Paris Olympics 2024: ಭಾರತದ ಚೆಫ್-ಡಿ-ಮಿಷನ್ ಆಗಿ ಗಗನ್ ನಾರಂಗ್, ಮಹಿಳಾ ಧ್ವಜಧಾರಿಯಾಗಿ ಸಿಂಧು ಆಯ್ಕೆ
ನಾಲ್ಕು ಬಾರಿಯ ಒಲಿಂಪಿಯನ್ ಮತ್ತು 2012ರ ಪುರುಷರ 10 ಮೀಟರ್ ಏರ್ ರೈಫಲ್ ಕಂಚಿನ ಪದಕ ವಿಜೇತ ಗಗನ್ ನಾರಂಗ್ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಚೆಫ್-ಡಿ-ಮಿಷನ್ ಆಗಿ ಮೇರಿ ಕೋಮ್ ಅವರ ಬದಲಿಗೆ ಆಯ್ಕೆಯಾಗಿದ್ದಾರೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಸೋಮವಾರ, ಜುಲೈ 8ರಂದು ದೃಢಪಡಿಸಿದೆ.
ಇದೇ ವೇಳೆ 2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಭಾರತದ ಮಹಿಳಾ ಧ್ವಜಧಾರಿಯಾಗಲಿದ್ದಾರೆ ಎಂದು ಐಒಎ ಖಚಿತಪಡಿಸಿದೆ.

ಮೇರಿ ಕೋಮ್ ವೈಯಕ್ತಿಕ ಕಾರಣಗಳಿಂದಾಗಿ ಏಪ್ರಿಲ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನ ಚೆಫ್-ಡಿ-ಮಿಷನ್ ಹುದ್ದೆಗೆ ರಾಜೀನಾಮೆ ನೀಡಿದ್ದರು ಮತ್ತು ಇದೀಗ ಅವರ ಸ್ಥಾನಕ್ಕೆ ಗಗನ್ ನಾರಂಗ್ ಬಂದಿದ್ದಾರೆ.
ಈ ನಿರ್ಧಾರವನ್ನು ಐಒಎ ಅಧ್ಯಕ್ಷೆ ಪಿಟಿ ಉಷಾ ಅವರು ತಮ್ಮ ಹೇಳಿಕೆಯಲ್ಲಿ ಪ್ರಕಟಿಸಿದ್ದು, ಮೇರಿ ಕೋಮ್‌ಗೆ ಗಗನ್ ನಾರಂಗ್ ಸೂಕ್ತ ಬದಲಿ ಎಂದು ಅವರು ಭಾವಿಸಿದರು.

ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಟೇಬಲ್ ಟೆನಿಸ್ ತಾರೆ ಎ ಶರತ್ ಕಮಲ್ ಅವರೊಂದಿಗೆ ಪಿವಿ ಸಿಂಧು ಅವರನ್ನು ಮಹಿಳಾ ಧ್ವಜಧಾರಿಯನ್ನಾಗಿ ಮಾಡುವ ನಿರ್ಧಾರವನ್ನು ಪಿಟಿ ಉಷಾ ಬಹಿರಂಗಪಡಿಸಿದರು.
"ನಮ್ಮ ಭಾರತದ ತುಕಡಿಯನ್ನು ಮುನ್ನಡೆಸಲು ನಾನು ಒಲಿಂಪಿಕ್ ಪದಕ ವಿಜೇತರನ್ನು ಹುಡುಕುತ್ತಿದ್ದೆ ಮತ್ತು ನನ್ನ ಯುವ ಸಹೋದ್ಯೋಗಿ ಗಗನ್ ನಾರಂಗ್ ಅವರು ಮೇರಿ ಕೋಮ್‌ಗೆ ಸೂಕ್ತ ಬದಲಿಯಾಗಿದ್ದಾನೆ," ಎಂದು ಐಒಎ ಅಧ್ಯಕ್ಷೆ ಪಿಟಿ ಉಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

