Paris Olympics 2024: ಒಲಿಂಪಿಕ್ಸ್ ಭಾರತೀಯ ಅಥ್ಲೀಟ್‌ಗಳಿಗೆ ಆರ್ಥಿಕ ಬೆಂಬಲ ಘೋಷಿಸಿದ ಬಿಸಿಸಿಐ!
ಜುಲೈ 21 ಭಾನುವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿದೆ. ಈ ಮೆಗಾ ಕ್ರೀಡಾಕೂಟಕ್ಕೆ ಭಾರತೀಯ ಕ್ರೀಡಾಪಟುಗಳು ಕಠಿಣ ತಯಾರಿ ನಡೆಸಿದ್ದಾರೆ.
ಭಾರತವು ಈ ಬಾರಿ ತನ್ನ ಎಲ್ಲಾ ಅಥ್ಲೀಟ್‌ಗಳಿಂದ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದೆ. ಕಳೆದ ಬಾರಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಒಟ್ಟು 7 ಪದಕಗಳನ್ನು ಗೆದ್ದಿತ್ತು.

ಇದರ ಬೆನ್ನಲ್ಲೇ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಅಥ್ಲೀಟ್ಸ್ ತಂಡಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಬೆಂಬಲ ಸೂಚಿಸಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ತಿಳಿಸಿದ್ದಾರೆ.
ಈ ಬಾರಿ ಪ್ಯಾರಿಸ್ ಕ್ರೀಡಾಕೂಟದಲ್ಲಿ ಒಟ್ಟು 117 ಭಾರತೀಯ ಆಥ್ಲೀಟ್ಸ್ ತಂಡ ಫ್ರಾನ್ಸ್ ರಾಜಧಾನಿಗೆ ಪ್ರಯಾಣಿಸಲಿದೆ. ಈ ನಡುವೆ ಕ್ರೀಡಾಪಟುಗಳಿಗೆ ಶುಭ ಹಾರೈಸಿರುವ ಬಿಸಿಸಿಐ, ಆರ್ಥಿಕ ನೆರವು ಘೋಷಣೆ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ (ಎಕ್ಸ್) ಮಾಡಿರುವ ಜಯ್ ಶಾ ಅವರು ಮೊದಲು ಆಥ್ಲೀಟ್ಸ್‌ಗೆ ಶುಭ ಹಾರೈಸಿದ್ದು, ಭಾರತೀಯ ಒಲಿಂಪಿಕ್ ಸಂಸ್ಥೆಗೆ (ಐಒಎ) ಹಣಕಾಸಿನ ನೆರವು ನೀಡುವ ಮೂಲಕ ಬಿಸಿಸಿಐ ಭಾರತೀಯ ತಂಡವನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಐಒಎಗೆ 8.5 ಕೋಟಿ ರೂ.ಗಳನ್ನು ಆರ್ಥಿಕ ಬೆಂಬಲವಾಗಿ ಬಿಸಿಸಿಐ ನೀಡಲಿದೆ ಎಂಬುದನ್ನು ತಿಳಿಸಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ನಮ್ಮ ಕ್ರೀಡಾಪಟುಗಳನ್ನು ಬಿಸಿಸಿಐ ಬೆಂಬಲಿಸುತ್ತದೆ ಎಂದು ಘೋಷಿಸಲು ನಾನು ಹೆಮ್ಮೆಪಡುತ್ತೇನೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ 8.5 ಕೋಟಿ ರೂಪಾಯಿ ನೀಡುತ್ತಿದ್ದೇವೆ. ನಮ್ಮ ಇಡೀ ತಂಡಕ್ಕೆ ಶುಭ ಹಾರೈಸುತ್ತೇವೆ. ಭಾರತ ಹೆಮ್ಮೆ ಪಡುವಂತೆ ಮಾಡಿ! ಜೈ ಹಿಂದ್ ಎಂದು ಜಯ್ ಶಾ ಬರೆದುಕೊಂಡಿದ್ದಾರೆ.
ವಿಶ್ವದಲ್ಲೇ ಬಿಸಿಸಿಐ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದೆ. ಇತ್ತೀಚೆಗೆ ಟಿ20 ವಿಶ್ವಕಪ್ ವಿಜೇತ ಪುರುಷರ ಭಾರತ ತಂಡಕ್ಕೆ 125 ಕೋಟಿ ರೂ.ಗಳನ್ನು ಘೋಷಣೆ ಮಾಡಿತ್ತು. ಇದೀಗ ಒಲಿಂಪಿಕ್ ಅಥ್ಲೀಟ್‌ಗಳಿಗೆ ಆರ್ಥಿಕ ಬೆಂಬಲ ಪ್ರಕಟಿಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications