Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಭಾರತದಲ್ಲಿ ಒಲಿಂಪಿಕ್ಸ್ ಸಮಾರೋಪ ಸಮಾರಂಭವನ್ನು ಯಾವಾಗ, ಎಲ್ಲಿ, ಹೇಗೆ ವೀಕ್ಷಿಸಬಹುದು?

ಆಗಸ್ಟ್ 11 ಭಾನುವಾರ, ಮೂರು ವಾರಗಳ ರೋಚಕ ಸ್ಪರ್ಧೆಗಳ ಬಳಿಕ ಪ್ಯಾರಿಸ್ ಕ್ರೀಡಾಕೂಟವು ಸ್ಟೇಡ್ ಡಿ ಫ್ರಾನ್ಸ್ ನಲ್ಲಿ ಅದ್ಧೂರಿ ಸಮಾರಂಭದೊಂದಿಗೆ ಮುಕ್ತಾಯಗೊಳ್ಳಲಿದೆ. ಸೀನ್ ನದಿಯಲ್ಲಿ ಜರುಗಿದ ಉದ್ಘಾಟನಾ ಸಮಾರಂಭಕ್ಕಿಂತ ಭಿನ್ನವಾಗಿ ಸಮಾರೋಪ ಸಮಾರಂಭ ನಡೆಯಲಿದೆ.

ಸಮಾರೋಪ ಸಮಾರಂಭದಲ್ಲಿ ಭಾರತದ ಪರ ಮನು ಭಾಕರ್ ಮತ್ತು ಪಿಆರ್ ಶ್ರೀಜೇಶ್ ಧ್ವಜಧಾರಿಗಳಾಗಿದ್ದಾರೆ. ಪ್ಯಾರಿಸ್ ಗೇಮ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಮನು 2 ಕಂಚಿನ ಪದಕಗಳನ್ನು ಗೆದ್ದರೆ, ವಿಶ್ವದ ಅತ್ಯುತ್ತಮ ಹಾಕಿ ಗೋಲ್‌ಕೀಪರ್‌ಗಳಲ್ಲಿ ಒಬ್ಬರಾದ ಪಿಆರ್ ಶ್ರೀಜೇಶ್ ಅವರ ಅದ್ಭುತ ಪ್ರದರ್ಶನದಿಂದ ಭಾರತ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.

Paris Olympics 2024 Closing Ceremony Complete Information

ಪ್ಯಾರಿಸ್ ಒಲಿಂಪಿಕ್ಸ್‌ ಸಮಾರೋಪ ಸಮಾರಂಭದಲ್ಲಿ ಸುಮಾರು 80,000 ಪ್ರೇಕ್ಷಕರು ಸೇರುವ ನೀರಿಕ್ಷೆಯಿದೆ. ಈ ಕಾರ್ಯಕ್ರಮದಲ್ಲಿ ಒಲಿಂಪಿಕ್ ಜ್ಯೋತಿಯನ್ನು ನಂದಿಸಲಾಗುತ್ತದೆ. ಬಳಿಕ ಮುಂದಿನ ಕ್ರೀಡಾಕೂಟದಲ್ಲಿ ಬಳಸಲು ಲಾಸ್ ಏಂಜಲೀಸ್ 2028 ಸಂಘಟನಾ ಸಮಿತಿಗೆ ಒಲಿಂಪಿಕ್ ಧ್ವಜವನ್ನು ಹಸ್ತಾಂತರಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಫ್ರೆಂಚ್ ರಂಗಭೂಮಿ ನಿರ್ದೇಶಕ ಥಾಮಸ್ ಜೋಲಿ ಫ್ರೆಂಚ್ ಮತ್ತು ಅಮೇರಿಕನ್ ಸಂಸ್ಕೃತಿಗಳನ್ನು ಪ್ರದರ್ಶಿಸಲಿದ್ದಾರೆ. ವೈಮಾನಿಕ ಪ್ರದರ್ಶನಗಳು, ಕೆಲವು ಬೆರಗುಗೊಳಿಸುವ ಬೆಳಕಿನ ಪ್ರದರ್ಶನಗಳು ಮತ್ತು ಖ್ಯಾತ ಸೆಲೆಬ್ರಿಟಿಗಳು ಪ್ಯಾರಿಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದ ಭಾಗವಾಗಿದ್ದಾರೆ. ಇಂತಹ ವೈಭವ ತುಂಬಿದ ಕಾರ್ಯಕ್ರಮ ಭಾರತದಲ್ಲಿ ಹೇಗೆ ವೀಕ್ಷಿಸುವುದು ಎಂಬುದರ ಬಗ್ಗೆ ಇಲ್ಲಿದೆ.

ಯಾವಾಗ? : ಪ್ಯಾರಿಸ್ ಒಲಿಂಪಿಕ್ಸ್‌ನ ಸಮಾರೋಪ ಸಮಾರಂಭ ಭಾರತೀಯ ಕಾಲಮಾನದ ಪ್ರಕಾರ ಆಗಸ್ಟ್ 12 ರಂದು ಪ್ರಾರಂಭವಾಗಲಿದೆ.

ಎಲ್ಲಿ?: ಸಮಾರೋಪ ಸಮಾರಂಭ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ನಡೆಯಲಿದೆ.

ಗಂಟೆಗೆ ಎಷ್ಟು?: ಭಾರತೀಯ ಕಾಲಮಾನದ ಪ್ರಕಾರ ಆಗಸ್ಟ್ 12 ರಂದು ಬೆಳಗಿನ ಜಾವ 12:30 AM ಗಂಟೆಗೆ ಸಮಾರೋಪ ಸಮಾರಂಭ ಪ್ರಾರಂಭವಾಗಲಿದೆ.

ಎಲ್ಲಿ ಪ್ರಸಾರ?: ಸಮಾರೋಪ ಸಮಾರಂಭವನ್ನು ಸ್ಪೋಟ್ಸ್18 1 SD ಮತ್ತು ಸ್ಪೋಟ್ಸ್18 1 ಹೆಚ್‌ಡಿ ಟಿವಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ.

ಲೈವ್ ಸ್ಟ್ರೀಮ್?: ಸಮಾರೋಪ ಸಮಾರಂಭದ ಲೈವ್ ಸ್ಟ್ರೀಮಿಂಗ್ ವೀಕ್ಷಿಸಲು ಬಯಸುವ ವೀಕ್ಷಕರು ಜಿಯೋಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ ನೋಡಬಹುದು.

Story first published: Sunday, August 11, 2024, 20:44 [IST]
Other articles published on Aug 11, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+