"ಉದ್ಘಾಟನಾ ಸಮಾರಂಭದಲ್ಲಿ ಟೇಬಲ್ ಟೆನ್ನಿಸ್ ತಾರೆ ಎ ಶರತ್ ಕಮಲ್ ಅವರೊಂದಿಗೆ, ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಭಾರತದ ಏಕೈಕ ಮಹಿಳಾ ಆಟಗಾರ್ತಿ ಪಿವಿ ಸಿಂಧು ಮಹಿಳಾ ಧ್ವಜಾಧಾರಿ ಎಂದು ಘೋಷಿಸಲು ನಾನು ಸಂತೋಷಪಡುತ್ತೇನೆ," ಎಂದು ಪಿಟಿ ಉಷಾ ಹೇಳಿದರು.
ಗಗನ್ ನಾರಂಗ್ ಅವರನ್ನು ಈ ಹಿಂದೆ ಒಲಿಂಪಿಕ್ ಕ್ರೀಡಾಕೂಟಕ್ಕೆ ಡೆಪ್ಯೂಟಿ ಚೆಫ್-ಡಿ-ಮಿಷನ್ ಎಂದು ನಿರ್ಧರಿಸಲಾಗಿತ್ತು. ಆದರೆ ಇದೀಗ ಮುಖ್ಯ ಪಾತ್ರಕ್ಕೆ ಬಡ್ತಿ ಪಡೆದಿದ್ದಾರೆ.
ಪಿಟಿ ಉಷಾ ಅವರು ಭಾರತೀಯ ಕ್ರೀಡಾಪಟುಗಳ ಮೇಲೆ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದರು ಮತ್ತು ಅಥ್ಲೀಟ್‌ಗಳು ಪ್ಯಾರಿಸ್‌ನಲ್ಲಿ ರಾಷ್ಟ್ರಕ್ಕೆ ಉತ್ತಮ ಫಲಿತಾಂಶಗಳನ್ನು ನೀಡುತ್ತಾರೆ ಎಂದು ತಿಳಿಸಿದರು.
"2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಅತ್ಯುತ್ತಮ ಫಲಿತಾಂಶಗಳನ್ನು ನೀಡಲು ನಮ್ಮ ಕ್ರೀಡಾಪಟುಗಳು ಉತ್ತಮವಾಗಿ ಸಿದ್ಧರಾಗಿದ್ದಾರೆ ಎಂದು ನನಗೆ ವಿಶ್ವಾಸವಿದೆ," ಎಂದು ಐಒಎ ಅಧ್ಯಕ್ಷೆ ಪಿಟಿ ಉಷಾ ಅಭಿಪ್ರಾಯಪಟ್ಟರು.
ಮೇರಿ ಕೋಮ್ ಹಿಂದೆ ಸರಿಯಲು ಕಾರಣವೇನು?
ದೇಶದ ಚೆಫ್-ಡಿ-ಮಿಷನ್ ಪಾತ್ರದಲ್ಲಿ ಸೇವೆ ಸಲ್ಲಿಸಲು ತಾನು ತನ್ನನ್ನು ತಾನು ಸಿದ್ಧಪಡಿಸಿಕೊಂಡಿದ್ದೇನೆ. ಆದರೆ ತನ್ನನ್ನು ಭಾಗಶಃ ದುರ್ಬಲಗೊಳಿಸಿದ ಸಮಸ್ಯೆಗಳಿಂದ ದೂರ ಸರಿಯಬೇಕಾಯಿತು ಎಂದು ಮೇರಿ ಕೋಮ್ ಹೇಳಿದರು.
"ನನ್ನ ದೇಶಕ್ಕೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸೇವೆ ಸಲ್ಲಿಸುವುದನ್ನು ನಾನು ಗೌರವವೆಂದು ಪರಿಗಣಿಸಿದ್ದೇನೆ ಮತ್ತು ಅದಕ್ಕಾಗಿ ನಾನು ಮಾನಸಿಕವಾಗಿ ಸಿದ್ಧನಾಗಿದ್ದೆ".
"ಆದಾಗ್ಯೂ, ಪ್ಯಾರಿಸ್ ಒಲಿಂಪಿಕ್ಸ್ 2024ರ ಚೆಫ್-ಡಿ-ಮಿಷನ್ ಆಗಿ ನನಗೆ ನೀಡಲಾದ ಪ್ರತಿಷ್ಠಿತ ಜವಾಬ್ದಾರಿಯನ್ನು ಎತ್ತಿಹಿಡಿಯಲು ನನಗೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಲು ನಾನು ವಿಷಾದಿಸುತ್ತೇನೆ ಮತ್ತು ನನ್ನನ್ನು ಭಾಗಶಃ ದುರ್ಬಲಗೊಳಿಸಿದ ಸಮಸ್ಯೆಗಳಿಂದ ತಾರ್ಕಿಕವಾಗಿ ರಾಜೀನಾಮೆ ನೀಡಲು ಬಯಸುತ್ತೇನೆ," ಎಂದು ಮೇರಿ ಕೋಮ್ ತಿಳಿಸಿದರು.
2024ರ ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 11ರವರೆಗೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications