನ್‌ನ ಮಿಯು ಹಿರಾನೊ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

Jul 30, 2024, 7:51 am IST

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಮಣಿಕಾ ಬಾತ್ರಾ. ಒಲಿಂಪಿಕ್ ಪ್ರಿ-ಕ್ವಾರ್ಟರ್ ತಲುಪಿದ ಮೊದಲ ಭಾರತೀಯ ಟೇಬಲ್ ಟೆನ್ನಿಸ್ ಆಟಗಾರ್ತಿ ಎನಿಸಿದ್ದಾರೆ.

Jul 29, 2024, 11:06 pm IST

2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ ನಂತರ, ಅನುಭವಿ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಅವರು ಭಾರತೀಯ ಟೆನ್ನಿಸ್‌ನಿಂದ ನಿವೃತ್ತಿ ಘೋಷಿಸಿದರು.

Jul 29, 2024, 8:34 pm IST

ಭಾರತದ ಸ್ಟಾರ್ ಜೋಡಿಯಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಸೋಮವಾರ 2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು.

Jul 29, 2024, 8:32 pm IST

ನೊವಾಕ್ ಜೊಕೊವಿಕ್ ವಿರುದ್ಧ 1-6, 4-6 ಅಂತರದಿಂದ ಸೋತ ನಂತರ, ರಾಫೆಲ್ ನಡಾಲ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಟೆನ್ನಿಸ್ ಪುರುಷರ ಸಿಂಗಲ್ಸ್‌ನ ಮೂರನೇ ಸುತ್ತಿಗೆ ಮುನ್ನಡೆಯಲು ವಿಫಲರಾದರು.

Jul 29, 2024, 6:36 pm IST

ಪ್ಯಾರಿಸ್ ಒಲಿಂಪಿಕ್ಸ್ 2024: ಪುರುಷರ ಆರ್ಚರಿ ಟೀಮ್ ಈವೆಂಟ್‌ನಲ್ಲಿ ಭಾರತದ ಧೀರಜ್ ಬೊಮ್ಮದೇವರ, ರಮೇಶ್ ಜಾಧವ್ ಮತ್ತು ತರುಣ್‌ದೀಪ್ ರೈ ಕಣಕ್ಕಿಳಿಯಲಿದ್ದಾರೆ.

Jul 29, 2024, 6:19 pm IST

ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್: 2024ರ ಒಲಿಂಪಿಕ್ಸ್‌ನಲ್ಲಿ ಭಾರತದ ಲಕ್ಷ್ಯ ಸೇನ್ ತಮ್ಮ ಎರಡನೇ ಪಂದ್ಯದಲ್ಲಿ ಮೊದಲ ಅಧಿಕೃತ ಗೆಲುವು ದಾಖಲಿಸಿದರು. 43 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಬೆಲ್ಜಿಯಂನ ಜೂಲಿಯನ್ ಕರಾಗ್ಗಿ ಅವರನ್ನು 21-19, 21-14 ಅಂತರದಿಂದ ಸೋಲಿಸಿದರು.

Jul 29, 2024, 6:00 pm IST

ಪ್ಯಾರಿಸ್ ಒಲಿಂಪಿಕ್ಸ್ 2024: ಭಾರತ vs ಅರ್ಜೆಂಟೀನಾ ಹಾಕಿ ಪಂದ್ಯ 1-1 ಅಂತರದಲ್ಲಿ ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ. ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ನಾಲ್ಕನೇ ಕ್ವಾರ್ಟರ್‌ನ ಅಂತಿಮ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಭಾರತವನ್ನು ಸೋಲಿನಿಂದ ಪಾರು ಮಾಡಿದರು.

Jul 29, 2024, 5:57 pm IST

ಭಾರತ vs ಅರ್ಜೆಂಟೀನಾ ನಡುವಿನ ಹಾಕಿ ಪಂದ್ಯ 1-1 ಅಂತರದಲ್ಲಿ ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ.

Jul 29, 2024, 5:36 pm IST

ಪ್ಯಾರಿಸ್ ಒಲಿಂಪಿಕ್ಸ್ 2024: ಪುರುಷರ ಟ್ರ್ಯಾಪ್ ಅರ್ಹತಾ ಸುತ್ತಿನ ದಿನ-1: ಪೃಥ್ವಿರಾಜ್ ತೊಂಡೈಮಾನ್ ಮೂರು ಸುತ್ತಿನ ನಂತರ ಕೊನೆಯದಾಗಿ (30ನೇ ಸ್ಥಾನ) ಮುಗಿಸಿದರು.

Jul 29, 2024, 4:46 pm IST

ಪ್ಯಾರಿಸ್ ಒಲಿಂಪಿಕ್ಸ್ 2024: ಭಾರತ ಪುರುಷರ ಹಾಕಿ ತಂಡವು ತಮ್ಮ ಎರಡನೇ ಪೂಲ್ ಬಿ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು ಎದುರಿಸುತ್ತಿದೆ. ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ನಂತರ, ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ತಂಡವು ಹೆಚ್ಚಿನ ಆತ್ಮವಿಶ್ವಾಸದಲ್ಲಿದೆ.

Jul 29, 2024, 4:04 pm IST

ಪ್ಯಾರಿಸ್ ಒಲಿಂಪಿಕ್ಸ್ 2024: ಪುರುಷರ 10 ಮೀಟರ್ ರೈಫಲ್ ಫೈನಲ್‌ನಲ್ಲಿ ಭಾರತದ ಅರ್ಜುನ್ ಬಾಬುತಾಗೆ ಆಘಾತಕಾರಿ ಹಿನ್ನಡೆ ಅನುಭವಿಸಿದರು. ಭಾರತೀಯ ಶೂಟರ್ 4ನೇ ಸ್ಥಾನದಲ್ಲಿ ತಮ್ಮ ಪಯಣ ಮುಗಿಸಿದರು.

Jul 29, 2024, 2:32 pm IST

ಮಹಿಳೆಯರ ಬ್ಯಾಡ್ಮಿಂಟನ್ ಡಬಲ್ಸ್: ಭಾರತದ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಅವರು 11-21, 12-21 ಅಂತರದಲ್ಲಿ 4ನೇ ಶ್ರೇಯಾಂಕದ ಜಪಾನ್‌ನ ನಮಿ/ಚಿಹಾರು ವಿರುದ್ಧ ನೇರ ಗೇಮ್‌ಗಳಲ್ಲಿ ಸೋತಿದ್ದಾರೆ.

Jul 29, 2024, 1:21 pm IST

10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಕಂಚಿನ ಪದಕ ಸುತ್ತಿಗೆ ತಲುಪಿದ್ದಾರೆ. ರಿದಮ್ ಸಾಂಗ್ವಾನ್ ಮತ್ತು ಅರ್ಜುನ್ ಸಿಂಗ್ 10ನೇ ಸ್ಥಾನ ಪಡೆದರು.

Jul 29, 2024, 1:08 pm IST

ಬ್ಯಾಡ್ಮಿಂಟನ್‌ನ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಆಡಬೇಕಿತ್ತು. ಆದರೆ, ಅವರ ಎದುರಾಳಿಗಳ ಹಿಂಪಡೆಯುವಿಕೆ ನಂತರ, ಅವರು ಸೋಮವಾರ ಆಟವನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

Jul 29, 2024, 1:07 pm IST

ಅರ್ಜುನ್ ಬಾಬುತಾ ಅವರು 10 ಮೀಟರ್ ಏರ್ ರೈಫಲ್ ಪುರುಷರ ಫೈನಲ್‌ನಲ್ಲಿ ಭಾಗವಹಿಸುವ ಮೂಲಕ ಭಾರತಕ್ಕೆ ಎರಡನೇ ಪದಕವನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

Jul 29, 2024, 9:20 am IST

ಭಾರತ ಪುರುಷರ ಹಾಕಿ ತಂಡವು ತನ್ನ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 3-2 ಗೋಲಿನ ಅಂತರದಲ್ಲಿ ಸೋಲಿಸಿದ ನಂತರ, ಇಂದು ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.

Jul 29, 2024, 8:49 am IST

ಕ್ರೀಡಾಕೂಟದ 3ನೇ ದಿನದಂದು, ಯುವ ಆಟಗಾರ ಸರಬ್ಜೋತ್ ಸಿಂಗ್ ಅವರೊಂದಿಗೆ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಈವೆಂಟ್‌ನ ಅರ್ಹತಾ ಸುತ್ತಿಗೆ ಸೇರಲಿದ್ದಾರೆ. ಅದೇ ಸ್ಪರ್ಧೆಯಲ್ಲಿ ರಿದಮ್ ಸಾಂಗ್ವಾನ್ ಮತ್ತು ಅರ್ಜುನ್ ಸಿಂಗ್ ಭಾರತದ ಮತ್ತೊಂದು ಜೋಡಿಯಾಗಿದೆ.

Jul 29, 2024, 8:49 am IST

ಭಾನುವಾರ, ಜುಲೈ 28ರಂದು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ನಂತರ, ಭಾರತದ ಮನು ಭಾಕರ್ ಸೋಮವಾರ, ಜುಲೈ 29ರಂದು ಮತ್ತೆ ಆಟಕ್ಕೆ ಬರಲಿದ್ದಾರೆ.

Jul 28, 2024, 9:12 pm IST

ಭಾರತದ ಬ್ಯಾಡ್ಮಿಂಟನ್ ಆಟಗಾರ ಎಚ್‌ಎಸ್ ಪ್ರಣಯ್ ಅವರು ತಮ್ಮ ಗುಂಪು ಹಂತದ ಪಂದ್ಯಗಳ ಮೊದಲ ಪಂದ್ಯವನ್ನು ಗೆದ್ದಿದ್ದಾರೆ. ಎರಡನೇ ಗೇಮ್‌ನಲ್ಲಿ 21-18, 21-12 ಅಂತರದಲ್ಲಿ ಮೇಲುಗೈ ಸಾಧಿಸುವ ಮೂಲಕ ಪಂದ್ಯವನ್ನು ಮುಗಿಸಿದರು.

Jul 28, 2024, 6:58 pm IST

ಭಾರತದ ಸ್ಟಾರ್ ಟೇಬಲ್ ಟೆನ್ನಿಸ್ ಆಟಗಾರ್ತಿ ಮನಿಕಾ ಬಾತ್ರಾ ಗುಂಪು 64ರ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್‌ನ ಅನ್ನಾ ಹರ್ಸೆಟಿಯನ್ನು 4-1 ಅಂತರದಿಂದ ಸೋಲಿಸಿದರು.

Jul 28, 2024, 6:53 pm IST

ಮಹಿಳೆಯರ 50 ಕೆಜಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ನಿಖತ್ ಜರೀನ್ ಅವಿರೋಧ ನಿರ್ಧಾರದ ಮೂಲಕ ಜರ್ಮನಿಯ ಕ್ಲೋಸ್ಟ್ಜರ್ ಮ್ಯಾಕ್ಸಿ ಕ್ಯಾರಿನಾ ಅವರನ್ನು ಸೋಲಿಸಿದರು. ನಿಖತ್ ತನ್ನ ಜರ್ಮನ್ ಎದುರಾಳಿಯನ್ನು 5-0 ಅಂತರದಿಂದ ಸೋಲಿಸಿದರು.

Jul 28, 2024, 5:45 pm IST

ಮನು ಭಾಕರ್ ಅವರ ಕಂಚಿನ ಪದಕವು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕವಾಗಿದೆ.

Jul 28, 2024, 5:45 pm IST

ಮನು ಭಾಕರ್ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಆಗಿದ್ದಾರೆ.

Jul 28, 2024, 5:45 pm IST

ಪ್ಯಾರಿಸ್‌ನಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಕಂಚು ಗೆದ್ದಿದ್ದಾರೆ.

Jul 28, 2024, 9:48 am IST

ದೀಪಿಕಾ ಕುಮಾರಿ ನಾಯಕತ್ವದ ಭಾರತ ತಂಡ ಆರ್ಚರಿಯಲ್ಲಿ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಭಾರತ ಪರ ಅಂಕಿತಾ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಇರಲಿದ್ದಾರೆ.

Jul 28, 2024, 8:52 am IST

ಪ್ಯಾರಿಸ್ ಒಲಿಂಪಿಕ್ಸ್‌ನ ಎರಡನೇ ದಿನ ಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಆಕ್ಷನ್ ಪ್ಯಾಕ್ಡ್ ದಿನವಾಗಲಿದೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಜರ್ಮನಿಯ ರೋತ್ ಫ್ಯಾಬಿಯನ್ ಅವರನ್ನು ಪಿವಿ ಸಿಂಧು ಎದುರಿಸಲಿದ್ದಾರೆ. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣಯ್ ಕಾಣಿಸಿಕೊಳ್ಳಲಿದ್ದಾರೆ.

Jul 28, 2024, 8:51 am IST

ವಲರಿವನ್ ಎಲವೆನಿಲ್ ಮತ್ತು ರಮಿತಾ ರಮಿತಾ ಅವರು ಭಾರತಕ್ಕಾಗಿ 10 ಮೀಟರ್ ಏರ್ ರೈಫಲ್ ಶೂಟಿಂಗ್ ಮಹಿಳೆಯರ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.

Jul 27, 2024, 10:50 pm IST

ಬ್ಯಾಡ್ಮಿಂಡನ್ ಪಂದ್ಯವು ನಿರೀಕ್ಷೆಗಿಂತ ರೋಚಕವಾಗಿತ್ತು. ಸ್ಥಳೀಯ ಜನಸಮೂಹವು ಫ್ರೆಂಚ್ ಜೋಡಿಯಾದ ಲ್ಯೂಕಾಸ್ ಕಾರ್ವೀ ಮತ್ತು ರೊನಾನ್ ಲ್ಯಾಬರ್ ಅವರ ಹಿಂದೆ ಸಂಪೂರ್ಣವಾಗಿ ಬೆಂಬಲಕ್ಕಿತ್ತು. ಆದಾಗ್ಯೂ, ಸಾತ್ವಿಕ್ ಮತ್ತು ಚಿರಾಗ್ ತಮ್ಮ ಗ್ರೂಪ್ ಸಿ ಪಂದ್ಯದ ಆರಂಭಿಕ ಪಂದ್ಯದಲ್ಲಿ 21-17 ಅಂತರದ ಗೆಲುವಿಗಾಗಿ ಬಿಗಿ ಹಿಡಿದಿದ್ದರು.

Jul 27, 2024, 10:49 pm IST

ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ತಮ್ಮ ಆರಂಭಿಕ ಪಂದ್ಯವನ್ನು 21-17 ಅಂತರದಿಂದ ಗೆದ್ದರು.

Jul 27, 2024, 10:47 pm IST

ಸೈಮನ್ ಚೈಲ್ಡ್ ನ್ಯೂಜಿಲೆಂಡ್ ಸಮಬಲ ಸಾಧಿಸಿದಾಗ ಭಾರತ ತಂಡಕ್ಕೆ ಭೀತಿ ಕಾಡಿತ್ತು. ಆದರೆ ಹರ್ಮನ್‌ಪ್ರೀತ್ ಸಿಂಗ್ 2 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ತಡವಾಗಿ ಮಾಡಿದ ಗೋಲು ಭಾರತವನ್ನು ಗೆಲುವಿನತ್ತ ಮುನ್ನಡೆಸಿತು.

Jul 27, 2024, 10:46 pm IST

2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಹಾಕಿ ಪುರುಷರ ಪೂಲ್ ಬಿ ಪಂದ್ಯದಲ್ಲಿ ಭಾರತ 3-2 ಗೋಲುಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ.

Jul 27, 2024, 8:03 pm IST

ಇನ್ನು ಮಳೆಯಿಂದ ಮುಳುಗಿದ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಮಹಿಳೆಯರ ನೆಚ್ಚಿನ ಇಗಾ ಸ್ವಿಟೆಕ್ ನೇರ ಸೆಟ್‌ಗಳ ಗೆಲುವಿನೊಂದಿಗೆ ಚಿನ್ನಕ್ಕಾಗಿ ತನ್ನ ಆಟವನ್ನು ಪ್ರಾರಂಭಿಸಿದಳು.

Jul 27, 2024, 8:03 pm IST

ಶನಿವಾರದಂದು ಪುರುಷರ ಟೆನ್ನಿಸ್‌ನಲ್ಲಿ ಅಗ್ರ ಶ್ರೇಯಾಂಕದ ನೊವಾಕ್ ಜೊಕೊವಿಕ್ ತಮ್ಮ ಐದನೇ ಒಲಿಂಪಿಕ್ ಕ್ರೀಡಾಕೂಟವನ್ನು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ವಿರುದ್ಧ ಪ್ರಬಲ ಜಯದೊಂದಿಗೆ ಪ್ರಾರಂಭಿಸಿದರು.

Jul 27, 2024, 7:59 pm IST

ಭಾರತದ ಲಕ್ಷ್ಯ ಸೇನ್ ಅವರು ಕೆವಿನ್ ಕಾರ್ಡನ್ ವಿರುದ್ಧ ಆರಂಭಿಕ ಪಂದ್ಯವನ್ನು 21-9 ಅಂತರದಿಂದ ವಶಪಡಿಸಿಕೊಂಡರು. ಒಮ್ಮೆ ಲಕ್ಷ್ಯ ಸೇನ್ 4-0 ಮುನ್ನಡೆಗೆ ಬಂದರು, ನಂತರ ಅವರನ್ನು ತಡೆಯಲಾಗಲಿಲ್ಲ. ಲಕ್ಷ್ಯ ಸೇನ್ ಒಲಿಂಪಿಕ್ಸ್ ಚೊಚ್ಚಲ ಪದಕದ ಮೇಲೆ ತಮ್ಮ ಆಟದ ಮೇಲೆ ಕಣ್ಣಿಟ್ಟಿದ್ದಾರೆ.

Jul 27, 2024, 6:54 pm IST

ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಮತ್ತು ಶ್ರೀರಾಮ್ ಬಾಲಾಜಿ ಅವರ ಆರಂಭಿಕ ಸುತ್ತಿನ ಪಂದ್ಯಕ್ಕಾಗಿ ನಾವು ಕಾಯಬೇಕಾಗುತ್ತದೆ. ಕೋರ್ಟ್ 12ರಲ್ಲಿ ಮಹಿಳೆಯರ ಸಿಂಗಲ್ಸ್ ಪಂದ್ಯದ ನಂತರ ಇದನ್ನು ನಿಗದಿಪಡಿಸಲಾಗಿದೆ. ದುರದೃಷ್ಟವಶಾತ್, ರೋಲ್ಯಾಂಡ್ ಗ್ಯಾರೋಸ್‌ನ ಎಲ್ಲಾ ಹೊರಗಿನ ಕೋರ್ಟ್‌ಗಳಲ್ಲಿ ಮಳೆಯು ಆಟವನ್ನು ನಿಲ್ಲಿಸಿದೆ.

Jul 27, 2024, 5:48 pm IST

ಕುತೂಹಲಕಾರಿಯಾಗಿ, ಮನು ಭಾಕರ್ ಟೊಕಿಯೋ ಒಲಿಂಪಿಕ್ಸ್ 2020ರ 3 ಶೂಟಿಂಗ್ ಈವೆಂಟ್‌ಗಳಲ್ಲಿ ಭಾಗವಹಿಸಿದ್ದರು ಮತ್ತು ಅವುಗಳಲ್ಲಿ ಯಾವುದಕ್ಕೂ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಮನು ಭಾಕರ್ ಅವರಿಂದ ಒಂದು ದೊಡ್ಡ ವಿಮೋಚನೆ ನಿರೀಕ್ಷಿಸಲಾಗಿದೆ.

Jul 27, 2024, 5:48 pm IST

ಭಾರತದ ಮನು ಭಾಕರ್ ಮಹಿಳೆಯರ 10 ಮೀ ಏರ್ ಪಿಸ್ತೂಲ್‌ನ ಅಂತಿಮ ಸುತ್ತಿಗೆ ಅರ್ಹತೆ ಪಡೆದರು. 580-27x ಅಂಕಗಳೊಂದಿಗೆ 3ನೇ ಸ್ಥಾನವನ್ನು ಪಡೆದರು.

Jul 27, 2024, 4:28 pm IST

ಪ್ಯಾರಿಸ್ ಒಲಿಂಪಿಕ್ಸ್ 2024: ಶೂಟಿಂಗ್‌ನ 10 ಮೀ ಏರ್ ಪಿಸ್ತೂಲ್ ಪುರುಷರ ಸ್ಪರ್ಧೆಯಲ್ಲಿ ಭಾರತದ ಸರಬ್ಜೋತ್ ಸಿಂಗ್ ಆಘಾತಕಾರಿ ವಿಸ್ಕರ್ ಮೂಲಕ ಅರ್ಹತೆಯನ್ನು ಕಳೆದುಕೊಂಡಿದ್ದಾರೆ. ಜರ್ಮನಿಯ ರಾಬಿನ್ ವಾಲ್ಟರ್ ಅವರೊಂದಿಗೆ ಸರಬ್ಜೋತ್ 577 ಅಂಕ ಗಳಿಸಿದರು. ಆದರೆ ಭಾರತೀಯನಿಗಿಂತ ರಾಬಿನ್ ವಾಲ್ಟರ್ ಒಂದು ಇನ್ನರ್-10 ಹೆಚ್ಚು ಹೊಡೆದಿದ್ದಾರೆ.

Jul 27, 2024, 4:22 pm IST

ಗೆಲುವಿನೊಂದಿಗೆ ಧನಾತ್ಮಕ ಟಿಪ್ಪಣಿಯಲ್ಲಿ ತಮ್ಮ ಪ್ರಚಾರವನ್ನು ಪ್ರಾರಂಭಿಸಲು ರೋಹನ್ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ಇಬ್ಬರೂ ಉತ್ಸುಕರಾಗಿದ್ದಾರೆ.

Jul 27, 2024, 4:22 pm IST

ಭಾರತದ ರೋಹನ್ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ಜೋಡಿ ಪುರುಷರ ಟೆನಿಸ್ ಡಬಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಫ್ರೆಂಚ್ ಜೋಡಿ ಎಡ್ವರ್ಡ್ ರೋಜರ್-ವ್ಯಾಸೆಲಿನ್ ಮತ್ತು ಫ್ಯಾಬಿಯನ್ ರೆಬೌಲ್ ಅವರನ್ನು ಭಾರತೀಯ ಕಾಲಮಾನ ಮಧ್ಯಾಹ್ನ 3:30 ಗಂಟೆಯಿಂದ ಎದುರಿಸುವ ಮೂಲಕ ಮುಂದಿನ ಆಕ್ಷನ್‌ನಲ್ಲಿದ್ದಾರೆ.

Jul 27, 2024, 3:03 pm IST

ಕ್ರೀಡಾಕೂಟದ ಮೊದಲ ಚಿನ್ನದ ಪದಕ ಗೆದ್ದ ಚೀನಾ

Jul 27, 2024, 3:01 pm IST

ಚಟೌರೌಕ್ಸ್‌ನಲ್ಲಿ ನಡೆದ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಫೈನಲ್‌ನಲ್ಲಿ 16-12 ಅಂತರದಿಂದ ರಿಪಬ್ಲಿಕ್ ಕೊರಿಯಾ ತಂಡವನ್ನು ಸೋಲಿಸಿದ ಚೀನಾ ಪ್ಯಾರಿಸ್ 2024ರ ಒಲಿಂಪಿಕ್ಸ್‌ನ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿತು.

Jul 27, 2024, 1:49 pm IST

ಭಾರತದ ಕ್ರೀಡಾಪಟುಗಳು ಒಲಿಂಪಿಕ್ಸ್ ಈವೆಂಟ್‌ನಲ್ಲಿ ಭಾಗವಹಿಸುವುದನ್ನು ನಾವು ಶೀಘ್ರದಲ್ಲೇ ನೋಡುತ್ತೇವೆ. ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ 10 ಮೀ ಏರ್ ಪಿಸ್ತೂಲ್ ಪುರುಷರ ಅರ್ಹತಾ ಸುತ್ತು ನಡೆಯುತ್ತದೆ. ಭಾರತದ ಅರ್ಜುನ್ ಸಿಂಗ್ ಚೀಮಾ ಮತ್ತು ಸರಜ್ಬೋತ್ ಸಿಂಗ್ ಈವೆಂಟ್‌ನಲ್ಲಿ ಭಾಗವಹಿಸಲಿದ್ದಾರೆ.

Jul 27, 2024, 1:19 pm IST

ಪ್ಯಾರಿಸ್ ಒಲಿಂಪಿಕ್ಸ್ 2024ರ 10 ಮೀ ಏರ್ ರೈಫಲ್‌ನ ಪದಕ ಸುತ್ತಿಗೆ ಚೀನಾ, ಕೊರಿಯಾ, ಜರ್ಮನಿ ಮತ್ತು ಕಝಾಕಿಸ್ತಾನ್ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಪದಕ ಸುತ್ತುಗಳನ್ನು ಪ್ರವೇಶಿಸಿದವು. ಭಾರತ ಮೊದಲ ತಂಡ 12ನೇ ಸ್ಥಾನ ಮತ್ತು ಭಾರತ ಎರಡನೇ ತಂಡ 6ನೇ ಸ್ಥಾನದಲ್ಲಿದೆ.

Jul 27, 2024, 1:09 pm IST

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ರಮಿತಾ ಮತ್ತು ಬಾಬುತಾ ಪದಕದ ಪಂದ್ಯಗಳ ಕಟ್-ಆಫ್‌ನಿಂದ 1.0 ಪಾಯಿಂಟ್‌ಗಳ ಕೊರತೆಯಿಂದಾಗಿ ಎರಡೂ ಭಾರತೀಯ ತಂಡಗಳು ಹೊರಹಾಕಲ್ಪಟ್ಟವು.

Jul 27, 2024, 1:07 pm IST

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಮಿಶ್ರ ತಂಡದ ಶೂಟರ್‌ಗಳು ಫೈನಲ್ ತಲುಪಲು ವಿಫಲರಾದರು.

Jul 27, 2024, 1:01 pm IST

ಪ್ಯಾರಿಸ್ ಒಲಿಂಪಿಕ್ಸ್ 2024: ಶೂಟಿಂಗ್‌ನಲ್ಲಿ ರಮಿತಾ-ಅರ್ಜುನ್ ಮತ್ತೆ ಟಾಪ್ 5ರಲ್ಲಿ. ರಮಿತಾ ಜಿಂದಾಲ್ ಮತ್ತು ಅರ್ಜುನ್ ಬಾಬುತಾ ಮೊದಲ ಸೆಟ್‌ನಲ್ಲಿ ಒಟ್ಟು 208.7 ಅಂಕಗಳನ್ನು ಗಳಿಸಿದರು. ಆದರೆ ಮೊದಲ ಸೆಟ್‌ನ ಕೊನೆಯಲ್ಲಿ ಅವರು ಅಗ್ರ 4ರೊಳಗೆ ಬರಲು ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಇದೇ ವೇಳೆ, ಎಲವೆನಿಲ್ ವಲರಿವನ್ ಮತ್ತು ಸಂದೀಪ್ ಸಿಂಗ್ 207 ಅಂಕಗಳೊಂದಿಗೆ 16ನೇ ಸ್ಥಾನದಲ್ಲಿದ್ದಾರೆ.

Jul 27, 2024, 12:57 pm IST

ಟಾಪ್ 10 ರೊಳಗೆ ಪ್ರವೇಶಿಸಿದ ರಮಿತಾ ಮತ್ತು ಅರ್ಜುನ್. ರಮಿತಾ ಮೊದಲ ಸರಣಿಯನ್ನು 104.6 ಅಂಕಗಳೊಂದಿಗೆ ಮುಗಿಸಿದರು ಮತ್ತು ಬಾಬುತಾ 104.1 ಅಂಕಗಳನ್ನು ಹೊಂದಿದ್ದಾರೆ.

Jul 27, 2024, 12:55 pm IST

ಮೊದಲ ಹೀಟ್‌ನಿಂದ ಕ್ವಾರ್ಟರ್-ಫೈನಲ್‌ಗೆ ಕೊನೆಯ ಸ್ಥಾನವನ್ನು ಪಡೆದ ಈಜಿಪ್ಟ್‌ನ ಅಬ್ದೆಲ್‌ಖಲೆಕ್ ಎಲ್ಬನ್ನಾ 7:05.06 ಸಮಯಕ್ಕೆ ಸ್ವಲ್ಪ ದೂರದಲ್ಲಿ ಬಾಲರಾಜ್ ಪನ್ವಾರ್ 7:07.11 ನಿಮಿಷಗಳನ್ನು ತೆಗೆದುಕೊಂಡರು.

Jul 27, 2024, 12:55 pm IST

ಭಾರತದ ಬಲರಾಜ್ ಪನ್ವಾರ್ ಅವರು ರೋಯಿಂಗ್ ಈವೆಂಟ್‌ನಲ್ಲಿ 4ನೇ ಸ್ಥಾನವನ್ನು ಗಳಿಸಿದರು ಮತ್ತು ಅವರು ರೆಪೆಚೇಜಸ್‌ಗೆ ಪ್ರವೇಶಿಸಿದರು. ಪುರುಷರ ಸಿಂಗಲ್ಸ್ ಸ್ಕಲ್ಸ್ ಅರ್ಹತೆಗಾಗಿ ಅವರು ರೆಪೆಚೇಜಸ್‌ಗೆ ತೆರಳುತ್ತಾರೆ.

Jul 27, 2024, 9:45 am IST

1996ರ ಅಟಲಾಂಟಾದಲ್ಲಿ ನಡೆದ ನಂತರ ಒಲಿಂಪಿಕ್ ಸಮಾರಂಭದಲ್ಲಿ ಸೆಲಿನ್ ಡಿಯೋನ್ ಎರಡನೇ ಬಾರಿಗೆ ಪ್ರದರ್ಶನ ನೀಡಿದರು.

Jul 27, 2024, 9:12 am IST

ಶೂಟಿಂಗ್‌ನಲ್ಲಿ ಸರಬ್ಜೋತ್ ಸಿಂಗ್ ಮತ್ತು ಅರ್ಜುನ್ ಸಿಂಗ್ ಚೀಮಾ 10 ಮೀಟರ್ ಏರ್ ಪಿಸ್ತೂಲ್ ಪುರುಷರ ವೈಯಕ್ತಿಕ ಅರ್ಹತಾ ಸ್ಪರ್ಧೆಯಲ್ಲಿ ಇರುತ್ತಾರೆ. ಮನು ಭಾಕರ್ ಮತ್ತು ರಿದಮ್ ಸಾಂಗ್ವಾನ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಅರ್ಹತಾ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ.

Jul 27, 2024, 9:09 am IST

ಶೂಟಿಂಗ್‌ನಲ್ಲಿ ಎಲವೆನಿಲ್ ವಲರಿವನ್ ಮತ್ತು ಸಂದೀಪ್ ಸಿಂಗ್ ಮತ್ತು ಅರ್ಜುನ್ ಬಾಬುತಾ ಮತ್ತು ರಮಿತಾ ಜಿಂದಾಲ್ ತಂಡಗಳು 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ಪರ್ಧಿಸಲಿವೆ. ಮಧ್ಯಾಹ್ನದ ಅರ್ಹತಾ ಸುತ್ತಿನಿಂದ ಪ್ರಾರಂಭಿಸಿ ಮತ್ತು ಅವರು ಸಂಜೆ ವೇಳೆಗೆ ಪದಕ ಸುತ್ತುಗಳನ್ನು ಪ್ರವೇಶಿಸಲಿದ್ದಾರೆ.

Jul 27, 2024, 9:09 am IST

ಭಾರತದ ಪ್ರಮುಖ ಕ್ರೀಡಾಪಟುಗಳು ಶನಿವಾರ, ಜುಲೈ 27ರಂದು ಪ್ಯಾರಿಸ್‌ನಲ್ಲಿ ಆಕ್ಷನ್-ಪ್ಯಾಕ್ಡ್ ದಿನಕ್ಕೆ ಸಜ್ಜಾಗಿದ್ದಾರೆ. ಸಮಯದ ವ್ಯತ್ಯಾಸದಿಂದಾಗಿ ಮಧ್ಯಾಹ್ನದ ವೇಳೆಗೆ ಭಾರತಕ್ಕೆ ರೋಯಿಂಗ್ ಮತ್ತು ಶೂಟಿಂಗ್ ಕ್ರಿಯೆಯೊಂದಿಗೆ ಪ್ರಾರಂಭವಾಗುತ್ತದೆ.

Jul 27, 2024, 1:27 am IST

ಪರೇಡ್ ಆಫ್ ನೇಷನ್ಸ್‌ನಲ್ಲಿ ಅಥೇಯ ಫ್ರಾನ್ಸ್ 573 ಸದಸ್ಯರ ತುಕಡಿಯೊಂದಿಗೆ ಹೆಜ್ಜೆ ಹಾಕಿದೆ. ತವರಿನಲ್ಲಿ ಫ್ರಾನ್ಸ್‌ ತಂಡಕ್ಕೆ ಅಪಾರ ಬೆಂಬಲ ಸಿಕ್ಕಿದೆ.

Jul 27, 2024, 1:10 am IST

ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ಪರೇಡ್ ಆಫ್ ನೇಷನ್ಸ್‌ನಲ್ಲಿ ಸೆರ್ಬಿಯಾದ ದೋಣಿ ಆಗಮಿಸುತ್ತಿದ್ದು, ತಂಡದೊಂದಿಗೆ ದಿಗ್ಗಜ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಕಾಣಿಸಿಕೊಂಡಿಲ್ಲ.

Jul 27, 2024, 1:01 am IST

ಪರೇಡ್ ಆಫ್ ನೇಷನ್ಸ್‌ನಲ್ಲಿ ಇದೀಗ ಪಾಕಿಸ್ತಾನದ ಸರದಿ. ಜಾವೆಲಿನ್ ಆಟಗಾರ ಅರ್ಷದ್ ನದೀಮ್ ಅವರು ಧ್ವಜಧಾರಿಯಾಗಿ ಪಾಕಿಸ್ತಾನ ತಂಡವನ್ನು ಮುನ್ನಡೆಸುತ್ತಿದ್ದಾರೆ. ಪಾಕಿಸ್ತಾನದ ದೋಣಿಯಲ್ಲಿ 3 ಮಹಿಳೆಯರು ಸೇರಿದಂತೆ ಒಟ್ಟು 7 ಮಂದಿ ಅಥ್ಲೀಟ್‌ಗಳಿದ್ದರು.

Jul 27, 2024, 12:51 am IST

ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಫ್ರೆಂಚ್ ರಾಪರ್ ರಿಮ್'ಕೆ ತಮ್ಮ ವಿಶೇಷ ಪ್ರದರ್ಶನದ ಮೂಲಕ ಕ್ರೀಡಾ ಅಭಿಮಾನಿಗಳನ್ನು ಬೆರಗುಗೊಳಿಸುತ್ತಿದ್ದಾರೆ.

Jul 27, 2024, 12:45 am IST

ಪ್ಯಾರಿಸ್ ಒಲಿಂಪಿಕ್ಸ್ 2024 ರ ಉದ್ಘಾಟನಾ ಸಮಾರಂಭಕ್ಕಾಗಿ ನೈಜೀರಿಯಾ ಮಹಿಳಾ ಬ್ಯಾಸ್ಕೆಟ್‌ಬಾಲ್ ತಂಡದ ಬೋಟ್‌ಗೆ ಪ್ರವೇಶವನ್ನು ನಿರಾಕರಿಸಲಾಗಿದೆ.

Jul 27, 2024, 12:43 am IST

ಸೈಕ್ಲಿಂಗ್ ಸಾಹಸ ಪ್ರದರ್ಶನದೊಂದಿಗೆ ಫ್ರಾನ್ಸ್‌ನ ಕ್ರೀಡಾ ಇತಿಹಾಸಕ್ಕೆ ವಿಶೇಷ ಗೌರವ ಸಲ್ಲಿಸಲಾಗಿದೆ.

Jul 27, 2024, 12:42 am IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ವೇಳಾಪಟ್ಟಿ ಇಲ್ಲಿದೆ.

Jul 27, 2024, 12:35 am IST

ಫ್ರೆಂಚ್ ವೀರ ಮಹಿಳೆಯರಿಗೆ ಗೌರವ ಸಲ್ಲಿಕೆ

ಪ್ಯಾರಿಸ್ ಒಲಿಂಪಿಕ್ಸ್ ಫ್ರಾನ್ಸ್‌ನ 10 ವೀರ ಮಹಿಳೆಯರನ್ನು ಗೌರವಿಸಲಾಯಿತು. ಒಲಿಂಪೆ ಡಿ ಗೌಗ್ಸ್, ಆಲಿಸ್ ಮಿಲಿಯೆಟ್, ಗಿಸೆಲ್ ಹಲಿಮಿ, ಸಿಮೋನ್ ಡಿ ಬ್ಯೂವೊಯಿರ್, ಪಾಲೆಟ್ ನಾರ್ಡಾಲ್, ಜೀನ್ ಬ್ಯಾರೆಟ್, ಲೂಯಿಸ್ ಮೈಕೆಲ್, ಕ್ರಿಸ್ಟಿನ್ ಡಿ ಪಿಜಾನ್, ಆಲಿಸ್ ಗೈ ಮತ್ತು ಸಿಮೋನ್ ವೇಲ್ ಅವರ ಚಿನ್ನದ ವಿಷಯದ ಪ್ರತಿಮೆಗಳಿಗೆ ಗೌರ‌ವ ಸಲ್ಲಿಸಲಾಯಿತು.

Jul 27, 2024, 12:22 am IST

ಇದು ಕೊನೆಯ ಪರೇಡ್ ಆಫ್ ನೇಷನ್ಸ್‌ನಲ್ಲಿ ಭಾರತದ ದೋಣಿಯಾಗಿದೆ. ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಮತ್ತು ಟೇಬಲ್ ಟೆನ್ನಿಸ್ ತಾರೆ ಶರತ್ ಕಮಲ್ ಅವರು ತ್ರಿವರ್ಣ ಧ್ವಜ ಹಿಡಿದಿದ್ದಾರೆ. 78 ಕ್ರೀಡಾಪಟುಗಳು ಮತ್ತು ಅಧಿಕಾರಿಗಳ ತಂಡವನ್ನು ಮುನ್ನಡೆಸುದ್ದಾರೆ. ವಿಶೇಷವಾಗಿ ವಿನ್ಯಾಸಗೊಳಿಸಿರುವ ಸಾಂಪ್ರದಾಯಿಕ ಉಡುಗೆಯನ್ನು ಕ್ರೀಡಾಪಟುಗಳು ಧರಿಸಿದ್ದಾರೆ.

Jul 27, 2024, 12:07 am IST

ಮಿಸ್ಟರಿ ಮ್ಯಾನ್ ಒಲಿಂಪಿಕ್ ಜ್ಯೋತಿಯನ್ನು ಹೊತ್ತೊಯ್ಯುವುದನ್ನು ಮುಂದುವರೆಸಿದ್ದಾರೆ

Jul 27, 2024, 12:06 am IST

ಪ್ಯಾರಿಸ್‌ನಲ್ಲಿ ಮಳೆ ಪ್ರಾರಂಭಿವಾಗಿದ್ದು, ಉದ್ಘಾಟನಾ ಸಮಾರಂಭದ ಕಿಚ್ಚು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ.

Jul 27, 2024, 12:04 am IST

ಪ್ಯಾರಿಸ್ 2024 ರ ಪದಕವು ಐಫೆಲ್ ಟವರ್‌ನಿಂದ ಮೂಲ ಕಬ್ಬಿಣದ ತುಂಡಿನಿಂದ ಮಾಡಲಾಗಿದೆ. ಇದನ್ನು ತಯಾರಿಸಿದ ಕಾರ್ಯಾಗಾರಗಳು, ಕುಶಲಕರ್ಮಿಗಳಿಗೆ ಉದ್ಘಾಟನಾ ಸಮಾರಂಭದಲ್ಲಿ ಗೌರವ ಸಲ್ಲಿಸಲಾಗಿದೆ.

Jul 27, 2024, 12:01 am IST

ಝಿನೆಡಿನ್ ಜಿಡಾನೆ ಅವರು ಆಕಸ್ಮಿಕವಾಗಿ ಸ್ಟೇಡ್ ಡಿ ಫ್ರಾನ್ಸ್‌ಗೆ ಬಂದ ನಂತರ ಟಾರ್ಚ್ ಸರಿಯಾದ ಗಮ್ಯಸ್ಥಾನವನ್ನು ತಲುಪಿದೆ ಎಂದು ಖಚಿತಪಡಿಸಿಕೊಂಡರು.

Jul 26, 2024, 11:59 pm IST

ಫ್ರೆಂಚ್-ಮಾಲಿಯನ್ ಗಾಯಕಿ ಅಯಾ ನಕಮುರಾ ಅವರು ಈಗ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ವಿಶೇಷ ಪ್ರದರ್ಶನಕ್ಕಾಗಿ ವೇದಿಕೆಯನ್ನು ಏರಿದ್ದಾರೆ.

Jul 26, 2024, 11:52 pm IST

ಹೆವಿ ಮೆಟಲ್ ಬ್ಯಾಂಡ್ ಗೊಜಿರಾ ತಮ್ಮ ಪ್ರದರ್ಶನದ ಮೂಲಕ ನೆರೆದಿದ್ದವರನ್ನು ಆಕರ್ಷಿಸುತ್ತಿದ್ದಾರೆ. ಆದರೆ ಮಳೆಯು ಹೆಚ್ಚುತ್ತಿದ್ದು, ಸೀನ್ ನದಿಯ ಉದ್ದಕ್ಕೂ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟುಗಳು, ಪ್ರದರ್ಶಕರು ಮತ್ತು ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸಿದೆ.

Jul 26, 2024, 11:51 pm IST

36 ಕ್ರೀಡಾಪಟುಗಳನ್ನು ಒಳಗೊಂಡಿರುವ ನಿರಾಶ್ರಿತರ ಒಲಿಂಪಿಕ್ ತಂಡವು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಪ್ರತಿನಿಧಿಸುತ್ತಿದೆ.

Jul 26, 2024, 11:49 pm IST

ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಅವರು ಕಾಣಿಸಿಕೊಂಡಿದ್ದಾರೆ.

Jul 26, 2024, 11:48 pm IST

ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಪ್ಯಾರಿಸ್ ಒಲಿಂಪಿಕ್ಸ್ 2024 ನಲ್ಲಿ ಭಾಗವಹಿಸುವ ಅಮೇರಿಕನ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ. ಒಟ್ಟು 592 ಅಮೇರಿಕನ್ ಅಥ್ಲೀಟ್‌ಗಳು ಪ್ಯಾರಿಸ್ ಒಲಿಂಪಿಕ್ಸ‌ನಲ್ಲಿ ಸ್ಫರ್ಧೆ ಮಾಡುತ್ತಿದ್ದಾರೆ.

Jul 26, 2024, 11:39 pm IST

ಪ್ಯಾರೆಡ್ ಆಫ್ ನೇಷನ್ಸ್‌ನಲ್ಲಿ ಭಾರತ ಅಥ್ಲೀಟ್ಸ್‌ ತಂಡಕ್ಕಾಗಿ ಭಾರತೀಯರು ಕಾಯುತ್ತಿದ್ದಾರೆ.

Jul 26, 2024, 11:37 pm IST

ಲೇಡಿ ಗಾಗಾ ಅವರು 2020 ರಲ್ಲಿ 96ನೇ ವಯಸ್ಸಿನಲ್ಲಿ ನಿಧನರಾದ ಫ್ರೆಂಚ್ ಬ್ಯಾಲೆ ನರ್ತಕಿ ಮತ್ತು ನಟಿ ಜಿಜಿ ಜೀನ್‌ಮೈರ್ ಅವರ ಮೂಲ ಗೀತೆಯಾದ ಮೊನ್ ಟ್ರೂಕ್ ಎನ್ ಪ್ಲಮ್ಸ್ ಅನ್ನು ಹಾಡಿದರು

Jul 26, 2024, 11:36 pm IST

ಒಲಿಂಪಿಕ್ ಕ್ರೀಡಾಕೂಟದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ರಾಷ್ಟ್ರಗಳಲ್ಲಿ ಒಂದಾದ ಚೀನಾ, ಪರೇಡ್ ಆಫ್ ನೇಷನ್ಸ್‌ನಲ್ಲಿ ನಂತರದ ಸ್ಥಾನದಲ್ಲಿದೆ. ಚೀನಾದ ಟೇಬಲ್ ಟೆನಿಸ್ ಪಟು ಮಾ ಲಾಂಗ್ ಮತ್ತು ಸಿಂಕ್ರೊನೈಸ್ಡ್ ಈಜುಗಾರ ಫೆಂಗ್ ಯು ಚೀನಾದ ಧ್ವಜಧಾರಿಗಳಾಗಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ 2024 ರಲ್ಲಿ ಯುಎಸ್‌ಎ ಗಿಂತ ಚೀನಾ ಹೆಚ್ಚು ಚಿನ್ನದ ಪದಕಗಳನ್ನು ಗೆಲ್ಲುವ ನಿರೀಕ್ಷೆಯಿದೆ.

Jul 26, 2024, 11:31 pm IST

ಪಾಪ್ ತಾರೆ ಲೇಡಿ ಗಾಗಾ ಹಾಡುಗಳಿಗೆ ಸೀನ್ ನದಿ ದಂಡೆಯಲ್ಲಿ ಸೇರಿರುವ ಜನಸಮೂಹವು ಹುಚ್ಚೆದು ಕುಣಿಯುತ್ತಿದೆ.

Jul 26, 2024, 11:26 pm IST

2024ರ ಬೇಸಿಗೆ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದ ಮೊದಲು ವೀಕ್ಷಕರು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಸೀನ್ ನದಿಯುದ್ದಕ್ಕೂ ಸ್ಟ್ಯಾಂಡ್‌ಗಳಲ್ಲಿ ಛತ್ರಿಗಳನ್ನು ಹಿಡಿದಿದ್ದಾರೆ.

Jul 26, 2024, 11:21 pm IST

ಫೇಮಸ್‌ ಪಾಪ್-ಸೆನ್ಸೇಷನ್ ಲೇಡಿ ಗಾಗಾ ಅವರು ಸೀನ್ ನದಿಯಲ್ಲಿ ತಮ್ಮ ವಿಶೇಷ ಪ್ರದರ್ಶನಕ್ಕಾಗಿ ವೇದಿಕೆಯನ್ನು ಸಿದ್ದಪಡಿಸಿಕೊಳ್ಳುತ್ತಿದ್ದಾರೆ.

Jul 26, 2024, 11:16 pm IST

ಅಫ್ಘಾನಿಸ್ತಾನ ತಮ್ಮ ದೋಣಿಯಲ್ಲಿ ಪರೇಡ್ ಆಫ್ ನೇಷನ್ಸ್‌ನಲ್ಲಿ ಮೂರನೇ ಸ್ಥಾನದಲ್ಲಿ ಸಾಗಿದೆ.

Jul 26, 2024, 11:16 pm IST

ಅಫ್ಘಾನಿಸ್ತಾನ ಅಥ್ಲೀಟ್ಸ್‌ ತಂಡವು ಪರೇಡ್ ಆಫ್ ನೇಷನ್ಸ್‌ನಲ್ಲಿ ಮೂರನೇ ಸ್ಥಾನದಲ್ಲಿದೆ.

Jul 26, 2024, 11:15 pm IST

ಪರೇಡ್ ಆಫ್ ನೇಷನ್ಸ್‌ನ ಎರಡನೇ ಸ್ಥಾನದಲ್ಲಿ, 37 ಸದಸ್ಯರನ್ನು ಒಳಗೊಂಡಿರುವ ನಿರಾಶ್ರಿತರ ಒಲಿಂಪಿಕ್ ತಂಡ ದೋಣಿಯಲ್ಲಿ ಸಾಗಿತು.

Jul 26, 2024, 11:14 pm IST

ಐಕಾನಿಕ್ ರಿವರ್ ಸೀನ್‌ನಲ್ಲಿರುವ ವಿಶೇಷ ಸ್ಥಳದಲ್ಲಿ ಹಾಜರಿದ್ದ ಎಲ್ಲಾ ಕ್ರೀಡಾ ಅಭಿಮಾನಿಗಳನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಸ್ವಾಗತಿಸಿದ್ದಾರೆ.

Jul 26, 2024, 11:13 pm IST

ರಾಷ್ಟ್ರಗಳ ಸಾಂಪ್ರದಾಯಿಕ ಪರೇಡ್ ಗ್ರೀಸ್‌ನ ದೋಣಿ ಅವರ ದೇಶ-ವಿಷಯದ ಉಡುಪಿನಲ್ಲಿ ಮುನ್ನಡೆಸುವುದರೊಂದಿಗೆ ಪ್ರಾರಂಭವಾಯಿತು.

Jul 26, 2024, 11:09 pm IST

ಪ್ಯಾರಿಸ್ ಒಲಿಂಪಿಕ್ಸ್‌ಗೆ ಮುಂಚಿತವಾಗಿ ಇಟಲಿಯ ಜಾಸ್ಮಿನ್ ಪಾವೊಲಿನಿ ವಿರುದ್ಧ ಜೆಕ್‌ ರಿಪಬ್ಲಿಕ್‌ನ ಬಾರ್ಬೊರಾ ಕ್ರೆಜ್ಸಿಕೋವಾ ಅವರು ಗೆಲುವು ಸಾಧಿಸುವ ಮೂಲಕ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದರು. ಇದೀಗಾ ಪ್ಯಾರಿಸ್‌ ಕ್ರೀಡಾಕೂಟದಲ್ಲ ಮಿಂಚಲು ಸಜ್ಜಾಗಿದ್ದಾರೆ.

Jul 26, 2024, 10:57 pm IST

ಪ್ಯಾರಿಸ್ 2024ರ ದಿನ 1ರಂದು ಭಾರತೀಯ ಆಸಕ್ತಿಯ ಕ್ರೀಡೆಗಳಾದ ಬ್ಯಾಡ್ಮಿಂಟನ್, ಟೆನ್ನಿಸ್ ಮತ್ತು ಟೇಬಲ್ ಟೆನ್ನಿಸ್, ಹಾಕಿ ಮತ್ತು ಬಾಕ್ಸಿಂಗ್ ಆಕ್ಷನ್ ಸಂಜೆ ವೇಳೆಗೆ ಆರಂಭವಾಗಲಿವೆ.

Jul 26, 2024, 10:52 pm IST

ಫೋಟೋಗೆ ಪೋಸ್ ಕೊಟ್ಟ ಭಾರತ ಅಥ್ಲೀಟ್ಸ್‌ ತಂಡ

ಪ್ಯಾರಿಸ್ ಒಲಿಂಪಿಕ್ಸ್ 2024ರ ಉದ್ಘಾಟನಾ ಸಮಾರಂಭದ ಮೊದಲು ಇಡೀ ಭಾರತೀಯ ಅಥ್ಲೀಟ್ಸ್‌ ತಂಡವು ತಮ್ಮ ವಿಶೇಷ ಉಡುಪಿನಲ್ಲಿ ಗುಂಪು ಫೋಟೋಗೆ ಪೋಸ್ ನೀಡಿತು. ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮತ್ತು ಟೇಬಲ್ ಟೆನಿಸ್ ಪಟು ಶರತ್ ಕಮಲ್ ಅವರು ಭಾರತದ ಧ್ವಜಧಾರಿಯಾಗಿದ್ದಾರೆ.

Jul 26, 2024, 10:43 pm IST

ಟಿನಿಸ್‌ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದಾರೆ. ಗ್ರ್ಯಾಂಡ್ ಸ್ಲಾಮ್‌ಗಳ ಮಹಾಪೂರದೊಂದಿಗೆ ತನ್ನ ಹೆಸರಿಗೆ 4 ಒಲಿಂಪಿಕ್ ಚಿನ್ನದ ಪದಕಗಳನ್ನು ಸೆರೆನಾ ಗೆದ್ದಿದ್ದಾರೆ.

Jul 26, 2024, 10:42 pm IST

ಪ್ಯಾರಿಸ್‌ ಒಲಿಂಪಿಕ್ಸ್ ಸಮಾರಂಭಕ್ಕೂ ಸ್ವಲ್ಪ ಮಳೆಯಾಗಿದೆ. ಯುಎಸ್‌ಎ ತಂಡದ ಧ್ವಜಧಾರಿಗಳಾದ ಕೊಕೊ ಗೌಫ್ ಮತ್ತು ಲೆಬ್ರಾನ್ ಜೇಮ್ಸ್ ತುಂತುರು ಮಳೆಯಲ್ಲೇ ಹೆಜ್ಜೆ ಹಾಕಿರುವ ವಿಡಿಯೋ ವೈರಲ್‌ ಆಗಿದೆ. ಪದಕ ಪಟ್ಟಿಯಲ್ಲಿ ಯುಎಸ್‌ಎ ತಂಡವು ಅಗ್ರಸ್ಥಾನದಲ್ಲಿದೆ.

Jul 26, 2024, 10:36 pm IST

ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಭಾರತದ ಟೆನಿಸ್‌ ಆಟಗಾರರ ಸುಮಿತ್ ನಗಾಲ್ ಸಜ್ಜಾಗಿದ್ದಾರೆ. ರೋಹನ್ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ಅವರೊಂದಿಗೆ ಒಲಂಪಿಕ್ಸ್‌ನ 3 ಟೆನಿಸ್ ಆಟಗಾರರಲ್ಲಿ ನಗಾಲ್ ಕೂಡ ಒಬ್ಬರು.

Jul 26, 2024, 10:27 pm IST

ಪ್ಯಾರಿಸ್ ಒಲಿಂಪಿಕ್ಸ್ 2024 ರ ಉದ್ಘಾಟನಾ ಸಮಾರಂಭಕ್ಕೆ ಸಜ್ಜಾಗುತ್ತಿರುವಾಗ ಭಾರತದ ಸ್ಟಾರ್‌ ಷಟ್ಲರ್ ಲಕ್ಷಯ್ ಸೇನ್ ಅವರು ತಮ್ಮ ಪೋಷಕರು ಮತ್ತು ಇತರ ಭಾರತೀಯ ಕ್ರೀಡಾಪಟುಗಳೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Jul 26, 2024, 10:22 pm IST

ಭಾರತ ಅಥ್ಲೀಟ್ಸ್‌ ತಂಡಕ್ಕೆ ಶುಭ ಕೋರಿದ ಪ್ರಧಾನಿ ಮೋದಿ

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾಗವಹಿಸುತ್ತಿರುವ ಭಾರತ ಅಥ್ಲೀಟ್ಸ್‌ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.

Jul 26, 2024, 10:20 pm IST

ಪ್ಯಾರಿಸ್ ಒಲಿಂಪಿಕ್ಸ್ 2024 ರ ಉದ್ಘಾಟನಾ ಸಮಾರಂಭದಲ್ಲಿ ಪರೇಡ್ ಆಫ್ ನೇಷನ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲು ಭಾರತದ ಧ್ವಜಧಾರಿಗಳಾದ ಪಿವಿ ಸಿಂಧು ಮತ್ತು ಅಚಂತ ಶರತ್ ಕಮಲ್ ಸಂತಸ ವ್ಯಕ್ತಪಡಿಸಿದ್ದಾರೆ.

Jul 26, 2024, 9:54 pm IST

ಶನಿವಾರ, ಜುಲೈ 27ರ ವೇಳಾಪಟ್ಟಿ: 2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಸ್ಪರ್ಧೆಯ ಮೊದಲ ದಿನದಂದು, ಭಾರತೀಯ ಪುರುಷರ ಹಾಕಿ ತಂಡ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಮತ್ತು ಟೆನ್ನಿಸ್ ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೆ, ಭಾರತದ ಕೆಲವು ಪ್ರಮುಖ ಶೂಟರ್‌ಗಳು ಪದಕಗಳನ್ನು ಗೆಲ್ಲುವ ಗುರಿಯನ್ನು ಹೊಂದಿದ್ದಾರೆ.

Jul 26, 2024, 6:42 pm IST

ಶುಕ್ರವಾರ, ಜುಲೈ 26ರಂದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಡೆಯಲಿರುವ ಎಲ್ಲಾ ರಾಷ್ಟ್ರಗಳ ಪರೇಡ್‌ಗೆ ಭಾರತದಿಂದ ಒಟ್ಟು 78 ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಹಾಜರಾಗಲಿದ್ದಾರೆ.

Jul 26, 2024, 6:31 pm IST

ಕ್ರೀಡಾಂಗಣಕ್ಕೆ ಸಾಂಪ್ರದಾಯಿಕ ಮೆರವಣಿಗೆಗೆ ಬದಲಾಗಿ, ಸುಮಾರು 6,800 ಕ್ರೀಡಾಪಟುಗಳು 6 ಕಿಲೋಮೀಟರ್ (3.7 ಮೈಲುಗಳು) ವರೆಗೆ ಪ್ಯಾರಿಸ್‌ನ ಸೀನ್ ನದಿಯಲ್ಲಿ 100ಕ್ಕೂ ಹೆಚ್ಚು ದೋಣಿಗಳಲ್ಲಿ ಪರೇಡ್ ಮಾಡುತ್ತಾರೆ.

Jul 26, 2024, 5:50 pm IST

ಬಹು ನಿರೀಕ್ಷಿತ 2024ರ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭವು ಮಳೆಯಿಂದ ಹಾನಿಗೊಳಗಾಗುವ ಸಾಧ್ಯತೆ ಇದೆ.

Jul 26, 2024, 1:24 pm IST

ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಸಿಂಧು ಗರ್ಜನೆ

"ನಾನು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದಾಗಲೆಲ್ಲಾ ಅದು ನನಗೆ ಹೊಸ ಒಲಿಂಪಿಕ್ಸ್ ಆಗಿದೆ. ಹಾಗಾಗಿ ಒಲಿಂಪಿಕ್ಸ್‌ನಲ್ಲಿ ಆಡಲು ಹೋದಾಗಲೆಲ್ಲಾ ಪದಕ ಗೆಲ್ಲುವುದೇ ನನ್ನ ಗುರಿ. ಶೀಘ್ರದಲ್ಲೇ ಹ್ಯಾಟ್ರಿಕ್ ಪೂರ್ಣಗೊಳಿಸುತ್ತೇನೆ" ಎಂದು ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹೇಳಿದ್ದಾರೆ.

Jul 26, 2024, 1:16 pm IST

ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪ್ರೀತಿ ಪವಾರ್ ಅವರು ವಿಯೆಟ್ನಾಂನ ವೋ ಥಿ ಕಿಮ್ ಅನ್ಹ್ ವಿರುದ್ಧ 32 ರ ಸುತ್ತಿನಲ್ಲಿ ಡ್ರಾ ಮಾಡಿಕೊಂಡರು.

Jul 26, 2024, 11:59 am IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದಾಖಲೆಯ ಟಿಕೆಟ್‌ ಮಾರಾಟ

ಈ ವರ್ಷದ ಒಲಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಿಗೆ ಈಗಾಗಲೇ 9.7 ಮಿಲಿಯನ್ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ಈವೆಂಟ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದ ದಾಖಲೆಗಳನ್ನು ಮುರಿದಿದೆ. ಈ ಹಿಂದೆ ಟಿಕೆಟ್ ಮಾರಾಟದ ದಾಖಲೆಯನ್ನು 1996 ರಲ್ಲಿ ಅಟ್ಲಾಂಟಾ (8.3 ಮಿಲಿಯನ್) ಹೊಂದಿತ್ತು.

Jul 26, 2024, 11:40 am IST

ವಿಶ್ವ ಚಾಂಪಿಯನ್, ಭಾರತದ ಸ್ಟಾರ್‌ ಬಾಕ್ಸರ್‌ ನಿಖತ್ ಝರೀನ್ ಅವರು ಮಹಿಳೆಯರ 50 ಕೆಜಿ ವಿಭಾಗದ 32ರ ಸುತ್ತಿನಲ್ಲಿ ಜರ್ಮನಿಯ ಕರಿನಾ ಕ್ಲೋಟ್ಜರ್ ಅವರನ್ನು ಎದುರಿಸಲಿದ್ದಾರೆ. ನಿಖತ್ ಝರೀನ್ ತಮ್ಮ ಮುಂದಿನ ಪಂದ್ಯದಲ್ಲಿ ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಚೀನಾದ ವು ಯು ವಿರುದ್ಧ ಆಡಲಿದ್ದಾರೆ.

Jul 26, 2024, 10:45 am IST

ಪ್ಯಾರಿಸ್ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭ

2024 ರ ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭವು ಜುಲೈ 26 ರಂದು ನಡೆಯಲಿದ್ದು, ಐಕಾನಿಕ್ ಸೀನ್ ನದಿಯಲ್ಲಿ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕ್ರೀಡಾಂಗಣದ ಹೊರಗೆ ಉದ್ಘಾಟನಾ ಸಮಾರಂಭ ನಡೆಯುತ್ತಿರುವುದು ಒಲಿಂಪಿಕ್ಸ್‌ ಇತಿಹಾಸದಲ್ಲಿ ಇದೇ ಮೊದಲು.

Jul 26, 2024, 10:36 am IST

ಟೋಕಿಯೊ 2020 ರ ಕಂಚಿನ ಪದಕ ವಿಜೇತೆ, ಭಾರತದ ಸ್ಟಾರ್‌ ಬಾಕ್ಸರ್‌ ಲೊವ್ಲಿನಾ ಬೊರ್ಗೊಹೈನ್ ಮಹಿಳೆಯರ 75 ಕೆಜಿ ವಿಭಾಗದಲ್ಲಿ ನಾರ್ವೆಯ ಸುನ್ನಿವಾ ಹಾಫ್‌ಸ್ಟಾಡ್ ವಿರುದ್ಧ 16 ರ ಸುತ್ತಿನಲ್ಲಿ ತಮ್ಮ ಪ್ಯಾರಿಸ್‌ ಒಲಿಂಪಿಕ್ಸ್‌ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.

Jul 26, 2024, 9:43 am IST

ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾರತದ ಟೇಬಲ್ ಟೆನಿಸ್ ತಂಡಗಳು

ಭಾರತೀಯ ಪುರುಷರ ಮತ್ತು ಮಹಿಳಾ ಟೇಬಲ್ ಟೆನಿಸ್ ತಂಡಗಳು ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿವೆ. ಈ ಹಿಂದೆ ಆಟಗಾರರು ವೈಯಕ್ತಿಕ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಿದ್ದರು.

Jul 26, 2024, 9:39 am IST

"ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯ ಭಾರತ ತಂಡಕ್ಕಿದೆ. ಫ್ರೆಂಚ್ ರಾಜಧಾನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ತಂಡದ ಸಿದ್ಧತೆ ಉತ್ತಮವಾಗಿದೆ" ಎಂದು ಎಂದು ಭಾರತದ ಸ್ಟಾರ್ ಪ್ಯಾಡ್ಲರ್ ಹರ್ಮೀತ್ ದೇಸಾಯಿ ಹೇಳಿದ್ದಾರೆ.

Jul 25, 2024, 11:50 pm IST

ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರ ಕುಟುಂಬವು ಮಗನಿಗೆ ಮನೆಯಲ್ಲಿ ಬೇಯಿಸಿದ ಆಹಾರವನ್ನು ನೀಡಲು ಪ್ಯಾರಿಸ್ ಒಲಂಪಿಕ್ಸ್ ಗೇಮ್ಸ್ ಗ್ರಾಮದ ಬಳಿ ಅಪಾರ್ಟ್‌ಮೆಂಟ್ ಬಾಡಿಗೆಗೆ ಪಡೆದಿದೆ.

Jul 25, 2024, 11:41 pm IST

"ನಾನು ಭಾರತದ ಧ್ವಜಧಾರಿಯಾಗಿ ಆ ಕ್ಷಣವನ್ನು ಜೀವಿಸಲಿದ್ದೇನೆ ಮತ್ತು ವಿಶೇಷವಾಗಿ ಪಿವಿ ಸಿಂಧು ಅವರೊಂದಿಗೆ ಅದನ್ನು ಮಾಡಲಿದ್ದೇನೆ ಎಂದು ನಾನು ತುಂಬಾ ಉತ್ಸುಕನಾಗಿದ್ದೇನೆ. ಹಾಗಾಗಿ ಇದೊಂದು ಅದ್ಭುತ ಕ್ಷಣ ಎಂದು ಹೇಳುತ್ತೇನೆ," ಎಂದು ಭಾರತದ ಟೇಬಲ್ ಟೆನ್ನಿಸ್ ಆಟಗಾರ ಶರತ್ ಕಮಲ್ ಹೇಳಿದ್ದಾರೆ.

Jul 25, 2024, 10:05 pm IST

ಭಾರತದ ಮೊದಲ ವೈಯಕ್ತಿಕ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರು ಬುಧವಾರ, ಜುಲೈ 25ರಂದು 2024ರ ಪ್ಯಾರಿಸ್ ಒಲಿಂಪಿಕ್ಸ್ ಟಾರ್ಚ್ ರಿಲೇಯಲ್ಲಿ ಭಾಗವಹಿಸಿ ಮಿಂಚಿದರು.

Jul 25, 2024, 10:04 pm IST

ಶುಕ್ರವಾರ, ಜುಲೈ 26ರಂದು ನಿಗದಿಯಾಗಿರುವ 2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಧ್ವಜಧಾರಿಗಳಾಗುವ "ಒಂದು ಬಾರಿಯ ಅವಕಾಶ'ಕ್ಕಾಗಿ ಭಾರತೀಯ ಟೇಬಲ್ ಟೆನ್ನಿಸ್ ಆಟಗಾರ ಅಚಂತಾ ಶರತ್ ಕಮಲ್ ಮತ್ತು ಬ್ಯಾಡ್ಮಿಂಟನ್ ತಾರೆ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಉತ್ಸಾಹಿಗಳಾಗಿದ್ದಾರೆ.

Jul 25, 2024, 8:52 pm IST

ಪುರುಷರ ಆರ್ಚರಿ ಶ್ರೇಯಾಂಕದ ಸುತ್ತಿನ ಫಲಿತಾಂಶಗಳು ಶ್ರೇಯಾಂಕ 4: ಧೀರಜ್ ಬೊಮ್ಮದೇವರ - 681 ಅಂಕಗಳು ಶ್ರೇಯಾಂಕ 14: ತರುಣದೀಪ್ ರೈ - 673 ಅಂಕಗಳು ಶ್ರೇಯಾಂಕ 39: ಪ್ರವೀಣ್ ಜಾಧವ್ - 656 ಅಂಕಗಳು ಶ್ರೇಯಾಂಕ 3: ಪುರುಷರ ಆರ್ಚರಿ ತಂಡ (ಕ್ವಾರ್ಟರ್ ಫೈನಲ್‌ಗೆ ಅರ್ಹತೆ)

Jul 25, 2024, 8:12 pm IST

ಪುರುಷರ ಶ್ರೇಯಾಂಕದ ಸುತ್ತಿನಲ್ಲಿ ಧೀರಜ್ ಬೊಮ್ಮದೇವರ ನಾಲ್ಕನೇ ಸ್ಥಾನ ಪಡೆದರು. ಭಾರತ ಮೂರನೇ ಸ್ಥಾನ ಪಡೆದು ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯಿತು. ಮಿಶ್ರ ತಂಡದಲ್ಲಿ ಧೀರಜ್ ಬೊಮ್ಮದೇವರ ಮತ್ತು ಅಂಕಿತಾ ಭಗತ್ ಅಗ್ರಸ್ಥಾನದೊಂದಿಗೆ ಭಾರತ ಐದನೇ ಸ್ಥಾನ ಗಳಿಸಿತು.

Jul 25, 2024, 8:08 pm IST

ಭಾರತ ಒಟ್ಟು 1983 ಅಂಕಗಳನ್ನು ಹೊಂದಿದ್ದರೆ, ದಕ್ಷಿಣ ಕೊರಿಯಾ ದಾಖಲೆಯ 2046 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಚೀನಾ (1996) ಮತ್ತು ಮೆಕ್ಸಿಕೋ (1986) ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿವೆ.

Jul 25, 2024, 8:07 pm IST

ಅಂಕಿತಾ ಭಕ್ತ, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರ ಭಾರತದ ಸ್ಟಾರ್ ತ್ರಿವಳಿಗಳು ಪ್ರಬಲ ಪ್ರದರ್ಶನ ನೀಡಿ ಭಾರತಕ್ಕೆ ಕ್ವಾರ್ಟರ್ ಫೈನಲ್‌ಗೆ ಟಿಕೆಟ್ ಗಿಟ್ಟಿಸಿದ್ದಾರೆ. ತಂಡದ ಶ್ರೇಯಾಂಕದ ಪ್ರಕಾರ, ಭಾರತ ಈ ಸುತ್ತನ್ನು 4ನೇ ಸ್ಥಾನದಲ್ಲಿ ಮುಗಿಸಿದೆ.

Story first published: Thursday, July 25, 2024, 20:04 [IST]
Other articles published on Jul 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+